ಬೆಂಗಳೂರಿನಲ್ಲಿ ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಮೂರು ದಿನಗಳ ಬಳಿಕ ಯುವಕ ಸಾವನ್ನಪ್ಪಿದ್ದಾನೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರು(ಸೆ.14): ಅವಾಚ್ಯವಾಗಿ ನಿಂದಿಸಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಪ್ರಕರಣದಲ್ಲಿ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೂರು ದಿನದ ಬಳಿಕ ಸಾವನ್ನಪ್ಪಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ
ಭೀಮಕುಮಾರ(25) ಮೃತ ವ್ಯಕ್ತಿ. ಬಿಹಾರದ ಬೆಗುಸರಾಯ್ ಮೂಲದ ಭೀಮಕುಮಾರ್ ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಸ್ನೇಹಿತರೊಂದಿಗೆ ಅರೆಕೆರೆ ಭಾಗಕ್ಕೆ ಬಂದಿದ್ದರು. ಸೆಪ್ಟೆಂಬರ್ 07 ರಂದು ಭೀಮಕುಮಾರ್ ಮಾತಾಡಿಸಲು ಬಂದಿದ್ದ ಸ್ನೇಹಿತರಾದ ಧೀರಜ್ ಮತ್ತು ಅರವಿಂದ್ ಕುಮಾರ್. ಯೋಗಕ್ಷೇಮ ವಿಚಾರಿಸಿಕೊಂಡು ವಾಪಸ್ ಹೋಗುವ ವೇಳೆ ಅವರನ್ನು ಬಿಡಲು ಹೋಗಿದ್ದ ಭೀಮ್‌ಕುಮಾರ ಮತ್ತು ಅಂಜನ್ ನಂತರ ಅಲ್ಲಿಂದ ರ್ಯಾಪಿಡೋ ಬುಕ್ ಮಾಡಿ ಬರುವಿಕೆಗಾಗಿ ಅಲ್ಲೇ ಇದ್ದ ಪಾನಿಪೂರಿ ಅಂಗಡಿ ಬಳಿ ನಾಲ್ವರು ಕಾಯುತ್ತಿದ್ದರು.
ಈ ವೇಳೆ ಪಾನಿಪುರಿ ತಿನ್ನುತ್ತಿದ್ದ ಸ್ಥಳೀಯವನಾದ ಸಲ್ಮಾನ್ ಎಂಬಾತ ನಾಲ್ವರಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಸುವ** ಮಾ** ಚ್ಯೂ** ಇಲ್ಲಿಂದ ಹೋಗಿ ಎಂದು ನಿಂದಿಸಿದ್ದ ಸಲ್ಮಾನ್. ಈ ವೇಳೆ ವಿನಾಕಾರಣ ನಿಂದಿಸಿದ್ದನ್ನು ಪ್ರಶ್ನಿಸಿದ್ದ ಭೀಮಕುಮಾರ ಜೊತೆಗೆ ಸಲ್ಮಾನ್ ಗಲಾಟೆ ತೆಗೆದಿದ್ದಾನೆ.
ಜಗಳ ಮಾತಿನಲ್ಲಿ ಮುಗಿದುಹೋಗಿತ್ತು. ಆದ್ರೆ ಭೀಮಕುಮಾರ್ ಮತ್ತು ಸ್ನೇಹಿತರು ವಾಪಸ್ ಹೊರಟಾಗ ಫಾಲೋ ಮಾಡಿಕೊಂಡು ಬಂದಿದ್ದ ಆರೋಪಿ ಸಲ್ಮಾನ್, ಧೀರಜ್ ಎಂಬ ಸ್ನೇಹಿತನ ಮುಖಕ್ಕೆ ಕೈನಿಂದ ಸಲ್ಮಾನ್ ಪಂಚ್ ಮಾಡಿದ್ದಾನೆ. ನಂತರ ಭೀಮ್‌ಕುಮಾರ ಕುತ್ತಿಗೆಗೆ ಬಲವಾಗಿ ಮುಷ್ಠಿಯಿಂದ ಪಂಚ್ ಮಾಡಿದ್ದಾನೆ. ಪಂಚ್ ಮಾಡಿದ ರಭಸಕ್ಕೆ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದು ರಸ್ತೆ ಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಭೀಮಕುಮಾರ್. ಪ್ರಜ್ಞೆ ಬಂದ ಬಳಿಕ ಮನೆಗೆ ಹೋಗಿ ಮಲಗಿಸಿದ್ದರು.
ಮೂರು ದಿನಗಳ ಕಾಲ ಅರೆಪ್ರಜ್ಞಾವಸ್ಥೆಯಲ್ಲಿದ್ದ ಭೀಮ್‌ಕುಮಾರ್‌ನನ್ನು ಸೆಪ್ಟೆಂಬರ್ 10ರಂದು ಸ್ನೇಹಿತರು ಎಬ್ಬಿಸಲು ನೋಡಿದಾಗ ಮೃತಪಟ್ಟಿದ್ದಾನೆ. ಸ್ನೇಹಿತ ಮೃತಪಟ್ಟಿದ್ದು ತಿಳಿದು ನಂತರ ಸ್ನೇಹಿತ ಅಂಜನ್ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿರುವ ಪೊಲೀಸರು ಸದ್ಯ ಕೊಲೆ ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ.
