ಚಿಕ್ಕಬಳ್ಳಾಪುರದಲ್ಲಿ ಪ್ರೇಯಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಕೇರಳ ಮೂಲದ ವಿದ್ಯಾರ್ಥಿ ಶಬ್ಬೀರ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ವಿದ್ಯಾರ್ಥಿ.

ಚಿಕ್ಕಬಳ್ಳಾಪುರ (ಸೆ.8): ಪ್ರೇಯಸಿ ತನ್ನ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪೆರೆಸಂದ್ರ ಕ್ರಾಸ್‌ನ ಕಾಲೇಜ್‌ವೊಂದರ ಹಾಸ್ಟೆಲ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಎಂದು ಗುರುತಿಸಲಾಗಿದೆ.

Add Asianetnews Kannada as a Preferred SourcegooglePreferred

ಶಾಂತ ಗ್ರೂಫ್ ಆಪ್ ಇನ್‌ಸ್ಟಿಟ್ಯೂಟ್‌ ಕಾಲೇಜಿನ ಅಲೈಡ್ ಸೈನ್ಸ್ ಕೋರ್ಸ್‌ನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಶಬ್ಬೀರ್, ಭಾನುವಾರ ಬೆಳಗ್ಗೆ ತನ್ನ ಹಾಸ್ಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ರೂಮಿನ ಕಿಟಕಿಗೆ ಪಂಚೆ ಕಟ್ಟಿ, ಅದನ್ನು ಕತ್ತಿಗೆ ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ ನೋಟ್‌ ಪತ್ತೆಯಾಗಿದ್ದು, ‘ಐ ಡಿಡ್ ನಾಟ್ ಸ್ಟಾಪ್ ಎನಿಥಿಂಗ್ ಅನ್ ಟಿಲ್, ಐ ಆಲ್ ವೇಸ್ ಲವ್ ಫಾರ್ ಎವೆರ್, ಅತಿಥಿ ಯೂ ಆರ್ ಮೈ ಫಸ್ಟ್ ಆ್ಯಂಡ್ ಯೂ ಆರ್ ಮೈ ಲಾಸ್ಟ್’ ಎಂದು ಬರೆಯಲಾಗಿದೆ.

ಮೃತ ಶಬ್ಬೀರ್ ತನ್ನ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆ ಕಳೆದ ಕೆಲವು ದಿನಗಳಿಂದ ಶಬ್ಬೀರ್‌ನ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದು, ಸರಿಯಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಶಬ್ಬೀರ್ ಮನನೊಂದಿದ್ದ ಎಂದು ತಿಳಿದು ಬಂದಿದೆ.