05:59 PM (IST) Oct 03

India vs West Indies 1st TestAhmedabad Test - ರಾಹುಲ್-ಜುರೆಲ್-ಜಡ್ಡು ಭರ್ಜರಿ ಶತಕ, ವಿಂಡೀಸ್‌ ಮೇಲೆ ಭಾರತ ಬಿಗಿ ಹಿಡಿತ!

ಅಹಮದಾಬಾದ್ ಟೆಸ್ಟ್‌ನ ಎರಡನೇ ದಿನದಾಟದಲ್ಲಿ, ಕೆ ಎಲ್ ರಾಹುಲ್, ಧ್ರುವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ಅವರ ಶತಕಗಳ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ. ದಿನದಾಟದಂತ್ಯಕ್ಕೆ ಭಾರತ 5 ವಿಕೆಟ್‌ಗೆ 448 ರನ್ ಗಳಿಸಿ, 286 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
Read Full Story
04:54 PM (IST) Oct 03

India vs West Indies 1st Testಜಡೇಜಾ ಆಕರ್ಷಕ ಸೆಂಚುರಿ; ಬೃಹತ್ ಮುನ್ನಡೆಯತ್ತ ಭಾರತ

ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ವೃತ್ತಿಜೀವನದ ಆರನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜಡೇಜಾ ಸದ್ಯ 176 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 104 ರನ್ ಗಳಿಸಿದ್ದಾರೆ.

ಇದೀಗ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಬಾರಿಸಿದ್ದು, ಒಟ್ಟಾರೆ 286 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ.

Scroll to load tweet…

04:27 PM (IST) Oct 03

India vs West Indies 1st TestAhmedabad Test - ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಕನ್ನಡಿಗ ಕೆ ಎಲ್ ರಾಹುಲ್!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ 2025ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರಂಭಿಕ ಎನಿಸಿಕೊಂಡು, 8 ವರ್ಷಗಳ ಬಳಿಕ ತವರಿನಲ್ಲಿ ಶತಕ ಬಾರಿಸಿದ ಅಪರೂಪದ ಸಾಧನೆ ಮಾಡಿದ್ದಾರೆ.
Read Full Story
04:04 PM (IST) Oct 03

India vs West Indies 1st Testಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ ಧ್ರುವ್ ಜುರೆಲ್

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್, ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಒಟ್ಟು 190 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 103 ರನ್ ಸಿಡಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಭಾರತದ 12ನೇ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ಜುರೆಲ್ ಪಾತ್ರರಾದರು. 

Scroll to load tweet…

01:38 PM (IST) Oct 03

India vs West Indies 1st Test300 ರನ್ ಗಡಿ ದಾಟಿದ ಭಾರತ; ಧ್ರುವ್ ಜುರೆಲ್ ಆಕರ್ಷಕ ಫಿಫ್ಟಿ

ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ 88 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 302 ರನ್ ಬಾರಿಸಿದ್ದು, ಒಟ್ಟಾರೆ 140 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯಲಿದೆ.

Scroll to load tweet…

12:28 PM (IST) Oct 03

India vs West Indies 1st Testಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ರಾಹುಲ್!

ಕನ್ನಡಿಗ ಕೆ ಎಲ್ ರಾಹುಲ್ ಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ. ಎರಡನೇ ದಿನದಾಟದ ಲಂಚ್‌ಬ್ರೇಕ್ ಮುಗಿಸಿ ಮೈದಾನಕ್ಕಿಳಿದ ರಾಹುಲ್, ಎಡಗೈ ಸ್ಪಿನ್ನರ್ ವಾರಿಕನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

11:51 AM (IST) Oct 03

India vs West Indies 1st Testಶತಕ ಬಾರಿಸಿ ರಾಹುಲ್ ಸಂಭ್ರಮ: ವಿಡಿಯೋ

Scroll to load tweet…

11:50 AM (IST) Oct 03

India vs West Indies 1st Testಅಹಮದಾಬಾದ್‌ ಟೆಸ್ಟ್‌ನಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಭರ್ಜರಿ ಶತಕ; 8 ವರ್ಷಗಳ ಬಳಿಕ ತವರಲ್ಲಿ ಮೊದಲ ಸೆಂಚೂರಿ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕೆ ಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ತವರಿನಲ್ಲಿ 8 ವರ್ಷಗಳ ಬಳಿಕ ಟೆಸ್ಟ್ ಶತಕದ ಬರ ನೀಗಿಸಿಕೊಂಡಿದ್ದು, ಶುಭ್‌ಮನ್ ಗಿಲ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಮುನ್ನಡೆ ಸಾಧಿಸಿದೆ.

Read Full Story