ಮಹಿಳಾ ವಿಶ್ವಕಪ್,ಭಾರತ ಪಾಕಿಸ್ತಾನ ಪಂದ್ಯದಲ್ಲಿ ಭುಗಿಲೆದ್ದ ರನೌಟ್ ವಿವಾದ, ಪಾಕಿಸ್ತಾನ ತಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಾಯಕಿ ಫಾತಿಮಾ ಸನಾ ಅಂಪೈರ್ ಹಾಗೂ ಟೀಂ ಇಂಡಿಯಾ ವಿರುದ್ಧ ಅಸಮಾಧಾನ ಹೊರಹಾಕಿದ್ದರೆ.

ಕೊಲೊಂಬೊ (ಅ.05) ಭಾರತ ಹಾಗೂ ಪಾಕಿಸ್ತಾನ ನಡುವಿನ ಮಹಿಳಾ ವಿಶ್ವಕಪ್ ಪಂದ್ಯ ಹಲವು ಹೈಡ್ರಾಮಗಳಿಗೆ ಕಾರಣವಾಗಿದೆ. ಪಂದ್ಯದಲ್ಲಿ ಭಾರಿ ಸ್ಲೆಡ್ಜಿಂಗ್ ನಡೆಯುತ್ತಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸಿಂಗ್ ವೇಳೆ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡಿದೆ. ಆದರೆ ಸಿದ್ರಾಮ ಅಮಿನ್ ದಿಟ್ಟ ಹೋರಾಟದಿಂದ ಪಾಕಿಸ್ತಾನ ಚೇತರಿಸಿಕೊಂಡಿದೆ. ಸಿದ್ರಾ ಅಮಿನ್ ಹೋರಾಟ ಭಾರತದ ತಲೆನೋವು ಹಚ್ಚಿಸಿದೆ. ಪಾಕಿಸ್ತಾನ ವಿಕೆಟ್ ಪತನದದಲ್ಲಿ ಮನೀಬಾ ಅಲಿ ರನೌಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನ ತಂಡ, ನಾಯಕಿ ಫಾತಿಮಾ ಸನಾ ಅಂಪೈರ್ ಹಾಗೂ ಭಾರತ ಮಹಿಳಾ ತಂಡದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ರನೌಟ್ ತೀರ್ಪಿಗೆ ಅಲಿ ಆಕ್ರೋಶ

ಚೇಸಿಂಗ್ ಮಾಡಲು ಕ್ರೀಸಿಂಗ್ ಬಂದ ಪಾಕಿಸ್ತಾನ ಆರಂಭಿಕ ನಾಲ್ಕನೇ ಓವರ್‌ನಲ್ಲೇ ರನೌಟ್ ವಿವಾದಕ್ಕೆ ಭುಗಿಲೆದ್ದಿದೆ. ಕ್ರಾಂತಿ ಗೌಡ್ ಓವರ್‌ನಲ್ಲಿ ಚೆಂಡು ನೇರವಾಗಿ ಮುನೀಬಾ ಆಲಿ ಪ್ಯಾಡ್‌ಗೆ ಬಡಿದಿತ್ತು. ಭಾರತ ಮಹಿಳಾ ತಂಡ ಎಲ್‌ಬಿಗೆ ಅಪೀಲ್ ಮಾಡಿತ್ತು. ಅಂಪೈರ್ ಎಲ್‌ಬಿ ಔಟ್ ನೀಡಲು ನಿರಾಕರಿಸಿದರು. ಮೊದಲೇ ಒಂದು ತಪ್ಪು ಡಿಆರ್‌ಎಸ್ ಪಡೆದು ಕೈಸುಟ್ಟುಕೊಂಡಿದ್ದ ಭಾರತ ಮಹಿಳಾ ತಂಡ, ಮತ್ತೊಂದು ರಿವ್ಯೂವ್‌ ಪ್ರಯತ್ನ ಮಾಡಲಿಲ್ಲ. ಆದರೆ ಮನೀಬಾ ಆಲಿ ಪ್ಯಾಡ್‌ಗೆ ಬಡಿದ ಚೆಂಡು ನೇರವಾಗಿ ದೀಪ್ತಿ ಶರ್ಮಾ ಕೈಸೇರಿತ್ತು. ದೀಪ್ತಿ ಶರ್ಮಾ ಚೆಂಡನ್ನು ವಿಕೆಟ್‌ಗೆ ಡೈರೆಕ್ಟ್ ಹಿಟ್ ಮಾಡಿದ್ದಾರೆ.

ಮುನೀಬಾ ಆಲಿ ಕ್ರಿಸ್‌ ಪಕ್ಕದಲ್ಲೇ ಇದ್ದರು. ಆದರೆ ಬ್ಯಾಟ್ ಏರ್‌ನಲ್ಲಿತ್ತು. ವಿಕೆಟ್‌ಗೆ ಬಾಲ್ ತಾಗಿದ ಬೆನ್ನಲ್ಲೇ ಭಾರತ ಮಹಿಳಾ ತಂಡ ಔಟ್‌ಗೆ ಅಪೀಲ್ ಮಾಡಿತ್ತು.ಹೀಗಾಗಿ ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್‌ಗೆ ನೀಡಿದ್ದರು. ವಿಕೆಟ್‌ಗೆ ಡೈರೆಕ್ಟ್ ಹಿಟ್ ಹಾಗೂ ಮುನೀಬಾ ಅಲಿ ಕ್ರೀಸ್ ಚೆಕ್ ಮಾಡಿದ ಥರ್ಡ್ ಅಂಪೈರ್, ಔಟ್ ತೀರ್ಪು ನೀಡಿತ್ತು. ಇದು ಅಲಿ ಮಾತ್ರವಲ್ಲ ಪಾಕಿಸ್ತಾನದ ಆಕ್ರೋಶಕ್ಕೆ ಕಾರಣವಾಗಿದೆ.

Scroll to load tweet…

ಐಸಿಸಿ ನಿಯಮ ಬಾಹಿರ ತೀರ್ಪು ಎಂದು ಪಾಕಿಸ್ತಾನ ಆಕ್ರೋಶ

ಅಲಿಗೆ ನೀಡಿದ್ದ ರನೌಟ್ ತೀರ್ಪು ಐಸಿಸಿ ನಿಯಮ ಬಾಹಿರ ಎಂದು ಪಾಕಿಸ್ತಾನ ಆಕ್ರೋಶ ಹೊರಹಾಕಿದೆ. ಕ್ರೀಸ್‌ನಲ್ಲೇ ಇದ್ದ ಅಲಿ, ಅಪೀಲ್ ಮಾಡಿದ ಕಾರಣಕ್ಕೆ ಕ್ರೀಸ್ ಬಿಟ್ಟಿದ್ದರು. ಹೀಗಾಗಿ ಇದು ರನೌಟ್ ಸರಿಯಾದ ತೀರ್ಪಲ್ಲ ಎಂದು ಪಾಕಿಸ್ತಾನದ ವಾದ. ಇದೇ ಕಾರಣದಿಂದ ಅಲಿ ರನೌಟ್ ಭಾರಿ ವಿವಾದವಾಗಿ ಮಾರ್ಪಟ್ಟಿದೆ.

ಸಾದಿರ್ ಅಮೀನ್ ಅಬ್ಬರ

ಪಾಕಿಸ್ತಾನ ತಂಡದ 5 ವಿಕೆಟ್ ಕಬಳಿಸಿದ ಭಾರತ ಮಹಿಳಾ ತಂಡಕ್ಕೆ ಪ್ರತಿ ಎಸೆತದಲ್ಲೂ ಒತ್ತಡ ಹೆಚ್ಚಾಗಿತ್ತು. ಇದಕ್ಕೆ ಕಾರಣ ಪಾಕಿಸ್ತಾನದ ಸಾದಿರ್ ಅಮಿನ್ ಅಬ್ಬರ. ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ ಸಾದಿರ್ ಇದೀಗ ಶತಕದತ್ತ ಸಾಗಿದ್ದರು. ಆದರೆ ಸಾದಿರ್ 81 ರನ್ ಸಿಡಿಸಿ ಔಟಾಗುತ್ತಿದ್ದಂತೆ ಭಾರತ ಸಂಭ್ರಮ ಹೆಚ್ಚಾಗಿದೆ.