ಯುಎಇ ವಿರುದ್ಧ ಟೀಂ ಇಂಡಿಯಾ ಅತೀ ವೇಗದಲ್ಲಿ ಪಂದ್ಯ ಗೆದ್ದ ಸಾಧನೆ ಮಾಡಿದೆ. ಕೇವಲ 4.3 ಓವರ್‌ಗೆ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಪಂದ್ಯ ಗೆದ್ದು ಭರ್ಜರಿ ಆರಂಬ ಪಡೆದಿದೆ.

ದುಬೈ (ಸೆ.10) ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಯುಎಐ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅತೀ ವೇಗದಲ್ಲಿ 9 ವಿಕೆಟ್ ಭರ್ಜರಿ ಗೆಲುವು ಕಂಡಿದೆ. ಆರಂಭದಲ್ಲಿ ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ, ಯುಎಇ ತಂಡವನ್ನು ಕೇವಲ 57 ರನ್‌ಗೆ ಆಲೌಟ್ ಮಾಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 1 ವಿಕೆಟ್ ಕಳೆದುಕೊಂಡು, 4.3 ಓವರ್‌ಗಳಲ್ಲಿ ಗೆಲುವು ಕಂಡಿದೆ. ವಿಶೇಷ ಅಂದರೆ ಒಟ್ಟು ಪಂದ್ಯ ಕೇವಲ 2 ಗಂಟೆ ಕಾಲವೂ ನಡೆಯಲಿಲ್ಲ.

5 ಸಿಕ್ಸರ್, 4 ಬೌಂಡರಿಯಲ್ಲಿ ಪಂದ್ಯ ಕ್ಲೋಸ್

ಯುಎಇ ನೀಡಿದ 58 ರನ್ ಟಾರ್ಗೆಟ್ ಭಾರತಕ್ಕೆ ಸುಲಭ ತುತ್ತಾಗಿತ್ತು. ಟೀಂ ಇಂಡಿಯಾ ಈ ಟಾರ್ಗೆಟನ್ನು ಸ್ಫೋಟಕ ರೀತಿಯಲ್ಲಿ ಚೇಸ್ ಮಾಡಿತ್ತು. 5 ಸಿಕ್ಸರ್ ಹಾಗೂ 4 ಬೌಂಡರಿ ಮೂಲಕ ಟೀಂ ಇಂಡಿಯಾ ಪಂದ್ಯ ಮುಗಿಸಿತ್ತು. ಇದರ ನಡುವೆ ಅಭಿಶೇಕ್ ಶರ್ಮಾ ವಿಕೆಟ್ ಕಬಳಿಸಿರುವುದೇ ಯುಎಐ ಸಾಧನೆ. ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ಚೇಸ್ ಮಾಡಲು ಮುಂದಾಗಿತ್ತು. ಆದರೆ ಕೊನೆಯ ಹಂತದಲ್ಲಿ ಶರ್ಮಾ ವಿಕೆಟ್ ಕಳೆದುಕೊಂಡಿತ್ತು.

ಸ್ಫೋಟಕ ಆರಂಭ ನೀಡಿದ ಅಭಿಶೇಖ್, ಗಿಲ್

ಅಭಿಶೇಕ್ ಶರ್ಮಾ ಹಾಗೂ ಶುಬಮನ್ ಗಿಲ್ ಟೀಂ ಇಂಡಿಯಾಗೆ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 48 ರನ್ ಜೊತೆಯಾಟ ನೀಡಿತ್ತು. ಅಭಿಶೇಕ್ ಶರ್ಮಾ 16 ಎಸೆತದಲ್ಲಿ 30 ರನ್ ಸಿಡಿಸಿದ್ದರು. 2 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಇತ್ತ ಗಿಲ್ 9 ಎಸೆತದಲ್ಲಿ ಅಜೇಯ 22 ರನ್ ಸಿಡಿಸಿದ್ದರು. ಗಿಲ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ್ದರು. ಇತ್ತ ಸೂರ್ಯಕುಮಾರ್ 2 ಎಸೆತದ ಎದುರಿಸಿ 1 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಅಜೇಯ 7 ರನ್ ಕಲೆಹಾಕಿದ್ದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವು ದಾಖಲಿಸಿತ್ತು.

ಯಾರಾಗ್ತಾರೆ 2025ರ ಏಷ್ಯಾಕಪ್ ಚಾಂಪಿಯನ್? ಭವಿಷ್ಯ ನುಡಿದ ಸನ್ನಿ, ಡಿಕೆ, ಹರ್ಷಾ ಬೋಗ್ಲೆ!

ಯಎಇ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್ ಮಾಡಿದ ಯುಎಐ, ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿತ್ತು. ಅಲಿಶಾನ್ ಶರಾಫು 22 ರನ್ ಸಿಡಿಸಿದರೆ, ಮೊಹಮ್ಮದ್ ವಾಸೀಮ್ 19 ರನ್ ಸಿಡಿಸಿದ್ದರು. ಇನ್ನುಳಿದ ಯುಎಐ ಬ್ಯಾಟರ್ 3 ರನ್ ಗಡಿ ದಾಟಿಲ್ಲ. ನಾಲ್ವರು ಬ್ಯಾಟರ್ ತಲಾ 2 ರನ್ ಸಿಡಿಸಿದರೆ, ಮತ್ತೆ ಮೂವರು ತಲಾ 1 ರನ್ ಸಿಡಿಸಿದ್ದಾರೆ. ಇನ್ನು ಜುನೈದ್ ಸಿದ್ದಿಖಿ ಡಕೌಟ್ ಆಗಿದ್ದಾರೆ. ಇದರೊಂದಿಗೆ ಯುಎಐ 13.1 ಓವರ್‌ಗಳಲ್ಲಿ 57 ರನ್ ಸಿಡಿಸಿ ಔಟಾಗಿತ್ತು.

ಈ ಪಂದ್ಯದಲ್ಲಿ ಭಾರತ ಅತೀ ಹೆಚ್ಚು ಎಸೆತ ಉಳಿಸಿ ಗೆದ್ದ 2ನೇ ತಂಡ ಅನ್ನೋ ದಾಖಲೆ ಬರೆದಿದೆ. ಭಾರತ 93 ಎಸೆತ ಬಾಕಿರುವಂತೆ ಪಂದ್ಯ ಗೆದ್ದುಕೊಂಡಿದೆ.

ಗರಿಷ್ಠ ಎಸೆತ ಬಾಕಿ ಉಳಿಸಿ ಪಂದ್ಯ ಗೆದ್ದ ತಂಡ

  • 101 ಎಸೆತ, ಇಂಗ್ಲೆಂಡ್ vs ಓವನ್ 2024
  • 93 ಎಸೆತ, ಭಾರತ vs ಯುಎಐ 2025
  • 90 ಎಸೆತ, ಶ್ರೀಲಂಕಾ vs ನೆದರ್ಲೆಂಡ್ 2014
  • 90 ಎಸೆತ ಜಿಂಬಾಬ್ವೆ vs ನೈರೋಬಿ 2024