ದುಬೈನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ, ಏಷ್ಯಾಕಪ್ ಗೆದ್ದ ಭಾರತವನ್ನು ಅಭಿನಂದಿಸದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಿಸಿಸಿಐ ಒತ್ತಡಕ್ಕೆ ಮಣಿದ ನಖ್ವಿ ನಂತರ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ದುಬೈ: ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಟ್ರೋಫಿ ನೀಡದೆ ವಿವಾದಕ್ಕೆ ಕಾರಣವಾಗಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ, ಪಾಕಿಸ್ತಾನದ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಗೆ ಮಂಗಳವಾರ ಬಿಸಿಸಿಐ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಲ್ಲದೆ, ಬಲವಂತವಾಗಿ ನಖಿಯಿಂದ ಭಾರತಕ್ಕೆ ಅಭಿನಂದನೆ ಸಲ್ಲಿಸುವಂತೆ ಮಾಡಿದ್ದಾರೆ.
ಮಂಗಳವಾರ ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಬಿಸಿಸಿಐ ಪ್ರತಿನಿಧಿಗಳಾಗಿ ರಾಜೀವ್ ಶುಕ್ಲಾ ಆಶಿಶ್ ಶೇಲರ್ ಪಾಲ್ಗೊಂಡರು. ಸಭೆಯಲ್ಲಿ ಮಾತನಾಡಿದ ಮೊಹ್ಸಿನ್ ನಖ್ವಿ, ಏಷ್ಯಾಕಪ್ ಗೆದ್ದ ಭಾರತದ ಬಗ್ಗೆ ತುಟಿ ಬಿಚ್ಚಲಿಲ್ಲ. ಇದಕ್ಕೆ ಆಶಿಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮಣಿದು ಮೊಹ್ಸಿನ್ ನಖ್ವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದರು ಎಂದು ವರದಿಯಾಗಿದೆ. ಅಲ್ಲದೆ, ಟ್ರೋಫಿ ಕೊಡದಿರುವ ನಬ್ಬಿ ನಡೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿದೆ. “ಟ್ರೋಫಿ ನಿಮ್ಮ ಸ್ವಂತದಲ್ಲ. ಅದು ತಂಡಕ್ಕೆ ಕೊಡಬೇಕು. ಟ್ರೋಫಿಯನ್ನು ಕಚೇರಿಯಲ್ಲಿ ಇಡಬೇಕು ಮತ್ತು ಅದನ್ನು ಬಿಸಿಸಿಐ ಪಡೆದು ಕೊಳ್ಳಲಿದೆ' ಎಂದು ಹೇಳಿದ್ದಾರೆ.
ಕಾರ್ಟೂನ್ ತರ ಆಗಿದ್ದೆ ಎಂದ ಮೊಹ್ಸಿನ್ ನಖ್ವಿ!
ಟ್ರೋಫಿ ವಿತರಣೆ ಸಮಾರಂಭದಲ್ಲಿ ತಮಗೆ ಮುಜುಗರವಾದ ಬಗ್ಗೆ ಸಭೆಯಲ್ಲಿ ಮಾತನಾಡಿದನ, ಸಮಾರಂಭ ದಲ್ಲಿ ನನಗೆ ಕಾರ್ಟೂನ್ ತರ ಭಾಸ ವಾಯಿತು ಎಂದಿದ್ದಾರೆ. ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಟ್ರೋಫಿ ಕೊಡಲು ವೇದಿಕೆಯಲ್ಲಿ ಕಾಯುತ್ತಿದ್ದಾಗ, ಭಾರತೀಯ ಆಟಗಾರರು ದೂರದಲ್ಲಿ ಕುಳಿತಿದ್ದರು.
ಮೋದಿ ಸಿಂದೂರ ಟ್ವಿಟ್ ನ ಪ್ರತಿಕ್ರಿಯೆ: ಟ್ರೋಲ್
ಭಾನುವಾರ ರಾತ್ರಿ ಟ್ರೋಫಿ ವಿವಾದ ಆದರೂ ಅದರ ಬಗ್ಗೆ ತುಟಿಬಿಚ್ಚದ ಮೊಹಿನ್ ನ ಪ್ರಧಾನಿ ಮೋದಿ ಅವರ 'ಸಿಂದೂರ' ಟೀಟ್‌ಗೆ ಪ್ರತಿಕ್ರಿಯಿಸಿ ಟ್ರೋಲ್‌ಗೆ ಗುರಿಯಾಗಿದ್ದಾರೆ. 'ಆಟದ ಮೈದಾನದಲ್ಲೂ ಆಪರೇಷನ್ ಸಿಂದೂರ, ಫಲಿತಾಂಶ ಒಂದೇ-ಭಾರತ ಗೆದ್ದಿದೆ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು' ಎಂದು ಮೋದಿ ಟ್ವಿಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ 'ಯುದ್ಧವೇ ನಿಮ್ಮ ಮಾನದಂಡ ಎಂದು ಭಾವಿಸಿದರೆ, ಪಾಕ್ ವಿರುದ್ಧ ಭಾರತ ಅನುಭವಿಸಿದ ಸೋಲುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಯಾವುದೇ ಕ್ರಿಕೆಟ್ ಪಂದ್ಯದಿಂದಲೂ ಈ ಕಠಿಣ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಕ್ರೀಡೆಗೆ ಯುದ್ಧವನ್ನು ಎಳೆದು ತರುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ. ಇದು ಆಟದ ನಿಜವಾದ ಮತ್ತು ಪವಿತ್ರವಾದ ಸ್ಫೂರ್ತಿಗೆ ದೊಡ್ಡ ಅವಮಾನ' ಎಂದಿದ್ದಾರೆ.
ಈ ಮೂಲಕ ಆಪರೇಷನ್ ಸಿಂದೂರ ಸೇರಿದಂತೆ ಈ ಹಿಂದಿನ ಯುದ್ಧಗಳಲ್ಲಿ ಗೆದ್ದಿದ್ದು ಪಾಕಿಸ್ತಾನ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಸುಳ್ಳನ್ನೇ ನಿಜ ಎಂದು ಮತ್ತೆ ಮತ್ತೆ ಹೇಳುತ್ತಿರುವ ನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ.
ಕಪ್ ಎಮೋಜಿ ಜತೆ ಭಾರತೀಯರ ಪೋಸ್!
ಆಟಗಾರರು ಟ್ರೋಫಿ ಗೆದ್ದ ಬಳಿಕ ಅದರ ಜೊತೆ ಫೋಟೋ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ ಭಾನುವಾರ ಭಾರತಕ್ಕೆ ಟ್ರೋಫಿ ನೀಡಲಾಗಿಲ್ಲ. ಹೀಗಾಗಿ ಆಟಗಾರರು ಸಾಮಾಜಿಕ ತಾಣಗಳಲ್ಲಿ ತಮ್ಮ ಫೋಟೋ ಜೊತೆ ಟ್ರೋಫಿಯ ಎಮೋಜಿಯನ್ನು ಹಾಕಿಕೊಂಡು ಸಂಭ್ರಮಿಸಿದ್ದಾರೆ. ಮೈದಾನದಲ್ಲಿ ಟ್ರೋಫಿ ಹಿಡಿದು ಕೊಂಡವರಂತೆ ಪೋಸ್ ಕೊಟ್ಟು, ಬಳಿಕ ಪೋಸ್ಟ್ ಮಾಡುವಾಗ ಕಪ್‌ನ ಎಮೋಜಿ (ಚಿಹ್ನೆ)ಯನ್ನು ಸೇರಿಸಿ ಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಗಿಲ್, ಅಭಿಷೇಕ್, ಹಾರ್ದಿಕ್ ಸೇರಿ ಹಲವರು ಈ ರೀತಿ ಮಾಡಿದ್ದಾರೆ.
