ಏಷ್ಯಾ ಕಪ್ ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಅಭಿಷೇಕ್ ಶರ್ಮಾ ಅಧ್ಬುತವಾಗಿ ಆಟವಾಡಿದ್ದಾರೆ. ಅವರಿಗೆ ಕಾರೊಂದು ಗಿಫ್ಟ್ ಆಗಿ ಸಿಕ್ಕಿದೆ. ಆದ್ರೆ ಆ ಕಾರನ್ನು ಭಾರತಕ್ಕೆ ತರುವಂತಿಲ್ಲ.
2025 ರ ಏಷ್ಯಾ ಕಪ್ (Asia Cup) ನಲ್ಲಿ ಭಾರತ ಅದ್ಭುತ ಗೆಲುವಿ ಸಾಧಿಸಿದೆ. ಈ ಗೆಲುವಿಗೆ ಭಾರತದ ಅನೇಕ ಆಟಗಾರರು ಕಾರಣವಾಗಿದ್ದಾರೆ. ಆದ್ರೆ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma). ಟೂರ್ನಮೆಂಟ್ನ ಉತ್ತಮ ಆಟ ಪ್ರದರ್ಶಿಸಿದ ಅಭಿಷೇಕ್ ಶರ್ಮಾ, ಟೂರ್ನಮೆಂಟ್ ಆಫ್ ದಿ ಪ್ಲೇಯರ್ ಪ್ರಶಸ್ತಿ ಗೆದ್ದಿದ್ದಾರೆ. ಈ ಪ್ರಶಸ್ತಿಗೆ ಭಾಜನರಾದ ಅಭಿಷೇಕ್ ಶರ್ಮಾಗೆ HAVAL H9 SUV ಯನ್ನು ಗಿಫ್ಟ್ ಆಗಿ ನೀಡಲಾಗಿದೆ. ಉಡುಗೊರೆಯಾಗಿ ದೊಡ್ಡ ಕಾರ್ ಸಿಕ್ಕಿದ್ರೂ ಅದನ್ನು ಅಭಿಷೇಕ್ ಶರ್ಮಾ ಭಾರತಕ್ಕೆ ತರುವಂತಿಲ್ಲ. ಭಾರತದ ರಸ್ತೆಯಲ್ಲಿ ಅವರು ಈ ಕಾರನ್ನು ಓಡಿಸುವಂತಿಲ್ಲ.
ಗಿಫ್ಟ್ ಸಿಕ್ಕ ಕಾರನ್ನು ಭಾರತಕ್ಕೆ ತರಲ್ವಾ ಅಭಿಷೇಕ್ ಶರ್ಮಾ? :
ಅಭಿಷೇಕ್ ಶರ್ಮಾಗೆ ಸಿಕ್ಕಿರುವ HAVAL H9 SUV ಎಡಗೈ ಡ್ರೈವ್ ಆವೃತ್ತಿಯಾಗಿದೆ. ಭಾರತದಲ್ಲಿ ಎಡಗೈ ಡ್ರೈವಿಂಗ್ ವಾಹನಕ್ಕೆ ಅನುಮತಿ ಇಲ್ಲ. ಭಾರತದಲ್ಲಿ ಬಲಗೈ ಡ್ರೈವಿಂಗ್ ವಾಹನಗಳು ಮಾತ್ರ ಓಡುತ್ವೆ. ಭಾರತದ ರಸ್ತೆ ಸುರಕ್ಷತೆ ಮತ್ತು ವಾಹನ ನೋಂದಣಿ ಕಾಯ್ದೆಯಡಿಯಲ್ಲಿ, ಎಡಗೈ ಡ್ರೈವ್ ಕಾರುಗಳನ್ನು ಭಾರತದಲ್ಲಿ ನೋಂದಾಯಿಸಲು ಅಥವಾ ಓಡಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅಭಿಷೇಕ್ ಶರ್ಮಾ, ಈ ಕಾರನ್ನು ಭಾರತಕ್ಕೆ ತರಲು ಸಾಧ್ಯವಿಲ್ಲ.
ಕಾಂತಾರ ಹೀರೋ ರಿಷಬ್ ಶೆಟ್ಟಿ ಫೇವರೇಟ್ ಕ್ರಿಕೆಟಿಗ ಯಾರು? ಗೆಸ್ ಮಾಡಿ
ಅಭಿಷೇಕ್ ಶರ್ಮಾಗೆ ಹೊಸ ಕಾರು ಸಿಗ್ಬಹುದಾ? :
ವರದಿಗಳ ಪ್ರಕಾರ, HAVAL H9 ಬಲಗೈ ಆವೃತ್ತಿಯನ್ನು ಕಂಪನಿ ಶೀಘ್ರವೇ ಬಿಡುಗಡೆ ಮಾಡಲಿದೆ. ನವೆಂಬರ್ ನಲ್ಲಿ ಭಾರತದಲ್ಲಿ ಬಲಗೈ ಡ್ರೈವ್ ಆವೃತ್ತಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದ್ವೇಳೆ ಕಂಪನಿ ಬಲಗೈ ಆವೃತ್ತಿಯನ್ನು ಬಿಡುಗಡೆ ಮಾಡಿದ್ರೆ ಅದನ್ನು ಅಭಿಷೇಕ್ ಶರ್ಮಾಗೆ ನೀಡುವ ಸಾಧ್ಯತೆ ಇದೆ. ಆದ್ರೆ ಈ ಬಗ್ಗೆ ಕಂಪನಿ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
HAVAL H9 ವೈಶಿಷ್ಟ್ಯಗಳು :
HAVAL H9 ತನ್ನ ಐಷಾರಾಮಿ ಲುಕ್ ಮತ್ತು ಸುಧಾರಿತ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಈ ವಾಹನದಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. 7 ಸೀಟಿನ ವಿನ್ಯಾಸದೊಂದಿಗೆ ಬರುವ ಕಾರು ಕರೆಂಟ್ ಮೂಲಕ ಅಡ್ಜೆಸ್ಟ್ ಮಾಡಬಹುದಾದ ಸೀಟ್ ಹೊಂದಿದೆ. Apple CarPlay ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪನೋರಮಿಕ್ ಸನ್ರೂಫ್ ಅನ್ನು ಇದು ಒಳಗೊಂಡಿದೆ. 360-ಡಿಗ್ರಿ ಕ್ಯಾಮೆರಾ, ಆರು ಏರ್ಬ್ಯಾಗ್ಗಳು, ಪಾರ್ಕಿಂಗ್ ಅಸಿಸ್ಟ್ ಮತ್ತು ABS-EBD ನಂತಹ ವೈಶಿಷ್ಟ್ಯಗಳು ಸಹ ಲಭ್ಯವಿದೆ. HAVAL H9 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 142,200 ಸೌದಿ ರಿಯಾಲ್ಗಳು (SAR). ಅಂದ್ರೆ ಸುಮಾರು 33.60 ಲಕ್ಷ ರೂಪಾಯಿ. ಭಾರತಕ್ಕೆ ಬಲಗೈ ಆವೃತ್ತಿ ಬಂದ್ರೆ ಅದ್ರ ಬೆಲೆ 25 ರಿಂದ 30 ಲಕ್ಷ ರೂಪಾಯಿ ಅಂದಾಜಿಸಲಾಗಿದೆ.
ಇವರೇ ನೋಡಿ ಪಾಕಿಸ್ತಾನದ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್! ಈಕೆಯ ಮೂಲ ಕಾಶ್ಮೀರ
ಏಷ್ಯಾ ಕಪ್ ನಲ್ಲಿ ಅಭಿಷೇಕ್ ಶರ್ಮಾ ಸಾಧನೆ :
2025 ರ ಏಷ್ಯಾ ಕಪ್ನಲ್ಲಿ ಅಭಿಷೇಕ್ ಶರ್ಮಾ ಏಳು ಇನ್ನಿಂಗ್ಸ್ಗಳಲ್ಲಿ ಒಟ್ಟು 314 ರನ್ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ 32 ಬೌಂಡರಿ ಮತ್ತು 19 ಸಿಕ್ಸರ್ ಸಿಡಿಸಿ, ಮೂರು ಅರ್ಧಶತಕ ಗಳಿಸಿದ್ದಾರೆ. ಅಭಿಷೇಕ್ ಶರ್ಮಾ ಆಟ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. 2025 ರ ಏಷ್ಯಾ ಕಪ್ನಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಮಳೆಗರೆದ ಅಭಿಷೇಕ್ ಶರ್ಮಾ, ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯಲಿಲ್ಲ. ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದಾಗ, ಒಂದೇ ಒಂದು ಸಿಕ್ಸ್ ಬಾರಿಸಲಿಲ್ಲ.
