Love after marriage movies Bollywood: ಲವ್‌, ಮದುವೆ ಸಂಬಂಧದ ಸವಿಯನ್ನು ಅರಿತವನೇ ಬಲ್ಲ ಎನ್ನೋದುಂಟು. ಮದುವೆ ಎನ್ನೋದು ಪವಿತ್ರವಾದ ಸಂಬಂಧ. ಆದರೆ ಕೆಲವರು ಈ ವ್ಯವಸ್ಥೆಯಲ್ಲಿ ಕೆಲವರು ಒಂದಷ್ಟು ಸಮಸ್ಯೆಗಳನ್ನು ಎದುರಿಸೋದುಂಟು. ಈ ಕುರಿತು ಇರುವ ಸಿನಿಮಾಗಳಿವು

ಮದುವೆ, ಸಂಬಂಧದ ಕುರಿತು ಇರುವ ಭಾರತೀಯ ಸಿನಿಮಾಗಳಿವು

ಮನ್‌ಮರ್ಝಿಯಾನ್ (Manmarziyaan)

ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ. ಅಭಿಷೇಕ್‌ ಬಚ್ಚನ್‌, ತಾಪ್ಸಿ ಪನ್ನು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಕೂಡ ಒಳ್ಳೆಯ ಕಲೆಕ್ಷನ್‌ ಸಿಕ್ಕಿತ್ತು.

ಥಪ್ಪಡ್ (Thappad) ಸಿನಿಮಾ

ಇದು ತಾಪ್ಸಿ ಪಣ್ಣು ಸಿನಿಮಾ! ಈ ಚಿತ್ರದಲ್ಲಿ ಮದುವೆಯು ಕೆಲವು ವರ್ಷಗಳಾದ ನಂತರದಲ್ಲಿ ಜೀವನ ಹೇಗಿರುತ್ತದೆ? ವ್ಯವಸ್ಥೆ ಹೇಗೆ ಬದಲಾಗುತ್ತದೆ? ಎಂಬುದರ ಬಗ್ಗೆ ಇದೆ. ಪವೈಲ್‌ ಗುಲಾಟಿ, ತಾಪ್ಸಿ ಪನ್ನು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಅಳೈಪಾಯುತೇ (Alaipayuthey)

ಇದು "ಹೊಂದಿಕೆಯಾಗದ" ಮದುವೆಯ ಉದಾಹರಣೆ! ಪ್ರೀತಿ- ಪ್ರೇಮವಿದ್ದರೂ ಕೂಡ, ಮದುವೆ ಸುಲಭವಲ್ಲ ಎಂದು ಹೇಳುವುದು. ಹಣದ ಚಿಂತೆ, ಇಬ್ಬರು ಜಾಬ್‌ಗಳನ್ನು ಮಾಡುವುದು ಎಷ್ಟು ಕಷ್ಟ? ಕುಟುಂಬದ ಬೆಂಬಲ ಇಲ್ಲದಿದ್ದರೆ ಏನಾಗುವುದು ಎಂಬುದು ಈ ಸಿನಿಮಾದಲ್ಲಿದೆ.

ಚಲ್ತೆ ಚಲ್ತೆ (Chalte Chalte)

ಇದು ಮತ್ತೊಂದು ಲವ್‌ ಸ್ಟೋರಿ. ಶಾರುಖ್‌ ಖಾನ್‌, ರಾಣಿ ಮುಖರ್ಜಿ ನಟನೆಯ ‘ಚಲ್ತೆ ಚಲ್ತೆʼ ಸಿನಿಮಾದಲ್ಲಿ ಲವ್‌ ಸ್ಟೋರಿಯಿದೆ. ಲವ್‌ ಮಾಡಿಕೊಂಡ ಜೋಡಿ ಆಮೇಲೆ ಮದುವೆ ಆಗುವುದು. ಈ ಮದುವೆಯಲ್ಲಿ ಶಿಸ್ತಿಲ್ಲದೆ ಗಂಡ-ಹೆಂಡತಿ ನಡುವೆ ಜಗಳ ಆಗುವುದು.

ಕಭೀ ಅಲ್ವಿದಾ ನ ಕಹೇನಾ (Kabhi Alvida Na Kehna)

ಇದು ಮದುವೆ ಕುರಿತು ಒಂದು ವಿಶೇಷವಾದ ದೃಷ್ಟಿಕೋನ ನೀಡುವ ಸಿನಿಮಾವಾಗಿದೆ. ಪ್ರೀತಿಯಿಂದ ಆರಂಭವಾದ ಮೂರು ಹೊಸ ಸಂಬಂಧಗಳು, ಅಲ್ಲಿ ಎದುರಾಗಲಿರುವ ಸಮಸ್ಯೆಗಳ ಬಗ್ಗೆ ಈ ಸಿನಿಮಾವಿದೆ.

ಸಿಲ್ಸಿಲಾ (Silsila)

ಈ ಕ್ಲಾಸಿಕ್ ಸಿನಿಮಾದಲ್ಲಿ ಮದುವೆಯ ವಿವಿಧ ರೂಪಗಳನ್ನು ತೋರಿಸಲಾಗಿದೆ. ಇಲ್ಲಿ ಅಮಿತಾಭ್‌ ಬಚ್ಚನ್‌, ಜಯಾ ಬಚ್ಚನ್‌, ರೇಖಾ ಕೂಡ ನಟಿಸಿದ್ದಾರೆ.

ಮಿಸ್ಟರ್ ಅಂಡ್ ಮಿಸೆಸ್ 55 (Mr. and Mrs. 55)

ಈ ಸಿನಿಮಾವು ತುಂಬ ಹಳೆಯದು. ಆದರೆ ತಮಾಷೆಯ ದೃಷ್ಠಿಯಿಂದ ಇದು ಮನರಂಜನಾತ್ಮಕ ಸಿನಿಮಾ. ಮಧುಬಾಲಾ ತನ್ನ ಆಸ್ತಿಯನ್ನು ಪಡೆಯಲು ಮದುವೆಯಾಗಬೇಕಿರುತ್ತದೆ. ಆಗ ಗುರುದತ್ತ್ ಅವರು ಫೇಕ್‌ ಮ್ಯಾರೇಜ್‌ ಆಗಲು ಒಪ್ಪಿಗೆ ಕೊಡುತ್ತಾರೆ, ಆಮೇಲೆ ಈ ಕಥೆ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಬೆಂಗಳೂರು ಡೇಸ್ (Bangalore Days)

ಮೂರು ಜೋಡಿಗಳ ಲವ್‌ಸ್ಟೋರಿ ಇಲ್ಲಿದೆ. ಮದುವೆಯಾದ ಬಳಿಕ ಗಂಡನ ಹಳೇ ಲವ್‌ ಸ್ಟೋರಿ ನೋಡಿ, ಪತ್ನಿ ಏನು ಮಾಡ್ತಾಳೆ ಎನ್ನೋದು ಕೂಡ ಈ ಸಿನಿಮಾದಲ್ಲಿದೆ. ದುಲ್ಖರ್‌ ಸಲ್ಮಾನ್‌, ನಜ್ರಿಯಾ, ಫಹಾದ್‌ ಫಾಸಿಲ್‌, ನಿವೀನ್‌ ಪೌಲಿ ಕೂಡ ನಟಿಸಿದ್ದಾರೆ.

ಆಕಾಶ್ ವಾಣಿ (Akaash Vani)

ಇದು ಬಹುಶಃ ನನ್ನ ನೆಚ್ಚಿನ ಮದುವೆ ಚಿತ್ರ. ಇದು ಕತ್ತಲಾದ ಸತ್ಯವನ್ನು ತೋರಿಸುತ್ತದೆ. ನಾಯಕಿ ಕಾಲೇಜಿನಲ್ಲಿ ಪ್ರೇಮ ಸಂಬಂಧದಲ್ಲಿದ್ದರೂ, ತಾಯಿ-ತಂದೆ ಎಣಿಸಿದ ವ್ಯಕ್ತಿಗೆ ಮದುವೆಯಾಗಬೇಕಾಗುತ್ತದೆ. ಅವರು ಆಧುನಿಕ ಜನ – ಬೆದರಿಕೆಯನ್ನು ನೀಡುವುದಿಲ್ಲ. ಆದರೆ ಅವಳು "ಇಲ್ಲ" ಎನ್ನುವ ಸಾಧ್ಯತೆಯನ್ನೇ ಕಾಣುತ್ತಿಲ್ಲ. ಮದುವೆಯಾದ ಮೇಲೆ ಗಂಡ ಅವಳಿಂದ ಸೇವೆ, ಲೈಂಗಿಕತೆಯ ನಿಷ್ಠೆ ಎಲ್ಲವನ್ನೂ ನಿರೀಕ್ಷಿಸುತ್ತಾನೆ. ಅವಳಿಗೆ ಇಲ್ಲ ಎಂದುವಾಗುವುದೇ ಇಲ್ಲ. ಹೊಂದಿಕೆಯಾಗಿಸಿದ ಮದುವೆಗಳು ನಿಜವಾಗಿಯೂ ಒಪ್ಪಿಗೆಯ ಮದುವೆಗಳೇನಾ?

ನಿನ್ನು ಕೋರಿ (Ninnu Kori)‌

ಹೀರೋಯಿನ್ ಕಾಲೇಜಿನಲ್ಲಿ ಸಿಕ್ರೇಟ್‌ ರಿಲೇಶನ್‌ಶಿಪ್‌ನಲ್ಲಿ ಇರುತ್ತಾಳೆ. ಆದರೆ ಅವಳ ತಂದೆ-ತಾಯಿ ಅವಳಿಗೆ ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ಆದರೆ ಅವಳಿಗೆ ಖುಷಿ ಎನ್ನೋದು ಇರೋದಿಲ್ಲ.