ಇಂಥ ಚಿತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ಆದರೆ, ರಿಷಬ್ ಶೆಟ್ಟಿ ನಿರ್ದೇಶಕ ಮತ್ತು ನಟರಾಗಿ ‘ಕಾಂತಾರ 1’ ಚಿತ್ರವನ್ನು ರೂಪಿಸಿದ್ದು, ಅವರ ಪ್ರತಿಭೆಗೆ ನ್ಯಾಷನಲ್ ಅವಾರ್ಡ್ ಬರಬೇಕು. ಈ ಮಾತುಗಳು ನಿರ್ದೇಶಕ ಅಟ್ಲಿ ಅವರದ್ದು.
‘ಇಂಥ ಚಿತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ಆದರೆ, ರಿಷಬ್ ಶೆಟ್ಟಿ ನಿರ್ದೇಶಕ ಮತ್ತು ನಟರಾಗಿ ‘ಕಾಂತಾರ 1’ ಚಿತ್ರವನ್ನು ರೂಪಿಸಿದ್ದು, ಅವರ ಪ್ರತಿಭೆಗೆ ನ್ಯಾಷಲ್ ಅವಾರ್ಡ್ ಬರಬೇಕು. ರಿಷಬ್ ಶೆಟ್ಟಿ ಎಲ್ಲಾ ಸಿನಿಮಾ ಮೇಕರ್‌ಗಳಿಗೂ ಸ್ಫೂರ್ತಿ’. ಈ ಮಾತುಗಳು ನಿರ್ದೇಶಕ ಅಟ್ಲಿ ಅವರದ್ದು. ‘ಜವಾನ್’, ‘ಮೆರ್ಸಲ್’, ‘ಬಿಗಿಲ್’, ‘ತೇರಿ’ ಹಾಗೂ ‘ರಾಜಾ ರಾಣಿ’ ಚಿತ್ರಗಳ ನಿರ್ದೇಶಕ ಅಟ್ಲೀ ಅವರು ‘ಕಾಂತಾರ 1’ ಚಿತ್ರವನ್ನು ನೋಡಿ ಮೆಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಬೆಂಗಳೂರು ಒಪನ್ 2025 ವರ್ಲ್ಡ್ ಪಿಕಲ್ ಬಾಲ್ ಲೀಗ್ ಪಂದ್ಯಾವಳಿಯ ಉದ್ಘಾಟನೆಗೆ ನಿರ್ದೇಶಕ ಅಟ್ಲೀ ಬೆಂಗಳೂರಿಗೆ ಬಂದಿದ್ದರು. ಬಂದಿದ್ದರು. ಅಟ್ಲೀ ಬೆಂಗಳೂರು ಜವಾನ್ಸ್ ತಂಡದ ಮಾಲೀಕ ಕೂಡ. ಉದ್ಘಾಟನೆ ಕಾರ್ಯಕ್ರಮದ ನಂತರ ‘ಕಾಂತಾರ 1’ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಕಾಂತಾರ 1 ಚಿತ್ರ ಬಿಡುಗಡೆ ಆದ ದಿನ ನಾನು ವಿದೇಶದಲ್ಲಿದ್ದೆ. ಚಿತ್ರ ಬಿಡುಗಡೆಯಾದ ದಿನವೇ ನೋಡಬೇಕು ಎಂದುಕೊಂಡು ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಎರಡುವರೆ ಗಂಟೆ ಕಾಲ ಪ್ರಯಾಣ ಮಾಡಿಕೊಂಡು ಹೋಗಿ ‘ಕಾಂತಾರ1’ ಚಿತ್ರ ನೋಡಿದೆ.
ರಿಷಬ್ ಶೆಟ್ಟಿ ಅವರ ಪ್ರತಿಭೆಗೆ ಹ್ಯಾಟ್ಸ್ ಅಪ್. ಸಿನಿಮಾ ನೋಡಿದ ಕೂಡಲೇ ನಾನು ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದೆ. ಅವರು ನನ್ನ ಒಳ್ಳೆಯ ಸ್ನೇಹಿತ ಹಾಗೂ ನಾನು ತುಂಬಾ ಗೌರವಿಸುವ ವ್ಯಕ್ತಿ ಕೂಡ. ನಿರ್ದೇಶಕರಾಗಿ ಇಂಥ ಚಿತ್ರವನ್ನು ನಿಭಾಯಿಸೋದು ಕಷ್ಟ. ಆದರೆ, ನಿರ್ದೇಶನದ ಜೊತೆಗೆ ನಟರಾಗಿಯೂ ಕಾಣಿಸಿಕೊಂಡು ರಿಷಬ್ ಗೆದ್ದಿದ್ದಾರೆ. ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್ ಅವರ ಪ್ರತಿಭೆಗೆ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು’ ಎಂದು ನಿರ್ದೇಶಕ ಅಟ್ಲೀ ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರ ಚಾಪ್ಟರ್ 1: ಆನ್‌ಲೈನ್‌ನಲ್ಲೇ ಕೋಟಿ ಟಿಕೆಟ್ ಮಾರಾಟ
ಎರಡನೇ ವಾರವೂ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ದಾಖಲೆಯ ಗಳಿಕೆ ಮಾಡಿದೆ. ವಿಶ್ವಾದ್ಯಂತ ಅಂದಾಜು 600 ಕೋಟಿ ರು. ಕಲೆಕ್ಷನ್ ಮಾಡಿದೆ. ಭಾರತದಲ್ಲೇ ಸಿನಿಮಾದ ಕಲೆಕ್ಷನ್ 450 ಕೋಟಿ ರು. ದಾಟಿದೆ ಎನ್ನಲಾಗಿದೆ. ಜೊತೆಗೆ ಈ ಸಿನಿಮಾ ಆನ್‌ಲೈನ್‌ನಲ್ಲೇ 1 ಕೋಟಿ ಟಿಕೆಟ್ ಮಾರಾಟ ಕಂಡಿದೆ. ಇದನ್ನು ಬುಕ್ ಮೈ ಶೋ ಅಧಿಕೃತವಾಗಿ ಪ್ರಕಟಿಸಿದೆ. ಸಿನಿಮಾ ಮುಂದಿನ ವಾರಾಂತ್ಯದ ಹೊತ್ತಿಗೆ 800 ಕೋಟಿ ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇನ್ನೊಂದೆಡೆ ಮುಂಬೈಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಥೇಟರ್‌ಗಳಲ್ಲಿ ಜನ ಕಿಕ್ಕಿರಿದು ನೆರೆದು ಸಿನಿಮಾವನ್ನು ಸಂಭ್ರಮಿಸಿದ್ದಾರೆ.
