Allu Kanakaratnam Funeral: ನಟ ಅಲ್ಲು ಅರ್ಜುನ್‌ ಅಜ್ಜಿ ಕನಕರತ್ನಮ್ಮ ನಿಧನರಾಗಿದ್ದಾರೆ. ಎಲ್ಲರೂ ದುಃಖದಲ್ಲಿರುವಾಗ ಅಲ್ಲು ಅರ್ಜುನ್‌ ಪುತ್ರ ಅಯಾನ್‌ ಮಾಡಿದ ಕೆಲಸವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. 

ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ ಅವರ ತಾಯಿ ಕನಕರತ್ನಮ್ಮ (Allu Kanakaratnam ) ಇನ್ನಿಲ್ಲ. ಅಲ್ಲು ಅರ್ಜುನ್ ಅಜ್ಜಿ, ರಾಮ್ ಚರಣ್ ಅಜ್ಜಿಯೂ ಆಗಿರುವ ಕನಕರತ್ನಮ್ಮ 94 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಆಗಸ್ಟ್‌ 29 ರಾತ್ರಿ 1.45 ಕ್ಕೆ ಜೂಬ್ಲೀ ಹಿಲ್ಸ್‌ನಲ್ಲಿರುವ ಅರವಿಂದ್ ನಿವಾಸದಲ್ಲಿ ಅವರು ನಿಧನರಾದರು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ತಕ್ಷಣ ಚಿರಂಜೀವಿ, ಅವರ ಪತ್ನಿ ಸುರೇಖಾ ಅರವಿಂದ್ ಅವರ ಮನೆಗೆ ಧಾವಿಸಿದರು. ಈ ನಡುವೆ ಅಲ್ಲು ಅರ್ಜುನ್‌ ಮಗ ಅಯಾನ್‌ ಅವರ ನಡವಳಿಕೆ ದೊಡ್ಡ ಮಟ್ಟದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗಿದೆ.

ಟ್ರೋಲ್‌ ಆದ ವಿಡಿಯೋದಲ್ಲಿ ಏನಿದೆ?

ಈ ಹಿಂದೆ 3 ವರ್ಷ ವಯಸ್ಸಿದ್ದಾಗ ಸಾರ್ವಜನಿಕ ವೇದಿಕೆಯಲ್ಲಿ ವೀಕ್ಷಕರನ್ನು ಕಂಡು ಕೈ ಎತ್ತಿ ಮುಗಿದ ಅಯಾನ್‌ ವಿಡಿಯೋ ಈಗಲೂ ಸೋಶಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತವೆ. ಆಗಾಗ ತಂದೆ ಜೊತೆ ಅಯಾನ್‌ ಕಾಣಿಸೋದುಂಟು. ಇನ್ನು ಡ್ಯಾನ್ಸ್‌ ಮಾಡೋದು, ಬಾಲಿಶವಾದ ನಡವಳಿಕೆಗಳಿಂದ ಅಯಾನ್‌ ಜನರಿಗೆ ಹತ್ತಿರ ಆಗಿದ್ದೂ ಇದೆ. ಈಗ ಮುತ್ತಜ್ಜಿಯ ಪಾರ್ಥಿವ ಶರೀರದ ಮೇಲೆ ಹಾರಗಳನ್ನು ಹಾಕಲಾಗಿದೆ. ಹಾರಗಳು ಜಾಸ್ತಿ ಆಯ್ತು ಎಂದು ಆ ಹಾರವನ್ನು ತೆಗೆದು ಇಡಲಾಗುತ್ತಿತ್ತು. ಅಯಾನ್‌ ಆ ಹಾರವನ್ನು ಅವರು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಅದನ್ನು ಗಮನಿಸಿದ ಅಲ್ಲು ಅರ್ಜುನ್‌ ಸಹೋದರ ಅಲ್ಲು ಸಿರೀಶ್‌ ಓಡಿಬಂದು ಆ ಹಾರವನ್ನು ತೆಗೆದಿದ್ದಾರೆ. ಇನ್ನೊಮ್ಮೆ ತಂದೆ ಅಲ್ಲು ಅರ್ಜುನ್‌ ಅವರನ್ನು ಅಪ್ಪಿಕೊಂಡು ಅಯಾನ್‌ ಸಿಕ್ಕಾಪಟ್ಟೆ ಅತ್ತಿದ್ದಾರೆ. ಈ ವಿಡಿಯೋ ನೋಡಿ ಕೆಲವರು ಟ್ರೋಲ್‌ ಮಾಡಿದ್ದಾರೆ.

ಅಲ್ಲು ಅಯಾನ್‌ಗೆ ಈಗ 11 ವರ್ಷ. ಹೀಗಾಗಿ ಗೊತ್ತಿಲ್ಲದೆ ಮಾಡಿರೋ ತಪ್ಪನ್ನು ಈ ರೀತಿ ಟ್ರೋಲ್‌ ಮಾಡೋದು, ಮನರಂಜನೆಯಾಗಿ ತಗೊಂಡು ನಗೋದು ಸರಿ ಅಲ್ಲ ಎಂದು ಕೂಡ ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ಚಿರಂಜೀವಿ, ಅಲ್ಲು ಅರ್ಜುನ್‌ ಸಂಬಂಧಿಕರು!

ಅಲ್ಲು ಅರವಿಂದ್‌ ಅವರ ಸಹೋದರಿ ಸುರೇಖಾರನ್ನು ಮೆಗಾಸ್ಟಾರ್‌ ಚಿರಂಜೀವಿ ಮದುವೆಯಾಗಿದ್ದಾರೆ. ಹೀಗಾಗಿ ಅಲ್ಲು ಅರ್ಜುನ್‌ ಮನೆ ರಾಮ್‌ ಚರಣ್‌ ತೇಜಗೆ ಅಜ್ಜಿ ಮನೆ ಆಗಬೇಕು. ಕೋಕಾಪೇಟೆಯಲ್ಲಿ ಅಲ್ಲು ಕನಕರತ್ನಮ್ಮ ಅವರ ಅಂತ್ಯಕ್ರಿಯೆ ನಡೆದಿದೆ ಎಂದು ತಿಳಿದುಬಂದಿದೆ. ಅಲ್ಲು ಅರ್ಜುನ್ ಅವರು ಅಟ್ಲೀ ಚಿತ್ರಕ್ಕಾಗಿ ಮುಂಬೈನಲ್ಲಿದ್ದರು. ಅಜ್ಜಿಯ ನಿಧನದಿಂದಾಗಿ ಅವರು ಈ ಸುದ್ದಿ ತಿಳಿದ ತಕ್ಷಣ ಅವರು ಮುಂಬೈನಿಂದ ಹೊರಟು ಬಂದಿದ್ದರು. ಬುಚ್ಚಿಬಾಬು ಚಿತ್ರಕ್ಕಾಗಿ ಮೈಸೂರಿನಲ್ಲಿದ್ದ ರಾಮ್ ಚರಣ್ ಕೂಡ ಇಂದು ಮಧ್ಯಾಹ್ನ ಹೈದರಾಬಾದ್‌ಗೆ ಆಗಮಿಸಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅಂತ್ಯಕ್ರಿಯೆಯ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನು ವರುಣ್‌ ತೇಜ, ವೈಷ್ಣವ್‌ ತೇಜ, ರಾಮ್‌ ಚರಣ್‌ ತೇಜ, ತ್ರಿವಿಕ್ರಮ್‌ ಶ್ರೀನಿವಾಸ್‌ ಕೂಡ ಅಲ್ಲು ನಿವಾಸಕ್ಕೆ ಬಂದಿದ್ದರು.

ಚಿತ್ರರಂಗದ ಗಣ್ಯರಿಂದ ಸಂತಾಪ!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಎಂಎಲ್‌ಸಿ ನಾಗಬಾಬು ಇಬ್ಬರೂ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿದ್ದ ಕಾರಣ ಹೈದರಾಬಾದ್‌ಗೆ ಬಂದು ಪಾರ್ಥಿವ ಶರೀರದ ದರ್ಶನ ಮಾಡಿರಲಿಲ್ಲ. ಆ ಬಳಿಕ ಅವರು ಮನೆಗೆ ಬಂದು ಸಾಂತ್ವನ ತಿಳಿಸಿದ್ದಾರೆ. ಚಿತ್ರರಂಗದ ಗಣ್ಯರು ಮತ್ತು ಸಿನಿಮಾ ತಾರೆಯರು ಅರವಿಂದ್ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕೆಲವರು ಫೋನ್ ಮೂಲಕ ಸಂತಾಪ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

YouTube video player