NMC ಬ್ಯಾಟರಿ ಹೊಸ ವೋಲ್ವೋ EX30 ಎಲೆಕ್ಟ್ರಿಕ್ ಕಾರು ಲಾಂಚ್, 480 ಕಿ.ಮಿ ಮೈಲೇಜ್, ಎನ್ಎಂಸಿ ಟೆಕ್ನಾಲಜಿ ಬ್ಯಾಟರಿ,  5 ಸ್ಟಾರ್ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.

ಬೆಂಗಳೂರು (ಸೆ.15) ವೋಲ್ವೋ ಕಾರ್ ಇಂಡಿಯಾ ಭಾರತದಲ್ಲಿ ಹೊಚ್ಚ ಹೊಸ ವೋಲ್ವಾ ಇಎಕ್ಸ್ 30 ಎಲೆಕ್ಟ್ರಿಕ್ ಕಾರು ಲಾಂಚ್ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಉತ್ತಮ ಮೈಲೇಜ್ ರೇಂಜ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಬೆಂಗಳೂರಿನ ಮಾರ್ಷಿಯಲ್ ವೋಲ್ವೋ ಕಾರ್ಸ್‌ನಲ್ಲಿ ಈ ಹೊಸ ಕಾರು ಲಾಂಚ್ ಮಾಡಲಾಗಿದೆ. ಪ್ರೀ ಬುಕಿಂಗ್ ಮಾಡುವ ಗ್ರಾಹಕರಿಗೆ ಕೆಲ ವಿಶೇಷ ಪ್ರಯೋಜನಗಳು ಸಿಗಲಿದೆ.

ಹೊಸಕೋಟೆ ಘಟಕದಲ್ಲಿ ಇಎಕ್ಸ್30 ಕಾರು ಜೋಡಣೆ

ವೋಲ್ವೋ ಇಎಕ್ಸ್30 ಕಂಪ್ಲೀಟ್ ಎಲೆಕ್ಟ್ರಿಕ್ ಎಸ್‌ಯುವಿ. ಕಾರು ಡೆಲಿವರಿಗಳು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಗೊಳ್ಳುತ್ತವೆ. ಇಎಕ್ಸ್30ಯನ್ನು ಬೆಂಗಳೂರಿನ ಹೊಸಕೋಟೆಯ ಕಂಪನಿಯ ಘಟಕದಲ್ಲಿ ಜೋಡಿಸಲಾಗುತ್ತದೆ. ವೋಲ್ವೋ ಇಎಕ್ಸ್30 ಸುಸ್ಥಿರ ಮೊಬಿಲಿಟಿಯಲ್ಲಿನ ನಮ್ಮ ಪ್ರಯಾಣದಲ್ಲಿ ಒಂದು ಗಮನಾರ್ಹ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಇದು ಸ್ಕಾಂಡಿನೇವಿಯನ್ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆ ಒದಗಿಸುತ್ತದೆ.

ವೋಲ್ವೋ ಇಎಕ್ಸ್30 ಕಾರು ಎಲೆಕ್ಟ್ರಿಕ್ ಚಾಲನೆಯ ಅನುಭವ ನೀಡುತ್ತದೆ. ಈ ಕ್ರಾಂತಿಕಾರಕ ಇವಿಯನ್ನು ಕರ್ನಾಟಕದ ಗ್ರಾಹಕರಿಗೆ ತರಲು ನಾವು ರೋಮಾಂಚಿತರಾಗಿದ್ದೇವೆ ಮತ್ತು ಪ್ರೀಮಿಯಂ ಇವಿ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲು ಸ್ಥಾಪಿಸುತ್ತದೆ ಎಂಬ ವಿಶ್ವಾಸ ನಮ್ಮದು ಎಂದು ಮಾರ್ಷಲ್ ವೋಲ್ವೋ ಕಾರ್ಸ್ ಕರ್ನಾಟಕದ ವ್ಯವಸ್ಥಾಪಕ ನಿರ್ದೇಶಕ ರೀತೇಶ್ ರೆಡ್ಡಿ ಹೇಳಿದ್ದಾರೆ. ಇದರ ಬೆಲೆ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಬಹಿರಂಗವಾಗಲಿದೆ. 40 ರಿಂದ 45 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ರಣವೀರ್ ದೀಪಿಕಾ ಖರೀದಿಸಿದ ಹೊಸ ಹಮ್ಮರ್ ಇವಿ ಕಾರಿನಲ್ಲಿ ಜಾಲಿ ರೈಡ್, ಇದು ದುಬಾರಿ ಎಸ್‌ಯುವಿ

5 ಕ್ಯಾಮರಾಗಳು, 5 ರಾಡಾರ್ ತಂತ್ರಜ್ಞಾನ

ಮರುಬಳಕೆಯ ಡೆನಿಮ್, ಪೆಟ್ ಬಾಟಲಿಗಳು, ಅಲ್ಯುಮಿನಿಯಂ, ಪಿವಿಸಿ ಪೈಪ್ಸ್ ಇತ್ಯಾದಿಗಳಿಂದ ಕಾರಿನ ಕೆಲ ಬಿಡಿಭಾಗಗಳನ್ನು ತಯಾರಿಸಲಾಗಿದೆ. ಕಾಂಡಿನೇವಿಯನ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಇಎಕ್ಸ್30ಯು ಯೂರೋ ಎನ್.ಸಿ.ಎ.ಪಿ. ಸುರಕ್ಷತೆಯ ಪರೀಕ್ಷೆಯಲ್ಲಿ ಫೈವ್-ಸ್ಟಾರ್ ರೇಟಿಂಗ್ ಸಾಧಿಸಿದೆ. ಇಎಕ್ಸ್30ಯು ಅಪಘಾತಗಳನ್ನು ಕಡಿಮೆ ಮಾಡಲು ಇಂಟರ್ಸೆಕ್ಷನ್ ಆಟೊ ಬ್ರೇಕ್, “ಡೋರಿಂಗ್” ಅಪಘಾತಗಳನ್ನು ತಪ್ಪಿಸಲು ಬಾಗಿಲು ತೆರೆಯುವ ಎಚ್ಚರಿಕೆಗಳು ಮತ್ತು ಅತ್ಯಂತ ಸುಧಾರಿತ ಸೇಫ್ ಸ್ಪೇಸ್ ಟೆಕ್ನಾಲಜಿ ಹೊಂದಿದ್ದು ಅದು 5 ಕ್ಯಾಮರಾಗಳು, 5 ರಾಡಾರ್ ಗಳು ಮತ್ತು 12 ಅಲ್ಟ್ರಾಸಾನಿಕ್ ಸೆನ್ಸರ್ ಗಳನ್ನು ಹೊಂದಿದೆ.

ಅತ್ಯುತ್ತಮ ಕ್ಯಾಬಿನ್

ಐದು ಆಂಬಿಯೆಂಟ್ ಲೈಟಿಂಗ್ ಥೀಮ್ ಗಳು ಮತ್ತು ಶಬ್ದಗಳು ಸ್ಕಾಂಡಿನೇವಿಯನ್ ಋತುಗಳು ಮತ್ತು ನೋಟಗಳಿಂದ ಸ್ಫೂರ್ತಿ ಪಡೆದಿದ್ದು ಸಂಪೂರ್ಣ ತಲ್ಲೀನಗೊಳಿಸುವ ಅನುಭವ ನೀಡುತ್ತದೆ. ಹೊಸ ಹರ್ಮನ್ ಕಾರ್ಡನ್ ಸೌಂಡ್ ಬಾರ್ ಪರಿಕಲ್ಪನೆ, 1040ಡಬ್ಲ್ಯೂ ಆಂಪ್ಲಿಫೈಯರ್ ಮತ್ತು ಒಂಬತ್ತು ಉನ್ನತ ಕಾರ್ಯಕ್ಷಮತೆಯ ಸ್ಪೀಕರ್ ಗಳನ್ನು ಹೊಂದಿರುವ ಈ ಅತ್ಯಾಧುನಿಕ ಸಿಸ್ಟಂ ಪ್ರತಿಯೊಬ್ಬರಿಗೂ ತಲ್ಲೀನಗೊಳಿಸುವ ಸರೌಂಡ್ ಸೌಂಡ್ ಅನುಭವ ನೀಡುತ್ತದೆ. 12.3-ಇಂಚು ಹೈ-ರೆಸ್ ಸೆಂಟರ್ ಡಿಸ್ಪ್ಲೇ ಗೂಗಲ್ ಬಿಲ್ಟ್ ಇನ್ ನೊಂದಿಗೆ ಅಂತರ್ಬೋಧೆಯ ಮತ್ತು ಅಳವಡಿಸಿಕೊಳ್ಳಬಲ್ಲುದಾಗಿದೆ, 5ಜಿ ಕನೆಕ್ಟಿವಿಟಿ, ಒಟಿಎ ಅಪ್ಡೇಟ್ ಗಳು ಮತ್ತಿತರೆ ಹೊಂದಿದೆ. ಈ ಎಲ್ಲರನ್ನೂ ಸೆಳೆಯುವ ವಿನ್ಯಾಸ ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದೆ. ಇವುಗಳಲ್ಲಿ ಪ್ರತಿಷ್ಠಿತ ರೆಡ್ ಡಾಟ್ ಪ್ರಶಸ್ತಿಯನ್ನು 2024ರ ಬೆಸ್ಟ್ ಆಫ್ ದಿ ಬೆಸ್ಟ್ ಪ್ರಾಡಕ್ಟ್ ಡಿಸೈನ್ ಗೆ ಪಡೆದಿದೆ ಮತ್ತು 2024ರಲ್ಲಿ ವರ್ಲ್ಡ್ ಅರ್ಬನ್ ಕಾರ್ ಆಫ್ ದಿ ಇಯರ್ ಪಡೆದಿದೆ.

ಹ್ಯುಂಡೈ ಕಾರು ಬೆಲೆ ಭಾರಿ ಇಳಿಕೆ; ಕ್ರೆಟಾ ಸೇರಿ ವಾಹನ ಬೆಲೆ ಗರಿಷ್ಠ 2.4 ಲಕ್ಷ ರೂ ಕಡಿತ

ಇಎಕ್ಸ್30ಯು 8 ವರ್ಷ ಬ್ಯಾಟರಿ ವಾರೆಂಟಿಯೊಂದಿಗೆ ನೀಡಿದೆ. ಸ್ಟಾಂಡರ್ಡ್ ಫಿಟ್ಮೆಂಟ್ ಆಗಿ ವಾಲ್ ಬಾಕ್ಸ್ ಚಾರ್ಜರ್ ಒಳಗೊಂಡಿದೆ ಎನ್.ಎಫ್.ಸಿ. (ನಿಯರ್ ಫ್ರೀಕ್ವೆನ್ಸಿ ಕಾರ್ಡ್) ಮೂಲಕ ಸೆನ್ಸರ್ ಟ್ಯಾಪ್ ಮಾಡಿ ಕಾರು ಅನ್ಲಾಕ್ ಮಾಡಬಹುದು. ಹೆಚ್ಚುವರಿಯಾಗಿ ವೋಲ್ವೋ ಕಾರ್ ಆಪ್ ನಲ್ಲಿರುವ ಡಿಜಿಟಲ್ ಕೀ ಪ್ಲಸ್ ಕೀಯಾಗಿ ಕೆಲಸ ಮಾಡುತ್ತದೆ. ಇದು ಬರೀ ಅನುಕೂಲವಲ್ಲ, ಸ್ಮಾರ್ಟರ್, ಸುರಕ್ಷಿತ ಮತ್ತು ಆಶ್ಚರ್ಯಕರವಾಗಿ ತಡೆರಹಿತವಾಗಿದೆ.

ತನ್ನ ಸುಧಾರಿತ ಎಲೆಕ್ಟ್ರಿಕ್ ಡ್ರೈವ್ ಟ್ರೈನ್ ಮತ್ತು ಆವಿಷ್ಕಾರಕ ವಿಶೇಷತೆಗಳಿಂದ ಈ ಮಾದರಿಯು ಸರಿಸಾಟಿ ಇರದ ಚಾಲನೆಯ ಅನುಭವ ನೀಡುವುದಲ್ಲದೆ ಸುಸ್ಥಿರ ಪರಿಸರಕ್ಕೆ ಕೊಡುಗೆ ನೀಡುತ್ತದೆ.