ಒಂದೇ ಕ್ಲಿಕ್‌ನಿಂದ ನಿತಿನ್ ಕಾಮತ್ ಎಕ್ಸ್ ಖಾತೆ ಹ್ಯಾಕ್, ಇಮೇಲ್ ಬಳಸುವವರಿಗೆ ಎಚ್ಚರಿಕೆ, ಯಾವುದೋ ಆಲೋಚನೆಯಲ್ಲಿ ಇಮೇಲ್ ಕ್ಲಿಕ್ ಮಾಡಿ ಬಳಿಕ ಕಂಗಾಲಾಗಬೇಡಿ, ಒಂದು ಕ್ಲಿಕ್ ಮಾಡಿ ತನ್ನ ಎಕ್ಸ್ ಖಾತೆ ಹೇಗೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು (ಅ.16) ಝಿರೋದ ಸಹ ಸಂಸ್ಥಾಪಕ ನಿತಿನ್ ಕಾಮತ್ ಬೆಂಗಳೂರಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಇದೀಗ ನಿತಿನ್ ಕಾಮತ್ ಎಕ್ಸ್ ಖಾತೆ ಹ್ಯಾಕ್ ಆಗಿದೆ. ಈ ಕುರಿತು ಖುದ್ದು ನಿತಿನ್ ಕಾಮತ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇಮೇಲ್ ಇನ್‌ಬಾಕ್ಸ್ ಬಂದಿರುವ ಒಂದು ಇಮೇಲ್ ಕ್ಲಿಕ್ ಮಾಡಿದ ಪರಿಣಾಮ ಖಾತೆ ಹ್ಯಾಕ್ ಆಗಿದೆ ಎಂದು ನಿತಿನ್ ಕಾಮತ್ ಹೇಳಿದ್ದಾರೆ. ಇಷ್ಟೇ ಅಲ್ಲ ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾ, ಇಮೇಲ್ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಇಮೇಲ್‌ ಕ್ಲಿಕ್ ಮಾಡಿ ಕೆಟ್ಟೆ

ತನ್ನ ಎಕ್ಸ್ ಖಾತೆ ಹ್ಯಾಕ್ ಆಗಿದ್ದು ಹೇಗೆ ಎಂಬುದರ ಕುರಿತು ನಿತಿನ್ ಕಾಮತ್ ವಿವರಣೆ ನೀಡಿದ್ದಾರೆ. ಇಂದು ಬೆಳಗ್ಗೆ ಇಮೇಲ್ ಇನ್‌ಬಾಕ್ಸ್ ಪರಿಶೀಲಿಸುತ್ತಿರುವಾಗ ಇಮೇಲ್ ಒಂದು ಕಣ್ಣಿಗೆ ಬಿದ್ದಿದೆ. ಸೆಕ್ಯೂರಿಟಿ ಕಾರಣದಿಂದ ಎಕ್ಸ್ ಖಾತೆಯ ಪಾಸ್‌ವರ್ಡ್ ಬದಲಾಯಿಸಿ ಎಂದು ಸೂಚಿಸಿರುವ ಇಮೇಲ್ ಅದಾಗಿತ್ತು. ಹಲವು ಬಾರಿ ಜಿಮೇಲ್ ಸೇರಿದಂತೆ ಹಲವು ಖಾತೆಗಳ ಪಾಸ್‌ವರ್ಡ್ ಬದಲಿಸುವು ಸಾಮಾನ್ಯ ಪ್ರಕ್ರಿಯೆ ನೋಟಿಫಿಕೇಶನ್ ಎಲ್ಲರಿಗೂ ಬಂದಿರುತ್ತದೆ. ಇದೇ ರೀತಿ ನಿತಿನ್ ಕಾಮತ್, ತಮ್ಮ ಎಕ್ಸ್ ಖಾತೆಯ ಪಾಸ್‌ವರ್ಡ್ ಬದಲಿಸಲು ಹೊರಟಿದ್ದಾರೆ. ಹೀಗಾಗಿ ಇಮೇಲ್ ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಫಿಶಿಂಗ್ ಇಮೇಲ್‌ ಬಗ್ಗೆ ಎಚ್ಚರಿಕೆ

ಪಾಸ್‌ವರ್ಡ್ ಚೇಂಜ್ ಮಾಡಲು ಬಂದಿರುವ ಇಮೇಲ್ ಕ್ಲಿಕ್ ಮಾಡಿ ಪಾಸ್‌ವರ್ಡ್ ಚೇಂಜ್ ಮಾಡಿದ್ದಾರೆ. ಆದರೆ ಅದು ನಕಲಿ ಇಮೇಲ್ ಆಗಿತ್ತು. ಯಾವುದೋ ಆಲೋಚನೆಯಲ್ಲಿ ಪಾಸ್‌ವರ್ಡ್ ಚೇಂಜ್ ಮಾಡುವ ಸಾಹಸ ಮಾಡಿ ಖಾತೆಯೇ ಹ್ಯಾಕ್ ಆಗಿದೆ ಎಂದು ನಿತಿನ್ ಕಾಮತ್ ಹೇಳಿಕೊಂಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಟು ಫ್ಯಾಕ್ಟರ್ ಅಥೆಂಟಿಕೇಶನ್ ಸೇರಿದಂತೆ ಹಲವು ಬಳಕೆದಾರರ ಸುರಕ್ಷತಾ ಪ್ರಕ್ರಿಯೆಗಳಿವೆ. ಹೀಗಾಗಿ ಇಮೇಲ್ ಸೇರಿದಂತೆ ಹಲವು ವಿಧಾನಗಳ ಮೂಲಕ ಹ್ಯಾಕ್ ಮಾಡುತ್ತಾರೆ. ಆದರೆ ನಿತಿನ್ ಕಾಮತ್ ಎಕ್ಸ್ ಖಾತೆಯನ್ನು ಸಂಪೂರ್ಣವಾಗಿ ಹ್ಯಾಕರ್ಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ಟು ಫ್ಯಾಕ್ಟರ್ ಅಥೆಂಟಿಕೇಶನ್ ಕೂಡ ಕಾರಣವಾಗಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ನಿತಿನ್ ಕಾಮತ್ ಸೂಚನೆ ನೀಡಿದ್ದಾರೆ.

Scroll to load tweet…