Tata Motors bridge loan ಟಾಟಾ ಮೋಟಾರ್ಸ್ ಇಟಲಿಯ ಇವೆಕೊ ಗ್ರೂಪ್‌ನ ವಾಣಿಜ್ಯ ವಾಹನ ವ್ಯವಹಾರ ಸ್ವಾಧೀನಕ್ಕೆ ₹39,800 ಕೋಟಿ ಮೌಲ್ಯದ ಬ್ರಿಡ್ಜ್ ಸಾಲ ಪಡೆಯುತ್ತಿದೆ. ಈ ಸಾಲಕ್ಕೆ ಟಾಟಾ ಸನ್ಸ್ ಬೆಂಬಲ ನೀಡಿದ್ದು, ಮೋರ್ಗನ್ ಸ್ಟಾನ್ಲಿ ಮತ್ತು ಎಂಯುಎಫ್‌ಜಿ ಸಾಲದ ವ್ಯವಸ್ಥೆ ಮಾಡುತ್ತಿವೆ.
ಭಾರತದ ಪ್ರಮುಖ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ಲಿಮಿಟೆಡ್, ಇಟಲಿಯ ಇವೆಕೊ ಗ್ರೂಪ್‌ನ ವಾಣಿಜ್ಯ ವಾಹನ ವ್ಯವಹಾರದ ಸ್ವಾಧೀನಕ್ಕಾಗಿ ಸುಮಾರು $4.5 ಬಿಲಿಯನ್ ಮೌಲ್ಯದ ಬ್ರಿಡ್ಜ್ ಸಾಲವನ್ನು (ಮಧ್ಯಂತರ ಸಾಲ) ವ್ಯವಸ್ಥೆ ಮಾಡುತ್ತಿದೆ. ಈ ವರ್ಷದ ಏಷ್ಯಾದ ಅತಿದೊಡ್ಡ ಒಪ್ಪಂದಗಳಲ್ಲಿ ಇದು ಕೂಡ ಒಂದು ಎನ್ನಲಾಗುತ್ತಿದೆ. ಈ ಸಂಬಂಧ ಒಪ್ಪಂದಗಳೂ ನಡೆದಿದ್ದು, ಸುಮಾರು 39,800 ಕೋಟಿ ರೂಪಾಯಿ ಬೃಹತ್ ಮೊತ್ತದ ಸಾಲಕ್ಕೆ ದಾಖಲೆಗಳನ್ನು ಸಿದ್ದಪಡಿಸಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ. ಈ ಸಾಲಕ್ಕೆ ಟಾಟಾ ಸಮೂಹದ ಹೂಡಿಕೆ ಅಂಗಸಂಸ್ಥೆಯಾದ ಟಾಟಾ ಸನ್ಸ್ ಬೆಂಬಲ ಪತ್ರವನ್ನು ಕೂಡ ನೀಡಲಾಗಿದ್ದು, ಮೋರ್ಗನ್ ಸ್ಟಾನ್ಲಿ ಮತ್ತು ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಷಿಯಲ್ ಗ್ರೂಪ್ (ಎಂಯುಎಫ್‌ಜಿ) ಸಾಲದ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಈ ಒಪ್ಪಂದವು ಯುರೋಪಿಯನ್ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲು ಸಹಾಯಕವಾಗಲಿದೆ.
ಸಾಲದ ಪ್ರಮುಖ ಅಂಶಗಳು
- ಈ 12 ತಿಂಗಳ ಅವಧಿಯ ಸಾಲ ಸೌಲಭ್ಯಕ್ಕೆ ಟಾಟಾ ಗ್ರೂಪಿನ ಹೂಡಿಕೆ ಹಿಡುವಳಿ ಅಂಗವಾದ ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಬಲ ಪತ್ರ ನೀಡಿದೆ.
- ಸಾಲದ ಬಡ್ಡಿದರವನ್ನು ಯುರೋ ಇಂಟರ್‌ಬ್ಯಾಂಕ್ ಆಫರ್ಡ್ ರೇಟ್ (Euribor) ಗಿಂತ 102.5 ಬೇಸಿಸ್ ಪಾಯಿಂಟ್‌ಗಳು ಹೆಚ್ಚು ನಿಗದಿ ಮಾಡಲಾಗಿದೆ.
- ಮಾರ್ಗನ್ ಸ್ಟಾನ್ಲಿ, ಮಾರ್ಗನ್ ಸ್ಟಾನ್ಲಿ ಸೀನಿಯರ್ ಫಂಡಿಂಗ್ ಇಂಕ್. ಮತ್ತು ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಷಿಯಲ್ ಗ್ರೂಪ್ ಇಂಕ್. ಈ ಸಾಲದ ಹೊಣೆಗಾರಿಕೆ ಹೊತ್ತಿದೆ
ಟಾಟಾ ಮೋಟಾರ್ಸ್ ಪ್ರತಿಕ್ರಿಯೆ ನೀಡದಿದ್ದರೂ, ಸಂಸ್ಥೆನ ಬಗ್ಗೆ ತಿಳಿದವರ ಅಭಿಪ್ರಾಯದಲ್ಲಿ ಇದು ಕಂಪನಿಯ ಜಾಗತಿಕ ವಿಸ್ತರಣೆಗೆ ಮಹತ್ವದ ಹೆಜ್ಜೆ.
ವ್ಯವಹಾರದ ಕಾರ್ಯತಂತ್ರದ ಮಹತ್ವ
ಇವೆಕೊ ಸ್ವಾಧೀನದಿಂದ ಟಾಟಾ ಮೋಟಾರ್ಸ್‌ಗೆ ಯುರೋಪಿನ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಬಲವಾದ ನೆಲೆ ದೊರಕಲಿದೆ. ಸುಮಾರು ಎರಡು ದಶಕಗಳ ಹಿಂದೆ, 2008ರಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಖರೀದಿಸಿದ ನಂತರ, ಯುರೋಪಿನಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಿದೆ.
ಬ್ಲೂಮ್‌ಬರ್ಗ್ ವರದಿ ಪ್ರಕಾರ, 2025ರಲ್ಲಿ ಜಪಾನ್ ಹೊರತುಪಡಿಸಿ ಏಷ್ಯಾ–ಪೆಸಿಫಿಕ್ ಪ್ರದೇಶದಲ್ಲಿ M&A ಸಾಲಗಳು 70% ಹೆಚ್ಚಳ ಕಂಡು $31.3 ಶತಕೋಟಿ ತಲುಪಿವೆ. ಟಾಟಾ–ಇವೆಕೊ ಒಪ್ಪಂದವೂ ಈ ಪ್ರವೃತ್ತಿಗೆ ಹೊಸ ಸೇರ್ಪಡೆ.
ಜಾಗತಿಕ ಹೋಲಿಕೆ
- JD.com Inc. ಜರ್ಮನ್ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿ ಸಿಕಾನಮಿ ಖರೀದಿಗೆ 2.2 ಬಿಲಿಯನ್ ಯುರೋ
- ಮೌಲ್ಯದ ಹಣಕಾಸು ವ್ಯವಸ್ಥೆ ನಡೆಸುತ್ತಿದೆ.
- ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ಆಸ್ಟ್ರೇಲಿಯಾದ ಇಂಧನ ಉತ್ಪಾದಕ ಸ್ಯಾಂಟೋಸ್ ಲಿಮಿಟೆಡ್ ಸ್ವಾಧೀನಕ್ಕಾಗಿ $10 ಬಿಲಿಯನ್‌ಗಿಂತ ಹೆಚ್ಚು ಹಣಕಾಸು ಒದಗಿಸಲು ಯೋಚಿಸುತ್ತಿದೆ.
ಇವೆಕೊ–ಟಾಟಾ ಒಪ್ಪಂದದ ವಿವರ
- ಟುರಿನ್ ಮೂಲದ ಇವೆಕೊ ಗ್ರೂಪ್ ಜುಲೈನಲ್ಲಿ ತನ್ನ ರಕ್ಷಣಾ ಘಟಕವನ್ನು ಲಿಯೊನಾರ್ಡೊ S.p.A.ಗೆ ಹಾಗೂ ಉಳಿದ ಇಟಾಲಿಯನ್ ಟ್ರಕ್ ತಯಾರಿಕಾ ಘಟಕವನ್ನು ಟಾಟಾ ಮೋಟಾರ್ಸ್‌ಗೆ ಮಾರಾಟ ಮಾಡಲು ಒಪ್ಪಿಗೆ ನೀಡಿತ್ತು.
- ಇವೆಕೊ ಗ್ರೂಪ್‌ನ ಒಟ್ಟು ಒಪ್ಪಂದ ಮೌಲ್ಯ: ಸುಮಾರು 5.5 ಬಿಲಿಯನ್ ಯುರೋ
- ಟಾಟಾ ಮೋಟಾರ್ಸ್ ಸ್ವಾಧೀನ ಮೌಲ್ಯ: ಸುಮಾರು 3.8 ಬಿಲಿಯನ್ ಯುರೋ
ಮುಂದಿನ ಹಂತಗಳು
- ಮಧ್ಯಂತರ ಸಾಲವನ್ನು ಮುಂದಿನ 12–18 ತಿಂಗಳಲ್ಲಿ ರಿಫೈನಾನ್ಸ್ ಮಾಡಲಾಗುವುದು.
- ರಿಫೈನಾನ್ಸ್ ನಲ್ಲಿ ಈಕ್ವಿಟಿ ಮತ್ತು ದೀರ್ಘಾವಧಿಯ ಸಾಲದ ಮಿಶ್ರಣ ಬಳಸಲಾಗುತ್ತದೆ.
- ಒಪ್ಪಂದವು ಎಲ್ಲಾ ನಿಯಂತ್ರಕ ಅನುಮೋದನೆ ಪಡೆದ ಬಳಿಕ ಏಪ್ರಿಲ್ 2026ರೊಳಗೆ ಪೂರ್ಣಗೊಳ್ಳಲಿದೆ.
