ಕೇವಲ 5 ಲಕ್ಷ ರೂ. ಹೂಡಿಕೆಯಲ್ಲಿ ತಿಂಗಳಿಗೆ 60 ರಿಂದ 70 ಸಾವಿರ ರೂ. ಗಳಿಸುವ ಅವಕಾಶವನ್ನು ಎಸ್‌ಬಿಐ ಒದಗಿಸುತ್ತಿದೆ. ಎಸ್‌ಬಿಐ ಎಟಿಎಂ ಫ್ರಾಂಚೈಸಿ ಪಡೆದು ಹೆಚ್ಚುವರಿ ಆದಾಯ ಗಳಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಈಗ ಎಲ್ಲರಿಗೂ ಸೈಡಲ್ಲೊಂದು ಬ್ಯುಸಿನೆಸ್ ಆರಂಭಿಸಬೇಕೆಂಬ ಆಸೆ ಇರುತ್ತೆ. ಏನು ಮಾಡಬೇಕು ಅನ್ನೋ ಗೊಂದಲ ಸಹಜ. ಅಂಥವರಿಗೆ ಸಣ್ಣದೊಂದು ಅಮೌಂಟ್ ಹೂಡಿಕೆ ಮಾಡಿ, ತಿಂಗಳಿಗೆ ಸುಮಾರು 70 ಸಾವಿರ ಲಾಭ ಗಳಿಸಬಹುದು. ಏನದು? ಮಾಡೋದು ಹೇಗೆ? ಇಲ್ಲಿದೆ ಓದಿ.

ಮನುಷ್ಯನಿಗೆ ದುಡಿದಷ್ಟೂ ಬದುಕಲು ಸಾಕಾಗ್ತಾ ಇಲ್ಲ. ದುರಾಸೆಯಲ್ಲ. ಬೇಸಿಕ್ ನೀಡ್ಸ್ ಫುಲ್‌ಫಿಲ್ ಮಾಡಿ ಕೊಳ್ಳೋದು ಕಷ್ಟವಾಗುತ್ತಿದೆ. ಅದರಲ್ಲಿಯೂ ಶಿಕ್ಷಣ ಹಾಗೂ ಆರೋಗ್ಯ ಕಡೆ ಗಮನಿಸುವುದಾದರೆ ಕುಡಿಕೆ ಹೊನ್ನೂ ಸಾಲದು ಎಂಬಂತಾಗಿದೆ ಸ್ಥಿತಿ. ಇದರ ಮಧ್ಯೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತಿಂಗಳ ಬಜೆಟ್ ನಿಭಾಯಿಸೋದೆ ಕಷ್ಟ. ಏನಾದರೂ ಸಣ್ಣದೊಂದು ಉದ್ಯಮವೊಂದನ್ನು ಪ್ರಾರಂಭಿಸೋಣವೆಂದ್ರೆ ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸೋದು ಎಲ್ಲಿಂದ? ಅಷ್ಟೇ ಅಲ್ಲದೆ, ಉದ್ಯಮ ನಡೆಸೋದು ಅಷ್ಟು ಸುಲಭದ ಕೆಲಸವೂ ಅಲ್ಲ. ಅದಕ್ಕೆ ಸಾಕಷ್ಟು ಸಮಯ ಹಾಗೂ ಶ್ರಮ ಬೇಕು. ಮಾಡುತ್ತಿರುವ ಕೆಲಸದ ಜೊತೆ ಅದನ್ನೂ ಮಾಡುವುದಾದರೆ ಟೈಮ್ ಎಲ್ಲಿರುತ್ತೆ? ಇಂಥ ಸಂದರ್ಭದಲ್ಲಿ ಕೇವಲ 5ಲಕ್ಷ ರೂ. ಹೂಡಿಕೆ ಮಾಡಿ ತಿಂಗಳಿಗೆ 60ರಿಂದ 70 ಸಾವಿರದವರೆಗೂ ಗಳಿಸಬಹುದು. ಇಂಥದ್ದೊಂದು ಅವಕಾಶವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೀಡಿದೆ.

SBI ATM Franchise ಪಡೆದುಕೊಂಡ್ರೆ ಕಡಿಮೆ ಹೂಡಿಕೆ ಜೊತೆಗೆ ತಿಂಗಳಿಗೆ ಉತ್ತಮ ಆದಾಯವನ್ನೂ ಗಳಿಸಬಹುದು. ಅದು ಹೇಗೆ? SBI ATM ನೋಡಿದಾಗ ಇದನ್ನು ಬ್ಯಾಂಕೇ ಮ್ಯಾನೇಜ್ ಮಾಡುತ್ತೆ ಎಂಬೊಂದು ಥಾಟ್ ನಿಮಗೆ ಬರಬಹುದು. ಆದರೆ, ಗುತ್ತಿಗೆದಾರರು ವಿವಿಧ ಸ್ಥಳಗಳಲ್ಲಿ ಎಟಿಎಂ ಸ್ಥಾಪಿಸುತ್ತಾರೆ. ದೇಶಾದ್ಯಂತ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಎಸ್‌ಬಿಐಯು ಟಾಟಾ ಇಂಡಿಕ್ಯಾಷ್, ಮುತ್ತೂಟ್ ಎಟಿಎಂ ಹಾಗೂ ಇಂಡಿಯ ಒನ್ ಎಟಿಎಂ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹಾಗಿದ್ರೆ ಎಸ್‌ಬಿಐ ಎಟಿಎಂ ಪ್ರಾಂಚೈಸಿ ಪಡೆಯೋದು ದಾರಿ ಯಾವುದು?

ಅರ್ಜಿ ಸಲ್ಲಿಸೋದು ಹೇಗೆ?

SBI ಎಟಿಎಂ ಫ್ರಾಂಚೈಸಿ ಬೇಕಾದರೆ ಮೇಲೆ ಹೇಳಿರುವ ಕಂಪನಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಎಚ್ಚರ, ಕಂಪನಿಗಳ ಅಧಿಕೃತ ವೆಬ್‌ಸೈಟ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಏಕೆಂದ್ರೆ ಎಟಿಎಂ ಫ್ರಾಂಚೈಸಿ ನೀಡುವ ಹೆಸರಲ್ಲಿ ಅನೇಕ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಗ್ರಾಹಕರನ್ನು ವಂಚಿಸಿದೆ ಪ್ರಕರಣಗಳಿವೆ.

ಏನೇನು ಕಂಡೀಷನ್ಸ್ ಇವೆ?

*ಎಟಿಎಂ ಕ್ಯಾಬಿನ್ ಸಿದ್ಧಪಡಿಸಲು 50 ಹಾಗೂ 80 ಚದರ ಅಡಿ ಜಾಗ ಇರಬೇಕು.

*ಈ ಸ್ಥಳ ಇತರೆ ಬೇರೆ ಬ್ಯಾಂಕಿನ ಎಟಿಎಂಗಳಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು.

*ಇದು ಜನರಿಗೆ ಕಾಣಿಸುವಂತಹ ಸ್ಥಳ ಅಂದರೆ ಮೈನ್ ರೋಡಲ್ಲಿದ್ದರೆ ಒಳ್ಳೇಯದು.

*ನಿರಂತರ ವಿದ್ಯುತ್ ಪೂರೈಕೆ ಇರಬೇಕು. ಕನಿಷ್ಠ 1ಕೆಡಬ್ಲ್ಯು ವಿದ್ಯುತ್ ಸಂಪರ್ಕ ಬೇಕು.

*ಕ್ಯಾಬಿನ್ ಸ್ಥಾಪಿಸಲು ಕಾಯಂ ಕಟ್ಟಡವಾಗಿದ್ದು, ಕಾಂಕ್ರೀಟ್ ಛಾವಣಿ ಹಾಗೂ ಕಲ್ಲಿನ ಗೋಡೆಗಳಿರಬೇಕು.

*ವಿ-ಸ್ಯಾಟ್ ಅಳವಡಿಕೆಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ (NoC) ಪತ್ರ ಪಡೆಯಬೇಕು.

ಯಾವೆಲ್ಲ ದಾಖಲೆಗಳು ಬೇಕು?

*ಗುರುತು ದೃಢೀಕರಣಕ್ಕೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ

*ರೇಷನ್ ಕಾರ್ಡ್ ಹಾಗೂ ವಿದ್ಯುತ್ ಬಿಲ್ (Electricity Bill)

*ಬ್ಯಾಂಕ್ ಖಾತೆ (Bank Account) ಮತ್ತು ಪಾಸ್ ಪುಸ್ತಕ

*ಫೋಟೋ, ಇ-ಮೇಲ್ ಐಡಿ, ಫೋನ್ ನಂಬರ್

*ಜಿಎಸ್‌ಟಿ ನಂಬರ್

*ಕಂಪನಿಗೆ ಅಗತ್ಯವಿರುವ ಹಣಕಾಸಿನ ದಾಖಲೆಗಳು

ಬಂಡವಾಳ ಎಷ್ಟು ಬೇಕಾಗಬಹುದು?

SBI ಎಟಿಎಂ ಫ್ರಾಂಚೈಸ್‌ಗೆ ಅರ್ಜಿ ಸಲ್ಲಿಸುವಾಗ ಭದ್ರತಾ ಠೇವಣಿಯಾಗಿ 2 ಲಕ್ಷ ರೂ. ಕೊಡಬೇಕು. ಆ ಬಳಿಕ 3 ಲಕ್ಷ ರೂ. ವರ್ಕಿಂಗ್ ಕ್ಯಾಪಿಟಲ್ ಕೊಡಬೇಕಾಗುತ್ತದೆ. ಅಂದ್ರೆ ಒಟ್ಟು 5ಲಕ್ಷ ರೂ. ಬಂಡವಾಳ ಬೇಕು. ಎಟಿಎಂ ಸ್ಥಾಪನೆಯಾದ ಬಳಿಕ ಜನರು ಹಣವನ್ನು ವಿತ್‌ಡ್ರಾ ಮಾಡಲು ಪ್ರಾರಂಭಿಸಿದ ನಂತರ ಪ್ರತಿ ನಗದು ವಿತ್ ಡ್ರಾಗೆ 8 ರೂ.ನಂತೆ ಆದಾಯ ಬರುತ್ತದೆ. ಹಾಗೆಯೇ ನಗದು ರಹಿತ ಅಂದ್ರೆ ಬ್ಯಾಲೆನ್ಸ್ ಚೆಕ್, ಹಣ ವರ್ಗಾವಣೆ ಮುಂತಾದ ಪ್ರತಿ ವಹಿವಾಟಿನ ಮೇಲೂ 2 ರೂ. ಆದಾಯ ಗಳಿಸಬಹುದು.