ಕಂಪನಿಯೊಂದು ಗೂಗಲ್ ಕ್ರೋಮ್ ಅನ್ನು ಖರೀದಿಸಲು $34.5 ಶತಕೋಟಿ ಬಿಡ್ ಮಾಡಿದೆ. ಈ ಬಿಡ್ ಗೂಗಲ್‌ನ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. 

ಗೂಗಲ್ (GOOG/GOOGL) ಜಗತ್ತಿನ ದೈತ್ಯ ಕಂಪನಿಯಾಗಿದೆ. ಇಂತಹ ದೈತ್ಯ ಕಂಪನಿಯನ್ನು ಖರೀದಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಂಸ್ಥೆಯಾಗಿರುವ ಪರ್ಪ್ಲೆಕ್ಸಿಟಿ (artificial-intelligence firm Perplexity) ಮುಂದಾಗಿದೆ. ಇದಕ್ಕಾಗಿ ಗೂಗಲ್‌ನ ಸದ್ಯದ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿಗೆ ಹಣ ನೀಡಲು ಮುಂದಾಗಿದೆ. ಗೂಗಲ್ ಕ್ರೋಮ್ ಬ್ರೌಸರ್ ತನ್ನದಾಗಿಸಿಕೊಳ್ಳಲು ಪರ್ಪ್ಲೆಕ್ಸಿಟಿ ಬರೋಬ್ಬರಿ $34.5 ಶತಕೋಟಿ ಹಣ ಬಿಡ್ ಮಾಡಿದೆ ಎಂದು ವರದಿಯಾಗಿದೆ. ಆದ್ರೆ ಈ ಸಂಬಂಧ ಗೂಗಲ್ ಯಾವುದೇ ಹೇಳಿಕೆಯನ್ನು ಬಿಡುಗಡೆಯಾಗಿಲ್ಲ. ಪರ್ಪ್ಲೆಕ್ಸಿಟಿ ಬಿಡ್ ಮಾಡಿರುವ ಒಟ್ಟು ಮೊತ್ತ ಭಾರತೀಯ ಕರೆನ್ಸಿಯಲ್ಲಿ 2.98 ಲಕ್ಷ ಕೋಟಿ ರೂಪಾಯಿ ಅಗುತ್ತದೆ. ಗೂಗಲ್‌ ಮುಂದೆ ಪರ್ಪ್ಲೆಕ್ಸಿಟಿ ತನ್ನ ದೊಡ್ಡ ಮೊತ್ತದ ಪ್ರಸ್ತಾವನೆಯನ್ನು ಇರಿಸಿದೆ.

ಗೂಗಲ್ ಮಾರುಕಟ್ಟೆ ಮೌಲ್ಯ ಎಷ್ಟಿದೆ?

ದಿ ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸಂಸ್ಥೆಯಾಗಿರುವ ಪರ್ಪ್ಲೆಕ್ಸಿಟಿ ಖರೀದಿಗೆ ಸೂಚಿಸಿರುವ ಮೊತ್ತ ಗೂಗಲ್‌ ಮಾರುಕಟ್ಟೆ ಕಂಪನಿ ಮೌಲ್ಯಕ್ಕಿಂತ 2 ಪಟ್ಟು ಅಧಿಕವಾಗಿದೆ. ಸದ್ಯ ಗೂಗಲ್ ಮಾರುಕಟ್ಟೆ ಮೌಲ್ಯ $18 ಬಿಲಿಯನ್‌ ಆಗಿದೆ. ಪ್ರಮುಖ ಉದ್ಯಮ ಬಂಡವಾಳ ಹೂಡಿಕೆದಾರರಿಂದ ಸಂಪೂರ್ಣವಾಗಿ ಹಣಕಾಸು ಒದಗಿಸಲಾಗಿದೆ. ಪರ್ಪ್ಲೆಕ್ಸಿಟಿಯ ಈ ನಡೆ ಈ ವರ್ಷ ಯುಎಸ್‌ನಲ್ಲಿ ಟಿಕ್‌ಟಾಕ್‌ನ ಆಪರೇಷನ್ ತನ್ನ ಕಂಟ್ರೋಲ್‌ಗಳ ಪ್ರಯತ್ನದಂತೆ ಕಾಣಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಆದ್ರೆ ಇತ್ತೀಚೆಗೆ ಗೂಗಲ್ ಮಾರುಕಟ್ಟೆ ಮೌಲ್ಯ ಬದಲಾಗಿದ್ದು, ಅಂದಾಜು $20 ಶತಕೋಟಿಯಿಂದ $50 ಶತಕೋಟಿ ವರೆಗೆ ಆಗಿದೆ ಎಂದು ಹೇಳಲಾಗಿದೆ.

ಪರ್ಪ್ಲೆಕ್ಸಿಟಿ ಬಿಡ್ ಮಾಡಿದ ಬೆನ್ನಲ್ಲೇ Google-parent Alphabet ಷೇರು ವಹಿವಾಟಿನಲ್ಲಿ ಶೇ.1ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಪರ್ಪ್ಲೆಕ್ಸಿಟಿಯ ಷೇರುಗಳ ವಹಿವಾಟು ತಟಸ್ಥವಾಗಿ ಉಳಿದುಕೊಂಡಿತ್ತು. ಪರ್ಪ್ಲೆಕ್ಸಿಟಿ ಬಿಡ್ ಸಂಬಂಧ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರವೊಂದನ್ನು ಸಹ ಬರೆದಿದ್ದು, ಇದರಲ್ಲಿ ಕ್ರೋಮ್ ಅನ್ನು ಸಮರ್ಥ, ಸ್ವತಂತ್ರ ಆಪರೇಟರ್‌ನೊಂದಿಗೆ ಇರಿಸುವ ಮೂಲಕ ಅತ್ಯುನ್ನತ ಸಾರ್ವಜನಿಕ ಹಿತಾಸಕ್ತಿಯಲ್ಲಿ ಆಂಟಿಟ್ರಸ್ಟ್ ಪರಿಹಾರವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪರ್ಪ್ಲೆಕ್ಸಿಟಿ AI ಕಂಪನಿ ಖರೀದಿಸಿದ್ರೆ ಏನೆಲ್ಲಾ ಬದಲಾವಣೆ? ಎಷ್ಟು ಹೂಡಿಕೆ?

ಒಂದು ವೇಳೆ ಈ ಒಪ್ಪಂದ ನಡೆದರೆ ಪರ್ಪ್ಲೆಕ್ಸಿಟಿ AI ಕಂಪನಿಯು ಬ್ರೌಸರ್‌ನ ಓಪನ್ ಸೋರ್ಸ್ ಕೋಡ್ ನಿರ್ವಹಣೆಯನ್ನ ಆರಂಭಿಸಿ, ಮುಂದಿನ 2 ವರ್ಷಗಳಲ್ಲಿ $3 ಬಿಲಿಯನ್ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಇದರ ಜೊತೆ ಕ್ರೋಮ್ ಡೀಫಾಲ್ಟ್ ಸರ್ಚ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಎಂಬ ಭರವಸೆಯನ್ನು ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬಳಕೆದಾರರಿಗೆ ಕೆಲವು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಲು ಅವಕಾಶ ನೀಡುವ ಸಾಧ್ಯತೆಗಳೂ ಸಹ ಸೇರಿವೆ ಎಂದು ವರದಿಯಲ್ಲಿದೆ.

ಪರ್ಪ್ಲೆಕ್ಸಿಟಿ ಹೊರತುಪಡಿಸಿ, ಓಪನ್‌ಎಐ, ಯಾಹೂ ಮತ್ತು ಖಾಸಗಿ ಇಕ್ವಿಟಿ ಸಂಸ್ಥೆ ಅಪೊಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಕೂಡ ಗೂಗಲ್ ಕ್ರೋಮ್ ಖರೀದಿಸಲು ಆಸಕ್ತಿ ತೋರಿಸಿವೆ. ಆದರೆ ಗೂಗಲ್ ತನ್ನ ಸಂಸ್ಥೆಯನ್ನ ಮಾರಾಟಕ್ಕೆ ಮುಂದಾಗುತ್ತಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ತನ್ನ ಮಾರುಕಟ್ಟೆಯಲ್ಲಿ ತನ್ನ ಮೌಲ್ಯ ಎಷ್ಟಿದೆ ಎಂದು ತಿಳಿದುಕೊಳ್ಳಲು ಈ ರೀತಿಯಾಗಿ ಮಾಡಿರೋ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.