ದೀಪಾವಳಿಯಲ್ಲಿ ಸರ್ಕಾರ ಜನಸಾಮಾನ್ಯರಿಗೆ ಭರ್ಜರಿ ಗಿಫ್ಟ್ ನೀಡಲು ಸಿದ್ಧವಾಗಿದೆ. ಮನೆ ಖರೀದಿ ಮಾಡುವವರಿಗೆ ಬಂಪರ್ ಲಾಟರಿ ಹೊಡೆಯುವ ಸಾಧ್ಯತೆ ದಟ್ಟವಾಗಿದೆ. ಜಿಎಸ್ಟಿ ಸ್ಲ್ಯಾಬ್ ಬದಲಾಗ್ತಿದ್ದಂತೆ ಜೇಬಿನಲ್ಲಿ ಹಣ ಉಳಿಯೋದು ಗ್ಯಾರಂಟಿ.
ದೀಪಾವಳಿ (Diwali) ಟೈಂನಲ್ಲಿ ನೀವು ಮನೆ (house) ಖರೀದಿಗೆ ಪ್ಲಾನ್ ಮಾಡಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ದೀಪಾವಳಿ ಅಷ್ಟೊತ್ತಿಗೆ ಮನೆ ಬೆಲೆ ಅಗ್ಗವಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ಜಿಎಸ್ಟಿ ಸ್ಲ್ಯಾಬ್ (GST Slab). ಕೇಂದ್ರ ಸರ್ಕಾರ ಜಿಎಸ್ಟಿ ಸ್ಲ್ಯಾಬನ್ನು ನಾಲ್ಕರಿಂದ ಎರಡಕ್ಕೆ ಇಳಿಸುವ ನಿರ್ಧಾರ. ಸೆಪ್ಟೆಂಬರ್ ನಲ್ಲಿ ಜಿಎಸ್ಟಿ ಸ್ಲ್ಯಾಬ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಒಂದ್ವೇಳೆ ಜಿಎಸ್ಟಿ ಸ್ಲ್ಯಾಬ್ ಶೇಕಡಾ 5 ಮತ್ತು ಶೇಕಡಾ 18ಕ್ಕೆ ಸೀಮಿತಗೊಂಡ್ರೆ ಮನ ನಿರ್ಮಾಣದ ವಸ್ತುಗಳು ಮತ್ತಷ್ಟು ಅಗ್ಗವಾಗಲಿವೆ.
ಸದ್ಯ ಶೇಕಡಾ 5, ಶೇಕಡಾ 12, ಶೇಕಡಾ 18 ಮತ್ತು ಶೇಕಡಾ 28ರ ನಾಲ್ಕು ಸ್ಲ್ಯಾಬ್ ಇದೆ. ಅದನ್ನು ಶೇಕಡಾ ಐದು ಮತ್ತು ಶೇಕಡಾ 18ಕ್ಕೆ ಸೀಮಿತಗೊಳಿಸಿ, ಐಷಾರಾಮಿ ವಸ್ತುಗಳನ್ನು ಶೇಕಡಾ 40ಕ್ಕೆ ಏರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 3-4 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬದಲಾವಣೆಗಳನ್ನು ಅನುಮೋದಿಸುವ ನಿರೀಕ್ಷೆಯಿದೆ. ಜಿಎಸ್ಟಿಯಲ್ಲಿ ಆಗುವ ಈ ಬದಲಾವಣೆಯಿಂದ ರಿಯಲ್ ಎಸ್ಟೇಟ್ ಗೆ ಲಾಭವಾಗಲಿದೆ. ಸಿಮೆಂಟ್, ಉಕ್ಕು, ಟೈಲ್ಸ್ ಮತ್ತು ಪೇಂಟ್ನಂತಹ ನಿರ್ಮಾಣ ಸಾಮಗ್ರಿಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಮನೆಗಳ ಬೆಲೆಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ನಂಬಿದ್ದಾರೆ.
ಪ್ರಸ್ತುತ, ಸಿಮೆಂಟ್ ಮೇಲೆ ಶೇಕಡಾ 28 ರಷ್ಟು ಜಿಎಸ್ಟಿ ವಿಧಿಸಲಾಗ್ತಿದೆ. ಉಕ್ಕು, ಟೈಲ್ಸ್ ಮತ್ತು ಪೇಂಟ್ ಮೇಲೆ ಶೇಕಡಾ 18 ರಿಂದ ಶೇಕಡಾ 28 ರಷ್ಟು ತೆರಿಗೆ ವಿಧಿಸಲಾಗುವುದು. ಇವುಗಳನ್ನು ಶೇಕಡಾ 18 ರಸ್ಲ್ಯಾಬ್ಗೆ ಸೇರಿಸಿದ್ರೆ ಫ್ಲಾಟ್ಗಳ ಬೆಲೆಗಳು ಪ್ರತಿ ಚದರ ಅಡಿಗೆ 150 ರೂಪಾಯಿಗಳವರೆಗೆ ಕಡಿಮೆಯಾಗಬಹುದು. ಅಂದ್ರೆ, 1,000 ಚದರ ಅಡಿ ಅಪಾರ್ಟ್ಮೆಂಟ್ನಲ್ಲಿ 1.5 ಲಕ್ಷ ರೂಪಾಯಿಗಳವರೆಗೆ ಹಣ ಉಳಿಯಲಿದೆ.
ರಿಯಲ್ ಎಸ್ಟೇಟ್ ನಲ್ಲಿ ಸದ್ಯ ಜಾರಿಯಲ್ಲಿರುವ ಜಿಎಸ್ಟಿ :
1.45 ಲಕ್ಷಕ್ಕಿಂತ ಹೆಚ್ಚು ಬೆಲೆಯ ಅಂಡರ್ ಕನ್ಸ್ಟ್ರಕ್ಷನ್ ಮನೆಗಳಿಗೆ ಶೇಕಡಾ 5 ರಷ್ಟು ಜಿಎಸ್ಟಿ ವಿಧಿಸಲಾಗ್ತಿದೆ.
2.45 ಲಕ್ಷ ರೂಪಾಯಿಗಳವರೆಗಿನ ಕೈಗೆಟುಕುವ ಪ್ಲಾಟ್ ಗಳಿಗೆ ಶೇಕಡಾ 1ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ
3.ಸಿಮೆಂಟ್ ಗೆ ಶೇಕಡಾ 28, ಸ್ಟೀಲ್ ಗೆ ಶೇಕಡಾ 8, ಪೇಂಟ್ ಗೆ ಶೇಕಡಾ 28 ಹಾಗೂ ಟೈಲ್ಸ್ ಗೆ ಶೇಕಡಾ 18 ರಷ್ಟು ಜಿಎಸ್ಟಿ ವಿಧಿಸಲಾಗುವುದು.
ಡೆವಲಪರ್ಗಳು ನಿರ್ಮಾಣ ಸಾಮಗ್ರಿಗಳ ಮೇಲೆ ಐಟಿಸಿ ಪಡೆಯೋದನ್ನು ನಿಲ್ಲಿಸಲಾಗಿದೆ. ಅಂದ್ರೆ ನಿರ್ಮಾಣ ಸಾಮಗ್ರಿಗಳ ಮೇಲಿನ ಜಿಎಸ್ಟಿಯನ್ನು ನೇರವಾಗಿ ಫ್ಲಾಟ್ ಬೆಲೆಗೆ ಸೇರಿಸಲಾಗುತ್ತದೆ. ಉದಾಹರಣೆಗೆ, 1,000 ಚದರ ಅಡಿ ಫ್ಲಾಟ್ನ ಬೆಲೆ 25 ಲಕ್ಷ ರೂಪಾಯಿಗಳಾಗಿದ್ದರೆ, ಐಟಿಸಿ ಲಭ್ಯವಿಲ್ಲದ ಕಾರಣ, 5 ಲಕ್ಷ ರೂಪಾಯಿಗಳ ಹೆಚ್ಚುವರಿ ತೆರಿಗೆ ವಿಧಿಸಬಹುದು.
ಸ್ಲ್ಯಾಬ್ ಕಡಿತವಾದ್ರೆ 1.5-7.5 ಲಕ್ಷ ರೂಪಾಯಿಗಳ ಉಳಿತಾಯ ಆಗ್ಬಹುದು ಎಂದು ರಿಯಲ್ ಎಸ್ಟೇಟ್ ತಜ್ಞರು ನಂಬುತ್ತಾರೆ. ಮಧ್ಯಮ ವರ್ಗದ ಜನರು ಇದ್ರಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಕಟ್ಟಡ ಸಾಮಗ್ರಿಗಳ ಮೇಲಿನ ಜಿಎಸ್ಟಿ ಕಡಿತದಿಂದಾಗಿ, ಅವುಗಳ ಬೆಲೆಗಳು ಕಡಿಮೆಯಾಗಲಿವೆ.
ದೀಪಾವಳಿ ಸಂದರ್ಭದಲ್ಲಿ ಜನರಿಗೆ ಉತ್ತಮ ಉಡುಗೊರೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ನಂತ್ರ ಜಿಎಸ್ಟಿ ಸ್ಲ್ಯಾಬ್ ಇಳಿಕೆ ಬಗ್ಗೆ ಪ್ರಸ್ತಾವನೆ ನೀಡಲಾಗಿತ್ತು. ಸಚಿವರ ಗುಂಪು ಗುರುವಾರ, ಸ್ಲ್ಯಾಬ್ ಇಳಿಕೆಗೆ ಒಪ್ಪಿಗೆ ನೀಡಿತ್ತು.
