Milk price drop : ಜಿಎಸ್ಟಿ ದರ ಬದಲಾವಣೆ ಜನಸಾಮಾನ್ಯರಿಗೆ ನೆಮ್ಮದಿ ನೀಡಲಿದೆ. ಹಾಲಿನ ಬೆಲೆಯಲ್ಲಿ ಇಳಿಕೆ ಆಗಲಿದೆ. ಅಮುಲ್ ಮತ್ತು ಮದರ್ ಡೈರಿ ಹಾಲಿನ ಬೆಲೆ ಎಷ್ಟು ಇಳಿಯಲಿದೆ ಗೊತ್ತಾ? 

ಹಬ್ಬದ ಋತುವಿನಲ್ಲಿ ಜನಸಾಮಾನ್ಯರಿಗೆ ನೆಮ್ಮದಿ ಸಿಗಲಿದೆ. ನಿತ್ಯ ಬಳಕೆಯ ಹಾಲಿನ ದರದಲ್ಲಿ ಇಳಿಕೆಯಾಗಲಿದೆ. ಸರ್ಕಾರ (Government), ಜಿಎಸ್ಟಿ (GST) ದರದಲ್ಲಿ ಬದಲಾವಣೆ ಮಾಡಿರೋದ್ರಿಂದ ಪ್ಯಾಕಿಂಗ್ ಹಾಲಿನ ಬೆಲೆ ಇಳಿಯಲಿದೆ. ದೇಶದ ಅತಿದೊಡ್ಡ ಹಾಲು (milk) ಉತ್ಪಾದನಾ ಬ್ರ್ಯಾಂಡ್ಗಳಾದ ಅಮುಲ್ ಮತ್ತು ಮದರ್ ಡೈರಿಯ ಹಾಲಿನ ಬೆಲೆ ಕಡಿಮೆ ಆಗಲಿದೆ. ಜಿಎಸ್ಟಿ ದರಗಳಲ್ಲಿನ ಕಡಿತದ ಸಂಪೂರ್ಣ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ತಲುಪಿಸಬೇಕೆಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಯಾವಾಗ ಜಾರಿಗೆ ಬರಲಿದೆ ಹೊಸ ದರ : ಇತ್ತೀಚಿಗೆ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್ಟಿ ದರಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಪ್ಯಾಕೆಟ್ ಹಾಲಿನ ಮೇಲಿದ್ದ ಶೇಕಡಾ 5ರ ಜಿಎಸ್ಟಿ ಈಗ ಜಿಎಸ್ಟಿ ಮುಕ್ತ ಉತ್ಪನ್ನಗಳ ಪಟ್ಟಿ ಸೇರಿದ್ದು, ಅಮುಲ್ ಮತ್ತು ಮದರ್ ಡೈರಿ ಸೇರಿದಂತೆ ಪ್ಯಾಕೆಟ್ ಹಾಲಿನ ಬೆಲೆಗಳು ಸೆಪ್ಟೆಂಬರ್ 22 ರಿಂದ ಇಳಿಕೆಯಾಗಲಿವೆ. ಸೆಪ್ಟೆಂಬರ್ 22 ರಿಂದ ನವರಾತ್ರಿ ಆರಂಭವಾಗಲಿದೆ. ದೇಶಾದ್ಯಂತ ಹಬ್ಬದ ಶಾಪಿಂಗ್ ತೀವ್ರಗೊಳ್ಳಲಿದೆ. ಅದ್ರ ಜೊತೆ ಹಾಲಿನ ಬಳಕೆ ಹೆಚ್ಚಾಗಲಿದೆ. ಆ ಸಂದರ್ಭದಲ್ಲಿ ಬೆಲೆ ಇಳಿಕೆ ನಿರ್ಧಾರ ಜನಸಾಮಾನ್ಯರಿಗೆ ನೆಮ್ಮದಿ ನೀಡಿದೆ.

Make Money on X: ಸಾಮಾಜಿಕ ಜಾಲತಾಣ ‍'X'ನಲ್ಲಿ ಹಣ ಗಳಿಸೋದು ಹೇಗೆ? ಇಲ್ಲಿದೆ ಸಿಂಪಲ್ ಐಡಿಯಾ!

ಅಮುಲ್ ಮತ್ತು ಮದರ್ ಡೈರಿಯ ಪ್ರಸ್ತುತ ಬೆಲೆ : ಅಮುಲ್ ನ ಪೂರ್ಣ ಕೆನೆ ಹಾಲು 'ಅಮುಲ್ ಗೋಲ್ಡ್' ಪ್ರತಿ ಲೀಟರ್ಗೆ ಸುಮಾರು 69 ರೂಪಾಯಿಗೆ ಮಾರಾಟ ಆಗ್ತಿದೆ. ಟೋನ್ಡ್ ಹಾಲು ಲೀಟರ್ಗೆ 57 ರೂಪಾಯಿಯಂತೆ ಮಾರಾಟವಾಗ್ತಿದೆ. ಇನ್ನು ಮದರ್ ಡೈರಿಯ ಪೂರ್ಣ ಕೆನೆ ಹಾಲಿನ ಬೆಲೆ 69 ರೂಪಾಯಿ ಆದ್ರೆ ಟೋನ್ಡ್ ಹಾಲಿನ ಬೆಲೆ 57 ರೂಪಾಯಿ ಇದೆ. ಎಮ್ಮೆ ಮತ್ತು ಹಸುವಿನ ಹಾಲಿನ ಬೆಲೆಗಳು ಸಹ 50-75 ರೂಪಾಯಿ ನಡುವೆ ಇದೆ.

ಜಿಎಸ್ಟಿ ತೆಗೆದ ನಂತ್ರ ಈ ಉತ್ಪನ್ನಗಳ ಬೆಲೆ : ಸರ್ಕಾರದ ಯೋಜನೆ ಪ್ರಕಾರ, ಹಾಲಿನ ಬೆಲೆಗಳು ಲೀಟರ್ಗೆ ಸುಮಾರು 3 ರಿಂದ 4 ರೂಪಾಯಿಗಳಷ್ಟು ಕಡಿಮೆಯಾಗಲಿದೆ. ಅಮುಲ್ ಗೋಲ್ಡ್ ಬೆಲೆ 66 ರಿಂದ 65ಕ್ಕೆ ಇಳಿಯುವ ಸಾಧ್ಯತೆ ಇದೆ. ಎಮ್ಮೆ ಹಾಲಿನ ಬೆಲೆ ಲೀಟರ್ಗೆ 71 ರಿಂದ 72 ರೂಗೆ ಇಳಿಯಲಿದೆ. ಹಸುವಿನ ಹಾಲಿನ ಬೆಲೆ ಲೀಟರ್ಗೆ 55 ರಿಂದ 57 ರೂಪಾಯಿಗೆ ಇಳಿಯುವ ಸಾಧ್ಯತೆ ಇದೆ. ಮದರ್ ಡೈರಿಯ ಪೂರ್ಣ ಕೆನೆ ಹಾಲಿನ ಬೆಲೆ 65 ರಿಂದ 66 ರೂಪಾಯಿಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಟೋನ್ಡ್ ಹಾಲಿನ ಬೆಲೆ ಲೀಟರ್ಗೆ 55 ರಿಂದ 56 ರೂಪಾಯಿಗೆ ಇಳಿಯಬಹುದು. ಎಮ್ಮೆ ಹಾಲಿನ ಬೆಲೆ ಲೀಟರ್ಗೆ 71 ರೂಪಾಯಿ ಆಗ್ಬಹುದು ಎಂದು ಅಂದಾಜಿಸಲಾಗಿದೆ. ಮದರ್ ಡೈರಿ ಹಸುವಿನ ಹಾಲಿನ ಬೆಲೆ ಲೀಟರ್ಗೆ 56 ರಿಂದ 57 ರ ನಡುವೆ ಉಳಿಯುವ ನಿರೀಕ್ಷೆಯಿದೆ. ಡಬಲ್ ಟೋನ್ಡ್ ಹಾಲಿನ ಬೆಲೆ ಲೀಟರ್ಗೆ 48 ರಿಂದ 49 ರೂಪಾಯಿಗೆ ಇಳಿಯಬಹುದು.

ಜಿಎಸ್ಟಿ ದರ ಕಡಿತಕ್ಕೆ ನಾಂದಿ ಹಾಡಿದ್ದೇ ಮೋದಿ ಮಾತು: ವಿತ್ತ ಸಚಿವೆ ನಿರ್ಮಲಾ

ಸರ್ಕಾರದ ಈ ಬದಲಾವಣೆ ಜನಸಾಮಾನ್ಯರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಹೆಚ್ಚುತ್ತಿರುವ ವೆಚ್ಚದ ಮಧ್ಯೆ ಬೆಲೆ ಇಳಿಕೆ ಸ್ವಲ್ಪ ನೆಮ್ಮದಿ ನೀಡಲಿದೆ. ದೈನಂದಿನ ಬಜೆಟ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.