ಕಸ ಎಸೆದು ಲಾಕ್ ಆದ ದಂಪತಿ, ವಿಡಿಯೋ ತೋರಿಸಿ ಮನೆ ಮುಂದೆ ಕಸ ಸುರಿದ ಅಧಿಕಾರಿಗಳು, ಬೆಂಗಳೂರಿನಲ್ಲಿ ಜನರಿಗೆ ಕಸದ ಭಯ ಶುರುವಾಗಿದೆ. ರಸ್ತೆಗೆ ಕಸ ಎಸೆದರೆ, ನಿಮ್ಮ ಮನೆ ಮುಂದೆ ಲಾರಿ ಕಸ ಸುರಿಯುತ್ತಾರೆ. ಇಷ್ಟೇ ಅಲ್ಲ ಜೊತೆಗೆ ದಂಡ ಕೂಡ ಪಾವತಿಸಬೇಕು.
ಬೆಂಗಳೂರು (ಅ.31) ಬೆಂಗಳೂರಿನ ಹಲವು ಸಮಸ್ಯೆಗಳಲ್ಲಿ ಕಸ ವಿಲೇವಾರಿ ಸಮಸ್ಯೆಕೂಡ ಒಂದು. ರಸ್ತೆ ಬದಿಗೆ ಕಸ ಎಸೆಯುವ ಪದ್ಧತಿಗೆ ಬ್ರೇಕ್ ಹಾಕಲು ಇದೀಗ ಹೊಸ ಜಾಗೃತಿ ಅಭಿಯಾನ ನಡೆಯುತ್ತಿದೆ. ರಸ್ತೆ ಬದಿಗೆ ಕಸ ಎಸೆಯುವವರ ಮನೆ ಮುಂದೆ ಕಸ ಸುರಿಯಲಾಗುತ್ತದೆ. ಜೊತೆಗೆ ದುಬಾರಿ ದಂಡವನ್ನು ಪಾವತಿಸಬೇಕು. ಇದರ ಭಾಗವಾಗಿ ಗಂಗಾನಗದಲ್ಲಿ ಮಹಳೆಯೊಬ್ಬರು ರಸ್ತೆ ಬದಿಗೆ ಕಸ ಎಸೆದು ತೆರಳಿದ್ದರು. ಆದರೆ ಕಾದು ಕುಳಿತಿದ್ದ ಮಾರ್ಷಲ್ಸ್ ವಿಡಿಯೋ ಮಾಡಿದ್ದಾರೆ. ಮಹಿಳೆ ಫಾಲೋ ಮಾಡಿ ಆಕೆಯ ಮನೆ ಮುಂದೆ ಕಸ ಸುರಿದ ಘಟನೆ ನಡೆದಿದೆ.
ಬೆಳಗ್ಗೆ 5 ಗಂಟೆಗೆ ಕಾದು ಕುಳಿತಿದ್ದ ಮಾರ್ಷಲ್ಸ್
ದಂಪತಿ ಕಸ ಹಿಡಿದು ಆಗಮಿಸಿದ್ದಾರೆ. ಆದರೆ ಅದಕ್ಕೂ ಮೊದಲೇ ಮಾರ್ಷಲ್ಸ್ ರಹಸ್ಯವಾಗಿ ಕಾದು ಕುಳಿತಿದ್ದರು. ಯಾರೆಲ್ಲಾ ಕಸ ಹಾಕುತ್ತಾರೆ ಅವರ ವಿಡಿಯೋ ಚಿತ್ರೀಕರಣ ಮಾಡಿ ಬಳಿಕ ಅವರನ್ನು ಫಾಲೋ ಮಾಡಲಾಗುತ್ತದೆ. ಹೀಗೆ ಮಹಿಳೆ ರಸ್ತೆ ಬದಿ ಕಸ ಎಸೆದಿದ್ದಾರೆ. ವಿಡಿಯೋ ಮಾಡಿ ಸಿಬ್ಬಂದಿ ಬಳಿಕ ಆಕೆಯನ್ನು ಫಾಲೋ ಮಾಡಿದ್ದಾರೆ. ಮನೆಗೆ ತೆರಳಿದ ಮಹಿಳೆಗೆ ಕಸ ಸುರಿದಿದ್ದು ಪ್ರಶ್ನಿಸಿದ್ದಾರೆ. ತಾನು ಮಾಡಿಲ್ಲ ಎಂದು ವಾದಿಸಿದ ಮಹಿಳೆಗೆ ವಿಡಿಯೋ ತೋರಿಸಿದ್ದಾರೆ. ಬಳಿಕ ಆಕೆಯ ಮನೆ ಮುಂದೆ ಕಸ ಸುರಿದಿದ್ದಾರೆ.
ಜನರಲ್ಲಿ ಶುರುವಾಯ್ತು ಕಸದ ಭಯ
ಗ್ರೇಟರ್ ಬೆಂಗಳೂರು ಅಥಾರಿಟಿ ಅಧಿಕಾರಿಗಳು ಇದೀಗ ಕಸ ಎಸೆಯುವುದು ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಕಸ ಎಸೆದರೆ ಅವರ ಮನೆ ಮುಂದೆ ಕಸ ಸುರಿದು ಬಳಿಕ ದಂಡವನ್ನೂ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಜನರು ಕಸದ ವಾಹನಕ್ಕೆ ಕಾಯುತ್ತಿದ್ದಾರೆ. ಅಕ್ಟೋಬರ್ 30 ರಂದು ಬರೋಬ್ಬರಿ 218 ಮನೆಗಳ ಮುಂದೆ ಜಿಬಿಎ ಅಧಿಕಾರಿಗಳು ಕಸ ಸುರಿದಿದ್ದಾರೆ. ಇಷ್ಟೇ ಅಲ್ಲ ನಿನ್ನೇ ಒಂದೇ ದಿನ 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇದೀಗ ಬೆಂಗಳೂರಿನ ಕಸದ ಸುದ್ದಿ ದೇಶ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಇಷ್ಟೇ ಅಲ್ಲ ಕಸ ವಿಲೇವಾರಿ ಮಾಡಲು ಬೆಂಗಳೂರು ಅಸಮರ್ಥವಾಗಿದೆ ಎಂದು ಮಾನ ಹರಾಜಾಗುತ್ತಿದೆ.
ಕಸ ಎಸೆದರೆ ದಂಡ ಎಷ್ಟು?
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದರೆ ಅದನ್ನು ಮತ್ತೆ ಅವರ ಮನೆ ಮುಂದೆಯೇ ಸುರಿಯುವುದಲ್ಲದೆ, ದಂಡ ವಿಧಿಸಲಾಗುತ್ತಿದೆ. ರಂಭದಲ್ಲಿ ಕಸ ಸುರಿದವರಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಮನೆ ಮುಂದೆ ಕಸ ಸುರಿದು, ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗುತ್ತದೆ. ಮತ್ತೆ ಅದೇ ಮನೆಯವರು ಕಸ ಸುರಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಜೊತೆಗೆ ಮನೆ ಮುಂದೆ ಲಾರಿಗಟ್ಟಲೇ ಕಸ ಸುರಿಯಲಿದ್ದಾರೆ. ಜಿಬಿಎ ಅಧಿಕಾರಿಗಳ ನಡೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ.
