ರಷ್ಯಾ ಅಧ್ಯಕ್ಷರ ಆರೋಗ್ಯ ಕ್ಷೀಣಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ವಿಷಯ ಹೊರಬಿದ್ದಿದೆ. ವ್ಲಾಡಿಮಿರ್ ಪುಟಿನ್ ತೀವ್ರತರವಾದ ತಲೆನೋವಿನ ಮಸ್ಯೆಗೊಳಗಾಗಿದ್ದಾರೆ. ಅವರ ಬಲಗೈ ಮತ್ತು ಬಲಗಾಲು ಸಂವೇದನೆ ಕಳೆದುಕೊಂಡಿದೆ. ಅವರ ದೃಷ್ಟಿ ಮಂಜಾಗಿದೆ. ಶೀಘ್ರವೇ ಅವರಿಗೆ ಅತ್ಯುನ್ನತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.
ಮಾಸ್ಕೋ (ಏಪ್ರಿಲ್ 12, 2023): ಉಕ್ರೇನ್ ಮೇಲೆ ಯುದ್ಧ ಆರಂಭಿಸಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆರೋಗ್ಯದ ಕುರಿತಾಗಿ ಹಲವು ಮಾಹಿತಿಗಳು ಹರಿದಾಡುತ್ತಲೇ ಇವೆ. ಇದೀಗ ಪುಟಿನ್ ದೃಷ್ಟಿ ಮಂಜಾಗಿದ್ದು, ಅವರ ನಾಲಿಗೆ ಸ್ತಬ್ಧವಾಗಿದೆ. ಅವರ ಆರೋಗ್ಯದ ಕುರಿತಾಗಿ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ರಷ್ಯಾ ಅಧ್ಯಕ್ಷರ (Russia President) ಆರೋಗ್ಯ (Health) ಕ್ಷೀಣಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ವಿಷಯ ಹೊರಬಿದ್ದಿದೆ. ಜನರಲ್ ಎಸ್‌ವಿಆರ್ ಟೆಲಿಗ್ರಾಮ್ ಚಾನೆಲ್ ರಷ್ಯಾದ ಅಧ್ಯಕ್ಷರ ಆರೋಗ್ಯದ ಬಗ್ಗೆ ಇತ್ತೀಚಿನ ಮಾಹಿತಿ ನೀಡಿದೆ. ವ್ಲಾಡಿಮಿರ್ ಪುಟಿನ್ (Vladimir Putin) ತೀವ್ರತರವಾದ ತಲೆನೋವಿನ ಮಸ್ಯೆಗೊಳಗಾಗಿದ್ದಾರೆ. ಅವರ ಬಲಗೈ (Right Hand) ಮತ್ತು ಬಲಗಾಲು (Right Leg) ಸಂವೇದನೆ ಕಳೆದುಕೊಂಡಿದೆ. ಅವರ ದೃಷ್ಟಿಮಂಜಾಗಿದೆ. ಶೀಘ್ರವೇ ಅವರಿಗೆ ಅತ್ಯುನ್ನತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.
ಇದನ್ನು ಓದಿ: Vladimir Putin: ಮೆಟ್ಟಿಲಿನಿಂದ ಜಾರಿಬಿದ್ದು ಮಲ ವಿಸರ್ಜನೆ ಮಾಡಿಕೊಂಡ ರಷ್ಯಾ ಅಧ್ಯಕ್ಷ..!
ಈಗಾಗಲೇ ವೈದ್ಯರ ತಂಡವು ಅವರಿಗೆ ಚಿಕಿತ್ಸೆ ನೀಡಿದ್ದು, ಮುಂದಿನ ಕೆಲ ದಿನಗಳವರೆಗೆ ವ್ಲಾಡಿಮಿರ್ ಪುಟಿನ್ ಔಷಧಗಳನ್ನು (Medicines) ತೆಗೆದುಕೊಳ್ಳಬೇಕಿದ್ದು, ವಿಶ್ರಾಂತಿ (Rest) ತೆಗೆದುಕೊಳ್ಳಬೇಕಿದೆ ಎಂದು ವರದಿ ತಿಳಿಸಿದೆ. ಆದರೂ, ರಷ್ಯಾದ ಅಧ್ಯಕ್ಷರು ವಿಶ್ರಾಂತಿ ಪಡೆಯಲು ನಿರಾಕರಿಸಿದರು ಮತ್ತು ಬದಲಿಗೆ ಉಕ್ರೇನ್ (Ukraine) ಮೇಲೆ ರಷ್ಯಾದ ಆಕ್ರಮಣದ ವರದಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದೂ ಪೋಸ್ಟ್ ಮಾಹಿತಿ ನೀಡಿದ್ದು, ಇದು ವೈದ್ಯರ ತಂಡದಲ್ಲಿ ಆತಂಕವನ್ನು ಕಡಿಮೆಗೊಳಿಸಿತು ಎಂದೂ ಹೇಳಲಾಗಿದೆ.
ಅವರ ಆರೋಗ್ಯದ ಬಗ್ಗೆ ಅಧ್ಯಕ್ಷರ ಸಂಬಂಧಿಕರು ಹೆಚ್ಚು ಚಿಂತಿತರಾಗಿದ್ದರು, ಅವರಿಗೆ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯದಲ್ಲಿ ಅಂತಹ ತೀವ್ರ ಕ್ಷೀಣತೆಯಿಂದ ಹೆಚ್ಚು ಭಯಭೀತರಾಗಿದ್ದರು. ರಷ್ಯಾ ಅಧ್ಯಕ್ಷರ ಆರೋಗ್ಯದಲ್ಲಿ ತಾತ್ಕಾಲಿಕ ತೀವ್ರ ಕ್ಷೀಣತೆ ಈಗಾಗಲೇ ಅವರ ಹತ್ತಿರವಿರುವವರನ್ನು ಉದ್ವಿಗ್ನಗೊಳಿಸಿದೆ. ಪುಟಿನ್ ಅವರ ಹಠಾತ್ ಮರಣವು ಅವರೆಲ್ಲರನ್ನೂ ಅಪರಿಚಿತರ ಮುಂದೆ ಇಡುತ್ತದೆ, ಅಥವಾ ಬದುಕುಳಿಯುವ ಅಂಚಿನಲ್ಲಿದೆ,'' ಎಂದು ಜನರಲ್ ಎಸ್.ವಿ.ಆರ್. ಟೆಲಿಗ್ರಾಮ್ ಚಾನೆಲ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್
ಇತ್ತೀಚೆಗೆ ಬೆಲಾರಸ್ ಅಧ್ಯಕ್ಷ (Belarus President) ರಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವ್ಲಾಡಿಮಿರ್ ಪುಟಿನ್ ಸ್ನಾಯುಸೆಳೆತಕ್ಕೆ ಒಳಗಾಗಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral) ಆಗಿತ್ತು. ಅಲ್ಲದೇ ವ್ಲಾಡಿಮಿರ್ ಪುಟಿನ್ ಕ್ಯಾನ್ಸರ್ (Cancer) ಮತ್ತು ಪಾರ್ಕಿನ್‌ಸನ್ ಕಾಯಿಲೆಯಿಂದ (Parkinson Disease) ಬಳಲುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮವೊಂದು ವರದಿ ಮಾಡಿತ್ತು.
ಸ್ಪ್ಯಾನಿಷ್ ಸುದ್ದಿವಾಹಿನಿ ಮಾರ್ಕಾ ಪ್ರಕಾರ, ರಷ್ಯಾದ ಅಧ್ಯಕ್ಷರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಸೋರಿಕೆಯಾದ ಕ್ರೆಮ್ಲಿನ್ ಇಮೇಲ್‌ಗಳಲ್ಲಿ ಭದ್ರತಾ ಸೇವೆಯ ಸಿಬ್ಬಂದಿ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ ಎಂದೂ ತಿಳಿದುಬಂದಿದೆ. "ಅವರು ಆರಂಭಿಕ ಹಂತದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ನಾನು ದೃಢೀಕರಿಸಬಲ್ಲೆ, ಆದರೆ ಇದು ಈಗಾಗಲೇ ಪ್ರಗತಿಯಲ್ಲಿದೆ. ಈ ಸತ್ಯವನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನಿರಾಕರಿಸಲಾಗುತ್ತದೆ ಮತ್ತು ಮರೆಮಾಚಲಾಗುತ್ತದೆ" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ
ಆದರೂ, ಕ್ರೆಮ್ಲಿನ್ ಮತ್ತು ರಷ್ಯಾದ ಸಚಿವರು ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ವರದಿಗಳನ್ನು ಪದೇ ಪದೇ ತಳ್ಳಿಹಾಕಿದ್ದಾರೆ. ಅಲ್ಲದೆ, ರಷ್ಯಾದ ಅಧ್ಯಕ್ಷರು ಪರಿಪೂರ್ಣ ಆರೋಗ್ಯವಾಗಿದ್ದಾರೆ ಎಂದೂ ಹೇಳಿದೆ.