ಟಿವಿ ರಿಮೋಟ್‌ಗಿಂತಲೂ ಸಣ್ಣ... ಇದು ವಿಶ್ವದ ಅತ್ಯಂತ ಪುಟಾಣಿ ನಾಯಿ

By Anusha Kb  |  First Published Apr 11, 2023, 1:27 PM IST

ಪುಟಾಣಿ ನಾಯಿಯೊಂದು  ಗಾತ್ರದಿಂದಲೇ ಗಿನ್ನೆಸ್‌ ವಿಶ್ವ ದಾಖಲೆ ಪುಟ ಸೇರಿದೆ.  ಕೇವಲ ಒಂದು ಡಾಲರ್ ನೋಟಿಗಿಂತಲೂ ಸಣ್ಣ ಗಾತ್ರವನ್ನು ಇದು ಹೊಂದಿದ್ದು,  ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ.


ಪುಟಾಣಿ ನಾಯಿಯೊಂದು  ಗಾತ್ರದಿಂದಲೇ ಗಿನ್ನೆಸ್‌ ವಿಶ್ವ ದಾಖಲೆ ಪುಟ ಸೇರಿದೆ.  ಕೇವಲ ಒಂದು ಡಾಲರ್ ನೋಟಿಗಿಂತಲೂ ಸಣ್ಣ ಗಾತ್ರವನ್ನು ಇದು ಹೊಂದಿದ್ದು,  ಗಿನ್ನೆಸ್ ವಿಶ್ವ ದಾಖಲೆ ಪುಟ ಸೇರಿದೆ. 2 ವರ್ಷದ ಈ ಪುಟಾಣಿ ಹೆಣ್ಣು ನಾಯಿ ಚಿಹುವಾ ತಳಿಗೆ ಸೇರಿದ್ದಾಗಿದ್ದು,  ಪರ್ಲ್‌ ಎಂದು ಹೆಸರಿಡಲಾಗಿದೆ.   2020ರ ಸೆಪ್ಟೆಂಬರ್ ಒಂದರಂದು ಜನಿಸಿದ ಈ ಶ್ವಾನ ಈಗ ಜೀವಂತವಿರುವ ವಿಶ್ವದ ಅತ್ಯಂತ ಚಿಕ್ಕ ನಾಯಿ ಎಂಬ ಹೆಗ್ಗಳಿಕೆ ಗಳಿಸಿದೆ.  9.14 ಸೆಂಟಿ ಮೀಟರ್ ಉದ್ದದ ಈ ನಾಯಿ 12.7 ಸೆಂಟಿ ಮೀಟರ್ ಎತ್ತರ ಹೊಂದಿದೆ.  ಅಂದರೆ ಪಾಪ್ಸಿಕಲ್ (ಐಸ್‌ಕ್ಯಾಂಡಿ) ಗಿಂತ ಚಿಕ್ಕ, ಟಿವಿ ರಿಮೋಟ್‌ಗಿಂದ ಸಣ್ಣ,  ಹಾಗೆಯೇ ಡಾಲರ್ ನೋಟಿಗಿಂತ  ಗಿಡ್ಡವಿದೆ. 

ವಿಶ್ವದ ಅತ್ಯಂತ ಪುಟಾಣಿ ಶ್ವಾನ ಪರ್ಲ್‌ಗೆ ಹೆಲೋ ಹೇಳಿ ಎಂದು ಬರೆದು ಗಿನ್ನೆಸ್‌ ವಿಶ್ವ ದಾಖಲೆ ಸಂಸ್ಥೆ ಈ ಪುಟಾಣಿ ಶ್ವಾನ ಪರ್ಲ್‌ನ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.  ಗಿನ್ನೆಸ್‌ ವಿಶ್ವ ದಾಖಲೆ (GWR) ಸಂಸ್ಥೆ ಪ್ರಕಾರ,  ಪರ್ಲ್‌, ಮಿರಾಕಲ್ ಮಿಲ್ಲಿ ಎಂಬ ಶ್ವಾನದ ಮರಿಯಾಗಿದ್ದು, ಈ ಮಿರಾಕಲ್ ಮಿಲ್ಲಿ (Miracle Milly) ಕೂಡ ಈ ಹಿಂದೆ ವಿಶ್ವ ದಾಖಲೆ ನಿರ್ಮಿಸಿತ್ತು.  2011ರಲ್ಲಿ ಜನಿಸಿದ ಮಿರಾಕಲ್ ಮಿಲ್ಲಿ ಒಂದು ಪೌಂಡ್ ತೂಗುತ್ತಿತ್ತು. 9.65 ಸೆಂಟಿ ಮೀಟರ್ ಉದ್ದವಿದ್ದ ಇದು 3.8 ಇಂಚು ಎತ್ತರವಿತ್ತು.  2020ರಲ್ಲಿ ಇದು ಮೃತಪಟ್ಟಿತ್ತು. 

Tap to resize

Latest Videos

Viral Video : ಆಟಿಕೆ ನುಂಗಿದ್ದ ನಾಯಿ ಜೀವ ಉಳಿಸಿದ ವೈದ್ಯೆಗೆ ಭೇಷ್ ಎಂದ ನೆಟ್ಟಿಗರು

ಈ ಮಿರಾಕಲ್ ಮಿಲ್ಲಿಯ ಮಗಳಾದ ಪರ್ಲ್ ಈಗ ತಾಯಿಯಂತೆ ತಾನೂ ವಿಶ್ವ ದಾಖಲೆ ನಿರ್ಮಿಸಿದೆ. ಇತ್ತೀಚೆಗೆ ಈ ಪರ್ಲ್ ಇಟಾಲಿಯನ್ ಟಿವಿ ಶೋ 'ಲೊ ಶೋ ಡೈ ರೆಕಾರ್ಡ್‌' ಎಂಬ ಶೋದಲ್ಲಿ ಭಾಗವಹಿಸಿತ್ತು.  ಈ ಶೋದಲ್ಲಿ ಪರ್ಲ್‌ನ ಮಾಲಕಿ ವನೆಸಾ ಸ್ಮೆಲ್ಲರ್,  ತನ್ನ ಪುಟಾಣಿ ಶ್ವಾನವನ್ನು ಶೋಗೆ ಕರೆದುಕೊಂಡು ಬಂದಿದ್ದರು. ಈಸ್ಟರ್ ಎಗ್ ಆಕಾರದ ಸೀಟಿನಲ್ಲಿ ಪರ್ಲ್‌ನನ್ನು ಕರೆತಂದಾಗ ಶೋದಲ್ಲಿದ್ದ ನೂರಾರು ಜನ ಚಪ್ಪಾಳೆ ತಟ್ಟಿ ಪರ್ಲ್ ಅನ್ನು ಸ್ವಾಗತಿಸಿದರು. ಈ ಚಿಹೋವಾ ತಳಿಯ ಪುಟಾಣಿ ಶ್ವಾನ ಶಾಂತ ಸ್ವಭಾವವನ್ನು ಹೊಂದಿದ್ದು,  ದೊಡ್ಡ ಮಟ್ಟದಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ನಿಲ್ಲಲ್ಲು ಯಾವುದೇ ಹಿಂಜರಿಕೆ ತೋರಿರಲಿಲ್ಲ ಎಂದು ಶ್ವಾನದ ಮಾಲಕಿ ಹೇಳಿದ್ದಾರೆ.

ಈ ಶ್ವಾನವೂ ಚಿಕನ್, ಮೀನು, ಮುಂತಾದ ಸ್ವಾದಿಷ್ಟವಾದ ಆಹಾರವನ್ನೇ ತಿನ್ನಲು ಬಯಸುವುದಲ್ಲದೇ  ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲು ಕೂಡ ಇಷ್ಟಪಡುತ್ತದೆ ಎಂದು ಈ ಶ್ವಾನದ ಮಾಲಕಿ ಹೇಳುತ್ತಾರೆ.  ಅಂದಹಾಗೆ ಪರ್ಲ್‌ನ ಎತ್ತರವನ್ನು ಅದು ಜನಿಸಿದ್ದ ಕ್ರಿಸ್ಟಲ್ ಕ್ರೀಕ್ ಅನಿಮಲ್ ಆಸ್ಪತ್ರೆ (Crystal Creek Animal Hospital) ಒರ್ನಲ್ಯಾಂಡೋದಲ್ಲಿ (Orlando) ಮೂರು ಬಾರಿ ಅಳತೆ ಮಾಡಲಾಗಿತ್ತು.  ಆಕೆಯನ್ನು ಹೊಂದಿರುವುದು ನಮ್ಮ ಪುಣ್ಯ.  ಈ ಮೂಲಕ ನಮ್ಮದೇ ಶ್ವಾನವೊಂದರ ಈ ಹಿಂದಿನ ರೆಕಾರ್ಡ್ ಬ್ರೇಕ್ ಆಗಿದೆ ಎಂದು ಪರ್ಲ್‌ನ ಮಾಲಕಿ ವನೆಸಾ ಸ್ಮೆಲ್ಲರ್ ಖುಷಿ ವ್ಯಕ್ತಪಡಿಸಿದ್ದಾರೆ. 

ಸದಾ ಮಗುವಾಗಿಯೇ ಇರೋ ನಾಯಿ ಬಗ್ಗೆ ಇಂಟರೆಸ್ಟಿಂಗ್ ಫ್ಯಾಕ್ಟ್ಸ್

Say hello to the shortest dog in the world, Pearl 🐶 https://t.co/8lVcgmMOXs

— Guinness World Records (@GWR)

 

click me!