
ಆನೆಮರಿಗಳು ಬಹಳ ಮುದ್ದಾದ ಪ್ರಾಣಿಗಳು, ಇವು ಸಾಮಾನ್ಯವಾಗಿ ಮಾನವ ಶಿಶುಗಳಂತೆ ತನ್ನ ಹಿರಿಯರಿಂದ ತನ್ನನ್ನು ಸಲಹುವವರಿಂದ ಅವುಗಳು ಬಹಳವಾಗಿ ಮುದ್ದು ಮಾಡಲು ಬಯಸುತ್ತವೆ. ತುಂಟಾಟವಾಡುತ್ತ ತನ್ನ ಹಿಂಡಿನ ಸುತ್ತ ಮುತ್ತ ಸುತ್ತಾಡುವ ಈ ಪುಟ್ಟಮರಿಗಳನ್ನು ಆನೆ ಹಿಂಡಿನಲ್ಲಿರುವ ಹಿರಿಯರು ಬಹಳ ಜತನದಿಂದ ನೋಡಿಕೊಳ್ಳುತ್ತಾರೆ. ಹೀಗೆ ತುಂಟಾಟವಾಡುತ್ತಾ ಕೆಲವೊಮ್ಮೆ ಆನೆಮರಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುತ್ತವೆ. ಕೆಲ ದಿನಗಳ ಹಿಂದೆ ನೀರು ಕುಡಿಯಲು ಹೋದ ಆನೆಮರಿಯೊಂದು ನೀರಿನ ಹೊಂಡಕ್ಕೆ ಬಿದ್ದು ಮುಳುಗೇಳುವ ವಿಡಿಯೋ ವೈರಲ್ ಆಗಿತ್ತು. ಕೂಡಲೇ ಅಲ್ಲಿದ್ದ ದೊಡ್ಡಾನೆಗಳು ಓಡಿ ಹೋಗಿ ಹೊಂಡಕ್ಕೆ ಇಳಿದು ತಮ್ಮ ಮರಿಯನ್ನು ರಕ್ಷಿಸಿದ್ದವು. ಹಾಗೆಯೇ ಇಲ್ಲೊಂದು ಮರಿಯಾನೆ ಆಟವಾಡುತ್ತಾ ಓಡುವ ರಭಸದಲ್ಲಿ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು ನೋವಿನಿಂದ ಚೀರಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರಿ ಆನೆಗಳು ಹೊಸ ಹೊಸ ಚಟುವಟಿಕೆಗಳನ್ನು ಕಲಿಯುವುದನ್ನು ನೋಡುವುದಕ್ಕೆ ಬಹಳ ಮುದ್ದಾಗಿರುತ್ತದೆ. ಪುಟ್ಟ ಮಕ್ಕಳು (Childrens) ಹೇಗೆ ನಡೆಯುವುದಕ್ಕೆ ಕಲಿಯಲು ಒಂದು ವರ್ಷ ಹಿಡಿಯುತ್ತದೆಯೇ ಅದೇ ರೀತಿ ಆನೆಮರಿಗಳಿಗೆ ಅವುಗಳ ಸೊಂಡಿಲನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಒಂದು ವರ್ಷ ಬೇಕಾಗುತ್ತದೆಯಂತೆ. ಮುಖದ ಮುಂದಿರುವ ಈ ಅಂಗವನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವುದು ಸುಲಭವಲ್ಲ. ಬಹಳ ಶ್ರಮ ಅಭ್ಯಾಸದ ನಂತರವಷ್ಟೇ ಸೊಂಡಿಲುಗಳು ಆನೆಗಳ ನಿಯಂತ್ರಣಕ್ಕೆ ಸಿಗುತ್ತವೆಯಂತೆ.
ಕೆಲವೊಮ್ಮೆ ನಡೆದಾಡುವಾಗ ನಾವು ಧರಿಸಿರುವ ಬಟ್ಟೆಯೇ ನಮ್ಮ ಕಾಲಿಗೆ ಸಿಲುಕಿ ಅದನ್ನು ತುಳಿದು ನಾವು ಮುಗ್ಗರಿಸುವುದುಂಟು. ಹಾಗೆಯೇ ಸಾಮಾನ್ಯವಾಗಿ ನಾವು ತಿನ್ನುವಾಗ ಜಗಿಯುವ ರಭಸದಲ್ಲಿ ಆಕಸ್ಮಿಕವಾಗಿ ನಾಲಿಗೆಯನ್ನು ಕಚ್ಚಿಕೊಳ್ಳುತ್ತೇವೆ. ಇದರಿಂದ ಆ ಕ್ಷಣ ಎಷ್ಟೊಂದು ನೋವಾಗುವುದೋ ಹೇಳಲಾಗದು. ಹಾಗೆಯೇ ಈ ಪುಟ್ಟ ಆನೆಯೊಂದು ಓಡುವ ರಭಸದಲ್ಲಿ ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು ನೋವಿನಿಂದ ಚೀರಾಡಿದೆ. ಟುಡೇ ಇಯರ್ಸ್ ಓಲ್ಡ್ ( Today Years Old) ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ಆನೆ ಮರಿಗೆ ಆಹಾರ ನೀಡುತ್ತಿರುವುದು ಕಾಣಿಸುತ್ತಿದೆ. ವ್ಯಕ್ತಿ ನೀಡಿದ ಆಹಾರ ಸೇವಿಸಿದ ನಂತರ ಆನೆಮರಿ ವೇಗವಾಗಿ ನಡೆಯಲು ಪ್ರಾರಂಭಿಸುತ್ತದೆ ಮತ್ತು ಸ್ವಲ್ಪ ಹೊತ್ತಿನಲ್ಲೇ ಅದು ತನ್ನ ಸೊಂಡಿಲಿನ ಮೇಲೆ ಕಾಲಿಟ್ಟು ನೋವಿನಿಂದ ಚೀರಿದೆ.
ನಮಗೆ ನಿಮಗೆ ಮಾತ್ರ ಅಲ್ಲ ಆನೆಗೂ ತುರಿಕೆಯಾಗುತ್ತೆ... ಇಲ್ಲೊಂದು ಆನೆ ಏನ್ ಮಾಡ್ತು ನೋಡಿ
ಈ ವಿಡಿಯೋವನ್ನು 4.4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ 2 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಮೂಲತಃ Reagan Anthony ಎಂಬುವವರು ಮೊದಲುಗೆ ಶೇರ್ ಮಾಡಿದ್ದರು. ಅವರು ಕೀನ್ಯಾ(Kenya) ಭೇಟಿ ವೇಳೆ ಈ ವಿಡಿಯೋವನ್ನು ಚಿತ್ರೀಕರಿಸಿದ್ದರು. ಆನೆಮರಿಗಳು ಒಂದು ವರ್ಷ ಆಗುವವರೆಗೆ ತಮ್ಮ ಸೊಂಡಿಲಿನ ಮೇಲೆ ಅವುಗಳಿಗೆ ನಿಯಂತ್ರಣವಿರುವುದಿಲ್ಲ ಎಂದು ಈ ವಿಡಿಯೋ ಪೋಸ್ಟ್ ವೇಳೆ ಅವರು ಬರೆದುಕೊಂಡಿದ್ದರು.
ಇನ್ನು ತನ್ನದೇ ಸೊಂಡಿಲಿನ ಮೇಲೆ ಕಾಲಿಟ್ಟು ನೋವಿನಿಂದ ಪರದಾಡಿದ ಆನೆಯ ಬಗ್ಗೆ ಅನೇಕರು ಮರುಕ ವ್ಯಕ್ತಪಡಿಸಿದ್ದಾರೆ. ಯಾರಾದರೂ ಆ ಆನೆಮರಿಗೆ ಸಮಾಧಾನ ಮಾಡಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಊಟ ಮಾಡುವಾಗ ಊಟದ ಜೊತೆ ನಾಲಿಗೆಯನ್ನು(Tounge) ಜಗ್ಗಿಯುವುದಕ್ಕೆ ಸಮನಾಗಿದೆ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. ಇದರಿಂದ ಆನೆಮರಿಗೆ ತುಂಬಾ ನೋವಾಗಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆಷ್ಟುಇ ನೋವಾಗಿರಬಹುದು ಎಂದು ಭಾಸವಾಗುತ್ತಿದೆ. ಆನೆಗಳ ಸೊಂಡಿಲುಗಳು ತುಂಬಾ ಸೂಕ್ಷ್ಮವಾಗಿರುತ್ತವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಾವುತನೊಂದಿಗೆ ಎದ್ದು ಬಿದ್ದು ಮೊಬೈಲ್ ನೋಡ್ತಿರುವ ಆನೆ... ವಿಡಿಯೋ ವೈರಲ್
ನ್ಯಾಷನಲ್ ಜಿಯಾಗ್ರಫಿಕ್ (National Geography) ಪ್ರಕಾರ, ಆನೆಮರಿಗಳು (Elephant calf) ತಮ್ಮ ಸೊಂಡಿಲಿನೊಂದಿಗಿನ ಈ ವರ್ತನೆ ಸಾಮಾನ್ಯ ಪ್ರಕ್ರಿಯೆ. ತಮ್ಮ ಸೊಂಡಿಲನ್ನು(Trunk) ನಿಯಂತ್ರಿಸಲು ಕಲಿಯುವ ವೇಳೆ ಇಂತಹ ಘಟನೆಗಳು ನಡೆಯುತ್ತವೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ