ಶ್ವಾನವೊಂದು ದೇಗುಲದಲ್ಲಿ ಗಂಟೆ ಬಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಎಲ್ಲರ ಮನಸ್ಸಿಗೆ ಮುದ ನೀಡುತ್ತಿದೆ.
ಶ್ವಾನಗಳು ಬಹಳ ಮುದ್ಧಾದ ಪ್ರಾಣಿಗಳು, ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಶ್ವಾನಗಳು ಅಷ್ಟೇ ಸ್ವಾಮಿನಿಷ್ಠವಾಗಿರುತ್ತವೆ. ಪುಟ್ಟ ಮಕ್ಕಳೊಂದಿಗೆಯೂ ಸಾಕುನಾಯಿಗಳ ಬಹಳ ಆತ್ಮೀಯವಾದ ವರ್ತನೆ ಹೃದಯವನ್ನು ಭಾವುಕವಾಗಿಸುತ್ತವೆ. ಇಂತಹ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ. ಕೆಲದಿನಗಳ ಹಿಂದೆ ಶ್ವಾನವೊಂದು ದೇಗುಲದಲ್ಲಿ ಮನುಷ್ಯರಂತೆ ತಲೆಬಾಗಿ ಪ್ರಾರ್ಥನೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ಶ್ವಾನವೊಂದು ದೇಗುಲದಲ್ಲಿ ಗಂಟೆ ಬಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಎಲ್ಲರ ಮನಸ್ಸಿಗೆ ಮುದ ನೀಡುತ್ತಿದೆ.
Buitengebieden ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 8 ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಜರ್ಮನ್ ಶೆಫರ್ಡ್ (German shepard) ತಳಿಯ ಶ್ವಾನವು ದೇವಸ್ಥಾನದ ದೊಡ್ಡದಾದ ಗಂಟೆಯ ಹಗ್ಗವನ್ನು ಬಾಯಿಯಲ್ಲಿ ಕಚ್ಚಿಕೊಂಡು ಗಂಟೆಯನ್ನು (Bell) ಬಾರಿಸುತ್ತಿದೆ. ಸಾಕಷ್ಟು ಶಕ್ತಿ ಹಾಗೂ ಉತ್ಸಾಹದಿಂದ ಶ್ವಾನ ಗಂಟೆ ಬಾರಿಸುತ್ತಿದೆ, ಇಂದು ಶುಕ್ರವಾರ ಎಂದು ಬರೆದು ಈ ವಿಡಿಯೋವನ್ನು Buitengebieden ಖಾತೆಯಿಂದ ಪೋಸ್ಟ್ ಮಾಡಲಾಗಿದೆ. Buitengebieden ಎಂಬ ಟ್ವಿಟ್ಟರ್ ಖಾತೆಯೂ ದಿನವೂ ಶ್ವಾನಗಳು (Dog) ಹಾಗೂ ಇತರ ಪ್ರಾಣಿ (Animal) ಪಕ್ಷಿಗಳ (Bird) ಮುದ್ದಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಮಾಡುತ್ತಿರುತ್ತದೆ.
It’s Friday! 🔊 pic.twitter.com/XLuSrOPG1c
— Buitengebieden (@buitengebieden)ಈ ಶ್ವಾನದ ವಿಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಶ್ವಾನ ಬಹಳ ಮುದ್ದಾಗಿದೆ. ಶ್ವಾನ ಈ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಆತ ಬಹಳ ಖುಷಿಯಾಗಿದ್ದಾನೆ. ಒಳ್ಳೆಯ ಹುಡುಗ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರು (God) ಈತನಿಗೆ ಆಶೀರ್ವಾದಿಸಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Army Dog Zoom Passed Away: ಟೆರಿರಿಸ್ಟ್ ಜೊತೆ ಕಾದಾಡಿದ್ದ ಸೇನಾ ಶ್ವಾನ 'ಜೂಮ್' ವಿಧಿವಶ!
ಶ್ವಾನವನ್ನ ಪ್ಯಾರಾಗ್ಲೈಡಿಂಗ್ ಕರೆದೊಯ್ದ ಮಾಲೀಕ
ಶ್ವಾನ ಪ್ರೇಮಿಗಳು ಶ್ವಾನದ ಮೇಲೆ ತೋರುವ ಪ್ರೀತಿ ಪದಗಳಲ್ಲಿ ವರ್ಣಿಸಲಾಗದ್ದು, ಕೆಲವೊಮ್ಮೆ ಶ್ವಾನಗಳ ಮೇಲಿನ ಈ ಪ್ರೀತಿ ಅತಿರೇಕ ಎಂದರೂ ತಪ್ಪಗಲಾರದು. ಶ್ವಾನಗಳನ್ನು ಮಕ್ಕಳಂತೆ ಮನೆಯ ಸದಸ್ಯನಂತೆ ನೋಡುವ ಸಂಸ್ಕೃತಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಯುವಕನೋರ್ವ ತನ್ನ ಹಸ್ಕಿ ತಳಿಯ ಶ್ವಾನವನ್ನು ತೀರ್ಥಯಾತ್ರೆಯ ವೇಳೆ ದೇಗುಲಗಳಿಗೂ ಕರೆದೊಯ್ದಿದ್ದ. ಇದು ವಿವಾದವನ್ನು ಸೃಷ್ಟಿಸಿತ್ತು. ಈ ನಡುವೆ ಯುವಕನೋರ್ವ ತನ್ನ ಶ್ವಾನವನ್ನು ತನ್ನೊಂದಿಗೆ ಪ್ಯಾರಾ ಗ್ಲೈಡಿಂಗ್ ಕರೆದೊಯ್ದಿದ್ದು ಅದರ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೊಗಳಿದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿ ವಿಕೃತಿ: ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿರುವ ಶ್ವಾನ..!
ಶ್ವಾನವನ್ನು ಪ್ಯಾರಾಗ್ಲೈಡಿಂಗ್ (Paraglaiding) ಕರೆದೊಯ್ದಿದ್ದಕ್ಕೆ ಅನೇಕರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನ ಹಾಗೂ ಅದರ ಮಾಲೀಕ ಜೊತೆಯಾಗಿ ಪ್ಯಾರಾ ಗ್ಲೈಡಿಂಗ್‌ಗೆ ಆಕಾಶಕ್ಕೆ ಏರಿ ಬಾನಲ್ಲಿ ಹಾರುತ್ತಿದ್ದಾರೆ. ಆದರೆ ಶ್ವಾನಕ್ಕೆ ಇದು ಕೂಲ್ ಅನಿಸಿಲ್ಲ. ಅದರ ಮುಖ ನೋಡಿದರೆ ಹೆದರಿ ತರಗುಟ್ಟುವಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ವಿಡಿಯೋ ನೋಡಿದವರೆಲ್ಲಾ ಶ್ವಾನದ ಮಾಲೀಕನಿಗೆ (Dog Owner) ಹಿಗ್ಗಾಮುಗ್ಗಾ ಬೈದಾಡಿದ್ದಾರೆ. ಲ್ಯಾಡ್ ಬೈಬಲ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನ ವಿಡಿಯೋ ವೀಕ್ಷಿಸಿದ್ದಾರೆ.