
ಅಮೆರಿಕದಲ್ಲಿ (United States) ನಡೆದ ಏರ್‌ಶೋ (Air Show) ಕಾರ್ಯಕ್ರಮದಲ್ಲಿ 2ನೇ ಮಹಾಯುದ್ಧದ (World War II) ಕಾಲದ 2 ವಿಮಾನಗಳು (Flight) ಡಿಕ್ಕಿ ಹೊಡೆದಿವೆ. ವಿಮಾನಗಳು ಡಿಕ್ಕಿ ಹೊಡೆದಿದ್ದರಿಂದ ಚೂರು ಚೂರುಗಳಾಗಿವೆ. ಕ್ಯಾಮೆರಾದಲ್ಲಿ ಈ ಭೀಕರ ಅಪಘಾತ ಪ್ರಕರಣ ಸೆರೆಯಾಗಿದ್ದು, ಭಯಾನಕವಾಗಿದೆ. ಇನ್ನು, ಈ ಅವಘಡದಲ್ಲಿ ಎರಡೂ ವಿಮಾನಗಳಲ್ಲಿದ್ದ 6 ಜನರು ಮೃತಪಟ್ಟಿದ್ದಾರೆ (Death) ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.
ಶನಿವಾರ ಡಲ್ಲಾಸ್‌ನಲ್ಲಿ (Dallas) ನಡೆದ ವೈಮಾನಿಕ ಪ್ರದರ್ಶನದಲ್ಲಿ 2ನೇ ಮಹಾಯುದ್ಧದ ವಿಮಾನಗಳು ಡಿಕ್ಕಿ ಹೊಡೆದುಕೊಂಡಿವೆ. ಬೋಯಿಂಗ್ ಬಿ -17 ((Boeing B - 17) ಫ್ಲೈಯಿಂಗ್ ಫೋರ್ಟ್ರೆಸ್ ಮತ್ತು ಬೆಲ್ ಪಿ -63 ಕಿಂಗ್‌ಕೋಬ್ರಾ (Kingcobra) ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ ಎಂದು ವರದಿಯಾಗಿದೆ. ಈ ಎರಡೂ ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಿದ್ದರಿಂದ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಮಾನಗಳಲ್ಲಿ ಕನಿಷ್ಠ 6 ಜನರು ಇದ್ದರು ಎಂದು ವರದಿಗಳು ಹೇಳುತ್ತಿದ್ದು ಅವರು ಬದುಕುಳಿದಿರುವ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
ಇದನ್ನು ಓದಿ: ಏರ್ ಶೋ ನಲ್ಲಿ ಮತ್ತೊಂದು ಆಘಾತ : ಭಾರಿ ಬೆಂಕಿ ಅವಘಡ
ವೈಮಾನಿಕ ಪ್ರದರ್ಶನ ನೋಡುತ್ತಿದ್ದವರು ನೋಡು ನೋಡುತ್ತಿದ್ದಂತೆಎ ವಿಮಾನಗಳು ಡಿಕ್ಕಿ ಹೊಡೆದುಕೊಂಡಿದ್ದರಿಂದ ಜನತೆ ಆತಂಕಗೊಳಗಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಆದ್ಯಮಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಾನು ಅಲ್ಲಿಯೇ ನಿಂತಿದ್ದೆ. ನಾನು ಸಂಪೂರ್ಣ ಆಘಾತ ಮತ್ತು ಅಪನಂಬಿಕೆಯಲ್ಲಿದ್ದೆ" ಎಂದು ಸ್ನೇಹಿತನೊಂದಿಗೆ ಏರ್ ಶೋನಲ್ಲಿ ಭಾಗವಹಿಸಿದ 27 ವರ್ಷದ ಮೊಂಟೊಯಾ ಹೇಳಿದರು. "ಸುತ್ತಮುತ್ತಲಿನವರೆಲ್ಲರೂ ಏದುಸಿರು ಬಿಡುತ್ತಿದ್ದರು. ಎಲ್ಲರೂ ಕಣ್ಣೀರು ಸುರಿಸುತ್ತಿದ್ದರು. ಎಲ್ಲರೂ ಆಘಾತಕ್ಕೊಳಗಾಗಿದ್ದರು" ಎಂದೂ ಅವರು ಹೇಳಿದರು.
ಇದನ್ನೂ ಓದಿ: ವಿಮಾನದಲ್ಲಿ ಯೋಧನಿಗೆ ಹೃದಯಾಘಾತ; ಪ್ರಾಣ ಉಳಿಸಿದ ಕೇರಳದ 'ಫ್ಲಾರೆನ್ಸ್ ನೈಟಿಂಗೇಲ್' ಪಿ.ಗೀತಾ
ಅಪಘಾತದ ವಿಡಿಯೋಗಳು ಹೃದಯವಿದ್ರಾವಕವಾಗಿವೆ ಎಂದು ಡಲ್ಲಾಸ್ ಮೇಯರ್ ಎರಿಕ್ ಜಾನ್ಸನ್ ಹೇಳಿದ್ದಾರೆ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಬೆಂಬಲದೊಂದಿಗೆ ಅಪಘಾತದ ದೃಶ್ಯವನ್ನು ನಿಯಂತ್ರಿಸಿದೆ ಎಂದೂ ಮೇಯರ್ ಮಾಹಿತಿ ನೀಡಿದ್ದಾರೆ.
ಎರಡು ವಿಮಾನಗಳು ಪತನವಾದ ಕ್ಷಣ: ವಿಡಿಯೋವನ್ನು ನೀವೇ ನೋಡಿ..
ವೈಮಾನಿಕ ಪ್ರದರ್ಶನದ ವಿಡಿಯೋಗಳು ಕಿಂಗ್‌ಕೋಬ್ರಾ ವಿಮಾನ ಬಿ -17 ಬಾಂಬರ್‌ಗೆ ಅಪ್ಪಳಿಸಿದಾಗ ಕಿರುಚುತ್ತಿದ್ದ ಪ್ರೇಕ್ಷಕರ ಆಘಾತ ಮತ್ತು ಭಯಾನಕತೆಯನ್ನು ಸಹ ಸೆರೆಹಿಡಿಯುತ್ತದೆ. ಇನ್ನೊಂದು ಕಡೆಯಿಂದ ಬರುತ್ತಿದ್ದ ಸಣ್ಣ ಕಿಂಗ್‌ಕೋಬ್ರಾ ವಿಮಾನ B-17 ಬಾಂಬರ್‌ಗೆ ಅಪ್ಪಳಿಸಿತು ಮತ್ತು ಆಕಾಶದಲ್ಲಿ ಬೆಂಕಿ ಹಾಗೂ ಹೊಗೆಯ ದೊಡ್ಡ ಚೆಂಡಿನಂತೆ ಕಾಣಿಸಿಕೊಂಡಿದೆ.
ಕಿಂಗ್‌ಕೋಬ್ರಾ ಅಮೆರಿಕದ ಯುದ್ಧ ವಿಮಾನವಾಗಿದೆ ಮತ್ತು ಯುದ್ಧದ ಸಮಯದಲ್ಲಿ ಸೋವಿಯತ್ ಪಡೆಗಳು ಇದನ್ನು ಹೆಚ್ಚಾಗಿ ಬಳಸಿದವು. ಇನ್ನು, B-17 ಮಹಾ ಯುದ್ಧದ ಸಮಯದಲ್ಲಿ ಜರ್ಮನಿಯ ವಿರುದ್ಧದ ದಾಳಿಯಲ್ಲಿ ಬಳಸಲಾದ 4 -ಎಂಜಿನ್ ಬಾಂಬರ್ ವಿಮಾನ ಆಗಿದೆ. ಈ ಎರಡೂ ವಿಮಾನಗಳು ಹಾರಾಡುವ ಸ್ಥಿತಿಯಲ್ಲಿರುವುದು ಅಪರೂಪ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ Flight ಸೀಟ್‌ನಲ್ಲಿ ಕುಳಿತೇ ಮೂತ್ರ ವಿಸರ್ಜಿಸಿದ ತಾತ..!
ಹೆಚ್ಚಿನ B-17 ಬಾಂಬರ್ ವಿಮಾನಗಳನ್ನು ಯುದ್ಧದ ನಂತರ ಸ್ಕ್ರ್ಯಾಪ್ ಮಾಡಲಾಗಿದೆ ಮತ್ತು ವಸ್ತು ಸಂಗ್ರಹಾಲಯಗಳು, ಏರ್ ಶೋಗಳಲ್ಲಿ ಮಾತ್ರ ಅವುಗಳನ್ನು ನೋಡಬಹುದಾಗಿದೆ. ಒಂದೇ ಸಮಯದಲ್ಲಿ ಹಲವಾರು ವಿಮಾನಗಳು ಹಾರುತ್ತಿದ್ದವು. ನಿರೂಪಕನು ವಿಮಾನಗಳ ಮಹತ್ವವನ್ನು ವಿವರಿಸುತ್ತಿದ್ದರು ಮತ್ತು ಹಿನ್ನಲೆಯಲ್ಲಿ ದೇಶಭಕ್ತಿಯ ಸಂಗೀತವು ಪ್ಲೇ ಆಗುತ್ತಿತ್ತು ಎಂದು ಈ ಘಟನೆಯ ಬಗ್ಗೆ ತನ್ನ 12 ವರ್ಷದ ಮಗಳೊಂದಿಗೆ ಕಾರ್ಯಕ್ರಮಕ್ಕೆ ಹೋಗಿದ್ದ ವಕೀಲರೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ಹೇಳಿದ್ದಾರೆ.
B-17 ನಿಜವಾಗಿಯೂ ಕೆಳಕ್ಕೆ ಹಾರುತ್ತಿರುವುದು ಕಂಡುಬಂದಿದ್ದು, ಆಗ ಏನಾಗುತ್ತಿದೆ ಎಂದು ಅವರು ಗ್ರಹಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ನಂತರ B-17 ನ ಒಂದು ರೆಕ್ಕೆ ಹೊರಬಂದಿತು ಮತ್ತು ವಿಮಾನದ ಫ್ಯೂಸ್ಲೇಜ್ ನೆಲಕ್ಕೆ ಬಿದ್ದಿತು, ನಂತರ ದೊಡ್ಡ ಬೆಂಕಿಯ ಚೆಂಡು ಕಾಣಿಸಿಕೊಂಡಿತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಆಕ್ಸಿಡೆಂಟ್ ಫೋಟೋ ಅಲ್ಲ... ಇದು ವಿಮಾನ ಪ್ರಯಾಣಿಕರ ಲಗೇಜ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ