ತಾಯಿಯನ್ನ ಹೆದರಿಸಿದ ಹುಲಿ ಮರಿ... ವಿಡಿಯೋ

Published : Apr 03, 2022, 04:52 AM IST
 ತಾಯಿಯನ್ನ ಹೆದರಿಸಿದ ಹುಲಿ ಮರಿ... ವಿಡಿಯೋ

ಸಾರಾಂಶ

ಗಾಬರಿಯಾಗಿ ಕೆಳಗೆ ಬಿದ್ದ ತಾಯಿ ಹುಲಿ ಅಮ್ಮನನ್ನು ಬೆದರಿಸಿದ ಹುಲಿ ಮರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್‌ ಮುಂತಾದೆಡೆ ಪ್ರಾಣಿ ಪಕ್ಷಿಗಳ ಅಪರೂಪದ ಸಾಕಷ್ಟು ವಿಡಿಯೋಗಳನ್ನು ನೋಡಿರುತ್ತೀರಿ. ಅಲ್ಲಿ ಮುದ್ದಾದ ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಹುಲಿ ಮರಿಯೊಂದು ತನ್ನ ತಾಯಿಯನ್ನೇ ಮರೆಯಲ್ಲಿ ನಿಂತು ಬೆದರಿಸಿದೆ. ವಿಡಿಯೋದಲ್ಲಿ ಕಾಣಿಸುವಂತೆ ತಾಯಿ ಏನನ್ನು ತಿನ್ನುವುದರಲ್ಲಿ ಬ್ಯುಸಿ ಆಗಿರುತ್ತದೆ. ಈ ವೇಳೆ ಬಾಗಿಲಿನಲ್ಲಿನಂತಿರುವ ಅದರ ಮರಿ ಛಂಗನೇ ತಾಯಿ ಇರುವ ಸ್ಥಳದತ್ತ ಹಾರುತ್ತದೆ. ಆದರೆ ಈ ಬಗ್ಗೆ ಯಾವುದೇ ಊಹೆ ಮಾಡಿರದ ತಾಯಿ ಒಮ್ಮೆಲೇ ಕಕ್ಕಾಬಿಕ್ಕಿಯಾದ ತಾಯಿ ಹೆದರಿ ಅಲ್ಲೇ ಬಿದ್ದು ಬಿಡುತ್ತದೆ. ತಾಯಿ ಹಾಗೂ ಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು 'animallovevibe' ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ 183,094 ಬಳಕೆದಾರರು ಇಷ್ಟಪಟ್ಟಿದ್ದಾರೆ. ಈ ಮುದ್ದಾದ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಟ್ಟಿನಲ್ಲಿ ತಾಯಿ ಮಕ್ಕಳ ಸಂಬಂಧ ಮನುಷ್ಯನಾಗಲಿ ಅಥವಾ ಪ್ರಾಣಿಯಾಗಲಿ ಅದು ಬಿಡಿಸಲಾಗದ ಬಂಧವಾಗಿರುತ್ತದೆ. 

ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ

2020ರಲ್ಲಿ ಆನೆ ಮರಿ ಡಾನ್ಸ್‌ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಈ ಪುಟ್ಟ ಆನೆ ಮರಿ ಜನಿಸಿ ಕೇವಲ 20 ನಿಮಿಷ ಆಗಿತ್ತಷ್ಟೇ, ಆದರೆ ಅಮ್ಮನ ಹೊಟ್ಟೆಯಿಂದ ಭೂಮಿಗೆ ಬಂದ ಖುಷಿಯಲ್ಲಿ ಆನೆ ಮರಿ ಡ್ಯಾನ್ಸ್ ಮಾಡಿದ ವಿಡಿಯೋ ನಂತರದಲ್ಲಿ ಫುಲ್ ವೈರಲ್ ಆಗಿತ್ತು. ಇದೊಂದು ಹಳೆಯ ವಿಡಿಯೋವೇ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡುತ್ತಿದೆ. ಐಎಫ್ಎಸ್ ಅಧಿಕಾರಿ ಸುಶಾಂತಾ ನಂದಾ ಇದನ್ನು ಹಂಚಿಕೊಂಡಿದ್ದರು.  ಇಪ್ಪತ್ತು ನಿಮಿಷದ ಮರಿಯಾನೆ ತನ್ನ ಕಾಲಮೇಲೆ ನಿಂತು ತನ್ನದೇ ಲೋಕದಲ್ಲಿ ಸಂಚಾರ ಮಾಡುತ್ತಿದೆ. ಈ ಭಾವನೆ ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದ್ದಾರೆ.

 

ಲಕ್ಷಕ್ಕೂ ಅಧಿಕ ವೀವ್ ಪಡೆದುಕೊಂಡಿರುವ ವಿಡಿಯೋಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಗುಣಗಾನ ಬಂದಿದೆ. ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ನೀಡಿದ್ದ ದುರುಳರು ಆಕೆ ನೋವುಂಡು ಸಾಯುವಂತೆ ಮಾಡಿದ್ದರು. ಇದಾದ ಮೇಲೆಯೂ ದೇಶದಲ್ಲಿ ಪ್ರಾಣಿ ಹಿಂಸೆಯ ಸುಮಾರು ಘಟನೆಗಳು ವರದಿಯಾಗಿದ್ದವು. ಆದರೆ ಇಲ್ಲಿ ಮರಿಯಾನೆಯ  ತುಂಟಾಟವನ್ನು ಆಸ್ವಾದಿಸುವುದಕ್ಕೆ ಸಖತ್ ಮಜವಾಗಿದೆ.  

ಈ ಶಾಪ್‌ಗೆ ಮನುಷ್ಯರಂತೆ ವಿಸಿಟ್‌ ಕೊಡ್ತವೆ ಸಾಲು ಸಾಲು ಬೆಕ್ಕು ನಾಯಿಗಳು

ಇಲ್ಲೊಂದು ಬೆಕ್ಕು ನಾಯಿಯೊಂದಿಗೆ ಬರೀ ಆಟವಲ್ಲ, ತುಂಟಾಟವಾಡುತ್ತಿದೆ. ನಿದ್ರಿಸಿರುವ ಶ್ವಾನವನ್ನು ಕೈಯಲ್ಲಿ ತಟ್ಟಿ ಎಳಿಸುವ ಬೆಕ್ಕು. ಅದು ಎದ್ದು ನೋಡುತ್ತಿದ್ದಂತೆ ಅದಕ್ಕೆ ಕಾಣದಂತೆ ಮಾಯವಾಗುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬೆಕ್ಕಿನ ತುಂಟ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಣಿಗಳ ವಿಡಿಯೋಗಳು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವಷ್ಟು ಬೇರಾವುದು ಮಾಡಲು ಸಾಧ್ಯವಿಲ್ಲ. ನಾಯಿ ಮರಿಗಳು ಆಟವಾಡುವ ಮುದ್ದಾದ ವಿಡಿಯೋ, ಬೆಕ್ಕು ಮರಿಗಳ ತುಂಟಾಟ, ಅಲ್ಲದೇ ಆನೆ ಮರಿಗಳ ಮುದ್ದು ಚೆಲ್ಲಾಟ ಎಲ್ಲವೂ, ಕಣ್ಣು ಮನಸ್ಸು ಎರಡನ್ನು ಹಗುರವಾಗಿಸುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಇಲ್ಲಿ ಶ್ವಾನದೊಂದಿಗೆ ಬೆಕ್ಕಿನ ಕಣ್ಣಮುಚ್ಚಾಲೆಯಾಟ ಮನಸ್ಸಿಗೆ ಮುದ ನೀಡುತ್ತಿದೆ. 

ವೀಡಿಯೊದಲ್ಲಿ, ಬೆಕ್ಕು ಸ್ವಲ್ಪ ಮೋಜು ಮತ್ತು ಕಿಡಿಗೇಡಿತನ ಮಾಡಲು ನಿರ್ಧರಿಸಿದಂತಿದೆ.  ನಾಯಿಯೊಂದು ಮಂಚದ ಮೇಲೆ ಶಾಂತಿಯುತವಾಗಿ ಮಲಗಿದ್ದು, ಅಲ್ಲಿಗೆ ಬಂದ ಬೆಕ್ಕು ಮೊದಲು ತನ್ನ ಕೈಯನ್ನು ನಾಯಿಗೆ ಸ್ಪರ್ಶಿಸುವ ಮೂಲಕ ನಾಯಿಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತದೆ ಮತ್ತು ನಂತರ ಅಷ್ಟೇ ವೇಗವಾಗಿ  ಸೋಫಾದ ಕೆಳಗೆ ಅಡಗಿಕೊಳ್ಳುತ್ತದೆ.  ಇದರ ಸ್ಪರ್ಶಕ್ಕೆ ಒಮ್ಮೆ ತಲೆ ಮೇಲೆತ್ತಿದ ನಾಯಿ ಮತ್ತೆ ಅಲ್ಲೇ ಮಲಗುತ್ತದೆ. ಇತ್ತ ನಾಯಿ ಎಚ್ಚರಗೊಂಡಿದ್ದನ್ನು ಕುತೂಹಲದಿಂದ ಕದ್ದು ನೋಡುವ ಬೆಕ್ಕು ಅದು ಏಳುತ್ತಿದ್ದಂತೆ ಸೋಪಾದ ಕೆಳಗೆ ಅಡಗಿಕೊಳ್ಳುತ್ತದೆ. ಅಲ್ಲದೇ ಮತ್ತದೆ ತನ್ನ ತುಂಟಾಟವನ್ನು ಮುಂದುವರಿಸುತ್ತದೆ. ಎರಡನೇ ಬಾರಿ ಬೆಕ್ಕು ಇದೇ ರೀತಿ ಮಾಡಿದಾಗ ಎದ್ದ ನಾಯಿ ತನ್ನನ್ನು ಮುಟ್ಟಿದ್ಯಾರು ಎಂದು ಅಚ್ಚರಿಯಿಂದ ನೋಡಲು ಶುರು ಮಾಡುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!