ದಾಳಿ ಬಳಿಕ ಸಲ್ಮಾನ್‌ ರಶ್ದಿ ಒಂದು ಕಣ್ಣು, ಕೈ ನಿಷ್ಕ್ರಿಯ

Published : Oct 24, 2022, 04:59 PM IST
ದಾಳಿ ಬಳಿಕ ಸಲ್ಮಾನ್‌ ರಶ್ದಿ ಒಂದು ಕಣ್ಣು, ಕೈ ನಿಷ್ಕ್ರಿಯ

ಸಾರಾಂಶ

ಆ.12ರಂದು ನ್ಯೂಯಾರ್ಕಿನ ಚೌಟೌಕ್ಯೂ ಶಿಕ್ಷಣ ಸಂಸ್ಥೆಯೊಂದರಲ್ಲಿ ಭಾಷಣ ಮೇಲೆ ವೇದಿಕೆ ಏರಿದ ಭಾರತೀಯ ಮೂಲತ ಲೇಖಕ ಸಲ್ಮಾನ್ ರಶ್ಮಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ರಶ್ಮಿ ಆರೋಗ್ಯದ ಬಗ್ಗೆ ಇದೀಗ ಮಾಹಿತಿ ಹೊರ ಬಿದ್ದಿದೆ. 

ಮ್ಯಾಡ್ರಿಡ್‌ (ಅ.24): 2 ತಿಂಗಳ ಹಿಂದೆ ಅಮೆರಿಕದಲ್ಲಿ ಭಾಷಣ ಮಾಡುವಾಗ ಅನಾಮಿಕ ವ್ಯಕ್ತಿಯಿಂದ ದಾಳಿಗೆ ಒಳಗಾಗಿದ್ದ ಖ್ಯಾತ ಲೇಖಕ ಸಲ್ಮಾನ್‌ ರಶ್ದಿ (75), ತಮ್ಮ ಒಂದು ಕಣ್ಣು ಮತ್ತು ಕೈ ಕಳೆದುಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ. ಚೂರಿ ಇರಿತದಿಂದ ರಶ್ದಿ ಅವರ ಮುಖ, ಎದೆ ಭಾಗ, ಕೈಗೆ ಭಾರೀ ಅಳವಾದ ಗಾಯಗಳಾಗಿತ್ತು. ಹೀಗಾಗಿ ಅವರು ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಜೊತೆಗೆ ಕುತ್ತಿಗೆ ಭಾಗದಲ್ಲಿ ಮೂರು ಕಡೆ ತೀವ್ರವಾದ ಗಾಯಗಳಾಗಿದ್ದ ಕಾರಣ, ಅಲ್ಲಿ ಒಂದು ನರವನ್ನು ಕತ್ತರಿಸಲಾಗಿದ್ದು, ಅವರ ಒಂದು ಕೈ ಸ್ವಾಧೀನ ಕಳೆದುಕೊಂಡಿದೆ, ಎಂದು ಮೂಲಗಳನ್ನು ಉಲ್ಲೇಖಿಸಿ ‘ದ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ.

ರಶ್ಮಿ ಮೇಲೆ ನಡೆದ ಹಲ್ಲೆ:
ಮುಂಬೈ ಮೂಲದ ಲೇಖಕ ಸಲ್ಮಾನ್ ರಶ್ದಿ ಉಪನ್ಯಾಸ ನೀಡಲು ವೇದಿಕೆ ಹತ್ತಿದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ತೆರಳಿ, ಚಾಕು ಇರಿದ ಘಟನೆ ನ್ಯೂಯಾರ್ಕನ ಚೌಟೌಕ್ಯೂ ಶಿಕ್ಷಣ ಸಂಸ್ಥೆಯಲ್ಲಿ ನಡೆದಿತ್ತು. ಈ ಘಟನೆಯಿಂದ ರಶ್ದಿ ತೀವ್ರ ಗಾಯಕ್ಕೆ ತುತ್ತಾಗಿದ್ದು, ಆಸ್ಪತ್ರೆ ದಾಖಲಾಗಿಸಲಾಗಿತ್ತು. ಉಪನ್ಯಾಸ ನೀಡಲು ವೇದಿಕೆಗೆ ಆಗಮಿಸಿದ ಸಲ್ಮಾನ್ ರಶ್ದಿ ಅವರ ಪರಿಚಯವನ್ನು ಕಾರ್ಯಕ್ರಮ ಆಯೋಜಕರು ಮಾಡುತ್ತಿದ್ದರು. ಆ ವೇಳೆ ವೇದಿಕೆ ಹತ್ತಿದ ಅಪರಿಚಿತ ನೇರವಾಗಿ ಸಲ್ಮಾನ್ ರಶ್ದಿ ಬಳಿ ತೆರಳಿ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದ.  ತೀವ್ರ ಗಾಯಗೊಂಡ ಸಲ್ಮಾನ್ ರಶೀದಿ ವೇದಿಕೆಯಲ್ಲಿ ಕುಸಿದು ಬಿದ್ದಿದ್ದರು. ಆಗ ಕಾರ್ಯಕ್ರಮ ಆಯೋಜರು ವೇದಿಕೆಗೆ ಆಗಮಿಸಿ ಸಲ್ಮಾನ್ ರಶ್ದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆ.12ರಂದು ನಡೆದ ಈ ದಾಳಿಯಲ್ಲಿ ರಶ್ದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಖಚಿತಪಟ್ಟಿತ್ತಾದರೂ, ಅದರ ಪರಿಣಾಮ ಏನಾಗಿತ್ತು ಎಂಬುದು ಇದೇ ಮೊದಲ ಬಾರಿಗೆ ಬಹಿರಂಗವಾಗಿದೆ.

ನಾಲ್ಕು ಮದುವೆ, ನಾಲ್ಕು ವಿಚ್ಛೇದನ, 75 ವರ್ಷದ ಸಲ್ಮಾನ್‌ ರಶ್ದಿ ಜೀವನ!

ರಶ್ದಿಗೆ ಚೂರಿ ಇರಿತ ನಡೆಸಿದ ವ್ಯಕ್ತಿ ಶಿಯಾ ಮೂಲಭೂತವಾದಿ (Fundamendalist), ಇರಾನ್‌ ಬೆಂಬಲಿಗ ಎಂದು ಪತ್ತೆಯಾಗಿತ್ತು. ಹೀಗಾಗಿ, ದಶಕಗಳ ಹಿಂದೆ ‘ದ ಸಟಾನಿಕ್‌ ವರ್ಸಸ್‌’ (The Satanic Verses) ಕಾದಂಬರಿ ಬರೆದಿದ್ದಕ್ಕೆ ಪ್ರತಿಯಾಗಿ ಈ ಹತ್ಯೆ ಯತ್ನ ನಡೆದಿರಬಹುದು ಎಂದೇ ಶಂಕಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿಯೇ ಚೂರಿ ಇರಿದ ವ್ಯಕ್ತಿಯನ್ನು ನ್ಯೂರ್ಜೆಸಿ ಮೂಲದ ಹದಿ ಮತರ್‌, ಎಂದು ಗುರುತಿಸಲಾಗಿದೆ. ಈತ ರಶ್ದಿ ಹತ್ಯೆಗೆ ಕರೆ ಕೊಟ್ಟಿದ್ದ ಇರಾನ್‌ ಸರ್ಕಾರದ ಬೆಂಬಲಿಗನಾಗಿದ್ದ. ಜೊತೆಗೆ, ಇರಾನ್‌ ಸೇನೆಯ ವಿವಾದಿತ ‘ರೆವಲ್ಯೂಷನರಿ ಗಾರ್ಡ್‌ ಕೋರ್‌’ ಎಂಬ ಇಸ್ಲಾಮಿಕ್‌ ಪಡೆಯ ಬಗ್ಗೆ ಒಲವು ಇತ್ತು. ಅಲ್ಲದೇ ಈತ ತನ್ನ ಸಾಮಾಜಿಕ ಜಾಲತಾಣ  ಪುಟದಲ್ಲಿ ರಶ್ದಿ ಹತ್ಯೆಗೆ ಬಹಿರಂಗವಾಗಿ ಕರೆಕೊಟ್ಟಿದ್ದ ಇರಾನ್‌ನ ಸರ್ವೋಚ್ಚ ಧಾರ್ಮಿಕ ನಾಯಕನಾಗಿದ್ದ ಆಯತೊಲ್ಲಾ ಖಮೇನಿಯ ಫೋಟೋ ಹಾಕಿದ್ದ. ಆತನ ಎಲ್ಲಾ ಹಿಂದಿನ ಚಟುವಟಿಕೆಗಳು ರಶ್ದಿಗೆ ವಿರುದ್ಧವಾಗಿದ್ದು, ಇರಾನ್‌ ಪರವೇ ಇರುವುದು ಪ್ರಾಥಮಿಕ ತನಿಖೆ ಬಹಿರಂಗೊಳಿಸಿತ್ತು.

ಇರಾನ್‌ ಸ್ವಾಗತಿಸಿತ್ತು:
ಸಲ್ಮಾನ್‌ ರಶ್ದಿ ಅವರ ಮೇಲೆ ನಡೆದಿರುವ ಹಲ್ಲೆ ಕುರಿತು ಇರಾನಿನಲ್ಲಿ ಹಲವರು ಹರ್ಷ ವ್ಯಕ್ತಪಡಿಸಿದ್ದರು. ‘ನನಗೆ ಸಲ್ಮಾನ್‌ ರಶ್ದಿ ಯಾರು ಎಂಬುದು ಗೊತ್ತಿಲ್ಲ. ಆದರೆ ಇಸ್ಲಾಂ ಅನ್ನು ಅವಮಾನಿಸಿದ ಅವರ ಮೇಲೆ ಹಲ್ಲೆ ನಡೆದಿರುವುದು ಸಂತೋಷ ತಂದಿದೆ’ ಎಂದು ಇರಾನಿನ ಡೆಲಿವರಿ ಬಾಯ್‌ ಒಬ್ಬ ಹೇಳಿದ್ದು ಸದ್ದು ಮಾಡಿತ್ತು.

ಲೇಖಕ ಸಲ್ಮಾನ್‌ ರಶ್ದಿ ಗಂಭೀರ, ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!

ರಶ್ದಿ ಹತ್ಯೆ ಯತ್ನ, ಬದುಕಿದ್ದು ಅಚ್ಚರಿ
ನ್ಯೂಯಾರ್ಕ್‌ನಲ್ಲಿ ತನ್ನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಭಾರತಿಯ ಮೂಲದ ಲೇಖಕ ಸಲ್ಮಾನ್‌ ರಶ್ದಿ ಬದುಕಿ ಉಳಿದಿದ್ದು, ಅಚ್ಚರಿ ಎಂದು ದಾಳಿಕೋರ ಹದಿ ಮತರ್‌ ಹೇಳಿದ್ದ. ಜೈಲಿಂದಲೇ ನ್ಯೂಯಾರ್ಕ್ ಪೋಸ್ಟ್‌ ಪತ್ರಿಕೆಯೊಂದಿಗೆ ಮಾತನಾಡಿದ ಮತರ್‌, ‘ಸಲ್ಮಾನ್‌ ರಶ್ದಿ ಒಬ್ಬ ಒಳ್ಳೆ ವ್ಯಕ್ತಿಯಲ್ಲ. ಇಸ್ಲಾಂ ಧರ್ಮದ ಮೇಲೆ ತಮ್ಮದೇ ಶೈಲಿಯಲ್ಲಿ ನೀಚ ಶಬ್ದಗಳಿಂದ ದಾಳಿ ಮಾಡಿದ್ದಾರೆ. ಇಸ್ಲಾಂ ಮೇಲಿನ ನಂಬಿಕೆಗೆ ಧಕ್ಕೆ ತರುವಂತೆ ಸಾಹಿತ್ಯ ರಚಿಸಿದ್ದರು,’ ಎಂಬ ಹೇಳಿಕ ಕೊಟ್ಟಿದ್ದ.

ರಶ್ದಿ ಲೇಖಿತ ‘ದಿ ಸಟಾನಿಕ್‌ ವರ್ಸಸ್‌’ ಪುಸ್ತಕ ಬಿಡುಗೊಂಡೆ ಬಳಿಕ ಇರಾನ್‌ನ (Iran) ನಾಯಕ ಅಯ್‌ತೊಲ್ಲಾ ರುಹೊಲ್ಲಾ ಖೋಮೆನಿ ರಶ್ದಿ ಹತ್ಯೆಗೆ ಕರೆ ನೀಡಿದ್ದ. ‘ನಾಯಕ ಖೋಮೆನಿ ತತ್ವಗಳನ್ನು ನಾನು ಪಾಲಿಸಿರುವುದಾಗಿಯೂ ಹೇಳಿ ಕೊಂಡಿದ್ದ. ನ್ಯೂಜೆರ್ಸಿ ನಿವಾಸಿಯಾದ ಮತರ್‌ ತನಗೆ ಹಾಗೂ ಇರಾನ್‌ನ ಸಂಘಟನೆಗಳಿಗೆ ಯಾವುದೇ ಸಂಬಂಧ ಇಲ್ಲ. ಅಲ್ಲದೇ ತಾನು ಸಟಾನಿಕ್‌ ವರ್ಸಸ್‌ನ ಕೆಲ ಪುಟಗಳನ್ನು ಓದಿರುವುದಾಗಿ ಹೇಳಿ ಕೊಂಡಿದ್ದ.’

ಬೂಕರ್‌ ಪ್ರಶಸ್ತಿ (Booker Award) ವಿಜೇತ, ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ ಈ ಬಾರಿಯ ಸಾಹಿತ್ಯ ನೊಬೆಲ್‌ (Nobel) ಪ್ರಶಸ್ತಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಒಂದು ವೇಳೆ ರಶ್ದಿ ಈ ಪ್ರಶಸ್ತಿಯನ್ನು ಗೆದ್ದಿದ್ದರೆ, ರವೀಂದ್ರನಾಥ ಟ್ಯಾಗೋರ್‌ ಅವರ ಬಳಿಕ ನೊಬೆಲ್‌ ಗೆದ್ದ ಭಾರತೀಯ ಎನಿಸಿಕೊಳ್ಳುತ್ತಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ