ಯಂಗ್ ಸೂಕ್ ಸಮಾಧಿಯಿಂದ ಹೊರ ಬಂದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ, ಆಕೆಯ ದೇಹದ ಹಲವು ಭಾಗಗಳಿಗೆ ಆಕೆಯನ್ನು ಡಕ್ಟ್ ಟೇಪ್‌ನಿಂದ ಸುತ್ತಲಾಗಿತ್ತು. ಪೊಲೀಸರು ಬಚಾವ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆ್ಯಪಲ್ (Apple) ಕಂಪನಿಯ ಸ್ಮಾರ್ಟ್‌ಫೋನ್ (ಐಫೋನ್) (iPhone) ಅಂದರೆ ಹಲವರಿಗೆ ಪಂಚಪ್ರಾಣ. ಹೊಸ ಮೊಬೈಲ್, ಹೊಸ ವರ್ಷನ್ ಬರುತ್ತಿದ್ದಂತೆ ಅದನ್ನು ಕೊಳ್ಳಲು ಮುಗಿಬೀಳುತ್ತಾರೆ. ಅದೇ ರೀತಿ, ಆ್ಯಪಲ್‌ನ ಮ್ಯಾಕ್ (Mac) ಲ್ಯಾಪ್‌ಟಾಪ್, ವಾಚ್ ಕೊಳ್ಳಲು ಸಹ ಹಲವರು ನಾ ಮುಂದು ತಾ ಮುಂದು ಎನ್ನುತ್ತಾರೆ. ಅದೇ ಆ್ಯಪಲ್ ವಾಚ್ (Apple Watch) ಈಗ ಒಬ್ಬರು ಮಹಿಳೆಯ ಜೀವ ಕಾಪಾಡಿದೆ. ಪತಿ ಆಕೆಯನ್ನು ಜೀವಂತ ಸಮಾಧಿ (Buried Alive) ಮಾಡಿದ್ದರೂ, ಆಕೆ ಕಷ್ಟ ಪಟ್ಟುಕೊಂಡು ಅದರಿಂದ ಹೊರಬಂದಿದ್ದಾಳೆ. ಅಲ್ಲದೆ, ಆ್ಯಪಲ್ ವಾಚ್ ಸಹಾಯದಿಂದ ಪೊಲೀಸರ ನೆರವು ಪಡೆದುಕೊಂಡಿದ್ದಾಳೆ.
ಅಮೆರಿಕದ (United States of America) ವಾಷಿಂಗ್ಟನ್‌ನಲ್ಲಿ (Washington) ಇತ್ತೀಚೆಗೆ ಈ ಘಟನೆ ನಡೆದಿದ್ದು, ಜೀವಂತವಾಗಿ ಸಮಾಧಿ ಮಾಡಿದ ಮಹಿಳೆ ತಪ್ಪಿಸಿಕೊಂಡು ತನ್ನ ಆ್ಯಪಲ್ ವಾಚ್‌ನಿಂದ ಸಹಾಯಕ್ಕಾಗಿ ಕರೆ ಮಾಡಿದ್ದಾಳೆ. ಮಹಿಳೆಯನ್ನು ಚಾಕುವಿನಿಂದ ಇರಿದು, ಆಕೆಯನ್ನು ಕಟ್ಟಿ ಹಾಕಿ, ಸಮಾಧಿಯಲ್ಲಿ ಅವಳ ಪತಿ ಜೀವಂತವಾಗಿ ಹೂಳಿದ್ದಾನೆ ಎಂದು ವರದಿಯಾಗಿದೆ. ಆದರೆ ಆಕೆ, ಸಮಾಧಿಯಿಂದ ಹೊರಬರಲು, ಮಣ್ಣನ್ನು ತೆಗೆದು ಹೊರಬಂದಿದ್ದು, ಮತ್ತು ಸಹಾಯಕ್ಕಾಗಿ ತನ್ನ ಆ್ಯಪಲ್ ವಾಚ್‌ನೊಂದಿಗೆ 911 ಗೆ ಕರೆ ಮಾಡಿದಳು ಎಂದು ತಿಳಿದುಬಂದಿದೆ.
undefined
ಇದನ್ನು ಓದಿ: ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ Apple Watch
ವರದಿಗಳ ಪ್ರಕಾರ, ಈ ಘಟನೆಯು ಅಕ್ಟೋಬರ್ 16 ರಂದು ಮಧ್ಯಾಹ್ನ ಸಂಭವಿಸಿದೆ. 42 ವರ್ಷದ ಮಹಿಳೆಯನ್ನು ಪತ್ತೆ ಮಾಡಿದ ಅಧಿಕಾರಿಗಳು ಮಹಿಳೆಯನ್ನು ಆಕೆಯ ಸ್ವಂತ ಪತಿಯೇ ತನ್ನ ಮನೆಯಿಂದ ಅಪಹರಿಸಿದ್ದಾನೆ ಎಂದು ಮಾಹಿತಿ ನೀಡಿದಳು. ತನ್ನ ನಿವೃತ್ತಿ ಹಣವನ್ನು ನೀಡುವುದಕ್ಕಿಂತ ನಿನ್ನನ್ನು ಕೊಲ್ಲುವುದಾಗಿ ಆತ ಹೇಳಿದ್ದ ಎಂದೂ ಮಹಿಳೆ ಹೇಳಿಕೊಂಡಿದ್ದಾಳೆ.
ಈ ಮಹಿಳೆಯನ್ನು 42 ವರ್ಷದ ಯಂಗ್ ಸೂಕ್ ಆನ್ ಎಂದು ಗುರುತಿಸಲಾಗಿದೆ. ಆಕೆ 53 ವರ್ಷ ವಯಸ್ಸಿನ ಚೇ ಕ್ಯೋಂಗ್ ಆನ್ ಅವರನ್ನು ವಿವಾಹವಾಗಿದ್ದಾಳೆ. ಆದರೆ, ತನ್ನ ತಂದೆ - ತಾಯಿಯೊಂದಿಗೆ ವಾಸಿಸುವುದಿಲ್ಲ. ಆದರೂ, ಒಮ್ಮೊಮ್ಮೆ ಮನೆಗೆ ಬರುತ್ತಾರೆ ಎಂದು ಮಗಳು ಹೇಳಿಕೊಂಡಿದ್ದಾಳೆ. ಇದೇ ರೀತಿ, ಅಕ್ಟೋಬರ್ 16 ರ ಭಾನುವಾರ ಮಧ್ಯಾಹ್ನ 1.00 ಗಂಟೆಗೆ ಪತ್ನಿಯ ಮನೆಗೆ ಬಂದ ಮಹಿಳೆ ಹಣದ ವಿಷಯದಲ್ಲಿ ಜಗಳವಾಡಿದ್ದು, ಹಲ್ಲೆಯನ್ನೂ ಮಾಡಿದ್ದಾನೆ. ಅವರಿಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಹಣ ನೀಡುವ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.
ಥರ್ಸ್ಟನ್ ಕೌಂಟಿಯ ಸುಪೀರಿಯರ್ ಕೋರ್ಟ್ ಮಾಹಿತಿ ಪ್ರಕಾರ, ಯಂಗ್ ಸೂಕ್ ಸಮಾಧಿಯಿಂದ ಹೊರ ಬಂದ ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ, ಆಕೆಯ ದೇಹದ ಹಲವು ಭಾಗಗಳಿಗೆ ಆಕೆಯನ್ನು ಡಕ್ಟ್ ಟೇಪ್‌ನಿಂದ ಸುತ್ತಲಾಗಿತ್ತು. ಪೊಲೀಸರು ಬಚಾವ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಬ್ಬಾ.... ಆಪಲ್ ವಾಚ್‌ನಿಂದಲೇ ಜೀವ ಉಳಿಯಿತು!
ಇನ್ನು, ಈ ಪ್ರಕರಣ ಸಂಬಂಧ ಪತಿ ಛೇ ಕ್ಯೋಂಗ್ ಆನ್ ಅನ್ನು ಕೌಂಟಿ ಜೈಲಿಗೆ ಹಾಕಲಾಗಿದ್ದು, ಹಾಗೂ ಜಾಮೀನು ನಿರಾಕರಣೆಯಾಗಿದೆ ಎಂದೂ ವರದಿಯಾಗಿದೆ. ಕೊಲೆಯ ಯತ್ನ, ಅಪಹರಣದ ಆರೋಪಗಳನ್ನು ಆತ ಎದುರಿಸುತ್ತಿದ್ದಾನೆ ಎಂದೂ ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ.