ಪಾಕಿಸ್ತಾನ ಸಂಸತ್‌ಗೆ ಈಗ ಬೆಕ್ಕುಗಳಿಂದ ಭದ್ರತೆ ಒದಗಿಸಲಾಗುತ್ತಿದೆ. ಇದಕ್ಕಾಗಿ ಬೆಕ್ಕುಗಳ ನೇಮಕ ಮಾಡಲಾಗಿದ್ದು, 12 ಲಕ್ಷ ರೂಪಾಯಿಗಳನ್ನು ಇವುಗಳ ಮೇಲೆ ವೆಚ್ಚ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
ಕರಾಚಿ: ಪಾಕಿಸ್ತಾನ ಸಂಸತ್‌ಗೆ ಈಗ ಬೆಕ್ಕುಗಳಿಂದ ಭದ್ರತೆ ಒದಗಿಸಲಾಗುತ್ತಿದೆ. ಇದಕ್ಕಾಗಿ ಬೆಕ್ಕುಗಳ ನೇಮಕ ಮಾಡಲಾಗಿದ್ದು, 12 ಲಕ್ಷ ರೂಪಾಯಿಗಳನ್ನು ಇವುಗಳ ಮೇಲೆ ವೆಚ್ಚ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಬೆಕ್ಕುಗಳ ನೇಮಕಕ್ಕೆ ಮುಖ್ಯ ಕಾರಣವಾಗಿದ್ದು, ಸಂಸತ್‌ನಲ್ಲಿ ಇಲಿಗಳ ತೀವ್ರ ಕಾಟ, ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಇಲಿಗಳ ಹಾವಳಿ ತೀವ್ರವಾಗಿದ್ದು, ಪ್ರಮುಖ ಅತ್ಯಂತ ಗೌಪ್ಯವೆನಿಸುವ ಫೈಲ್‌ಗಳನ್ನು ಇಲಿಗಳು ಕತ್ತರಿಸಿ ಹಾಕಿವೆ ಎಂದು ವರದಿ ಆಗಿದೆ. ಹೀಗಾಗಿ ಈ ದಾಖಲೆಗಳನ್ನು ರಕ್ಷಿಸುವ ಸಲುವಾಗಿ ಪಾಕಿಸ್ತಾನದ ಕ್ಯಾಪಿಟಲ್ ಡೆವಲಪ್‌ಮೆಂಟ್ ಅಥಾರಿಟಿಯೂ ಬೆಕ್ಕುಗಳ ನೇಮಕಕ್ಕೆ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದೆ ಎಂದು ವರದಿ ಆಗಿದೆ.
ಸಂಸತ್ ಕಟ್ಟಡಗಳಿಗೂ ಇಲಿಗಳಿಂದ ಹಾನಿ
undefined
ಪಾಕಿಸ್ತಾನದ ಪಾರ್ಲಿಮೆಂಟ್ ಕಟ್ಟಡವೂ ಕೂಡ ಇಲಿಗಳ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದು, ಕಟ್ಟಡದಲ್ಲಿ ಹೆಚ್ಚಾಗಿರುವ ಇಲಿಗಳು ಕಟ್ಟಡಕ್ಕೆ ಸಾಕಷ್ಟು ಹಾನಿ ಮಾಡುತ್ತಿವೆ ಎಂದು ವರದಿ ಆಗಿದೆ. ಪಾರ್ಲಿಮೆಂಟ್‌ನ ಸಚಿವಾಲಯದಲ್ಲಿ ಇರಿಸಲಾದ ಫೈಲ್‌ಗಳನ್ನು ಇವು ಮೆಲ್ಲನೇ ದೂರ ಎಳೆದುಕೊಂಡು ಹೋಗಿ ಕತ್ತರಿಸಿ ಹಾಕುತ್ತಿವೆ. ಬರೀ ಇಷ್ಟೇ ಅಲ್ಲ ಸಂಸತ್‌ನಲ್ಲಿರುವ ಕರೆಂಟ್ ವೈರ್‌ಗಳು ಹಾಗೂ ಇತರ ವೈರ್‌ಗಳನ್ನು ಕಡಿದು ಹಾಕಿದ್ದಲ್ಲದೇ ಹಲವು ಸ್ಥಳಗಳಲ್ಲಿ ಸಂಸತ್‌ನ ಗೋಡೆಯನ್ನು ಕೂಡ ಕೊರೆದು ಹಾನಿ ಮಾಡಿವೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ್ದ ಚಟ್ನಿಯಲ್ಲಿ ಮುಳುಗೇಳುತ್ತಾ ಈಜಾಡಿದ ಇಲಿ: ವೀಡಿಯೋ ವೈರಲ್
ಹೀಗಾಗಿ ಈ ಇಲಿಗಳಿಗೆ ಮುಕ್ತಿ ನೀಡಲು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ಇಲಿಗಳನ್ನು ಈ ಸ್ಥಳದಿಂದ ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ. ಈ ಕಾರ್ಯಕ್ಕೆ ಬೆಕ್ಕುಗಳನ್ನು ನೇಮಕ ಮಾಡಿದ್ದಲ್ಲದೇ ಇಲಿಗಳನ್ನು ಹಿಡಿಯುವ ಬೋನ್‌ಗಳನ್ನು ಗಮ್ ಪ್ಲೇಟ್‌ಗಳನ್ನು ಕೂಡ ಇಡಲಾಗಿದೆ ಎಂದು ಕ್ಯಾಪಿಟಲ್ ಡೆವಲಪ್‌ಮೆಂಟ್ ಅಥಾರಿಟಿ ಹೇಳಿದೆ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನ
ಪಾಕಿಸ್ತಾನವೂ ಪ್ರಸ್ತುತ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಹೀಗಾಗಿ ಇತ್ತೀಚೆಗೆ ಪಾಕಿಸ್ತಾನ ಅಲ್ಲಿರುವ ಕತ್ತೆಗಳನ್ನು ಮಾರಾಟ ಮಾಡಿ ಆದಾಯ ಗಳಿಸುವ ಯೋಜನೆ ರೂಪಿಸಿತ್ತು. ಇಲ್ಲಿ ಕೇವಲ ಒಂದೇ ವರ್ಷದಲ್ಲಿ 1 ಲಕ್ಷ ಇದ್ದ ಕತ್ತೆಗಳ ಸಂಖ್ಯೆ 59 ಲಕ್ಷಕ್ಕೆ ಏರಿಕೆಯಾಗಿತ್ತು. ಹೀಗಾಗಿ ಪಾಕಿಸ್ತಾನ ಇಲ್ಲಿರುವ ಕತ್ತೆಗಳನ್ನು ಚೀನಾಗೆ ರಫ್ತು ಮಾಡಲು ಮುಂದಾಗಿತ್ತು. ಇದು ಕೇವಲ ಜಾನುವಾರು ಸಾಕಾಣೆ ಮಾಡುವವರ ಆದಾಯವನ್ನು ಮಾತ್ರ ಹೆಚ್ಚಿಸಿದ್ದಲ್ಲ, ಜೊತೆಗೆ ದೇಶದಲ್ಲಿ ವಿದೇಶಿ ಕರೆನ್ಸಿ ಒಳಹರಿವು ಹೆಚ್ಚುವಂತೆ ಮಾಡಿತ್ತು. ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ. ಜೊತೆಗೆ ಇಲ್ಲಿ ಸರ್ಕಾರಿ ಕಟ್ಟಡಗಳನ್ನು ಕೂಡ ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಿ ಹಣ ಗಳಿಕೆ ಮಾಡಲಾಗುತ್ತಿದೆ
ಚೀನಾ ಟು ಮೆಕ್ಸಿಕೋ: ವಿಶ್ವದ ಪ್ರಸಿದ್ಧ ಅಂತಾರಾಷ್ಟ್ರೀಯ ಗಡಿಗಳಿವು