ಟರ್ಕಿಯ ಇಸ್ತಾಂಬುಲ್‌ನಲ್ಲಿ ಬಟ್ ಲಿಫ್ಟ್ ಸರ್ಜರಿಗೆ ಒಳಗಾದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಬ್ರಿಟನ್‌ನ 38 ವರ್ಷದ ಕೆಡೆಲ್ ಬ್ರೌನ್ ಹೀಗೆ ಬಟ್ ಲಿಫ್ಟ್ ಸರ್ಜರಿ ವೇಳೆ ಸಾವನ್ನಪ್ಪಿದ ಮಹಿಳೆ.
ಬ್ರಿಟನ್: ಟರ್ಕಿಯ ಇಸ್ತಾಂಬುಲ್‌ನಲ್ಲಿ ಬಟ್ ಲಿಫ್ಟ್ ಸರ್ಜರಿಗೆ ಒಳಗಾದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಬ್ರಿಟನ್‌ನ 38 ವರ್ಷದ ಕೆಡೆಲ್ ಬ್ರೌನ್ ಹೀಗೆ ಬಟ್ ಲಿಫ್ಟ್ ಸರ್ಜರಿ ವೇಳೆ ಸಾವನ್ನಪ್ಪಿದ ಮಹಿಳೆ. ಘಟನೆಯ ನಂತರ ಅವರ ದೇಹದಿಂದ ಹೃದಯ, ಮೆದುಳು ಸೇರಿದಂತೆ ಇತರ ಅಂಗಾಂಗಗಳು ನಾಪತ್ತೆಯಾಗಿವೆ ಎಂದು ಮಹಿಳೆಯ ಸೋದರಿ ಆರೋಪಿಸಿದ್ದಾರೆ. ಕೆಡೆಲ್ ಬ್ರೌನ್ ಟರ್ಕಿಯ ಇಸ್ತಾಂಬುಲ್‌ನಲ್ಲಿ ಬ್ರೆಜಿಲಿಯನ್ ಶೈಲಿಯ ಬಟ್ ಲಿಫ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಳೆ ಈ ದುರಂತ ಸಂಭವಿಸಿದೆ.
ಈ ಶಸ್ತ್ರಚಿಕಿತ್ಸೆಗಾಗಿ ಕೆಡೆಲ್ ಬ್ರೌನ್ ಟರ್ಕಿಯ ಆಸ್ಪತ್ರೆಗೆ 5,400 ಪೌಂಡ್ ಹಣ ನೀಡಿ ಮಮ್ಮಿ ಮೊಟ್ ಎಂಬ ಪ್ಯಾಕೇಜ್‌ನ್ನು ಪಡೆದಿದ್ದರು. ಈ ಪ್ಯಾಕೇಜ್ ಬ್ರೆಜಿಲಿಯನ್ ಬಟ್ ಲಿಫ್ಟ್ ಸರ್ಜರಿ ( ದೇಹದ ಹಿಂಭಾಗಕ್ಕೆ ಸುಂದರ ಆಕಾರ ನೀಡುವ ಶಸ್ತ್ರಚಿಕಿತ್ಸೆ) , ಟಮ್ಮಿ ಟಕ್ ಹಾಗೂ ಸ್ತನ ವರ್ಧನೆ ಚಿಕಿತ್ಸೆಯನ್ನು ಒಳಗೊಂಡಿತ್ತು. ಆದರೆ ಬ್ರೆಜಿಲಿಯನ್ ಬಟ್ ಲಿಫ್ಟ್ ಸರ್ಜರಿಗೆ ಎಂದು ಆಪರೇಷನ್ ಥಿಯೇಟರ್ ಒಳಗೆ ಹೋದ ಅವರು ಮತ್ತೆ ಜೀವಂತವಾಗಿ ವಾಪಸ್ ಹೊರಗೆ ಬಂದಿಲ್ಲ ಎಂದು ಅವರ ಸೋದರಿ 40 ವರ್ಷದ ಲಿಯನ್ನೆ(Leanne) ಕಣ್ಣೀರಿಟ್ಟಿದ್ದಾರೆ. ಈ ಶಸ್ತ್ರಚಿಕಿತ್ಸೆ ತನ್ನ ಜೀವನವನ್ನು ಬದಲಿಸುತ್ತದೆ. ನಾನು ಬಹಳ ಸುಂದರವಾಗಿ ಕಾಣುವೆ ಎಂದು ಅವರು ಶಸ್ತ್ರಚಿಕಿತ್ಸೆಗೂ ಮೊದಲು ಬಹಳ ಖುಷಿಯಿಂದ ಇದ್ದರು. ಆದರೆ ಮಾರ್ಚ್ 26 ರಂದು ಇಸ್ತಾನ್‌ಬುಲ್‌ನಲ್ಲಿರುವ ಕ್ಲಿನಿಕ್ ಒಂದರಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯ ನಂತರ ಅವರು ವಾಪಸ್ ಹೊರಗೆ ಬಂದಿಲ್ಲ ಎಂದು ಲಿಯನ್ನೆ ಬೇಸರ ವ್ಯಕ್ತಪಡಿಸಿದ್ದಾರೆ.
undefined
ಯಂಗ್ ಆಗಿ ಕಾಣಲು ನಟಿಯರು ಮಾತ್ರವಲ್ಲ ಈ ನಟರೂ ಕಾಸ್ಮೆಟಿಕ್ ಸರ್ಜರಿ ಮೊರೆ ಹೋಗಿದ್ದಾರೆ!
ಕಸಾಯಿಖಾನೆಯಂತಿದೆ ಕ್ಲಿನಿಕ್ ಎಂದ ಸೋದರಿ
ಘಟನೆಗೆ ಸಂಬಂಧಿಸಿದಂತೆ ITVಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಕೆಡೆಲ್ ಬ್ರೌನ್ ಅವರ ಸೋದರಿ ಲಿಯನ್ನೆ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ನಡೆಸಿದ ಕ್ಲಿನಿಕ್ ಕಸಾಯಿಖಾನೆಯಂತಿತ್ತು ಎಂದು ದೂರಿದ್ದಾರೆ. ನನ್ನ ಸೋದರಿಯ ಮರಣದ ನಂತರ ಆಸ್ಪತ್ರೆ ಸಿಬ್ಬಂದಿ ಒಂದು ಲಕೋಟೆಯ ತುಂಬ ಹಣವನ್ನು ನೀಡಿ ಬಳಿಕ ವಾಪಸ್ ಮನೆಗೆ ತೆರಳಲು ಟಿಕೆಟ್ ಬುಕ್ ಮಾಡಿ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ. ಶಸ್ತ್ರಚಿಕಿತ್ಸೆಗೆಂದು ಒಳಗೆ ಹೋದ ಕೆಡೆಲ್ ಬ್ರೌನ್ ಬಗ್ಗೆ 10 ಗಂಟೆಗಳಾದರೂ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ, ಆಕೆಯ ಬಗ್ಗೆ ಕೇಳಿದಾಗಲೆಲ್ಲಾ ಆಕೆ ಶೀಘ್ರದಲ್ಲೇ ಹೊರಗೆ ಬರುತ್ತಾಳೆ ಎಂದು ಹೇಳುತ್ತಲೇ ಇದ್ದರು. ಆದರೆ 10 ಗಂಟೆಗಳ ಕಾಯುವಿಕೆಯ ನಂತರ ಆಕೆ ಬದುಕಿಲ್ಲ ಎಂದು ಮಾಹಿತಿ ನೀಡಿದರು ಎಂದು ಸೋದರಿ ಲಿಯನ್ನೆ ಕಣ್ಣೀರಿಟ್ಟಿದ್ದಾರೆ.
ಮಿದುಳು ಸೇರಿ ದೇಹದ ಭಾಗಗಳು ನಾಪತ್ತೆ
ಕಡೆಲ್ ಬ್ರೌನ್ ಅವರ ಸಾವಿನ ನಂತರ ಆಕೆಯ ಮೃತದೇಹವನ್ನು ನೋಡುವುದಕ್ಕೂ ಆಸ್ಪತ್ರೆಯವರು ಅವಕಾಶ ನೀಡಿಲ್ಲ, ಘಟನೆಯ ಮರುದಿನವೇ ಲಿಯನ್ನೆ ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿ ಮನೆಗೆ ಕಳುಹಿಸಿದರು. ಬಳಿಕ ವಿಮಾನದಲ್ಲಿ ಕೆಡೆಲ್ ಅವರ ದೇಹ ಬ್ರಿಟನ್‌ಗೆ ಬಂದಾಗ ಆ ಆಕೆಯ ದೇಹದಲ್ಲಿ ಮೆದುಳು, ಶ್ವಾಸಕೋಶ ಮತ್ತು ಹೃದಯದ ದೊಡ್ಡ ಭಾಗಗಳು ಕಾಣೆಯಾಗಿತ್ತು ಎಂದು ಲಿಯನ್ನೆ ಹೇಳಿದ್ದಾರೆ. ಅವರು ಅವಳ ದೇಹವನ್ನು ಹಿಂದಿರುಗಿಸಿದಾಗ, ಅವರು ಅವಳ ಹೃದಯ ಮತ್ತು ಕರುಳಿನ ಭಾಗಗಳನ್ನು ಇಟ್ಟುಕೊಂಡಿದ್ದಾರೆ. ಬಹುಶಃ ಇದುವೇ ಆಕೆಯ ಸಾವಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಬಹುದಿತ್ತೇನೋ,, ಆದರೆ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಅವರು ನಮಗೆ ಸಹಕರಿಸುತ್ತಿಲ್ಲ ಲಿಯನ್ನೆ ಹೇಳಿದರು.
ಕತ್ರಿನಾ ಕೈಫ್ ಮೂಗಿನ ಸರ್ಜರಿ ತಪ್ಪಾಯ್ತು! ಫ್ಯಾನ್ಸ್‌ಗೆ ಬೇಜಾರು, ನಟಿ ಟ್ರೋಲ್‌ಗೆ ಗುರಿ!
ಆದರೆ ಲಿಯನ್ನೆ ಅವರ ಆರೋಪಗಳನ್ನು ಕ್ಲಿನಿಕ್ ಸಿಬ್ಬಂದಿ ನಿರಾಕರಿಸಿದ್ದಾರೆ. ಘಟನೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ, ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಸಂಕೀರ್ಣ ಸಮಸ್ಯೆಗಳಿಂದಾಗಿ ಅವರು ಸಾವನ್ನಪ್ಪಿದರು. ಶಸ್ತ್ರಚಿಕಿತ್ಸೆ ವೇಳೆ ಕೊಬ್ಬಿನಾಂಶ ಅವರ ರಕ್ತನಾಳವನ್ನು ನಿರ್ಬಂಧಿಸಿರಬಹುದು ಈ ಶಸ್ತ್ರಚಿಕಿತ್ಸೆಯಲ್ಲಿ ಈ ರೀತಿಯ ಅಪಾಯಕಾರಿ ಅಂಶವಿದೆ ಎಂದು ಕ್ಲಿನಿಕ್‌ನ ವಕ್ತಾರರು ಹೇಳಿದ್ದಾರೆ.