International
ಚೀನಾದ ಮಹಾಗೋಡೆಯಾಗಿರಲಿ ಅಥವಾ ಭಾರತ-ಪಾಕಿಸ್ತಾನ ಗಡಿಯಾಗಿರಲಿ, ವಿಶ್ವದ ಕೆಲವು ಗಡಿಗಳು ತಮ್ಮ ವಿಶೇಷ ಪ್ರಾಮುಖ್ಯತೆಯಿಂದಾಗಿ ಸದಾ ಚರ್ಚೆಯಲ್ಲಿವೆ. ಅಂತಹ 10 ಅತ್ಯಂತ ಪ್ರಸಿದ್ಧ ಗಡಿಗಳ ಬಗ್ಗೆ ತಿಳಿಯೋಣ.
ಚೀನಾದ ಮಹಾಗೋಡೆಯನ್ನು ಮಂಗೋಲಿಯಾ ಮತ್ತು ಉತ್ತರ ಕೊರಿಯಾದ ಗಡಿಯಲ್ಲಿ ನಿರ್ಮಿಸಲಾಗಿದೆ. ಈ ಗಡಿ 21,196 ಕಿ.ಮೀ. ಉದ್ದವನ್ನು ಹೊಂದಿದೆ.
ಅಮೆರಿಕಾ - ಮೆಕ್ಸಿಕೊ ಗಡಿ ವಿಶ್ವದ ಅತ್ಯಂತ ಸುರಕ್ಷಿತ ಗಡಿಗಳಲ್ಲಿ ಒಂದು. ಮೆಕ್ಸಿಕೊದಿಂದ ಅಮೆರಿಕಾಗೆ ಮಾದಕವಸ್ತು ಕಳ್ಳಸಾಗಣೆ ಕಾರಣಕ್ಕೆ ಇಲ್ಲಿ ಕಠಿಣ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರ ಉದ್ದ 3,145 ಕಿ.ಮೀ.
ಭಾರತ ಮತ್ತು ಪಾಕಿಸ್ತಾನದ ನಡುವೆ 3,323 ಕಿ.ಮೀ ಉದ್ದದ ಗಡಿಯಿದೆ. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ಗಡಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ನಡುವಿನ ಗಡಿಯನ್ನು DMZ (ಡೀಮಿಲಿಟರೈಸ್ಡ್ ವಲಯ) ಎಂದು ಕರೆಯಲಾಗುತ್ತದೆ. ಇದರ ಉದ್ದ 250 ಕಿ.ಮೀ.
2ನೇ ಮಹಾಯುದ್ಧದಲ್ಲಿ ಜರ್ಮನಿ ಸೋತ ನಂತರ ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ.ವಿಭಜಿಸಲು ಈ ಬರ್ಲಿನ್ ಗೋಡೆ ಕಟ್ಟಲಾಯ್ತು. ಇದರ ಉದ್ದ 155 ಕಿ.ಮೀ. ಜರ್ಮನಿಯ ಏಕೀಕರಣದ ನಂತರ ಇದನ್ನು ಕೆಡವಲಾಯಿತು.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಗಡಿಯಲ್ಲಿ ಮಿಲಿಟರಿ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದರ ಉದ್ದ 515 ಕಿ.ಮೀ.
ದಕ್ಷಿಣ ಆಫ್ರಿಕಾ ಮತ್ತು ಮೊಜಾಂಬಿಕ್ ನಡುವಿನ ಗಡಿಯು 500 ಕಿಲೋಮೀಟರ್ ಉದ್ದವಿದೆ.
ಅರ್ಜೆಂಟೀನಾ ಮತ್ತು ಚಿಲಿ ಗಡಿಯು 5,300 ಕಿ.ಮೀ ಉದ್ದವಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯು 1974 ಕಿ.ಮೀ ಉದ್ದವಿದೆ. ಎರಡೂ ದೇಶಗಳ ನಡುವೆ ಪ್ರಸ್ತುತ ಯುದ್ಧ ನಡೆಯುತ್ತಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ಎಂಬ ಗಡಿಯಿದೆ. ಇದರ ಉದ್ದ 720 ಕಿ.ಮೀ.