ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?

ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?

Published : Apr 03, 2026, 01:45 PM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಮುಂದಿನ 2-3 ವಾರಗಳಲ್ಲಿ ಭೀಕರ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ, ಇರಾನ್‌ನ IRGC ಸೇನೆಯು ತಮ್ಮ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯವನ್ನು ಕಡೆಗಣಿಸದಂತೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. 

ವಾಷಿಂಗ್ಟನ್‌ (ಏ.3): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು ಜಾಗತಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಇರಾನ್‌ ಯುರೇನಿಯಂ ವಶಕ್ಕೆ ಟ್ರಂಪ್‌ 'ಮಾಸ್ಟರ್ ಪ್ಲ್ಯಾನ್‌': ವಿಶ್ವದ ಭೀಕರ ಸೀಕ್ರೆಟ್ ಆಪರೇಷನ್‌ಗೆ ಅಮೆರಿಕ ಸಜ್ಜು!

ಯುದ್ಧ ನಿಲ್ಲಿಸುವ ಸೂಚನೆ ನೀಡುತ್ತಲೇ, ಮುಂದಿನ 2-3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ ಅಣ್ವಸ್ತ್ರ ಹೊಂದುವ ಹಂತ ತಲುಪಿದೆ ಎಂಬ ಕಾರಣ ನೀಡಿ ಈ ದಾಳಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಇರಾನ್‌ನ IRGC ಸೇನೆಯು ಟ್ರಂಪ್‌ಗೆ ತಿರುಗೇಟು ನೀಡಿದ್ದು, "ನಮ್ಮ ಕ್ಷಿಪಣಿ ಮತ್ತು ಡ್ರೋನ್ ಸಾಮರ್ಥ್ಯದ ಬಗ್ಗೆ ಅಮೆರಿಕಕ್ಕೆ ಅರಿವಿಲ್ಲ, ನಮ್ಮನ್ನು ನಾಶಪಡಿಸಿದ್ದೇವೆ ಎಂಬ ಭ್ರಮೆ ಬೇಡ" ಎಂದು ಎಚ್ಚರಿಸಿದೆ. ಇತ್ತ ಹೋರ್ಮುಜ್ ಜಲಸಂಧಿಯ ರಕ್ಷಣೆಗೆ ಇತರ ದೇಶಗಳು ಮುಂದಾಗಲಿ, ನಮಗೆ ಅಲ್ಲಿನ ತೈಲದ ಅವಶ್ಯಕತೆಯಿಲ್ಲ ಎಂದು ಟ್ರಂಪ್ ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಲಕ್ಷಣ ತೋರಿದ್ದಾರೆ.
 

26:11ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
46:03ಅಮೆರಿಕ ಅತ್ಯಾಧುನಿಕ ಯುದ್ಧ ವಿಮಾನಗಳೇ ಉಡೀಸ್; ಇರಾನ್ ಹೊಡೆತಕ್ಕೆ ಪತರಗುಟ್ಟಿದ ವಿಶ್ವದ ದೊಡ್ಡಣ್ಣ
20:26ಯಾರು Next? ಐಲು ದೊರೆಯ ಹುಚ್ಚಾಟಕ್ಕೆ ಕಳಚಿತಾ ದೊಡ್ಡಣ್ಣನ ಪಟ್ಟ? ಟ್ರಂಪ್ ಪ್ಲ್ಯಾನ್ ಉಲ್ಟಾಪಲ್ಟಾ!
20:007 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
46:01ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ
48:51ಯುದ್ಧ ನಿಲ್ಲಿಸೋಕೆ ಕಾರಣ ಹುಡುಕ್ತಿದ್ದಾರಾ ಡೊನಾಲ್ಡ್ ಟ್ರಂಪ್? ಮಧ್ಯಪ್ರಾಚ್ಯ ಸಂಘರ್ಷ ಸದ್ಯಕ್ಕೆ ಮುಗಿಯೋದಿಲ್ವಾ?
52:21ಮುಗಿಯಲ್ವಾ ಗಲ್ಫ್ ಯುದ್ಧ? ಕೈಜೋಡಿಸದ ಮಿತ್ರರು, ಗೊಂದಲದಲ್ಲಿ ಟ್ರಂಪ್! ತೈಲಬೆಲೆಯೇರಿಕೆ, ಮಾರುಕಟ್ಟೆಯಲ್ಲಿ ಕಂಪನ!
21:07ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?
46:25ಯುದ್ಧ ನಿಲ್ಲಿಸೋ ಒತ್ತಡದಲ್ಲಿ ಅಮೆರಿಕ; ಇರಾನ್ ಯುದ್ಧದಿಂದ ದೊಡ್ಡಣ್ಣನಿಗೆ 35 ಬಿಲಿಯನ್ ಹೊರೆ
Read more