ಇನ್ನೇನೆಲ್ಲಾ ನೋಡ್ಬೇಕೋ... ಮೆಟ್ರೋದಲ್ಲೇ ಸ್ನಾನ ಮಾಡಿದ ಯುವಕ: ವೈರಲ್ ವೀಡಿಯೋ

Published : Apr 10, 2023, 04:46 PM IST
ಇನ್ನೇನೆಲ್ಲಾ ನೋಡ್ಬೇಕೋ... ಮೆಟ್ರೋದಲ್ಲೇ ಸ್ನಾನ ಮಾಡಿದ ಯುವಕ: ವೈರಲ್ ವೀಡಿಯೋ

ಸಾರಾಂಶ

ಸೋಶಿಯಲ್ ಮೀಡಿಯಾ ಪ್ರಭಾವಶಾಲಿಯಾಗಿರುವುದರ ಜೊತೆ ಹಣ ಗಳಿಕೆಯ ಮೂಲವಾಗಿರುವುದು ಅನೇಕರಿಗೆ ತಿಳಿದಿದೆ. ಈ ಕಾರಣಕ್ಕೆ ವೀವ್ಸ್‌ ಗಳಿಸಲು ಜನರ ಸೆಳೆಯಲು ಇಂತಹ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲಿ ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಮೆಟ್ರೋದಲ್ಲಿ ಸ್ನಾನ ಮಾಡಿ ವೈರಲ್ ಆಗಿದ್ದಾನೆ.

ನವದೆಹಲಿ: ಇತ್ತೀಚೆಗೆ ದೆಹಲಿ ಮೆಟ್ರೋ  ಯುವತಿಯೊಬ್ಬಳ ಅರಬರೆ ಬಟ್ಟೆಯ ಕಾರಣಕ್ಕೆ ಭಾರಿ ಸುದ್ದಿಯಾಗಿತ್ತು. ಅದಾದ ನಂತರ ಪ್ರೇಮಿಗಳಿಬ್ಬರು ಮೆಟ್ರೋದಲ್ಲಿ ಜಗವ ಮರೆತು ಮುದ್ದಾಟದಲ್ಲಿ ತೊಡಗಿದ್ದ ವೀಡಿಯೋ ವೈರಲ್ ಆಗಿತ್ತು. ಇದೆರಡು ವಿಚಾರಕ್ಕೆ ಇತ್ತೀಚೆಗೆ ದೆಹಲಿ ಮೆಟ್ರೋ ಸಾಕಷ್ಟು ಸುದ್ದಿಯಾಗಿತ್ತು. ಈಗ ನ್ಯೂಯಾರ್ಕ್‌ ಸರದಿ ನ್ಯೂಯಾರ್ಕ್ ಸಬ್‌ ವೇ ರೈಲಿನಲ್ಲಿ ಯುವಕನೋರ್ವ ಸ್ನಾನ ಮಾಡುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಕಣ್ಣಲ್ಲಿ ಇನ್ನೇನೆಲ್ಲಾ ನೊಡಬೇಕೋ ದೇವರೇ ಎಂದು ಜನ ಕಾಮೆಂಟ್ ಮಾಡ್ತಿದ್ದಾರೆ. 

ನ್ಯೂಯಾರ್ಕ್ (New York) ಸಿಟಿ ಸಬ್‌ ವೇಯಲ್ಲಿ (Subway) ಈ ಘಟನೆ ನಡೆದಿದೆ.  ಟಿಪ್‌ಟಾಪ್‌ ಆಗಿ ಡ್ರೆಸ್‌ ಮಾಡಿದ್ದ ಯುವಕನೋರ್ವ ಜನರಿರುವ ರೈಲಿನಲ್ಲಿ ಒಂದೊಂದಾಗಿ ತನ್ನ ಶರ್ಟ್ ಪ್ಯಾಂಟ್ ಬಿಚ್ಚಿ ಸ್ನಾನ ಮಾಡಿದ್ದಾನೆ. ತನ್ನ ಮುಂದೆ ಹಿಂದೆ ಅತ್ತಿತ್ತ ಸಾಕಷ್ಟು ಜನರಿದ್ದರೂ ಕ್ಯಾರೇ ಮಾಡದ ಯುವಕ ತನ್ನ ಬಟ್ಟೆಯನ್ನೆಲ್ಲಾ ಬಿಚ್ಚಿ ಸ್ನಾನ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.  ಪ್ರಿನ್ಸ್‌ಝಿ ಎಂಬ ಫೇಸ್‌ಬುಕ್ (Facebook) ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ತಲೆಯಲ್ಲೊಂದು ಸ್ಟೈಲಿಶ್‌ ಜುಟ್ಟು ಹೊಂದಿರುವ ಟಿಪ್‌ಟಾಪ್ ಆಗಿ ರೆಡಿಯಾಗಿರುವ ಯುವಕನೋರ್ವ, ಕೈಯಲ್ಲೊಂದು ಶೂಟ್‌ಕೇಸ್‌ನ್ನು (ಟ್ರಾಲಿ ಬ್ಯಾಗ್‌) ಹಿಡಿದುಕೊಂಡು ಮೆಟ್ರೋ ಹತ್ತಿದ್ದಾನೆ. ನಂತರ ಆತ ಬರುವಾಗಲೇ ಟ್ರಾಲಿ ಬ್ಯಾಗ್‌ನಲ್ಲಿ ಒಂದು ಕ್ಯಾನ್ ನೀರು ಹಿಡಿದುಕೊಂಡು ಬಂದಿದ್ದ.  ಸೋ ರೈಲಿನಲ್ಲಿ ಟ್ರಾಲಿ ಬ್ಯಾಗ್ ತೆರೆದ ಆತ ಕ್ಯಾನ್‌ನಲ್ಲಿದ್ದ ನೀರನ್ನು ಸ್ಪಂಜ್‌ಗೆ ಹೊಯ್ದುಕೊಂಡು ಮೈಯೆಲ್ಲಾ ಮೊದಲಿಗೆ ಒದ್ದೆ ಮಾಡಿಕೊಂಡಿದ್ದಾನೆ. ನಂತರ   ಶ್ಯಾಂಪು (Shampu)ಹಾಕಿಕೊಂಡು ಮೈ ಉಜ್ಜಿ ಮತ್ತೆ ಸ್ಪಾಂಜ್‌ನಿಂದ ಮೈ ತೊಳೆದುಕೊಂಡಿದ್ದಾನೆ. ನಂತರ ಬಿಳಿ ಬಣ್ಣದ ಶರ್ಟ್ ಕಪ್ಪು ಪ್ಯಾಂಟ್ ಧರಿಸಿ  ಮತ್ತೆ ಮೊದಲಿನಂತೆ ರೆಡಿ ಆಗಿದ್ದಾನೆ.  ನಂತರ ಕಾಲಿಗೆ ಶೂ ಹಾಕಿಕೊಂಡು ತನ್ನ ಟ್ರಾಲಿ ಬ್ಯಾಗ್ ಎತ್ತಿಕೊಂಡು ರೈಲಿನಿಂದ ಇಳಿದು ಹೋಗಿದ್ದಾನೆ. ಆತ ಹೋಗುವಾಗ ಅನೇಕರು ಮುಸಿ ಮುಸಿ ನಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 

ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್‌

ಅಲ್ಲದೇ ರೈಲಿನಲ್ಲಿದ್ದ ಕೆಲವರು ಆತನನ್ನೇ ಗಮನಿಸುತ್ತಿದ್ದರೆ, ಬಹುತೇಕರು ಅವರ ಪಾಡಿಗೆ ಮೊಬೈಲ್ ಒತ್ತುತ್ತಾ ಕುಳಿತಿದ್ದಾರೆ.  ಈ ವಿಡಿಯೋವನ್ನು 56 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಯಾರಾದರೂ ಹೀಗೆ ಸ್ನಾನ ಮಾಡಲು ಬಯಸುತ್ತೀರಾ ನ್ಯೂಯಾರ್ಕ್ ಸಬ್‌ವೇನಲ್ಲಿ ಎಂದು ವೀಡಿಯೋ ಪೋಸ್ಟ್ ಮಾಡಿದವರು ಪ್ರಶ್ನಿಸಿದ್ದು, ಅನೇಕರು ಆತ ಒಳು ಉಡುಪು ತೆಗೆದು ಸ್ನಾನ ಮಾಡಬೇಕಿತ್ತು. ಅದೊಂದು ಬಾಕಿ ಏಕೆ ಎಂದೆಲ್ಲಾ ಗಲೀಜಾಗಿ ಕಾಮೆಂಟ್ ಮಾಡಿದ್ದಾರೆ. 

ಇತ್ತೀಚೆಗೆ ಕೆಲವರು ವಿಡಿಯೋ ವೈರಲ್ ಆಗುವುದಕ್ಕೋಸ್ಕರ ಏನೇನೋ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ.  ಸೋಶಿಯಲ್ ಮೀಡಿಯಾ ಪ್ರಭಾವಶಾಲಿಯಾಗಿರುವುದರ ಜೊತೆ ಹಣ ಗಳಿಕೆಯ ಮೂಲವಾಗಿರುವುದು ಅನೇಕರಿಗೆ ತಿಳಿದಿದೆ. ಈ ಕಾರಣಕ್ಕೆ ವೀವ್ಸ್‌ ಗಳಿಸಲು ಜನರ ಸೆಳೆಯಲು ಇಂತಹ ಕಿತಾಪತಿಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲಿ ಯುವಕನೋರ್ವ ಸಾರ್ವಜನಿಕ ಸ್ಥಳದಲ್ಲಿ ಮೆಟ್ರೋದಲ್ಲಿ ಸ್ನಾನ ಮಾಡಿ ವೈರಲ್ ಆಗಿದ್ದಾನೆ. ಮುಂದೆ ಇನ್ನೇನೆಲ್ಲಾ ಮಾಡುತ್ತಾರೋ ಕಾದು ನೋಡಬೇಕು. 

Watch: ದೆಹಲಿ ಮಟ್ರೋ ರೈಲಿನಲ್ಲಿ ಲವರ್‌ಗಳ ಕಿಸ್ಸಿಂಗ್‌, 'ಸ್ವಲ್ಪನಾದ್ರೂ ಸಂಸ್ಕತಿ ಉಳಿಸಿಕೊಳ್ಳಿ' ಎಂದು ಟೀಕಿಸಿದ ಜನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ