ಇಲ್ಲೊಬ್ಬ ಗಿನ್ನೆಸ್ ಪುಸ್ತಕದಲ್ಲಿ ಹೆಸರು ಮಾಡುವುದಕ್ಕಾಗಿಯೇ ಸತತವಾಗಿ ತನ್ನ ದೇಹದಿಂದ 46 ಬಾರಿ ನಟಿಕೆ ಮುರಿದಿದ್ದಾನೆ.
ಸ್ವೀಡನ್: ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರ್ತಾರೆ ನೋಡಿ, ಕೆಲವರು ಇರುವ ಆರೋಗ್ಯವೇ ದೊಡ್ಡ ಭಾಗ್ಯ ಎಂದು ಸುಮ್ಮನಿದ್ದರೆ ಮತ್ತೆ ಕೆಲವರು ಇನ್ನೇನು ಸಾಹಸ ಮಾಡಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಾರೆ. ಸಾಧನೆ ಮಾಡುವುದಕ್ಕೋಸ್ಕರ ಏನು ಬೇಕಾದರೂ ಮಾಡಲು ಕೆಲವರು ಸಿದ್ಧರಿರ್ತಾರೆ . ಕೆಲವರು ಸಾಧನೆ ಮಾಡುವುದಕ್ಕಾಗಿ ದೇಹದ ಮೂಳೆಗಳನ್ನು ಕೂಡ ಮುರಿದುಕೊಳ್ಳುತ್ತಾರೆ ಎಂದು ಕೇಳಿದರೆ ನೀವು ದಂಗಾಗಬಹುದು. ಕೆಲವರು ರಸ್ಲಿಂಗ್‌ನಲ್ಲೂ ಅಥವಾ ಇನ್ನಾವುದೋ ಮೋಟಾರ್ ರೇಸಿಂಗ್‌ನಲ್ಲೂ ಬಿದ್ದು ಕೀಲು ಮುರಿದುಕೊಂಡು ಸಾಧನೆ ಮಾಡಿದವರು ಇದ್ದಾರೆ. ಹಾಗೆಯೇ ಇಲ್ಲೊಬ್ಬ ಗಿನ್ನೆಸ್ ಪುಸ್ತಕದಲ್ಲಿ ಹೆಸರು ಮಾಡುವುದಕ್ಕಾಗಿಯೇ ಸತತವಾಗಿ ತನ್ನ ದೇಹದಿಂದ 46 ಬಾರಿ ನಟಿಕೆ ಮುರಿದಿದ್ದಾನೆ.
ಸುಮ್ಮನೇ ಕುಳಿತಿದ್ದಾಗ ಅಥವಾ ಉದಾಸೀನವಾದಾಗ ಮೈ ಮುರಿಯುವುದು ನಿಮಗೆ ಗೊತ್ತಿರಬಹುದು. ಆದರೆ ಇದರಲ್ಲೂ ಸಾಧನೆ ಮಾಡಬಹುದು ಎಂಬುದು ನಿಮಗೆ ಗೊತ್ತಾ? . ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಪ್ರಕಾರ ಸ್ವೀಡನ್ ಮೂಲದ 23 ವರ್ಷದ ಯುವಕ ಒಲ್ಲೆ ಲುಂಡಿನ್ ಎಂಬಾತ ತನ್ನ ದೇಹದ 46 ಲಟಿಕೆ(ನಟಿಕೆ) ಸತತವಾಗಿ ಮುರಿಯುವ ಮೂಲಕ ಈ ಸಾಧನೆ ಮಾಡಿದ್ದಾನೆ. ಈ ಮೂಲಕ ಈತ ಈ ಹಿಂದೆ ಡಿಸೆಂಬರ್ 2022ರಲ್ಲಿ ನೇಪಾಳದ ಕಮಲ್ ಪೋಖ್ರೆಲ್ ಅವರು ಮಾಡಿದ ಸಾಧನೆಯನ್ನು ಬ್ರೇಕ್ ಮಾಡಿದ್ದಾರೆ. ಇವರು ಸತತವಾಗಿ 40 ನಟಿಕೆ ತೆಗೆದು ಈ ಸಾಧನೆ ಮಾಡಿದ್ದಾರೆ.
ಫೋಖ್ರೆಲ್ ಅವರ ಸಾಧನೆಯನ್ನು ಮುರಿಯಲು ಒಲ್ಲೆ ಲುಂಡಿನ್ ಸ್ವಲ್ಪ ಹೆಚ್ಚೆ ಸಿದ್ಧಗೊಂಡಿದ್ದರು, ಅವರು ಒಂದು ತಿಂಗಳ ಕಾಲ ಪ್ರತಿದಿನ, ಅತ್ಯಂತ ಪರಿಣಾಮಕಾರಿ ಕ್ರಮವನ್ನು ಅನುಸರಿಸಿ ಲಟಿಕೆ ಮುರಿಯವುದರ ಬಗ್ಗೆ ಅಭ್ಯಾಸ ಮಾಡಿದರು. ಅಧಿಕೃತ ಸಾಧನೆ ಮಾಡುವ ದಿನದಂದು ಪ್ರಯತ್ನದ ಮೊದಲು ತನ್ನ ಯಾವುದೇ ಲಟಿಕೆಗಳು ಹೋಗದಂತೆ ತಡೆಯಲು ಸೋಮಾರಿಯಂತೆ ಇದು ಯಾವುದೇ ಹಠಾತ್ ಚಲನೆಯನ್ನು ಮಾಡುವುದನ್ನು ತಪ್ಪಿಸಿದರು.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
ಹೀಗೆ ಕಮಲ್ ಪೊಖ್ರೆಲ್ ಅವರ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯಲು ಒಲ್ಲೆ 46 ಲಟಿಕೆಗಳನ್ನು ಒಟ್ಟೊಟ್ಟಿಗೆ ತೆಗೆದಿದ್ದಾರೆ. ಇವರು ತೆಗೆದ ನಟಿಕೆಗಳಲ್ಲಿ ಕುತ್ತಿಗೆ ಬೆನ್ನು ಕಾಲಿನ ಗಂಟು ಸೇರಿದೆ. ಅಲ್ಲದೇ ಎಲ್ಲವೂ ಸರಿಯಾಗಿ ನೆನೆಸಿದಂತೆ ನಡೆದರೆ ಅವರು ನಿರಂತೆ 46 ಲಟಿಕೆಗಳನ್ನು ತೆಗೆಯುವುದಾಗಿ ಅವರು ಹೇಳಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಮಾನವನ ದೇಹದಲ್ಲಿ ಒಟ್ಟು 360 ಕೀಲುಗಳಿವೆ. ಅವುಗಳಲ್ಲಿ ಹಲವು ಪ್ರಯತ್ನಗಳ ಬಳಿಕವೂ ಒಲ್ಲೆ ಅವರಿಗೆ ಎಲ್ಲೆಡೆಯೂ ಲಟಿಕೆ ತೆಗೆಯುವುದಕ್ಕೆ ಸಾಧ್ಯವಾಗಿಲ್ಲ. ಒಲ್ಲೆ ಅವರು ಬಾಲ್ಯದಿಂದಲೂ ಅಂದರೆ ಅವರಿಗೆ 6 ವರ್ಷವಿದ್ದಾಗಿನಿಂದಲೂ ಬೆರಳುಗಳಲ್ಲಿ ಲಟಿಕೆ ತೆಗೆಯುತ್ತಿದ್ದರು.
ನಾನು ಯೂಟ್ಯೂಬ್‌ನಲ್ಲಿ ಕೆಲವು ವೀಡಿಯೊವನ್ನು ವೀಕ್ಷಿಸಿದ್ದುಅದರಲ್ಲಿ ಇಬ್ಬರು ವೃದ್ಧರು ಕುಳಿತುಕೊಳ್ಳುವ ಭಂಗಿಯಲ್ಲಿ ಒಬ್ಬರ ಬೆನ್ನಿನಿಂದಲೂ ಹೇಗೆ ಲಟಿಕೆ ತೆಗೆಯಬಹುದು ಎಂಬುದನ್ನು ವಿವರಿಸಿದ್ದರು. ಅತ್ಯಂತ ನೋವು ನೀಡುವ ಕೀಲುಗಳು ಬಹುಶಃ ಚಿಕ್ಕದಾಗಿರುತ್ತವೆ. ಉದಾಹರಣೆಗೆ ಬೆರಳುಗಳ ಮೇಲಿನ ಮಧ್ಯದ ಕೀಲುಗಳು ಮತ್ತು ಸಾಮಾನ್ಯವಾಗಿ ಕಾಲ್ಬೆರಳುಗಳು ಕೀಲುಗಳು ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಹೀಗೆ ಲಟಿಕೆ ತೆಗೆಯುವಾಗ ತುಂಬಾ ನೋವುಂಟು ಮಾಡುವ ಯಾವುದನ್ನೂ ಪ್ರಯತ್ನಿಸಬೇಡಿ ಎಂದು ಅವರು ಹೇಳಿದ್ದಾರೆ.
Longest Beard ಬಿಟ್ಟು ದಾಖಲೆ ಬರೆದ ವ್ಯಕ್ತಿ. ಮೆಂಟೈನ್ ಸೀಕ್ರೆಟ್ ಇದು
ಇದುವರೆಗೆ ಲಟಿಕೆ ಮುರಿದು ರೆಕಾರ್ಡ್ ಮಾಡಿದವರ ವಿವರ ಇಲ್ಲಿದೆ. 2003ರಲ್ಲಿ 26 ಲಟಿಕೆ ಮುರಿಯುವ ಮೂಲಕ ಭಾರತದ ಜೇಮ್ಸ್ ಸಿಮಿಯೊಗ್ ( James Syiemiong) ರೆಕಾರ್ಡ್ ಸೃಷ್ಟಿಸಿದ್ದರು. ಇದಾದ ನಂತರ 2017ರಲ್ಲಿ ಬ್ರಿಟನ್‌ನ ಕಲೈ ಸೆಲ್ವನ್ ಕಾಲಿ ಷಣ್ಮುಗಂ(Kalai Selven Kali Shanmugham) ಅವರು 32 ಲಟಿಕೆ ಮುರಿಯುವ ಮೂಲಕ ಜೇಮ್ಸ್ ಸಾಧನೆಯನ್ನು ಬ್ರೇಕ್ ಮಾಡಿದ್ದಾರೆ. ನಂತರ 2021ರಲ್ಲಿ 36 ಲಟಿಕೆ ಮುರಿಯುವ ಮೂಲಕ ಸ್ವೀಡನ್‌ನ ಸೆಬಾಸ್ಟಿಯನ್ ಕಾವಲ್ ವೊಲ್ಡ್ (Sebastian Qval Wold) ಈ ಸಾಧನೆ ಮಾಡಿದರು. ನಂತರ ನೇಪಾಳದ ಕಮಲ್ ಪೋಖ್ರೆಲ್ (Kamal Pokhrel) ಅವರು 40 ಲಟಿಕೆಗಳನ್ನು ಮುರಿದಿದ್ದರು. ಇದಾದ ಬಳಿಕೀಗ ಒಲ್ಲೆ ಅವರು 46 ಲಟಿಕೆ ಮುರಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.