ಹಾವೊಂದು ವಿಮಾನದೊಳಗೆ ಸೇರಿಕೊಂಡ ಪರಿಣಾಮ ವಿಮಾನ ತುರ್ತು ಲ್ಯಾಂಡಿಂಗ್ ಆದ ಘಟನೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದಿದೆ. ವಿಮಾನದಲ್ಲಿ ಪೈಲಟ್ ಕುಳಿತುಕೊಳ್ಳುವ ಸೀಟಿನ ಕೆಳಗೆಯೇ ವಿಷಕಾರಿ ಹಾವೊಂದು ಬೆಚ್ಚನೆ ಮಲಗಿತ್ತು.
ಕೇಪ್‌ಟೌನ್: ಹಾವೊಂದು ವಿಮಾನದೊಳಗೆ ಸೇರಿಕೊಂಡ ಪರಿಣಾಮ ವಿಮಾನ ತುರ್ತು ಲ್ಯಾಂಡಿಂಗ್ ಆದ ಘಟನೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದಿದೆ. ವಿಮಾನದಲ್ಲಿ ಪೈಲಟ್ ಕುಳಿತುಕೊಳ್ಳುವ ಸೀಟಿನ ಕೆಳಗೆಯೇ ವಿಷಕಾರಿ ಹಾವೊಂದು ಬೆಚ್ಚನೆ ಮಲಗಿತ್ತು. ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲಿ ಇದು ಪೈಲಟ್ ಗಮನಕ್ಕೆ ಬಂದಿದ್ದು, ಕೂಡಲೇ ಅವರು ತುರ್ತು ಲ್ಯಾಂಡಿಂಗ್‌ಗೆ ಮುಂದಾಗಿದ್ದಾರೆ.
ವಿಮಾನದ ಪೈಲಟ್ ರುಡಾಲ್ಫ್ ಇರಾಸ್ಮಸ್ ಹಾಗೂ ನಾಲ್ವರು ಪ್ರಯಾಣಿಕರು ವಿಮಾನವೇರಿದ್ದು, ಸೀಟಿನಲ್ಲಿ ಕುಳಿತ ನಂತರ ಪೈಲಟ್‌ಗೆ ಕಾಲಿನ ಕೆಳಗೆ ಏನೋ ತಣ್ಣನೆಯ ಮೃದುವಾದ ವಸ್ತುವೊಂದು ಮುಟ್ಟಿದ ಅನುಭವವಾಗಿದೆ. ಕೂಡಲೇ ಪೈಲಟ್ ಕೆಳಗೆ ಬಗ್ಗಿ ನೋಡಿದಾಗ ಭಾರಿ ಗಾತ್ರದ ಹಾವೊಂದು ಆತನ ಸೀಟಿನ ಕೆಳಗೆ ಸುರುಳಿ ಸುತ್ತಲೂ ನೋಡುತ್ತಿರುವುದು ಕಂಡು ಬಂದಿದೆ.
ಏನಾಗುತ್ತಿದೆ ಎಂದು ಅರಗಿಸಿಕೊಳ್ಳುವುದಕ್ಕೆ ಇದರಿಂದ ಪೈಲಟ್‌ಗೆ ಕಷ್ಟವಾಗಿದೆ. ನಂತರ ಕೂಡಲೇ ಸುಧಾರಿಸಿಕೊಂಡ ಪೈಲಟ್ ಈ ವಿಚಾರವನ್ನು ತನ್ನ ವಿಮಾನದಲ್ಲಿ ಪ್ರಯಾಣಿಕರಿಗೆ ತಿಳಿಸಿದ್ದಾರೆ. ಈ ವೇಳೆ ಎಲ್ಲರೂ ದಿಗಿಲಿನಿಂದಲೇ ದಿಗ್ಭ್ರಮೆಗೊಂಡಿದ್ದು, ನಂತರ ಪೈಲಟ್ ರುಡಾಲ್ಫ್ ಇರಾಸ್ಮಸ್ ಸಮೀಪದ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‌ಗೆ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವುದಕ್ಕೆ ಅನುಮತಿ ಕೇಳಿದ್ದಾರೆ. ದಕ್ಷಿಣ ಆಫ್ರಿಕಾದ ವೆಲಕೊಮ್ ನಗರದಲ್ಲಿ ತುರ್ತು ಲ್ಯಾಂಡಿಂಗ್‌ಗೆ ಅನುಮತಿ ಕೇಳಿದ್ದು, ಇದಕ್ಕೆ 10 ರಿಂದ 15 ನಿಮಿಷ ಹಿಡಿದಿದೆ. ಈ ವೇಳೆಗೆ ಹಾವು ಪೈಲಟ್‌ನ ಕಾಲನ್ನು ಸುತ್ತಿಕೊಳ್ಳುವುದರಲಿತ್ತು. ಆದರೂ ಅವರು ಧೈರ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಿದ್ದಾರೆ.
ಹಾವಿನ ತಲೆ ಕಚ್ಚಿ ಹಿಂಸಿಸಿ ಕೊಂದ ದುರುಳರು: ವಿಡಿಯೋ ವೈರಲ್ ಬೆನ್ನಲ್ಲೇ ಮೂವರ ಅರೆಸ್ಟ್
ನಾನು ಅದು ಎಲ್ಲಿದೆ ಎಂಬುದನ್ನು ಗಮನಿಸುತ್ತಲೇ ಇದ್ದೆ. ಅದು ನನ್ನ ಸೀಟಿನ ಕೆಳಗೆ ಖುಷಿಯಾಗಿಯೇ ಇತ್ತು. ನನಗೆ ಹಾವುಗಳೆಂದರೆ ದೊಡ್ಡ ಹೆದರಿಕೆ ಏನಿಲ್ಲ. ಆದರೂ ನಾನು ಅವುಗಳ ಸಮೀಪ ಹೋಗುವುದಿಲ್ಲ. ಇತ್ತ ವಿಮಾನದ ಪೈಲಟ್ ವಿಷಕಾರಿ ಹಾವಿದ್ದರೂ ಸಮಾಧಾನ ಚಿತ್ತದಿಂದ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ಈ ವೇಳೆ ಹಾವು ಅವರ ಸೀಟಿನ ಕೆಳಗೆ ಸುರುಳಿ ಸುತ್ತಿ ಮಲಗಿತ್ತು. ಈ ಕೇಪ್ ಕೋಬ್ರಾವೂ ಆಫ್ರಿಕಾದ ಅತ್ಯಂತ ಅಪಾಯಕಾರಿ ಹಾಗೂ ವಿಷಕಾರಿ ಹಾವಾಗಿದೆ. ವಿಷದ ಕಾರಣದಿಂದಾಗಿಯೇ ಇದು ಅತ್ಯಂತ ಅಪಾಯಕಾರಿ ಹಾವು ಎನಿಸಿದೆ.
ಇತ್ತ ವಿಮಾನ ನಿಲ್ದಾಣದಲ್ಲಿ ಹಾವು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಎಲ್ಲರೂ ವಿಮಾನ ಲ್ಯಾಂಡಿಂಗ್ ಆಗುವುದನ್ನೇ ಕಾಯುತ್ತಿದ್ದು, ವಿಮಾನವೇರಿದ ವಿಶೇಷ ಅತಿಥಿಯನ್ನು ಹೊರ ಹಾಕಲು ಕಾಯುತ್ತಿದ್ದರು. ಆದರೆ ಅಲ್ಲಿ ಅವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ವಿಮಾನ ಲ್ಯಾಂಡ್ ಆದ ವೇಳೆ ಅಲ್ಲಿ ಹಾವೇ ಇರಲಿಲ್ಲ.
ವೆಲ್ಕೊಮ್‌ನ (Welkom) ಹಾವು ಹಿಡಿಯುವವರಾದ ಜಾನ್ ಡಿ ಕ್ಲಾರ್ಕ್ (Johan de Klerk), ಹಾಗೂ ಏವಿಯೇಷನ್ ಇಂಜಿನಿಯರ್‌ಗಳು ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನವನ್ನು ತೀವ್ರವಾಗಿ ತಪಾಸಣೆ ನಡೆಸಿದ್ದಾರೆ. ಆದರೆ ಅವರಿಗೆ ಹಾವು ಮಾತ್ರ ಸಿಕ್ಕಿಲ್ಲ. ಹಾವು ವಿಮಾನದಿಂದ ಹೊರಗೆ ಹೋಗಿರಬಹುದೇ ಅಥವಾ ಅಲ್ಲೇ ಇರಬಹುದೇ ಎಂಬುದರ ಬಗ್ಗೆಯೂ ಅವರಿಗೆ ಅರಿಯಲು ಕಷ್ಟವಾಗಿದೆ.
ಹಾವಿನಿಂದ ಕಚ್ಚಿಸಿಕೊಂಡರೂ ಪರೀಕ್ಷೆ ಬರೆದ ಪಿಯು ವಿದ್ಯಾರ್ಥಿನಿ : ಸ್ಥಿತಿ ಗಂಭೀರ
ಹೀಗಾಗಿ ಇರಸ್ಮಾಸ್‌ನ ಇಂಜಿನಿಯರಿಂಗ್ ಸಂಸ್ಥೆಯೂ ಈ ವಿಮಾನವನ್ನು ಮತ್ತೆ ತನ್ನ ಉತ್ತರ ಸೌತ್ ಆಫ್ರಿಕಾದ ಬೊಬೆಲಾ ಪ್ರದೇಶಕ್ಕೆ ಕರೆಸಿಕೊಳ್ಳಲಿದೆ. ಹಾವು ಇನ್ನು ವಿಮಾನದಲ್ಲೇ ಇರಬಹುದು ಎಂಬ ಸಂಶಯ ಅಧಿಕಾರಿಗಳಲ್ಲಿದೆ. ಆದರೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಮಾತ್ರ ಅವರ ಪ್ರಯಾಣ ಮುಂದುವರೆಸಲು ಬೇರೆ ವ್ಯವಸ್ಥೆ ಮಾಡಲಾಯಿತು. ಬಸ್ ಕಾರುಗಳಲ್ಲಿ ಹಾವುಗಳು ಸೇರಿಕೊಳ್ಳುವುದನ್ನು ನೀವು ನೋಡಿರಬಹುದು ಕೇಳಿರಬಹುದು. ಆದರೆ ಅತ್ಯಂತ ಹೆಚ್ಚು ಭದ್ರತಾ ತಪಾಸಣೆಗೆ ಒಳಪಡುವ ವಿಮಾನದಲ್ಲಿ ಹಾವು ಸೇರಲು ಹೇಗೆ ಸಾಧ್ಯ. ಅದು ಅಲ್ಲದೇ ಲ್ಯಾಂಡ್ ಆಗುತ್ತಿದ್ದಂತೆ ಕೈಗೆ ಸಿಗದೇ ಮಾಯವಾಗುವ ಮೂಲಕ ಹಾವು ಅಚ್ಚರಿ ಮೂಡಿಸಿದೆ.