ಮಹಿಳೆಯ ಪರ್ಫ್ಯೂಮ್ ಬಗ್ಗೆ ಪ್ರಶ್ನಿಸಿ ಕೆಲಸ ಕಳಕೊಂಡ ಉಬರ್​ ಚಾಲಕ! ತಲೆಬಿಸಿ ಮಾಡಿಕೊಂಡ ಕಂಪೆನಿ

Published : Feb 13, 2025, 12:51 PM ISTUpdated : Feb 13, 2025, 01:43 PM IST
ಮಹಿಳೆಯ ಪರ್ಫ್ಯೂಮ್ ಬಗ್ಗೆ ಪ್ರಶ್ನಿಸಿ ಕೆಲಸ ಕಳಕೊಂಡ  ಉಬರ್​ ಚಾಲಕ! ತಲೆಬಿಸಿ ಮಾಡಿಕೊಂಡ ಕಂಪೆನಿ

ಸಾರಾಂಶ

ಕ್ಯಾಬ್ ಸೇವೆಗಳ ಜನಪ್ರಿಯತೆ ಹೆಚ್ಚುತ್ತಿದ್ದರೂ, ಮಹಿಳಾ ಪ್ರಯಾಣಿಕರ ಸುರಕ್ಷತೆಯ ಕಳವಳವೂ ಹೆಚ್ಚುತ್ತಿದೆ. ಕೇರಳದಲ್ಲಿ ಉಬರ್ ಚಾಲಕನೊಬ್ಬ ಪ್ರಯಾಣಿಕ ಮಹಿಳೆಗೆ ಮೆಸೇಜ್ ಮೂಲಕ ಕಿರುಕುಳ ನೀಡಿದ್ದಕ್ಕೆ ವಜಾಗೊಂಡಿದ್ದಾನೆ. ಯುಪಿಐ ಬಳಕೆಯಿಂದ ಚಾಲಕನಿಗೆ ಸಂಖ್ಯೆ ಸಿಕ್ಕಿರಬಹುದು ಎಂದು ಕಂಪನಿ ಹೇಳಿದೆ. ಆದರೆ, ಕ್ಯಾಬ್ ಬುಕಿಂಗ್ ವೇಳೆ ಸಂಖ್ಯೆ ಲಭ್ಯವಿರುವುದರಿಂದ ಪ್ರಯಾಣಿಕರು ಕಂಪನಿಯ ವಿವರಣೆಯನ್ನು ಪ್ರಶ್ನಿಸಿದ್ದಾರೆ.

ಉಬರ್​, ಓಲಾದಂಥ ಹಲವಾರು ಟ್ರಾವಲೆಂಗ್​ ಕಂಪೆನಿಗಳು ಈಗ ಬಹಳ ಜನಪ್ರಿಯವಾಗುತ್ತಿದ್ದು, ಬಹುತೇಕರು ಇದರ ಮೊರೆ ಹೋಗುತ್ತಿದ್ದಾರೆ. ದಿನನಿತ್ಯದ ಓಡಾಟಕ್ಕೂ ಇವುಗಳನ್ನು ಬಳಸುವುದೇ ಹೆಚ್ಚಾಗುತ್ತಿದೆ. ಬಾಯಿಗೆ ಬಂದಂತೆ ದರ ಕೇಳುವ ಆಟೋಗಳು, ಕೆಲವು ಪ್ರದೇಶಗಳಿಗೆ ಸಿಗದ ಬಸ್​ಗಳು, ಬಸ್​ ಕಾಯುವಷ್ಟು ಇರದ ಸಮಯ... ಇವೆಲ್ಲವುಗಳಿಂದ ಬೇಸತ್ತ ಜನರು ಹೆಚ್ಚಾಗಿ ಇವುಗಳಿಗೆ  ಮೊರೆ ಹೋಗುವುದು ಸಹಜವಾಗಿದೆ. ಆದರೆ ಇದಾಗಲೇ ಇವುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅದರಲ್ಲಿಯೇ ಹೆಚ್ಚಾಗಿ ಮಹಿಳೆಯರ ಸುರಕ್ಷತೆಯ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಉದ್ಭವವಾಗುತ್ತಲೇ ಇವೆ. ಕೆಲವು ಚಾಲಕರು ಮಾಡುವ ಅನಾಚಾರಕ್ಕೆ ಇಡೀ ಸಂಸ್ಥೆ ತಲೆತಗ್ಗಿಸುವ ಘಟನೆಗಳೂ ನಡೆಯುತ್ತಿವೆ. 

ಇದೀಗ ಅಂಥದ್ದೇ ಒಂದು ಘಟನೆ ಉಬರ್​ನಿಂದ ನಡೆದಿದೆ. ಕೇರಳದಲ್ಲಿ ಈ ಘಟನೆ ನಡೆದಿದೆ. ಚಾಲನೆಯ ಬಳಿಕ ಮಹಿಳೆಯೊಬ್ಬರಿಗೆ ಮೆಸೇಜ್​ ಮಾಡುವ ಮೂಲಕ, ಕಿರುಕುಳ ಕೊಟ್ಟ ಮುಹಮ್ಮದ್ ಮಿಶಾಲ್​ ಎನ್ನುವ ಉಬರ್​ ಚಾಲಕ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಈತನ ವಿರುದ್ಧ ಮಹಿಳೆ ಸೋಷಿಯಲ್​ ಮೀಡಿಯಾದಲ್ಲಿ ಅತ್ಯಂತ ಕಠಿಣ ಪದಗಳಿಂದ ಬರೆದು ಶೇರ್​ ಮಾಡಿಕೊಂಡಿದ್ದರಿಂದ ಹಾಗೂ ಈ ಬಗ್ಗೆ ಉಬರ್​ಗೂ ತಿಳಿಸಿದ ಹಿನ್ನೆಲೆಯಲ್ಲಿ, ಕಂಪೆನಿ ಈ ಕ್ರಮ ತೆಗೆದುಕೊಂಡಿದೆ. ಆದರೆ ಎಷ್ಟೋ ಮಂದಿ, ಇಂಥ ದೌರ್ಜನ್ಯ ಎದುರಿಸುತ್ತಿದ್ದರೂ ಯಾವ್ಯಾವುದೋ ಕಾರಣಕ್ಕೆ, ನಮಗ್ಯಾಕೆ ಉಸಾಬರಿ ಎಂದೋ, ಇನ್ನು ಕೆಲವು ಚಾಲಕರ ಪೂರ್ವಾಪರ ಗೊತ್ತಿರದ ಹಿನ್ನೆಲೆಯಲ್ಲಿ, ಅವರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎನ್ನುವ ಕಾರಣಕ್ಕೆ ಸುಮ್ಮನಾಗಿ ಬಿಡುತ್ತಾರೆ. ಆದರೆ ಈ ಕೇರಳದ ಮಹಿಳೆ ಈ ಬಗ್ಗೆ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರಿಂದ ಚಾಲಕನಿಗೆ ತಕ್ಕ ಶಾಸ್ತಿಯಾಗಿದೆ.

ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್​! ವಿಮಾನದ ಮೇಲೆ ಭಯೋತ್ಪಾದನಾ ದಾಳಿ ಎಚ್ಚರಿಕೆ... ಆಗಿದ್ದೇನು?

ಈ ಘಟನೆಯ ಕುರಿತು ಹೇಳುವುದಾದರೆ, ಸ್ಮೃತಿ ಕಣ್ಣನ್ ಎನ್ನುವ ಮಹಿಳೆ ಉಬರ್​ ಬುಕ್​ ಮಾಡಿದಾಗ, ಸಿಕ್ಕಿದ್ದು ಮುಹಮ್ಮದ್​ ಮಿಶಾಲ್​ ಎಂಬಾತ ಚಾಲಕನಾಗಿರುವ ಕ್ಯಾಬ್​. ಅದರಲ್ಲಿ ಆಕೆ ಪ್ರಯಾಣಿಸಿ ಮನೆಗೆ ಮರಳಿದಾಗ ಶಾಕಿಂಗ್​ ಸಂದೇಶಗಳು ಆಕೆಯ ವಾಟ್ಸ್​ಆ್ಯಪ್​ನಲ್ಲಿ ಬರತೊಡಗಿದವು. ನಾನ್ಯಾರು ಗೊತ್ತಾಯ್ತಾ, ಹಾಗೆ ಹೀಗೆ ಕೇಳಿದ ಈ ಮುಹಮ್ಮದ್, ಕೊನೆಗೆ, ನೀವು ಬಳಸಿರುವ ಪರ್ಫ್ಯೂಮ್ ಇಷ್ಟವಾಗಿದೆ. ಅದು ಯಾವ ಕಂಪೆನಿದ್ದು ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಹೀಗೆ ಪದೇ ಪದೇ ಮೆಸೇಜ್​ ಮಾಡಿ ಕಿರುಕುಳ ಕೊಟ್ಟಿದ್ದಕ್ಕೆ ಆತನನ್ನು ಬ್ಲಾಕ್​  ಮಾಡಿರುವ ಮಹಿಳೆ ಇದನ್ನು ಉಬರ್​ ಕಂಪೆನಿಯ ಗಮನಕ್ಕೆ ತಂದಿದ್ದಾಳೆ. 

   ಉಬರ್ ಚಾಲಕನೊಬ್ಬ ನನಗೆ WhatsApp ನಲ್ಲಿ ಸಂದೇಶ ಕಳುಹಿಸಿ ನನಗೆ ಭಯಾನಕ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ.  ಇಂಥ ಕ್ಯಾಬ್​ಗಳಲ್ಲಿ  ಮಹಿಳೆಯರು ಪ್ರಯಾಣಿಸುವುದುದ ಎಷ್ಟು ಸುರಕ್ಷಿತ ಎಂದು ಅವರು ಪ್ರಶ್ನಿಸಿದ್ದಾರೆ.  ಅದಕ್ಕೆ ಉಬರ್​ ಆತನನ್ನು ವಜಾಗೊಳಿಸಲಾಗಿರುವುದಾಗಿ ಹೇಳಿದ್ದೂ ಅಲ್ಲದೇ, ಒಂದು ಸ್ಪಷ್ಟನೆಯನ್ನೂ ಕೊಟ್ಟಿದೆ. ಅದೇನೆಂದರೆ, ನಾವು  ಉಬರ್ ಸವಾರರು ಮತ್ತು ಚಾಲಕರ ಫೋನ್ ಸಂಖ್ಯೆಗಳನ್ನು ಎಲ್ಲಾ ಟ್ರಿಪ್‌ಗಳಲ್ಲಿ ಮರೆಮಾಚುತ್ತೇವೆ. ಆದರೆ ಹಣ ನೀಡುವಾಗ UPI ಅಪ್ಲಿಕೇಶನ್ ಬಳಸಿದ್ದರಿಂದ ಚಾಲಕನಿಗೆ ಫೋನ್​ ನಂಬರ್​ ಸಿಕ್ಕಿರುವ ಸಾಧ್ಯತೆ ಇದೆ ಎಂದಿದೆ ಕಂಪೆನಿ.  ಆದರೆ ಇದು ಎಷ್ಟು ಸತ್ಯ ಎನ್ನುವುದು ಪ್ರಯಾಣಿಕರ ಪ್ರಶ್ನೆ. ಕ್ಯಾಬ್​ ಬುಕ್​ ಮಾಡುವುದು ನಮ್ಮ ಸಂಖ್ಯೆಯಿಂದ, ಜೊತೆಗೆ ಬುಕ್​ ಆದ ತಕ್ಷಣ ಡ್ರೈವರ್​ಗಳು ವಾಪಸ್​ ಕಾಲ್​ ಮಾಡಿ ಇರುವ ಜಾಗವನ್ನು ಪ್ರಶ್ನಿಸುತ್ತಾರೆ. ಹಾಗಿದ್ದ ಮೇಲೆ ಫೋನ್​ ನಂಬರ್​ ಸಿಗುವುದಿಲ್ಲ ಎನ್ನುವುದಕ್ಕೆ ಅರ್ಥವೇನು ಎಂದು ಪ್ರಶ್ನಿಸುತ್ತಿದ್ದಾರೆ. 
  

ದೇವರು ಬಂದಂತೆ ನಟಿಸಿ, ನನ್ನ ಕಣ್ಣೆದುರೇ ಅಮ್ಮನ ಮೇಲೆ ಆತ... ಆ ಕರಾಳ ದಿನ ನೆನೆದ ಹುಲಿಕಲ್​ ನಟರಾಜ್​

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಚೇರಿಗಳಿಗೆ ಬಿಗಿಯುಡುಪು, ಸ್ಲೀವ್​ಲೆಸ್​ ಡ್ರೆಸ್​, ಹರಿದ ಜೀನ್ಸ್​ ನಿಷೇಧ: ಸರ್ಕಾರದ ಆದೇಶದಲ್ಲಿ ಇನ್ನೂ ಏನೇನಿವೆ?
3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ