ಅಂದು ರಾತ್ರಿ ಮನೆ ಬಿಟ್ಟು ಬಂದವಳು ಇಂದು ಫ್ಯಾಷನ್‌ ಲೋಕದ ಮಹಾರಾಣಿ

Published : Jul 30, 2025, 07:34 PM IST
Vaishali Shadangule

ಸಾರಾಂಶ

ಐದುನೂರು ರೂಪಾಯಿ ಬಂಡವಾಳದಿಂದ ಐದು ಕೋಟಿ ವಹಿವಾಟಿನ ಫ್ಯಾಷನ್ ಉದ್ಯಮ ಕಟ್ಟಿದ ವೈಶಾಲಿ ಷಂಡುಗುಲೆಯವರ ಸಾಧನೆಯ ಕಥೆ. ಮನೆಯಿಂದ ಹೊರಬಂದು, ಹಲವು ಕಷ್ಟಗಳನ್ನು ಎದುರಿಸಿ ಯಶಸ್ಸಿನ ಉತ್ತುಂಗಕ್ಕೇರಿದ ಅವರ ಸ್ಪೂರ್ತಿದಾಯಕ ಜೀವನಗಾಥೆ.

ಯಶಸ್ಸು ಕೆಲವರಿಗೆ ತುಂಬಾ ಸುಲಭವಾಗಿದ್ದಾಗುತ್ತದೆ. ಮತ್ತೆ ಕೆಲವರಿಗೆ ನೂರಾರು ಕಷ್ಟಗಳ ನಂತರವೇ ಕೈಗೆಟುಕುತ್ತದೆ. ಯಶಸ್ಸು ಎಂಬ ಮಾಯ ಜಿಂಕೆ ಹಿಂದೆ ಹೊರಟವರು ಆಕಸ್ಮಿಕವಾಗಿ ಎದುರಾಗುವ ಒಂದೆರಡು ಆಘಾತಗಳಿಗೆ ತತ್ತರಿಸಿ ಹಾದಿ ಬದಲಿಸುತ್ತಾರೆ. ಮತ್ತೆ ಕೆಲವರು ಆಗಿದ್ದು ಆಗಿ ಹೋಗಲಿ ಎಂದು ತಮಗೆ ತಾವೇ ಹೇಳಿಕೊಂಡು ಗಟ್ಟಿಯಾಗಿ ನಿಂತು ಬಿಡುತ್ತಾರೆ. ಹಾಗೆ ಸಾಧನೆ ಮಾಡಲು ಹೊರಟವರಿಗೆ ಜೀವನ ಕಂಗಡಿಸುತ್ತದೆ, ಹೆದರಿಸುತ್ತದೆ, ಅಳಿಸುತ್ತದೆ ಅವಮಾನಕ್ಕೆ ಈಡು ಮಾಡುತ್ತದೆ, ಗಟ್ಟಿಗರು ಈ ಎಲ್ಲವನ್ನು ಸಹಿಸಿಕೊಳ್ಳುತ್ತಾರೆ ಕಡೆಗೊಮ್ಮೆ ಗೆಲುವಿನ ಕೇಕೆ ಹಾಕುತ್ತಾರೆ ಇಂಥವರ ಪಟ್ಟಿಗೆ ಸೇರಿದಾಗ ವೈಶಾಲಿ ಷಂಡುಗುಲೆ.

ಓದಬೇಕು ಎಂಬ ತನ್ನ ಆಸೆಗೆ ವಿರುದ್ಧವಾಗಿ ಚಿಕ್ಕ ವಯಸ್ಸಿಗೆ ಮದುವೆ ಮಾಡಿ ಬಿಡಲು ಪೋಷಕರು ನಿರ್ಧರಿಸುತ್ತಾರೆ. ಅದನ್ನ ವಿರೋಧಿಸಿ ರಾತೋ ರಾತ್ರಿ ಮನೆಯಿಂದ ಎದ್ದು ಬಂದವಳು ವೈಶಾಲಿ. ಆನಂತರದಲ್ಲಿ ಆಕೆ ಅನುಭವಿಸಿದ ಕಷ್ಟಗಳಿವೆಯಲ್ಲ ಬರೆದರೆ ಅದೇ ಒಂದು ಕಾದಂಬರಿ ಆಗುತ್ತದೆ. ವೈಶಾಲಿ ಈ ಕಷ್ಟಗಳಿಗೆ ಹೆದರಲಿಲ್ಲ, ಹಣದ ಮುಗ್ಗಟ್ಟು ಎದುರಾದಾಗ ತಲೆಕೆಡಿಸಿಕೊಳ್ಳಲಿಲ್ಲ. ಸೋಲುಗಳು ಒಂದರ ಹಿಂದೆ ಬಂದಾಗಲೂ ಕಂಗಾಲಾಗಲಿಲ್ಲ ಪರಿಣಾಮವಾಗಿ ಇವತ್ತು ದೇಶದ ನಂಬರ್ ಒನ್ ಫ್ಯಾಶನ್ ಡಿಸೈನರ್ ಎನಿಸಿಕೊಂಡಿದ್ದಾಳೆ. 75 ಮಂದಿಗೆ ಉದ್ಯೋಗ ನೀಡಿದ್ದಾಳೆ ಕೇವಲ ಐದುನೂರು ರೂಪಾಯಿಗೆ ಬಂಡವಾಳದಲ್ಲಿ ಆರಂಭವಾದ ಫ್ಯಾಷನ್ ಡಿಸೈನಿಂಗ್ ಉದ್ಯಮ ಈಗ ವಾರ್ಷಿಕ 5 ಕೋಟಿ ರೂಪಾಯಿಗಳ ಟರ್ನ್ ಓವರ್ ಕಾಣುತ್ತಿದೆ. ಒಂದು ಸಿನಿಮಾದಂತೆ ಇರುವ ತಮ್ಮ ಜೀವನವನ್ನ ವೈಶಾಲಿ ಷಂಡುಗುಲೆ ವಿವರಿಸಿದ್ದು ಹೀಗೆ

ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೂಪಾಲ್ ಗೆ 60 ಕಿಲೋಮೀಟರ್ ದೂರ ನನ್ನ ಹುಟ್ಟೂರು ನಮ್ಮ ತಂದೆ ಕಲಾವಿದರು. ಸುಂದರ ಕಲಾಕೃತಿಗಳ ರಚನೆಯಲ್ಲಿ ಅವರದ್ದು ಪಳಗಿದ ಕೈ. ನಮ್ಮದು ಸಂಪ್ರದಾಯಸ್ಥ ಮಧ್ಯಮ ವರ್ಗದ ಕುಟುಂಬ. 18 ವರ್ಷಕ್ಕೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಬಿಡಬೇಕು ಅದಕ್ಕೂ ಮುಂಚಿತವಾಗಿಯೇ ಮಾಡಿದರೆ ಇನ್ನೂ ಒಳ್ಳೆಯದು-18 ವರ್ಷದ ನಂತರ ಹೆಣ್ಣು ಮಗಳು ಮನೆಲಿ ಉಳಿದರೆ ದೊಡ್ಡದೊಂದು ಸಮಸ್ಯೆಯ ಜೊತೆಯಾದಂತೆ ಎಂಬುದು ನನ್ನ ಊರಿನ ಎಲ್ಲರ ನಂಬಿಕೆಯಾಗಿತ್ತು. ನನ್ನ ಪೋಷಕರು ಕೂಡ ಇದೇ ನಂಬಿಕೆಕೆ ಜೋತು ಬಿದ್ದಿದ್ದರು. ಆದರೆ ನನ್ನ ಲೆಕ್ಕಾಚಾರ ಬೇರೆಯಾಗಿತ್ತು. ಡಿಗ್ರಿ ಮುಗಿಸಬೇಕು ನೌಕರಿ ಹಿಡಿಯಬೇಕು ಕಾರು ಖರೀದಿಸಬೇಕು ವಿಮಾನದಲ್ಲಿ ಓಡಾಡಬೇಕು ಎಂದಲ್ಲ ನಾನು ಕನಸು ಕಾಣುತ್ತಿದೆ ಅದನ್ನೇ ಹೆತ್ತವರೊಂದಿಗೆ ಹೇಳಿಕೊಂಡೆ. ಯಾವುದಾದರೂ ಒಳ್ಳೆಯ ಸಂಬಂಧ ಬಂದ್ರೆ ಮದುವೆ ಮುಗಿಸಿ ಜವಾಬ್ದಾರಿ ಕಳೆದುಕೊಳ್ಳುತ್ತೇವೆ, ನೀನು ಹಗಲುಗನಸು ಕಾಣಬೇಡ. ಎಂದು ಅಪ್ಪ ನಿಷ್ಟರವಾಗಿ ಹೇಳಿಬಿಟ್ಟರು.

ನಾನು ಎಂಟನೇ ತರಗತಿಯ ಪರೀಕ್ಷೆಗೆ ತಯಾರಿ ನಡೆಸಿದ್ದಾಗಲೇ ನನ್ನ ಮದುವೆಯ ಕುರಿತು ಚರ್ಚೆ ಶುರುವಾಯಿತು. ಗಂಡಿನ ಕಡೆಯವರು ಬಂದು ಹೋದರು ಈ ಸಂದರ್ಭದಲ್ಲಿ ನಾನು ಪ್ರತಿಭಟಿಸಿದೆ ಹೀಗೆ ಹಠ ಮಾಡಿಕೊಂಡೇ ನಾಲ್ಕು ವರ್ಷ ಕಳೆದೆ ಪಿಯುಸಿ ಮುಗಿಯುತ್ತಿದ್ದಂತೆ ಈ ವರ್ಷ ನಿನ್ನ ಮದುವೆ ಮಾಡಲು ಗ್ಯಾರಂಟಿ ಎಂದು ಘೋಷಿಸಿದರು. ಮನೆಯಲ್ಲಿ ಇದ್ದರೆ ಸಾಧನೆಗೆ ಅವಕಾಶವೆ ಸಿಗುವುದಿಲ್ಲ ಎಂಬುದು ಖಚಿತವಾದದ್ದು ಆಗ. ಈ ಸಂದರ್ಭದಲ್ಲಿ ಕಠಿಣ ನಿರ್ಧಾರವನ್ನು ಕೈಗೊಂಡ ನಾನು 1997ರ ಏಪ್ರಿಲ್ 5ರಂದು ಮುಂಜಾನೆ 5.3 ಗಂಟೆಗೆ ಯಾರೊಬ್ಬರಿಗೂ ಸಣ್ಣ ಸುಳಿವು ಕೊಡದೆ ಮನೆಯಿಂದ ಹೊರ ಬಂದೆ. ಅವತ್ತಿನವರೆಗೂ ನಮ್ಮ ರಾಜಧಾನಿ ಭೂಪಾಲವನ್ನು ನಾನು ನೋಡಿರಲಿಲ್ಲ, ಹೀಗಿದ್ದರೂ ಬಂಡ ಧೈರ್ಯದೊಂದಿಗೆ ರೈಲು ನಿಲ್ದಾಣಕ್ಕೆ ಬಂದಿದ್ದೆ. ಉಟ್ಟ ಬಟ್ಟೆಯಲ್ಲಿಯೇ ಎದ್ದು ಬಂದ ನಾನು ಬೇರೊಂದು ಜೊತೆ ಬಟ್ಟೆಯಾಗಲಿ ಹಣವಾಗಲಿ ನನ್ನಲ್ಲಿ ಇರಲಿಲ್ಲ ಹಾಗಾಗಿ ರೈಲಿನ ಟಿಕೆಟ್ ತೆಗೆದುಕೊಳ್ಳುವುದಕ್ಕೂ ನನ್ನ ಬಳಿ ಹಣವಿರಲಿಲ್ಲ.

ಜಾಸ್ತಿ ಓದಬೇಕು ಕೆಲಸಕ್ಕೆ ಸೇರಬೇಕು ಎಂಬ ಯೋಚನೆ ನನಗೆ ಇತ್ತು. ಆದರೆ ನನಗೆ ಆಶ್ರಯ ನೀಡುವವರು ಇರಲಿಲ್ಲ ಭೂಪಾಲದಲ್ಲಿ ನನ್ನ ಕಾಲೇಜು ಗೆಳತಿಯರಿದ್ದರು ಎಲ್ಲರೂ ಶ್ರೀಮಂತ ಕುಟುಂಬದ ಹಿನ್ನೆಲೆಯವರೇ.ಫ್ರೆಂಡ್ಸ್‌ಗಳ ಸಹಾಯದಿಂದ ಪಿಜಿ ಹುಡುಕಿಕೊಂಡೆ. ಪಿಗಿಗೆ ಸೇರಿಕೊಂಡ ಒಂದು ತಿಂಗಳಲ್ಲಿ ಒಂದು ಕಚೇರಿಯಲ್ಲಿ ಮಾಸಿಕ 500 ರೂಪಾಯಿ ಸಂಬಳಕ್ಕೆ ಆಫೀಸ್ ಅಸಿಸ್ಟೆಂಟ್ ನೌಕರಿಗೆ ಸೇರಿಕೊಂಡೆ ಆರು ತಿಂಗಳ ನಂತರ ಮತ್ತೊಂದು ಕಡೆ 1500 ಸಂಬಳದ ನೌಕರಿ ಸಿಕ್ಕಿತು.

ಡಿಗ್ರಿ ಮಾಡಬೇಕು ಎಂಬ ಆಸೆ ಬಲಗೊಂಡಿದ್ದೆ ಆಗ ತಕ್ಷಣವೇ ಡಿಗ್ರಿ ಸೇರಿಕೊಂಡೆ. ಮುಂದಿನ ಮೂರೇ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಓದಿದೆ. ಈ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದಾಗ ಗೆಳೆಯ ಪ್ರದೀಪ್ ನೆರವಾಗುತ್ತಿದ್ದ. ಗೆಳತಿಯರು ಸಹಾಯಕ್ಕೆ ಬಂದರು ಕಲಾವಿದರಾಗಿದ್ದ ನನ್ನ ತಂದೆ ಬಿಡಿಸುತ್ತಿದ್ದ ಸುಂದರಿಯರ ಕಲಾಕೃತಿಗಳನ್ನು ಗಮನಿಸಿದ್ದರ ಫಲವಾಗಿ ಹೇಗೆ ಡ್ರೆಸ್ ಮಾಡಿಕೊಂಡರೆ ಮುದ್ದಾಗಿ ಕಾಣಬಹುದು ಎಂಬುದು ನನಗೆ ಬೇಗ ಅರ್ಥವಾಗುತ್ತಿತ್ತು. ಹೊಸ ಹೊಸ ಡಿಸೈನ್ ನ ಬಟ್ಟೆ ಧರಿಸಿ ಕಾಲೇಜಿಗೆ ಹೋಗುತ್ತಿದ್ದೆ. ಇದನ್ನ ಕಂಡು ಗೆಳತಿಯರು ಮಾತ್ರವಲ್ಲ ಅಧ್ಯಾಪಕಿಯರು ಸಹ ನನ್ನನ್ನ ಮೆಚ್ಚಿಕೊಳ್ಳುತ್ತಿದ್ದರು. ಡಿಗ್ರಿ ಫ್ಯಾಶನ್ ಡಿಸೈನಿಂಗ್ ಸಂಬಂಧಿಸಿದಂತೆ ಡಿಪ್ಲೋಮೋ ಮಾಡಬೇಕು ಅನ್ನಿಸಿದ್ದು ಆಗ. ಆಗ ಕಂತುಗಳಲ್ಲಿ ಶುಲ್ಕ ಪಾವತಿಸುವೆ ಎಂದು ಹೇಳಿ ಸಂಜೆ ಕಾಲೇಜು ಸೇರಿದೆ ಈ ವೇಳೆಗೆ ನನಗೆ ನೌಕರಿ ನೀಡಿದ್ದ ಬಾಸ್ ಗೆ ನನ್ನ ಹಿನ್ನೆಲೆ ತಿಳಿದಿತ್ತು. ಅದರಿಂದ ನನ್ನನ್ನ ಅಸಭ್ಯವಾಗಿ ನಡೆಸಿಕೊಳ್ಳಲು ಶುರು ಮಾಡಿದರು. ನಾನು ಅದಕ್ಕೆ ಪ್ರತಿರೋಧವನ್ನ ವ್ಯಕ್ತಪಡಿಸುವುದಕ್ಕೆ ನನ್ನನ್ನ ನೌಕರಿಯಿಂದ ಕಿತ್ತು ಹಾಕಿದರು ಎರಡು ತಿಂಗಳು ಪೀಸ್‌ ಕಟ್ಟದೇ ಹೋದಾಗ ಪಿ ಜಿ ಮತ್ತು ಕಾಲೇಜಿನಿಂದ ಏಕಕಾಲಕ್ಕೆ ತೆಗೆದು ಹಾಕಿದರು ಆಗ ಫ್ರೆಂಡ್ ಒಬ್ಬರ ಮನೆಯಲ್ಲಿ ಆಶ್ರಯ ಪಡೆದೆ ಉಳಿದ ಹುಡುಗಿಯರಿಗೆ ಆದರೆ ಹೀಗೆ ಕಷ್ಟಗಳು ಎದುರಾದಾಗ ಸಂತೈಸಲು ಅಣ್ಣ ಅಪ್ಪ ಅಮ್ಮ ಎಲ್ಲರೂ ಇರುತ್ತಿದ್ದರು ಅದನ್ನು ನೆನಪಿಸಿಕೊಂಡಾಗಲಿಲ್ಲ ಅಪ್ಪ ಅಮ್ಮನ ನೆನಪಾಗಿ ಕಣ್ತುಂಬಿ ಬರುತ್ತಿತ್ತು ಆದರೆ ಏನು ಮಾಡು ಅಂತಿರಲಿಲ್ಲ

ಹೊಟ್ಟೆಪಾಡಿಗಾಗಿ ಏನಾದ್ರೂ ಕೆಲಸ ಮಾಡಬೇಕಿತ್ತು ಆಗ ಆಶ್ರಯ ನೀಡಿದ ಗೆಳತಿಯ ಫ್ಯಾಷನ್ ಡಿಸೈನಿಂಗ್ ಕಾಲೇಜ್ ಒಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಕೊಡಿಸಿದಳು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರಲಿಲ್ಲ ಆದರೆ ಪಾಠ ಹೇಳಲು ಅಗತ್ಯವಿದ್ದ ಪಠ್ಯ ಓದಿಕೊಂಡಿದ್ದೆ. ಬಟ್ಟೆಗಳಿಗೆ ಹೇಗೆ ಹೊಸ ರೂಪ ಕೊಡಬಹುದು ಎಂಬ ಚಿತ್ರ ಬರೆದು ವಿವರಿಸುತ್ತಿದೆ. ಹೀಗೆ ಒಂದು ವರ್ಷ ಕಳೆಯಿತು.ಆಗಲೇ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ಉತ್ಸವ ನಡೆಯಿತು. ಅಲ್ಲಿ ನಾನು ವಿನ್ಯಾಸ ಮಾಡಿದ ಬಟ್ಟೆಗಳನ್ನು ಗಮನಿಸಿದ ಮುಂಬೈ ಮೂಲದ ಕಂಪನಿಯೊಂದು ತಿಂಗಳಿಗೆ 11 ಸಾವಿರ ರೂಪಾಯಿ ಸಂಬಳ ಆಫರ್ ನೀಡಿತು ಹಿಂದು ಮುಂದು ಯೋಚಿಸಿದೆ ಭೂಪಾಲ್‌ನಿಂದ ಬಾಂಬೆಗೆ ಬಂದೆ 2500 ಮಾಸಿಕ ಶುಲ್ಕದ ಪಿಜಿಯಲ್ಲಿ ಆಶ್ರಯ ಪಡೆದೆ ಹೀಗೆ ಎರಡು ವರ್ಷ ದುಡಿದು ಹಣ ಜೋಡಿಸಿಕೊಂಡು ಸ್ವಂತ ಉದ್ಯಮ ಆರಂಭಿಸಬೇಕು ಎಂದೆಲ್ಲ ಲೆಕ್ಕ ಹಾಕಿದ್ದೆ. ಅದರ ಮಧ್ಯೆ ಆರೋಗ್ಯ ಸಮಸ್ಯೆಗಳು ನನ್ನನ್ನ ಕಾಡಿದವು. ಆದರೂ ಸಹ ನನ್ನ ಕನಸನ್ನ ಬೆಂಬಿಡದೆ ಹಿಂಬಾಲಿಸುತ್ತಿದ್ದೆ. ಹಲವಾರು ಕಷ್ಟಗಳು ಎದುರಾದವು.

ನಾನು ನನ್ನ ಉದ್ಯಮವನ್ನ ಕೇವಲ ಐದುನೂರು ರೂಪಾಯಿಯ ಬಂಡವಾಳದಲ್ಲಿ ಆರಂಭಿಸಿದೆ. ಆರಂಭವಾದ ಫ್ಯಾಷನ್ ಡಿಸೈನಿಂಗ್ ಉದ್ಯಮ ಈಗ ವಾರ್ಷಿಕ 5 ಕೋಟಿ ರೂಪಾಯಿಗಳ ಟರ್ನ್ ಓವರ್ ಕಾಣುತ್ತಿದೆ.75 ಕ್ಕಿಂತ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದೇನೆ , ಜೀವನದಲ್ಲಿ ಯಾವುದು ಅಸಾಧ್ಯವಲ್ಲ. ಮನಸ್ಸಿದ್ದರೆ ಮಾರ್ಗ ಎನ್ನುತ್ತಾರೆ ವೈಶಾಲಿ ಷಂಡುಗುಲೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!