Success Story: ಶಿಕ್ಷಕಿಯಾಗಿ ವೃತ್ತಿ ಶುರು ಮಾಡಿದ ಮಹಿಳೆ ಈಗ ಲಕ್ಷಾಂತರ ರೂ ಗಳಿಸ್ತಾರೆ

By Suvarna News  |  First Published Mar 21, 2023, 4:38 PM IST

ಆಸಕ್ತಿಯಿದ್ರೆ ಏನನ್ನು ಬೇಕಾದ್ರೂ ಸಾಧಿಸಬಹುದು. ಇದಕ್ಕೆ ನಮ್ಮಲ್ಲಿರುವ ಅನೇಕ ಮಹಿಳೆಯರು ಉತ್ತಮ ನಿದರ್ಶನ. ಶಿಕ್ಷಕಿಯಾದವರಿಗೆ ಸಂಪಾದನೆ ಕಡಿಮೆ ಅನ್ನೋದು ಸುಳ್ಳು. ನಾವು ಹೇಗೆ ಕೆಲಸ ಮಾಡ್ತೇವೆ ಎಂಬುದು ನಮ್ಮ ಆದಾಯವನ್ನು ಅವಲಂಭಿಸಿರುತ್ತದೆ.
 


ಭಾರತದಲ್ಲಿ ಸಾಧನೆ ಮಾಡಿದ ಅನೇಕ ಮಹಿಳೆಯರಿದ್ದಾರೆ. ಅವರ ಪ್ರತಿಯೊಂದು ಹೆಜ್ಜೆ ಜನರಿಗೆ ಮಾದರಿಯಾಗ್ತಿದೆ. ಕಷ್ಟದ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದೆ, ಹಗಲಿರುಳು ದುಡಿದು, ದೊಡ್ಡ ದೊಡ್ಡ ಕಂಪನಿಯನ್ನು ಕಟ್ಟಿದ ಅನೇಕ ಮಹಿಳೆಯರನ್ನು ನಾವು ನೋಡ್ಬಹುದು. ವಿದೇಶದಲ್ಲಿ ಕೆಲಸದ ಆಫರ್ ಬಂದ್ರೂ ದೇಶದಲ್ಲಿಯೇ ಉಳಿದು, ದೇಶದ ಮಕ್ಕಳಿ ಜ್ಞಾನ ವೃದ್ಧಿಗೆ ಶ್ರಮಿಸುತ್ತಿರುವ ಬೈಜುಸ್ ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್  ಇವರಲ್ಲಿ ಒಬ್ಬರು. ದಿವ್ಯಾ ಕೆಲಸ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. 

ಬೈಜುಸ್ (Byjus) ನಲ್ಲಿ ಸಹ ಸಂಪಾದಕಿ ದಿವ್ಯಾ (Divya) ಗೆ ಕೇವಲ 34 ವರ್ಷ. ಅವರ ಒಟ್ಟು ಆಸ್ತಿ ಸುಮಾರು 3.05 ಡಾಲರ್ ಅಂದರೆ ಸುಮಾರು 22.3 ಸಾವಿರ ಕೋಟಿ ರೂಪಾಯಿ. ದಿವ್ಯಾ ತಮ್ಮ ಪತಿಯೊಂದಿಗೆ ಕಂಪನಿ (Company) ಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ನಾವಿಂದು ದಿವ್ಯಾ ಯಾರು, ಹಾಗೆ ಅವರು ಈಗೇನು ಮಾಡ್ತಿದ್ದಾರೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.  

Tap to resize

Latest Videos

ಗಂಡನ ಮನೆಯವ್ರಿಂದ ಬಹಿಷ್ಕಾರಕ್ಕೊಳಗಾಗಿದ್ದ ಮುಸ್ಲಿಂ ಮಹಿಳೆಯಿಂದ ಈಗ ಲಕ್ಷ ಲಕ್ಷ ದುಡಿಮೆ..!

ದಿವ್ಯಾ ಯಾರು? : ದಿವ್ಯಾ ಹುಟ್ಟಿದ್ದು ಬೆಂಗಳೂರಿ (Bangalore) ನಲ್ಲಿ. ಅವರ ತಂದೆ ಅಪೋಲೋ ಹಾಸ್ಪಿಟಲ್‌ನಲ್ಲಿ ನೆಫ್ರಾಲಜಿಸ್ಟ್ ಆಗಿದ್ದಾರೆ ಮತ್ತು ಅವರ ತಾಯಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ತಂದೆ ತಾಯಿಗೆ ದಿವ್ಯಾ ಒಬ್ಬರೇ ಮಗಳು. ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಂಡಿದ್ದ ದಿವ್ಯಾ, ಫ್ರಾಂಕ್ ಆಂಥೋನಿ ಶಾಲೆಯ ನಂತರ ಆರ್ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಬಿಟೆಕ್ ಮಾಡಿದರು. ಓದುತ್ತಿರುವಾಗಲೇ ರವೀಂದ್ರನ್ ಅವರನ್ನು ದಿವ್ಯಾ ಭೇಟಿಯಾಗಿದ್ದರು. ಅವರ ಓದುವ ಆಸೆಯನ್ನು ಕಂಡು ರವೀಂದ್ರನ್ ಅವರು ಶಿಕ್ಷಕರ ವೃತ್ತಿಗೆ ಸೇರಲು ಪ್ರೋತ್ಸಾಹಿಸಿದರು.

2008 ರಲ್ಲಿ ವೃತ್ತಿಜೀವನ (Career) ಪ್ರಾರಂಭಿಸಿದ ದಿವ್ಯಾ : ದಿವ್ಯಾ 2008 ರಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆರಂಭದಲ್ಲಿ ತಾನು ಕಲಿಸಿದ ಮಕ್ಕಳು ತನಗಿಂತ ಕೆಲವೇ ವರ್ಷ ಚಿಕ್ಕವರಾಗಿದ್ದರು.  ಅವರಿಗಿಂತ ಸ್ವಲ್ಪ ಭಿನ್ನವಾಗಿ ಕಾಣಲು ಸೀರೆ ಉಟ್ಟು ತರಗತಿಯಲ್ಲಿ ಪಾಠ ಹೇಳುತ್ತಿದ್ದೆ ಎಂದು ದಿವ್ಯಾ ಹೇಳಿದ್ದಾರೆ. GRI ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ದಿವ್ಯಾಗೆ ಅಮೆರಿಕದ ಅನೇಕ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಸಿಕ್ಕಿತ್ತು. ಆದರೆ ಅವರು ದೇಶದಲ್ಲಿಯೇ ಉಳಿಯಲು ಮತ್ತು ಪತಿ ರವೀಂದ್ರನ್ ಅವರೊಂದಿಗೆ ಕೆಲಸ ಮಾಡಲು ನಿರ್ಧರಿಸಿದರು.

Business Women : ಬೀಚಲ್ಲಿ ಟೀ ಮಾರ್ತಿದ್ದ ಮಹಿಳೆ ಈಗ ಕೋಟ್ಯಾಂತರ ರೂಪಾಯಿ ಒಡತಿ

2011 ರಲ್ಲಿ ಆನ್‌ಲೈನ್ (Online) ಶಿಕ್ಷಣ ಕಂಪನಿ ಪ್ರಾರಂಭ : ದಿವ್ಯಾ, ರವೀಂದ್ರನ್ ವಿದ್ಯಾರ್ಥಿನಿಯಾಗಿ ಅವರ ಟ್ಯೂಷನ್‌ (Tuition) ಗೆ ಹೋಗಿದ್ದರು. ಆದರೆ ನಂತರ ಇಬ್ಬರೂ ಮದುವೆಯಾಗಿ ಕಂಪನಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ದರು. ಅವರ ಪತಿ ರವೀಂದ್ರನ್ ಗಣಿತ ಟ್ಯೂಷನ್ ಮಾಡುತ್ತಿದ್ದರು. 2011 ರಲ್ಲಿ ಆನ್‌ಲೈನ್ ಶಿಕ್ಷಣ ಕಂಪನಿಯನ್ನು ಪ್ರಾರಂಭಿಸಿದರು. ಅದಕ್ಕೆ ಬೈಜುಸ್ ಎಂದು ನಾಮಕರಣ ಮಾಡಲಾಯ್ತು. 

ವೃತ್ತಿಗೆ ಹೆಚ್ಚು ಆದ್ಯತೆ ನೀಡ್ತಾರೆ ದಿವ್ಯಾ :  ಕೆಲಸ ಮತ್ತು ಮನೆಯ ಕೆಲಸಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಕುರಿತು ಮಾತನಾಡಿದ ದಿವ್ಯಾ, ನನಗೆ ಕೆಲಸವೇ ಜೀವನ. ನೀವು ಯಾವುದೇ ಕೆಲಸವನ್ನು ಪೂರ್ಣ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಮಾಡಿದಾಗ, ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ದಿವ್ಯಾ ಹೇಳಿದ್ದಾರೆ. ಇದರ ಹೊರತಾಗಿ  ಅವರು ಬೈಜುಸ್‌ನಲ್ಲಿರುವ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ದೇಶದ ಮೂಲೆ ಮೂಲೆಯಲ್ಲಿ ಬೇರೆ ಬೇರೆ ಸ್ಥಳದಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಇದ್ರಿಂದ ಕಲಿಕೆ ಸುಲಭವಾಗಿದೆ. ಯಾವುದೇ ವಿಷಯವನ್ನು ಅವರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ವಿಷ್ಯ ಸುಲಭವಾಗಿ ಅರ್ಥ ಮಾಡಿಸೋದು ನಮ್ಮ ಉದ್ದೇಶ ಎನ್ನುತ್ತಾರೆ ದಿವ್ಯಾ.  

click me!