ಅದು ಖಾಸಗಿ ಅಂಗ ನಿಜ. ಆದ್ರೆ ದೇಹದ ಒಂದು ಭಾಗ. ಅಲ್ಲಿ ಕಾಡುವ ಕೆಲ ರೋಗಗಳು ಜೀವ ತೆಗೆಯುತ್ತವೆ. ಇಡೀ ಮನೆ ಜವಾಬ್ದಾರಿ ನೋಡಿಕೊಳ್ಳುವ ಮಹಿಳೆಯರು ತಮ್ಮ ರೋಗ ಮುಚ್ಚಿಡುವ ಪ್ರಯತ್ನ ನಡೆಸುತ್ತಾರೆ. ವಿಶೇಷವಾಗಿ ಖಾಸಗಿ ಅಂಗದಲ್ಲಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದಿಲ್ಲ.
ಆರಂಭದಲ್ಲಿ ಚಿಕಿತ್ಸೆ (Treatment) ಸಿಕ್ಕಲ್ಲಿ ಬಹುತೇಕ ಎಲ್ಲ ಖಾಯಿಲೆಗಳು ಗುಣವಾಗುತ್ತವೆ. ಪ್ರಾರಂಭದಲ್ಲಿ ಮಾಡುವ ನಿರ್ಲಕ್ಷ್ಯ ಸಣ್ಣ ಖಾಯಿಲೆಯನ್ನೂ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಮಹಿಳೆಯರು ಖಾಸಗಿ ಅಂಗದಲ್ಲಾಗುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೊಂದು ಕಡೆ ಮುಜುಗರದ ಹೆಸರಿನಲ್ಲಿ ಆಸ್ಪತ್ರೆಗೆ ಹೋಗುವುದಿಲ್ಲ. ಇದ್ರಿಂದ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ. ಮಹಿಳೆಯರನ್ನು ಕಾಡುವ ರೋಗಗಳಲ್ಲಿ ಯೋನಿ ಊತ (vaginal swelling )ಕೂಡ ಒಂದು. ಯೋನಿ ಊತ ಎಂದರೇನು? ಅದಕ್ಕೆ ಕಾರಣವೇನು ಎಂಬುದನ್ನು ಇಂದು ತಿಳಿಯೋಣ.
ಯೋನಿಯು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಜೊತೆಗೆ ಸೋಂಕು (Infection)ಗಳಿಗೆ ಹೆಚ್ಚು ಒಳಗಾಗುತ್ತದೆ. ಇದು ಯೋನಿ ಉರಿಯೂತಕ್ಕೆ ಕಾರಣವಾಗುತ್ತದೆ, ಯೂನಿ ಊತಕ್ಕೆ ಅನೇಕ ಕಾರಣಗಳಿವೆ. ಇದಕ್ಕಿಂತ ಮೊದಲು ಯೋನಿ ಊತದ ಲಕ್ಷಣಗಳನ್ನು ನೋಡೋಣ.
ಯೋನಿ ಊತದ ಲಕ್ಷಣಗಳು (Symptoms of Vaginal Swelling): ಇದು ವಯಸ್ಸಿಗೆ ತಕ್ಕಂತೆ ಭಿನ್ನವಾಗಿರುತ್ತವೆ.
ಯೋನಿ ಡಿಸ್ಜಾರ್ಜ್ ನ ಬಣ್ಣದಲ್ಲಿ ಬದಲಾವಣೆ, ವಾಸನೆ
ಯೋನಿಯಲ್ಲಿ ನೋವು ಹಾಗೂ ತುರಿಕೆ
ಸಂಭೋಗದ ವೇಳೆ ನೋವು
ಮೂತ್ರ ವಿಸರ್ಜನೆ ವೇಳೆ ನೋವು
ಸ್ವಲ್ಪ ಪ್ರಮಾಣದಲ್ಲಿ ರಕ್ತಸ್ರಾವ ಯಾವುದರಿಂದ ಯೋನಿ ಊತ ಕಾಣಿಸಿಕೊಂಡಿದೆ ಎಂಬುದನ್ನು ವೈದ್ಯರು ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡುತ್ತಾರೆ.
ಯೋನಿ ಊತಕ್ಕೆ ಕಾರಣ
ಅಲರ್ಜಿ (Allergy): ಅಲರ್ಜಿ ಕೂಡ ಯೋನಿ ಊತಕ್ಕೆ ಕಾರಣವಾಗುತ್ತದೆ. ಸಾಬೂನುಗಳು,ಲೂಬ್ರಿಕಂಟ್,ಟ್ಯಾಂಪೂನ್,ಪ್ಯಾಡ್,ಯೋನಿ ಗರ್ಭನಿರೋಧಕಗಳು, ಬಾಡಿ ಲೋಷನ್,ಕ್ರೀಮ್,ಲ್ಯಾಟೆಕ್ಸ್ ಕಾಂಡೋಮ್ ಗಳು ಅಲರ್ಜಿಯನ್ನುಂಟು ಮಾಡಬಹುದು. ಯಾವ ಉತ್ಪನ್ನ ಬಳಕೆಯಿಂದ ತುರಿಕೆ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಿ,ಅದರ ಬಳಕೆ ಬಿಡುವುದು ಸೂಕ್ತ.
ಕಿರಿಕಿರಿ : ಅಲರ್ಜಿ ಸಮಸ್ಯೆ ಇಲ್ಲದೆ ಹೋದ್ರೂ ಕೆಲವೊಂದು ವಸ್ತುಗಳ ಬಳಕೆಯಿಂದ ಈ ಸಮಸ್ಯೆ ಕಾಡಬಹುದು. ಬಟ್ಟೆ ಸೋಪ್,ಮೈ ಸೋಪ್,ಸುಗಂಧ ದ್ರವ್ಯ,ಟಾಯ್ಲೆಟ್ ಪೇಪರ್,ಸಾರ್ವಜನಿಕ ಶೌಚಾಲಯ ಬಳಕೆ ಇವೆಲ್ಲವುಗಳಿಂದ ಕೆಲವೊಮ್ಮೆ ಯೋನಿ ಊತ ಕಾಣಿಸಿಕೊಳ್ಳುತ್ತದೆ.
ಒರಟು ಸಂಭೋಗ(Rough Intercourse): ಸೆಕ್ಸ್ ಕೂಡ ಯೋನಿಯ ಊತಕ್ಕೆ ಕಾರಣವಾಗಬಹುದು. ಯೋನಿ ಸಾಕಷ್ಟು ನಯಗೊಳ್ಳದೆ ಹೋದಲ್ಲಿ,ಶುಷ್ಕವಾಗಿದ್ದಾಗ ಶಾರೀರಿಕ ಸಂಬಂಧ ಬೆಳೆಸಿದರೆ ನೋವು ಕಾಣಿಸಿಕೊಳ್ಳುತ್ತದೆ. ಇದು ಯೋನಿಯ ಊತಕ್ಕೆ ಕಾರಣವಾಗಬಹುದು. ಒರಟಾದ ಸಂಭೋಗ, ಯೋನಿಯ ಭಾಗಕ್ಕೆ ಹಾನಿಯುಂಟು ಮಾಡುತ್ತದೆ. ಇದು ಸೋಂಕಿನ ಅಪಾಯ ಹೆಚ್ಚಿಸುತ್ತದೆ.
ಬಾರ್ಥೋಲಿನ್ ಚೀಲ (Bartholins Cysts) : ಬಾರ್ಥೋಲಿನ್ ಗ್ರಂಥಿಗಳು ಯೋನಿ ಯ ಎರಡೂ ಬದಿಗಳಲ್ಲಿವೆ. ಅವು ತೇವಾಂಶವನ್ನು ಸ್ರವಿಸುತ್ತದೆ ಮತ್ತು ನಯಗೊಳಿಸಲು ನೆರವಾಗುತ್ತವೆ. ಈ ಗ್ರಂಥಿ ಸೋಂಕಿಗೆ ಒಳಗಾದಾಗ ಹುಣ್ಣಾಗುತ್ತದೆ. ಬಾವು ಚಿಕ್ಕದಿದ್ದಲ್ಲಿ ಕೆಲವೊಮ್ಮೆ ತಾನಾಗಿಯೇ ಇದು ಸರಿ ಹೋಗುತ್ತದೆ. ವಿಪರೀತ ನೋವು,ರಕ್ತಸ್ರಾವವಾದಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೆ.
Bedroom secret: ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?
ಸೆಲ್ಯುಲೈಟಿಸ್ (Cellulitis) : ಸೆಲ್ಯುಲೈಟಿಸ್ ಎಂಬುದು ಚರ್ಮದ ಒಳ ಪದರಗಳ ಬ್ಯಾಕ್ಟೀರಿ ಸೋಂಕು. ಪ್ಯುಬಿಕ್ ಪ್ರದೇಶವನ್ನು ಶೇವ್ ಮಾಡುವಾಗ ಸೋಂಕು ತಗಲುವ ಸಾಧ್ಯತೆಯಿರುತ್ತದೆ. ನಿಯಮಿತವಾಗಿ ಪ್ಯುಬಿಕ್ ಪ್ರದೇಶವನ್ನು ಶೇವ್ ಮಾಡಿ,ಸ್ವಚ್ಚವಾಗಿಟ್ಟುಕೊಂಡರೆ ಈ ಸಮಸ್ಯೆ ಕಾಡುವುದಿಲ್ಲ.
ಬ್ಯಾಕ್ಟೀರಿಯಾ ಯೋನಿನೋಸಿಸ್ (Bacterial Vaginosis) : ಯೋನಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯು ಯೋನಿನೋಸಿಸ್ ಗೆ ಕಾರಣವಾಗಬಹುದು. ಊತ ಮತ್ತು ದುರ್ವಾಸನೆ,ಬೂದು ಬಣ್ಣದ ವಿಸರ್ಜನೆ ಇದ್ರ ಲಕ್ಷಣವಾಗಿದೆ.
ಯೀಸ್ಟ್ ಸೋಂಕು (Yeast Infection) : ಯೀಸ್ಟ್ ಸೋಂಕು ಕ್ಯಾಂಡಿಡಾ ಫಂಗಲ್ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತದೆ. ಇದು ಯೋನಿ ಊತಕ್ಕೆ ಕಾರಣವಾಗಬಹುದು.ಉರಿ,ಲೈಂಗಿಕತೆ ಮತ್ತು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಯೋನಿ ಕೆಂಪಾಗುವುದು ಇದ್ರ ಲಕ್ಷಣವಾಗಿದೆ.
Heart Broken : ಪ್ರೀತಿಯ ಚಾಕು ಚುಚ್ಚಿಸಿಕೊಂಡ ಹುಡುಗಿಯರ ಈ ವಿಷ್ಯವಿದು
ಎಸ್ ಟಿಐ ಮತ್ತು ಸರ್ವಿಸೈಟಿಸ್ : ಕೆಲವು ಸೋಂಕುಗಳು ಗರ್ಭಕಂಠದ ಉರಿಯೂತವನ್ನು ಉಂಟುಮಾಡಬಹುದು. ಇದನ್ನು ಸರ್ವಿಸೈಟಿಸ್ ಎಂದು ಕರೆಯಲಾಗುತ್ತದೆ. ಸಂಭೋಗದ ಸಮಯದಲ್ಲಿ ನೋವು, ಮುಟ್ಟಿನ ಸಮಯದಲ್ಲಿ ಅತಿ ರಕ್ತಸ್ರಾವ ಗರ್ಭಕಂದ ರೋಗಲಕ್ಷಣಗಳಾಗಿವೆ.
ಯೋನಿಯಲ್ಲಿ ಸಣ್ಣ ಬದಲಾವಣೆಯಾದರೂ,ನೋವು,ಕಿರಿಕಿರಿ ಶುರುವಾದರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯ.