ಐಟಿ ಕೆಲ್ಸ ಬಿಟ್ಟು ಬೆಂಗಳೂರಲ್ಲಿ ಆಟೋ ಓಡಿಸ್ತಿರೋ ಲೇಡಿ: ಅಮೆರಿಕದಲ್ಲಿಯೂ ಕನ್ನಡತಿಯ ಹವಾ

Published : Jun 07, 2026, 04:44 PM IST
Auto Netra

ಸಾರಾಂಶ

ಬೆಂಗಳೂರಿನ ನೇತ್ರಾ, ಐಟಿ ಕ್ಷೇತ್ರದ ಒತ್ತಡದ ಬದುಕನ್ನು ತ್ಯಜಿಸಿ ಆಟೋ ಚಾಲಕಿಯಾದರು. ಹಣಕ್ಕಿಂತ ನೆಮ್ಮದಿಯೇ ಮುಖ್ಯವೆಂದು ಸಾರುವ ಇವರು, ಈಗ ತಿಂಗಳಿಗೆ 60,000 ರೂ. ಸಂಪಾದಿಸುತ್ತಿದ್ದು, ಇವರ ಕಥೆ ಅಮೆರಿಕಾದಲ್ಲಿಯೂ ವೈರಲ್ ಆಗಿದೆ.

ಐಟಿ-ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಬೇಕು ಎನ್ನೋದು ಲಕ್ಷಾಂತರ ಮಂದಿಯ ಕನಸಾಗಿರುತ್ತದೆ. ಆದರೆ ಅಲ್ಲಿ ಹೋದ ಮೇಲೆ ಅಲ್ಲಿಯ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಲಕ್ಷ ಲಕ್ಷದಲ್ಲಿ ತಿಂಗಳ ಸಂಬಳ ಬಂದರೂ ನೆಮ್ಮದಿಯೇ ಇಲ್ಲದ ಮೇಲೆ ಇದೆಂಥ ಜೀವನ ಎಂದು ಅಂದುಕೊಂಡು ಆ ಕ್ಷೇತ್ರದಿಂದ ಹೊರಕ್ಕೆ ಬರುವವರು ಆಗಾಗ್ಗೆ ಕಾಣಸಿಗುತ್ತಾರೆ. ಅಂಥವರಲ್ಲಿ ಒಬ್ಬರು ಬೆಂಗಳೂರಿನ ನೇತ್ರಾ.

ಹಣಕ್ಕಿಂತಲೂ ನೆಮ್ಮದಿ ಮುಖ್ಯ

ಐಟಿ ಕಂಪೆನಿ ಬಿಟ್ಟು ಆಟೋ ಓಡಿಸುವುದು ಎಂದರೆ ಅದೇನೂ ಸುಮ್ಮನೇ ಅಲ್ಲ. ಆದರೂ ಹಣಕ್ಕಿಂತಲೂ ಮುಖ್ಯವಾದದ್ದು ನೆಮ್ಮದಿ ಎನ್ನುವ ಸತ್ಯ ಕಂಡುಕೊಂಡಾಗ ಮನುಷ್ಯ ಸಹಜವಾಗಿ ಇಂಥ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ನೇತ್ರಾ. ಇದೀಗ ಇವರು ಬೆಂಗಳೂರು ಮೀರಿ, ಭಾರತವನ್ನೂ ದಾಟಿ ಅಮೆರಿಕದಲ್ಲಿಯೂ ಹವಾ ಸೃಷ್ಟಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿಯೂ ಐಟಿ ಲೇಡಿಯ ವಿಡಿಯೋ ವೈರಲ್​ ಆಗುತ್ತಿವೆ. ಐಟಿ ಕ್ಷೇತ್ರವನ್ನು ಬಿಟ್ಟಿದ್ದಾರೆ ಎನ್ನುವುದೇ ದೊಡ್ಡ ಮಟ್ಟಿಗಿನ ಚರ್ಚೆಯಾಗಿದೆ.

ನಿದ್ದೆ ಮಾಡಲೂ ಆಗ್ತಿರಲಿಲ್ಲ

ನ್ಯೂಸೋನ್ಯೂಸು ಚಾನೆಲ್​ಗೆ ನೇತ್ರಾ ಅವರು ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಐಟಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ಹೇಗೆ ನಿದ್ದೆ ಕೂಡ ಮಾಡಲು ಸಮಯಾವಕಾಶ ಇರಲಿಲ್ಲ ಎನ್ನುವ ಬಗ್ಗೆ ನೇತ್ರಾ ತಿಳಿಸಿದ್ದಾರೆ. ಅತಿ ದೂರದಲ್ಲಿ ರೈಲು ಹಿಡಿದು ಆಫೀಸ್​ಗೆ ಹೋಗಿ ಮತ್ತೆ ಮನೆಗೆ ಬಂದು 2-3 ಗಂಟೆ ನಿದ್ದೆ ಮಾಡಿ ಮತ್ತೆ ಕಚೇರಿಗೆ ಹೋಗುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡಿರುವ ನೇತ್ರಾ, ತಮ್ಮ ಮಕ್ಕಳಿಗೂ ಟೈಮ್​ ಕೊಡಲು ಆಗುತ್ತಿರಲಿಲ್ಲ. ಆ ದಿನಗಳನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ನೋವಾಗತ್ತೆ ಎಂದಿದ್ದಾರೆ.

ಇದೇ ಕಾರಣಕ್ಕೆ ಆಟೋ ವೃತ್ತಿ ಆಯ್ದುಕೊಂಡೆ. ಜನ ಏನೇನೋ ಹೇಳ್ತಾರೆ. ಅದನ್ನು ಕೇಳುತ್ತಾ ಕುಳಿತರೆ ಆಗುವುದಿಲ್ಲ. ತಿಂಗಳಿಗೆ ಸಾಕಷ್ಟು ಸಂಪಾದನೆ ಮಾಡುತ್ತೇನೆ. ಈ ಕೆಲಸದಲ್ಲಿ ಅವರಿಗೆ ಈಗ ತಿಂಗಳಿಗೆ ಸುಮಾರು 60,000 ರೂಪಾಯಿ ಆದಾಯ ಬರುತ್ತಿದೆ. "ನಾನು ಈಗ ಮೊದಲಿನಿಗಿಂತ ಹೆಚ್ಚು ಸಂತೋಷವಾಗಿದ್ದೇನೆ. ನನ್ನದೇ ಆದ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತೇನೆ, ಇದು ನನಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಶಾಂತಿ ನೀಡಿದೆ" ಎಂದಿದ್ದಾರೆ ನೇತ್ರಾ.

ಕ್ಯಾಲಿಫೋರ್ನಿಯಾದಲ್ಲಿ ಹವಾ

ಹೀಗೆ ವಿದೇಶಿಗರೊಬ್ಬರು ಇವರ ಆಟೋದಲ್ಲಿ ಬಂದಾಗ ಮಾತನಾಡುವ ಮಧ್ಯೆ ತಮ್ಮ ಐಟಿ ಅನುಭವವನ್ನು ಹಂಚಿಕೊಂಡಿದ್ದರಂತೆ ನೇತ್ರಾ. ಅದನ್ನು ಕೇಳಿದ ಆ ಪ್ರಯಾಣಿಕನಿಗೆ ಸಿಕ್ಕಾಪಟ್ಟೆ ಅಚ್ಚರಿಯಾಗಿದೆ. ಆಟೋ ಓಡಿಸುವಾಗ ಹಿಂದುಗಡೆಯಿಂದ ವಿಡಿಯೋ ಮಾಡುತ್ತಾ ಹೋಗಿದ್ದಾನೆ. ಅದು ನೇತ್ರಾ ಅವರ ಗಮನಕ್ಕೂ ಬಂದಿರಲಿಲ್ಲ. ಸಹಜವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ಇದರಿಂದ ಪ್ರೇರೇಪಿತರಾದ ಆ ಪ್ರಯಾಣಿಕ, ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಇದನ್ನು ಶೇರ್​ ಮಾಡಿದ್ದೇ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿಯೂ ನೇತ್ರಾ ಹವಾ ಜೋರಾಗಿ ನಡೆದಿದೆ. ಅಲ್ಲಿಂದಲೂ ಸಿಕ್ಕಾಪಟ್ಟೆ ಜನರು ನೇತ್ರಾ ಅವರ ಬಗ್ಗೆ ತಿಳಿದುಕೊಳ್ಳಲು ತವಕರಾಗಿರುವ ಬಗ್ಗೆ ಹೇಳಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Shocking: ಶೂಟಿಂಗ್‌ ವೇಳೆ ಕಾಜೋಲ್‌ ತಲೆಗೆ ಭಾರೀ ಪೆಟ್ಟು; ಶಾರುಖ್‌ ಮರೆತ ನಟಿ ಆ ನಟನನ್ನು ಮಾತ್ರ ಮರೆಯಲೇ ಇಲ್ಲ!
ಫಳಫಳ ಹೊಳೆವ ತ್ವಚೆಗೆ, ಕಲೆ ಮುಕ್ತ ಮುಖಕ್ಕೆ ​ ಮ್ಯಾಂಗೋ ಫೇಸ್​ ಪ್ಯಾಕ್​: ಸಿಹಿಕಹಿ ಚಂದ್ರು ಟಿಪ್ಸ್​