ಈಕೆಯ ಎಲ್ಲಾದ್ರೂ ನೋಡಿರುವಿರಾ? ನಿಮ್ಮ ಅಂಗಡಿಗೂ ಬಂದಾಳು ಹುಷಾರ್​- ಕಂಡ್ರೆ ಕೂಡಲೇ ತಿಳಿಸಿ

Published : May 23, 2026, 06:39 PM IST
Saree Theif

ಸಾರಾಂಶ

ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬಳು ಅಂಗಡಿಯಲ್ಲಿ ಡ್ರೆಸ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕರು ಇತರರನ್ನು ಎಚ್ಚರಿಸಲು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಕಳ್ಳರು ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಮೊದಲು ಮೂಡುವುದೇ ಪುರುಷರ ಮುಖ. ಆದರೆ ಕಳ್ಳತನದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲ. ಇವರ ಬಹುಸಂಖ್ಯೆ ಕಾಣಿಸುವುದು ಬಟ್ಟೆ ಅಂಗಡಿಗಳಲ್ಲಿ, ಚಿನ್ನಾಭರಣಗಳ ಷೋರೂಮ್​ಗಳಲ್ಲಿ. ಅದೂ ಬುರ್ಖಾ ಹಾಕಿಕೊಂಡು ಬಂದು ಕಳುವು ಮಾಡುವುದೇ ಹೆಚ್ಚು. ಹೀಗೆ ಮಾಡಿದರೆ ಯಾರಿಗೂ ತಾವು ಕಾಣಿಸುವುದಿಲ್ಲ, ಸಿಸಿಟಿವಿಯಲ್ಲಿ ಕಂಡರೂ ಪತ್ತೆ ಹಚ್ಚಲು ಆಗುವುದಿಲ್ಲ ಎನ್ನುವ ಖುಷಿ ಅವರಿಗೆ. ಇದೇ ಕಾರಣಕ್ಕೆ ಅದೆಷ್ಟೋ ಬಟ್ಟೆ ಅಂಗಡಿಗಳಲ್ಲಿ, ಚಿನ್ನದ ಅಂಗಡಿಗಳಲ್ಲಿ ಇವರದ್ದೇ ಕಾರುಬಾರು.

ಅದ್ಯಾವ ಮಾಯೆಯಿಂದ ಕಳುವು!

ಹಾಗೆಂದು ಸುಮ್ಮನೇ ಸೀರೆ ಉಟ್ಟುಕೊಂಡು ಬರುವವರೇನೂ ಕಮ್ಮಿ ಇಲ್ಲ ಎನ್ನಿ. ಅದ್ಯಾವ ಮಾಯೆಯಲ್ಲಿ ಸೀರೆಯ ಒಳಗೆ ಎಲ್ಲರ ಎದುರೇ ಸೀರೆ, ಡ್ರೆಸ್​ಗಳನ್ನು ತುಂಬಿಸಿಕೊಳ್ತಾರೆ ಎಂದರೆ ಸಿಸಿಟಿವಿ ನೋಡಿದಾಗ ನೋಡಿದವರು ದಂಗಾಗಲೇಬೇಕು. ಬಟ್ಟೆಗಳನ್ನೆಲ್ಲಾ ಸೀರೆ ಎತ್ತಿ ಒಳಗೆ ತುಂಬಿಸಿಕೊಂಡು ಏನೂ ಆಗದೇ ಇರುವವರ ರೀತಿ ಆರಾಮಾಗಿ ಹೋಗುತ್ತಾರೆ. ಸಿಸಿಟಿವಿಯಲ್ಲಿಯೂ ಕೆಲವೊಮ್ಮೆ ಅವರ ಮುಖ ಸ್ಪಷ್ಟವಾಗಿ ಕಾಣುವುದೇ ಇಲ್ಲ. ಏಕೆಂದರೆ ಇಂಥವರು ಗುಂಪು ಗುಂಪಾಗಿ ಬಂದು, ಕಣ್ಣಿನಲ್ಲಿಯೇ ಸನ್ನೆ ಮಾಡಿಕೊಂಡು ಅಂಗಡಿಯಲ್ಲಿ ಎಷ್ಟೇ ಜನ ಸೇಲ್ಸ್​ಗರ್ಲ್ಸ್​, ಸೇಲ್ಸ್​ಮ್ಯಾನ್​ ಇದ್ದರೂ ಅವರ ಕಣ್ಣುತಪ್ಪಿಸಿ ಬಟ್ಟೆ, ಚಿನ್ನ ಕದಿಯುವರಲ್ಲಿ ಇವರು ಎಕ್ಸ್​ಪರ್ಟ್​.

ಡ್ರೆಸ್​ ಕಳ್ಳಿ

ಅಂಥವರಲ್ಲಿ ಒಬ್ಬರು ಈ ವಿಡಿಯೋದಲ್ಲಿ ಇರುವ ಕಳ್ಳಿ. devanandvestment ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಈಕೆಯ ವಿಡಿಯೋ ಶೇರ್​ ಮಾಡಲಾಗಿದೆ. ಕಲಬುರಗಿಯ  ತಮ್ಮ ಅಂಗಡಿಗೆ ಬಂದಿರುವ ಈ ಕಳ್ಳಿ, ತನ್ನ ಜೊತೆ ಇನ್ನೊಬ್ಬಳನ್ನು ಕರೆದುಕೊಂಡು ಬಂದಿದ್ದಳು. ತಲಾ ಐದು ಸಾವಿರ ರೂಪಾಯಿಗಳ ಮೂರು ಡ್ರೆಸ್​ ಕಳ್ಳತನ ಮಾಡಿಕೊಂಡು ಹೋಗಿದ್ದಾಳೆ. ನಮಗೆ ಯಾರಿಗೂ ಈ ವಿಷಯ ಗೊತ್ತಾಗಲೇ ಇಲ್ಲ. ಅವಳ ಜೊತೆ ಬಂದಿರುವ ಇನ್ನೋರ್ವ ಮಹಿಳೆ ಬ್ಯಾಗ್​ನಲ್ಲಿ ಬಟ್ಟೆ ತುರುಕುವುದು ಸಿಸಿಟಿವಿಯಲ್ಲಿ ಕಂಡಿರುವುದಾಗಿ ಸಿಸಿಟಿವಿ ಫುಟೇಜ್​ ಅನ್ನು ಅವರು ಹಾಕಿದ್ದಾರೆ. ಕೈಯಲ್ಲಿ ಸುಟ್ಟುಹೋಗಿರುವ ಮಾರ್ಕ್​ ಇದೆ. ಇದನ್ನು ಗಮನಿಸಿ ಎಂದಿದ್ದಾರೆ.

ಮುಖ ಕಾಣಿಸುತ್ತಿದೆ

ತಮಗಾಗಿರುವ ಮೋಸ ಬೇರೆ ಅಂಗಡಿಯವರಿಗೂ ಆಗಬಹುದು, ಈಕೆಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅದನ್ನು ಶೇರ್​ ಮಾಡಲಾಗಿದೆ. ನಿಮ್ಮ ಅಂಗಡಿಗೆ ಈಕೆ ಬಂದರೆ ಕೂಡಲೇ ತಮಗೆ ತಿಳಿಸುವಂತೆ ಅವರು ಇನ್​ಸ್ಟಾಗ್ರಾಮ್​ ವಿಡಿಯೋ ಮೂಲಕ ಕೋರಿಕೊಂಡಿದ್ದಾರೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೊಂಟದ ಅಂದ ಹೆಚ್ಚಿಸೋ ಈ ಜ್ಯುವೆಲರಿ ಈಗ ಎಲ್ಲೆಡೆ ಟ್ರೆಂಡ್: ಡಿಸೈನ್ ನೋಡಿದ್ರೆ ನೀವೂ ಟ್ರೈ ಮಾಡ್ತೀರಾ!
ಒಗ್ಗರಣೆಗೆ ಒಂದೇ ಒಂದು ಚಮಚ ಕಡಲೆ ಹಿಟ್ಟು ಹಾಕಿ ನೋಡಿ.. ಊಟದ ರುಚಿ ಡಬ್ಬಲ್ ಆಗೋದು ಗ್ಯಾರಂಟಿ