Manasi Parekh: ಮತ್ತೆ ವೈರಲ್ ಆಯ್ತು ಅಮ್ಮ ಮಗಳ ಈ ಕ್ಯೂಟ್‌ ವಿಡಿಯೋ

By Suvarna News  |  First Published Mar 17, 2023, 12:25 PM IST

ಕೆಲವೊಂದು ಧ್ವನಿಯನ್ನು ಮತ್ತೆ ಮತ್ತೆ ಕೇಳ್ಬೇಕು ಎನ್ನಿಸುತ್ತದೆ. ಕೆಲವೊಂದು ವಿಡಿಯೋ ಕೂಡ ಹಾಗೆ. ಸುಮಧುರ ಧ್ವನಿ ಜೊತೆ ಮುದ್ದಾದ ಮಗು ಜೊತೆಯಲ್ಲಿರುವ ವಿಡಿಯೋ ಇನ್ಸ್ಟಾದಲ್ಲಿ ಪೋಸ್ಟ್ ಆದ್ರೆ ನೋಡದೆ ಇರೋಕೆ ಆಗುತ್ತಾ? 
 


ತಾಯಿಗೆ ಮಗುವೇ ಸರ್ವಸ್ವ. ಇದನ್ನು ಎಲ್ಲ ತಾಯಂದಿರುವ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ತಾರೆ. ಮನೆಗೆ ಮಗು ಬಂತೆಂದ್ರೆ ತಾಯಿ ಎಲ್ಲವನ್ನೂ ಮರೆಯುತ್ತಾಳೆ. ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುವ ತಾಯಂದಿರು, ಇದು ಸಾಮಾಜಿಕ ಜಾಲತಾಣದ ಯುಗವಾಗಿರೋದ್ರಿಂದ ಅನೇಕ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಾರೆ ಕೂಡ. ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಇದ್ರಲ್ಲಿ ಹಿಂದೆಬಿದ್ದಿಲ್ಲ. ಅನೇಕ ಕಲಾವಿದರು ತಮ್ಮ ಮಕ್ಕಳ ಜೊತೆಗಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂತೋಷ ನೀಡ್ತಾರೆ.

ಇದ್ರಲ್ಲಿ ನಟಿ, ಗಾಯಕಿ, ನಿರ್ಮಾಪಕಿ ಸೇರಿದಂತೆ ಮಲ್ಟಿ ಟ್ಯಾಲೆಂಟೆಡ್ (Multitalented ) ಮಾನಸಿ ಪರೇಖ್ (Manasi Parekh) ಕೂಡ ಸೇರಿದ್ದಾರೆ. ಸ್ಟಾರ್ ಪ್ಲಸ್‌ನ ಜಿಂದಗಿ ಕಾ ಹರ್ ರಂಗ್‌ನ ಗುಲಾಲ್ ಪಾತ್ರದಲ್ಲಿ ನಟಿಸಿ ಮಾನಸಿ ಸಾಕಷ್ಟು ಹೆಸರು ಮಾಡಿದ್ದರು. ಆದ್ರೀಗ ಮಾನಸಿ ಸಿನಿಮಾ (movie) ರಂಗಕ್ಕೆ ಕಾಲಿಟ್ಟು ಅಲ್ಲಿ ಧಮಾಲ್ ಮಾಡ್ತಿದ್ದಾರೆ. ಈಗ ಮಾನಸಿ ಕೈನಲ್ಲಿ ಮೂರ್ನಾಲ್ಕು ಚಿತ್ರಗಳಿವೆ. ಪ್ರಸಿದ್ಧ  ಜಾಹೀರಾತಿನಲ್ಲೂ ಮಾನಸಿ ಕಾಣಿಸಿಕೊಳ್ತಿದ್ದಾರೆ. ಮಾನಸಿ ನಟನೆಯ ಕಂಗ್ರ್ಯಾಜುಲೆಷನ್ಸ್ (Congratulations) ಹಾಗೂ ಕುಚ್ ಎಕ್ಸ್ ಪ್ರೆಸ್ ಈ ವರ್ಷದ ಸಿನಿಮಾಗಳಲ್ಲಿ ಒಂದಾಗಿದೆ.

Tap to resize

Latest Videos

ಈಗ ಈ ನಟಿಯ ಸುದ್ದಿ ಯಾಕೆ ಬಂತು ಅಂತಾ ನೀವು ಕೇಳ್ಬಹುದು. ಅದಕ್ಕೆ ಕಾರಣ, ಮಾನಸಿಯ ಹಳೆಯ ವಿಡಿಯೋ (Video). ಯಸ್, ಮಾನಸಿ ತನ್ನ ಮಗಳ ಜೊತೆ ಹಾಡಿದ್ದ ವಿಡಿಯೋ ಒಂದು ಈಗ ಮತ್ತೆ ವೈರಲ್ ಆಗಿದೆ. thesingercafe ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೆ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಮತ್ತೆ ವೈರಲ್ ಆಗಿದ್ದು, ಅಭಿಮಾನಿಗಳು ಮಾನಸಿ ಧ್ವನಿ (voice) ಗೆ ಭೇಷ್ ಎಂದಿದ್ದಾರೆ. ತಾಯಿ ಹಾಗೂ ಮುದ್ದಾದ ಮಗುವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. 

ಮೊದಲೇ ಹೇಳಿದಂತೆ ಇದು ಹಳೆಯ ವಿಡಿಯೋ. ಮಾನಸಿ ಮದುವೆಯಾಗಿ 15 ವರ್ಷ ಕಳೆದಿದೆ. ನವೆಂಬರ್ 28, 2016 ಮಾನಸಿ, ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಮಾನಸಿ ಆಗಾಗ ಮಗಳ ಜೊತೆಗಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.

ಈಗ ವೈರಲ್ ಆದ ವಿಡಿಯೋ 2017ರಲ್ಲಿ ಪೋಸ್ಟ್ ಆಗಿದ್ದು. ಮಾನಸಿ ಮಗುವಿನ ಹೆಸರು ನಿರ್ವಿ ಗೋಹಿಲ್. ಮಾನಸಿ ಪರೇಖ್, 2017ರಲ್ಲಿ ತನ್ನ ಮಗುವಿನೊಂದಿಗಿರುವ ವೀಡಿಯೊ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ (Instagram) ನಲ್ಲಿ ಹಂಚಿಕೊಂಡಿದ್ದರು. ಅಲ್ಲಿ ಅವರು ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಯೇ ಜವಾನಿ ಹೈ ದೀವಾನಿ ಸಿನಿಮಾದ ಜನಪ್ರಿಯ ಹಾಡು, ಕಬೀರಾ ಹಾಡನ್ನು ಹಾಡಿದ್ರು.

ತಾಯಿ ಹಾಗೂ ಮಗು ಹಾಸಿಗೆ ಮೇಲೆ ಮಲಗಿದ್ದಾರೆ. ಮಾನಸಿ ಹಾಡನ್ನು ಹಾಡ್ತಿದ್ದಾರೆ. ನಿರ್ವಿ ಗೋಹಿಲ್ ತನ್ನ ತಾಯಿಯ ಸುಮಧುರ  ಧ್ವನಿಯನ್ನು ಕೇಳುತ್ತಾ ನಗುತ್ತಿದ್ದಾಳೆ. ಈ ವಿಡಿಯೋವನ್ನು ಫೋಸ್ಟ್ ಮಾಡಿದ್ದ ಮಾನಸಿ, 40 ಡಿಗ್ರಿ ಸೆಕೆಯಲ್ಲೂ ನಾನು ಈ ಸುಂದರ ಹಾಡನ್ನು ಹಾಡಿದ್ದೇನೆ. ಇದು ನಿಮ್ಮ ಹೃಯದ ಕರಗಿಸುತ್ತೆ ಎಂಬುದು ಖಚಿತವೆಂದು ಶೀರ್ಷಿಕೆ ಹಾಕಿದ್ದರು. ಆಗ ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಭಿಮಾನಿಗಳು ಮಾನಸಿ ಮಗಳು ಹಾಗೂ ಆಕೆ ಹಾಡನ್ನು ಮೆಚ್ಚಿಕೊಂಡಿದ್ದರು. ಮಾನಸಿ ಇನ್ಸ್ಟಾಗ್ರಾಮ್ ಗೆ ಈ ವಿಡಿಯೋ ಹಾಕಿ ಅನೇಕ ವರ್ಷಗಳೇ ಕಳೆದಿವೆ. ಮಾನಸಿ ಮಗಳು ನಿರ್ವಿ ಈಗ ದೊಡ್ಡವಳಾಗಿದ್ದಾಳೆ. ಆದ್ರೂ ಜನರಿಗೆ ಮಾನಸಿ ಆ ವಿಡಿಯೋ ಈಗ್ಲೂ ಹತ್ತಿರವಾಗಿದೆ ಎಂಬುದಕ್ಕೆ ಆ ವಿಡಿಯೋ ಮತ್ತೆ ವೈರಲ್ ಆಗಿದ್ದೇ ಸಾಕ್ಷಿ. 
 

click me!