Online Shopping ಹುಚ್ಚಿದ್ಯಾ? ಬೆಲೆ ಬಾಳುವ ಆಭರಣ ಆರ್ಡರ್ ಮಾಡೋ ಮುನ್ನ ಇರಲಿ ಎಚ್ಚರ!

Published : Nov 15, 2022, 01:54 PM IST
Online Shopping ಹುಚ್ಚಿದ್ಯಾ? ಬೆಲೆ ಬಾಳುವ ಆಭರಣ ಆರ್ಡರ್ ಮಾಡೋ ಮುನ್ನ ಇರಲಿ ಎಚ್ಚರ!

ಸಾರಾಂಶ

ಬಿಸಿಲು, ಮಳೆಯಲ್ಲಿ ಅಂಗಡಿ ಸುತ್ತಿ ಆಭರಣ ಖರೀದಿ ಮಾಡುವ ಬದಲು ಮನೆಯಲ್ಲೇ ಕುಳಿತು ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಆನ್ಲೈನ್ ನಲ್ಲಿ ಆಭರಣ ಖರೀದಿ ಮಾಡುವ ವೇಳೆ ಕೆಲ ಸಮಸ್ಯೆ ಎದುರಾಗುತ್ತದೆ. ಯಾವುದೇ ನಷ್ಟವಿಲ್ಲದೆ ಆನ್ಲೈನ್ ಶಾಪಿಂಗ್ ಮಾಡ್ಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು.  

ಆಭರಣ ಹಾಗೂ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಮಹಿಳೆ ಅಂದ್ರೆ ಆಭರಣ, ಆಭರಣವೆಂದ್ರೆ ಮಹಿಳೆ. ಮಾರುಕಟ್ಟೆಗೆ ಹೊಸ ಡಿಸೈನ್ ಬರ್ತಿದ್ದಂತೆ ತಾವು ಧರಿಸಬೇಕೆಂಬ ಆತುರದಲ್ಲಿ ಅನೇಕ ಮಹಿಳೆಯರಿರುತ್ತಾರೆ. ಬಟ್ಟೆಗೆ ತಕ್ಕಂತೆ ಅವರು ಆಭರಣಗಳನ್ನು ಧರಿಸ್ತಾರೆ. ಮದುವೆ ಸೇರಿದಂತೆ ವಿಶೇಷ ಸಮಾರಂಭಗಳಲ್ಲಿ ದುಬಾರಿಯಾದ್ರೂ ಚೆಂದದ, ಮ್ಯಾಚಿಂಗ್ ಆಭರಣ ಖರೀದಿಗೆ ಆದ್ಯತೆ ನೀಡ್ತಾರೆ.

ಆಭರಣ (Jewelry ) ಗಳನ್ನು ಖರೀದಿಸಲು ಪ್ರತಿ ಬಾರಿ ಮಾರುಕಟ್ಟೆಗೆ (Market ) ಹೋಗೋದು ಸಾಧ್ಯವಾಗುವುದಿಲ್ಲ. ಮಾರುಕಟ್ಟೆಗೆ ಹೋಗಲು ಸಮಯ ಹೊಂದಿಸಿಕೊಳ್ಳಬೇಕು. ಕೆಲಸ ಬಿಟ್ಟು ಮಾರುಕಟ್ಟಗೆ ಹೋದಾಗ ಬೇಕಾದ, ಸುಂದರ ವಿನ್ಯಾಸದ ಆಭರಣ ಸಿಗದೆ ಹೋಗಬಹುದು. ಇದ್ರಿಂದ ನಿರಾಸೆ, ಸುಸ್ತಿನ ಜೊತೆ ಸಮಯ ಹಾಳಾಗಿರುತ್ತದೆ. ಸಮಯವಿಲ್ಲ ಎನ್ನುವವರು ಆನ್ಲೈನ್ (Online)  ಆಭರಣ ಖರೀದಿ ಆಯ್ಕೆಗೆ ಮುಂದಾಗಬಹುದು. ಆನ್ಲೈನ್ ನಲ್ಲಿ ಆಭರಣ ಖರೀದಿಗೆ ಸಾಕಷ್ಟು ಆಯ್ಕೆಗಳಿವೆ. ಆದ್ರೆ ಕೈನಲ್ಲಿ ಸ್ಪರ್ಶಿಸಿ ಅದನ್ನು ನೋಡಲು ಸಾಧ್ಯವಾಗದ ಕಾರಣ ಕೆಲವರು ಹಿಂದೇಟು ಹಾಕ್ತಾರೆ. ನೀವೂ ಆನ್ಲೈನ್ ನಲ್ಲಿ ಆಭರಣ ಖರೀದಿ ಮಾಡ್ತಿದ್ದರೆ ಕೆಲ ಟ್ರಿಕ್ಸ್ ಫಾಲೋ ಮಾಡಿ. ಆಗ ನಿಮ್ಮ ಖರೀದಿ ಸುಲಭವಾಗುತ್ತದೆ.

ಆನ್ಲೈನ್ ನಲ್ಲಿ ಆಭರಣ ಖರೀದಿ ಮಾಡುವಾಗ ಈ ವಿಷ್ಯಗಳು ಗಮನದಲ್ಲಿರಲಿ : 
ಗಾತ್ರದ ಬಗ್ಗೆ ಗಮನವಿರಲಿ :
ನೀವು ಆನ್ಲೈನ್ ನಲ್ಲಿ ನೆಕ್ಲೇಸ್, ಕಿವಿಯೋಲೆ ಅಥವಾ ಆಂಕ್ಲೆಟ್‌ಗಳನ್ನು ಖರೀದಿಸುತ್ತಿದ್ದರೆ ಗಾತ್ರದ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ. ಯಾಕೆಂದ್ರೆ ಇವುಗಳ ಗಾತ್ರ ನಿಮಗೆ ಹೆಚ್ಚು ತೊಂದರೆ ನೀಡುವುದಿಲ್ಲ. ಆದರೆ ನೀವು ಬಳೆ ಅಥವಾ ಉಂಗುರಗಳನ್ನು ಖರೀದಿಸುವ ಸಂದರ್ಭದಲ್ಲಿ ಗಾತ್ರದ ಅವಶ್ಯಕತೆಯಿರುತ್ತದೆ. ದೊಡ್ಡ ಗಾತ್ರದ ಅಥವಾ ಚಿಕ್ಕ ಗಾತ್ರದ ಬಳೆ, ಉಂಗುರ ಖರೀದಿ ಮಾಡಿದ್ರೆ ಪ್ರಯೋಜನವಿಲ್ಲ. ನೀವು ಆನ್ಲೈನ್ ನಲ್ಲಿ ಬಳೆ ಅಥವಾ ಉಂಗುರ ಖರೀದಿ ಮೊದಲು ನಿಮ್ಮ ಗಾತ್ರವೆಷ್ಟು ಎಂಬುದನ್ನು ತಿಳಿದಿರಿ. ನಿಮಗೆ ಗೊತ್ತಿಲ್ಲವೆಂದಾದ್ರೆ ಸ್ಥಳೀಯ ಅಂಗಡಿಗೆ ಹೋಗಿ ಗಾತ್ರವನ್ನು ತಿಳಿದು ನಂತ್ರ ಆನ್ಲೈನ್ ನಲ್ಲಿ ಬಳೆ ಬುಕ್ ಮಾಡಿ.   

ಉತ್ಪನ್ನದ ಬಗ್ಗೆ ಮಾಹಿತಿ ತಿಳಿದು ನಂತ್ರ ಖರೀದಿ ಮಾಡಿ :  ಆನ್‌ಲೈನ್‌ನಲ್ಲಿ ಆಭರಣ ಖರೀದಿಸಲು ಬಯಸಿದರೆ ಅದನ್ನು ನೇರವಾಗಿ ಆರ್ಡರ್ ಮಾಡುವ ಬದಲು, ಮೊದಲು ಉತ್ಪನ್ನದ ಬಗ್ಗೆ ಸಂಪೂರ್ಣವಾಗಿ ಓದಿ. ಉದಾಹರಣೆಗೆ  ಲೋಹದ ಪ್ರಕಾರದಿಂದ ರತ್ನದ ಕಲ್ಲುಗಳು ಮತ್ತು ಉತ್ಪನ್ನದ ತೂಕದವರೆಗೆ ಮಾಹಿತಿಯನ್ನು ಪರಿಶೀಲಿಸಿ. ಉತ್ತಮ ಗುಣಮಟ್ಟದ ಆಭರಣಗಳನ್ನು ಖರೀದಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

50 ವರ್ಷ ದಾಟಿದ್ದರೂ, ಹೊಸ ವೃತ್ತಿ ಜೀವನ ಆರಂಭಿಸಲು ಇಲ್ಲಿವೆ ಆಯ್ಕೆಗಳು
 
ಉತ್ಪನ್ನದ ವಾರಂಟಿ ಚೆಕ್ ಮಾಡಿ : ಆನ್‌ಲೈನ್‌ನಲ್ಲಿ ಆಭರಣಗಳನ್ನು ಖರೀದಿಸುವ ಮೊದಲು ನೀವು ಉತ್ಪನ್ನದ ವಾರಂಟಿ ಚೆಕ್ ಮಾಡ್ಬೇಕು.  ಕೆಲವು ಆಭರಣಗಳು ತುಂಬಾ ದುಬಾರಿಯಾಗಿರುತ್ತವೆ. ತಂದ ದಿನವೇ ಆಭರಣ ಹಾಳಾದ್ರೆ ನಿಮಗೆ ನಷ್ಟವಾಗುತ್ತದೆ. ವಾರಂಟಿ ಇದ್ದಲ್ಲಿ ಅದನ್ನು ನೀವು ಬದಲಿಸಬಹುದು. ಅಮೂಲ್ಯವಾದ ಉತ್ಪನ್ನ ಖರೀದಿ ವೇಲೆ ವಾರಂಟಿ ಪಡೆಯಲು ಮರೆಯಬೇಡಿ.   

ಹಾಲ್ಮಾರ್ಕ್ ಚೆಕ್ ಮಾಡಿ ಮತ್ತು ಆಭರಣ ಸರ್ಟಿಫಿಕೆಟ್ ಪಡೆಯಿರಿ :  ಚಿನ್ನ ಅಥವಾ ದುಬಾರಿ ಆಭರಣಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತಿದ್ದರೆ ಮೊದಲು ಹಾಲ್‌ಮಾರ್ಕ್ ಮತ್ತು ಆಭರಣ ಸರ್ಟಿಫಿಕೆಟ್ ಇತ್ಯಾದಿಗಳ ಬಗ್ಗೆ ಗಮನ ಕೊಡಿ.  ಇದು ಆಭರಣ ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಬಿಐಎಸ್ ಹಾಲ್ಮಾರ್ಕ್ ಇರುವ ಆಭರಣವನ್ನು ಆರಾಮವಾಗಿ ಖರೀದಿ ಮಾಡಬಹುದು. ಇದು ಅಸಲಿ ಆಭರಣವಾಗಿರುತ್ತದೆ.   

ಗರ್ಭಪಾತದ ನಂತರ ಖಿನ್ನತೆ ಕಾಡ್ತಿದ್ಯಾ ? ನಿಭಾಯಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

ರಿಟರ್ನ್ ರೂಲ್ಸ್ ತಿಳಿದುಕೊಳ್ಳಿ : ಪ್ರತಿ ಆನ್‌ಲೈನ್ ಸ್ಟೋರ್ ತನ್ನದೇ ಆದ ರಿಟರ್ನ್ ಮತ್ತು ಮರುಪಾವತಿ ನೀತಿಯನ್ನು ಹೊಂದಿದೆ. ಹಾಗಾಗಿ ಇದ್ರ ಬಗ್ಗೆ ನೀವು ತಿಳಿದಿರಬೇಕು. ಕೆಲವೊಮ್ಮೆ ನಾವು ಖರೀದಿ ಮಾಡಿದ ಆಭರಣ ನಮಗೆ ಇಷ್ಟವಾಗುವುದಿಲ್ಲ. ಆ ಸಂದರ್ಭದಲ್ಲಿ ಅದನ್ನು ವಾಪಸ್ ಮಾಡಲು ಮುಂದಾಗ್ತೇವೆ. ಆದ್ರೆ ಆನ್ಲೈನ್ ಸ್ಟೋರ್ ಮರುಪಾವತಿ ಅಥವಾ ರಿಟರ್ನ್ ಆಯ್ಕೆ ಹೊಂದಿರುವುದಿಲ್ಲ. ಆಗ ನಾವು ನಷ್ಟ ಅನುಭವಿಸಬೇಕಾಗುತ್ತದೆ. ಮೊದಲೇ ಈ ಬಗ್ಗೆ ಪರಿಶೀಲನೆ ನಡೆಸಿದ್ರೆ ಸಮಸ್ಯೆ ಇರೋದಿಲ್ಲ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!