ಮಿಸ್ ಇಂಡಿಯಾ ವರ್ಲ್ಡ್ ವೈಡ್ 2022ರ ಪ್ರಶಸ್ತಿ ಗೆದ್ದ ಇಂಗ್ಲೆಂಡ್‌ನ ಖುಷಿ ಪಟೇಲ್

By Suvarna NewsFirst Published Jun 25, 2022, 1:33 PM IST
Highlights

ವಿದೇಶಗಳಲ್ಲಿ ವಾಸಿಸುತ್ತಿರುವ ಸುಂದರಿಯರನ್ನು ಹುಡುಕಾಡಲು ಸಹ ವಿಶೇಷ ಸೌಂದರ್ಯ ಸ್ಪರ್ಧೆಯೊಂದು ಹಲವು ವರ್ಷಗಳಿಂದ ನಡೆಯುತ್ತಿದೆ. ಅದುವೇ ಮಿಸ್ ಇಂಡಿಯಾ ವರ್ಲ್ಡ್ ವೈಡ್.  ಈ ಬಾರಿ ಅದುವೇ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2022ರ (Miss India Worldwide 2022) ಪ್ರಶಸ್ತಿಯನ್ನು ಇಂಗ್ಲೆಂಡ್‌ನ ಖುಷಿ ಪಟೇಲ್ (Khushi patel) ಪಡೆದಿದ್ದಾರೆ. 

ವಿಶ್ವಾಂದ್ಯಂತ ಸೌಂದರ್ಯ (Beauty) ಸ್ಪರ್ಧೆಗಳು ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಭಾರತದಲ್ಲಿರುವ ಸುಂದರಿಯರ ಆಯ್ಕೆಗಾಗಿ ಮಿಸ್ ಇಂಡಿಯಾ (Miss India) ಸ್ಪರ್ಧೆ ನಡೆದರೆ, ಜಗತ್ತಿನಲ್ಲಿರುವ ಬ್ಯೂಟಿಗಳ ಹುಡುಕಾಟಕ್ಕೆ ಮಿಸ್ ಯೂನಿವರ್ಸ್ (Miss Universe) ನಡೆಯುತ್ತದೆ. ಆದರೆ ಮೂಲತಃ ಭಾರತದವರಾಗಿದ್ದು, ಸದ್ಯ ವಿದೇಶಗಳಲ್ಲಿ ವಾಸಿಸುತ್ತಿರುವ ಸುಂದರಿಯರನ್ನು ಹುಡುಕಾಡಲು ಸಹ ವಿಶೇಷ ಸೌಂದರ್ಯ ಸ್ಪರ್ಧೆಯೊಂದು ಹಲವು ವರ್ಷಗಳಿಂದ ನಡೆಯುತ್ತಿದೆ. ಮಿಸ್ ಇಂಡಿಯಾ ವರ್ಲ್ಡ್ ವೈಡ್ 2022ರ (Miss India Worldwide 2022) ಪ್ರಶಸ್ತಿಯನ್ನು ಇಂಗ್ಲೆಂಡ್‌ನ ಖುಷಿ ಪಟೇಲ್ ಪಡೆದಿದ್ದಾರೆ. 

ಇಂಗ್ಲೆಂಡ್‌ನ ಬಯೋಮೆಡಿಕಲ್ ವಿದ್ಯಾರ್ಥಿನಿ ಖುಷಿ ಪಟೇಲ್ (Khushi Patel) ಅವರು ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2022 ರ ವಿಜೇತರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ರಾತ್ರಿ ವಿಜೇತರ ಹೆಸರನ್ನು ಪ್ರಕಟಿಸಲಾಯಿತು. ಷಿ ಪಟೇಲ್ 2022 ರ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಯುಎಸ್‌ನ ವೈದೇಹಿ ಡೋಂಗ್ರೆ ಮೊದಲ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರೆ, ಶ್ರುತಿಕಾ ಮಾನೆ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಸ್ಪರ್ಧೆಯಲ್ಲಿ ಅಗ್ರ 12 ಸ್ಪರ್ಧಿಗಳು ಜಾಗತಿಕವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು.

Miss Universe 2021: ಭಾರತದ ಹರ್ನಾಜ್ ಸಂಧು ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿಗಳು!

ಬಯೋಮೆಡಿಕಲ್ ಸೈನ್ಸ್‌ನಲ್ಲಿ ಮೇಜರ್ ಮತ್ತು ಸೈಕಾಲಜಿಯಲ್ಲಿ ಮೈನರ್ ಮಾಡುತ್ತಿರುವ ಪಟೇಲ್, ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2022 ಸ್ಪರ್ಧೆಯನ್ನು ಗೆದ್ದಿರುವುದಕ್ಕೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. ಸ್ವತಃ ಬಟ್ಟೆ ಅಂಗಡಿಯನ್ನು ಹೊಂದಿರುವ ಕೃಷಿ ಪಟೇರ್ಳ, ಮುಂದಿನ ವರ್ಷಗಳಲ್ಲಿ ಸಾಕಷ್ಟು ಚಾರಿಟಿ ಕಾರ್ಯಕ್ರಮಗಳನ್ನು ಮಾಡಲು ಮತ್ತು ಇತರ ದೇಶಗಳಿಗೆ ಸಹಾಯ ಮಾಡಲು ಯೋಜನೆ ರೂಪಿಸಿದ್ದಾರೆ. ಕಳೆದ 29 ವರ್ಷಗಳಿಂದ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಈವೆಂಟ್.ನಡೆಯುತ್ತಿದೆ.

ಮಿಸ್ ಇಂಡಿಯಾ ವರ್ಲ್ಡ್‌ವೈಡ್, ಭಾರತದ ಹೊರಗಿರುವ ಯುವತಿಯರು ಭಾಗವಹಿಸಲು ಆಯೋಜಿಸುವ ಸೌಂದರ್ಯ ಸ್ಪರ್ಧೆಯಾಗಿದೆ. ಶುಕ್ರವಾರ ರಾತ್ರಿ ಯುಎಸ್‌ನ ವೈದೇಹಿ ಡೋಂಗ್ರೆ ಮೊದಲ ರನ್ನರ್ ಅಪ್ ಎಂದು ಘೋಷಿಸಲ್ಪಟ್ಟರೆ, ಶ್ರುತಿಕಾ ಮಾನೆ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಸ್ಪರ್ಧೆಯಲ್ಲಿ ಅಗ್ರ 12 ಸ್ಪರ್ಧಿಗಳು ಜಾಗತಿಕವಾಗಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು.

Throwback Photos: ಭಾರತದ ಮೊದಲ Miss Universe ಸುಶ್ಮಿತಾ ಸೇನ್‌ 27 ವರ್ಷಗಳ ಹಿಂದೆ!

2022ರ ಮಿಸ್ ಟೀನ್ ಇಂಡಿಯಾ ವರ್ಲ್ಡ್‌ವೈಡ್ 2022 ರ ಗಯಾನದ ರೋಶನಿ ರಜಾಕ್ ಅವರನ್ನು ಮಿಸ್ ಟೀನ್ ಇಂಡಿಯಾ ಎಂದು ಘೋಷಿಸಲಾಯಿತು. ಯುಎಸ್‌ನ ನವ್ಯಾ ಪೈಂಗೊಲ್ ಮೊದಲ ರನ್ನರ್ ಅಪ್ ಆಗಿದ್ದರೆ, ಸುರಿನಾಮ್‌ನ ಚಿಕಿತಾ ಮಲಾಹಾ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಈವೆಂಟ್ ಅನ್ನು ಆಯೋಜಿಸುತ್ತಿರುವ ಇಂಡಿಯಾ ಫೆಸ್ಟಿವಲ್ ಕಮಿಟಿ (IFC) ತಿಳಿಸಿದೆ.

ಕಳೆದ 29 ವರ್ಷಗಳಿಂದ ಮಿಸ್ ಟೀನ್ ಇಂಡಿಯಾ ವರ್ಲ್ಡ್‌ವೈಡ್ ನಡೆದುಕೊಂಡು ಬರುತ್ತಿದೆ. ಕಳೆದ ಮೂರು ವರ್ಷಗಳ ಅಂತರದ ನಂತರ ಈ ವರ್ಷದ ಸ್ಪರ್ಧೆಯನ್ನು ಸೆಪ್ಟೆಂಬರ್ 2019 ರಲ್ಲಿ ಮುಂಬೈನ ಲೀಲಾ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಕೊರೋನಾ ಸೋಂಕು ಹರಡುವಿಕೆಯಿಂದಾಗಿ ಕಳೆದೆರಡು ವರ್ಷಗಳಲ್ಲಿ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಸ್ಪರ್ಧೆಯನ್ನು ಆಯೋಜಿಸಿರಲ್ಲಿಲ್ಲ.

click me!