Baking Soda Hacks: ಅಡುಗೆ ಸೋಡಾ ಎಂದಾಕ್ಷಣ ನಮಗೆ ಅಡುಗೆ ನೆನಪಾಗುತ್ತದೆ. ಆದ್ರೆ ಬರೀ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಅಡುಗೆ ಸೋಡಾ ಬಳಕೆ ಮಾಡ್ಬಹುದು. ಅಡುಗೆ ಸೋಡಾವನ್ನು ಹೇಗೆಲ್ಲ ಉಪಯೋಗಿಸ್ಬಹುದು ಎಂದು ನಾವು ಹೇಳ್ತೇವೆ.
ಅಡುಗೆ ಸೋಡಾ (Baking Soda) , ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ (Kitchen ) ಸ್ಥಾನ ಪಡೆದಿರುತ್ತದೆ. ನಾವು ಪ್ರತಿನಿತ್ಯ ಅನೇಕ ರೂಪದಲ್ಲಿ ಅಡುಗೆ ಸೋಡಾ ಬಳಕೆ ಮಾಡ್ತೇವೆ. ಅಡುಗೆಗೆ ಮಾತ್ರವಲ್ಲದೆ ಅಡುಗೆ ಸೋಡಾವನ್ನು ಇನ್ನೂ ಅನೇಕ ರೀತಿಯಲ್ಲಿ ಬಳಕೆ ಮಾಡ್ಬಹುದು. ಅಡುಗೆ ಸೋಡಾ ತ್ವಚೆ (Skin ), ಕೂದಲ (Hair) ರಕ್ಷಣೆ, ಉಗುರುಗಳ ಆರೈಕೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಮುಖದ ಕಾಂತಿ ಹೆಚ್ಚಿಸುವ ಜೊತೆಗೆ ಚರ್ಮ ಮತ್ತು ಉಗುರುಗಳ ಸೌಂದರ್ಯ ಹೆಚ್ಚಿಸಲು ಅಡುಗೆ ಸೋಡಾ ಹೆಚ್ಚು ಪರಿಣಾಮಕಾರಿಯಾಗಿದೆ. ಅಡಿಗೆ ಸೋಡಾದ ವೈಜ್ಞಾನಿಕ ಹೆಸರು ಸೋಡಿಯಂ ಕಾರ್ಬೋನೇಟ್. ಅಲ್ಕೇನ್ ಪದಾರ್ಥದೊಂದಿಗೆ ಬೇಕಿಂಗ್ ಸೋಡಾದಲ್ಲಿ ಆಂಟಿಫಂಗಲ್, ಆಂಟಿ ಸೆಪ್ಟಿಕ್, ಆಂಟಿ-ಇನ್ಫ್ಲಮೇಟರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿದೆ. ಅಡುಗೆ ಸೋಡಾದಲ್ಲಿರುವ ಈ ಎಲ್ಲ ಅಂಶಗಳು ತ್ವಚೆಯ ಆರೈಕೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಅಡುಗೆ ಸೋಡಾವನ್ನು ಆಹಾರದ ಹೊರತಾಗಿ ಮತ್ತೆ ಯಾವುದಕ್ಕೆ ಬಳಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ.
ಮೊಡವೆ ಚಿಂತೆ ಬಿಡಿ, ಅಡುಗೆ ಸೋಡಾ ಬಳಸಿ : ಅಡುಗೆ ಸೋಡಾದಲ್ಲಿರುವ ಆ್ಯಂಟಿ ಫಂಗಲ್, ಆ್ಯಂಟಿ ಸೆಪ್ಟಿಕ್, ಆ್ಯಂಟಿ ಇನ್‌ಫ್ಲಮೇಟರಿ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮದಲ್ಲಿರುವ ಮೊಡವೆ ಹೋಗಲಾಡಿಸಲು ನೆರವಾಗುತ್ತದೆ. ಇದ್ರಿಂದ ಮುಖ ಹೊಳೆಯುತ್ತದೆ. ಮುಖದ ಕಾಂತಿ ಹೆಚ್ಚಾಗ್ಬೇಕೆಂದ್ರೆ ಅಡುಗೆ ಸೋಡಾಕ್ಕೆ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಫೇಸ್ ಪ್ಯಾಕ್ ರೀತಿಯಲ್ಲಿ ಮುಖಕ್ಕೆ ಹಚ್ಚಿ.
ಅಯ್ಯಯ್ಯೋ..ಇಂಥಾ ಆಹಾರಗಳನ್ನು ತಿಂದ್ರೆ ಬೇಗ ವಯಸ್ಸಾಗುತ್ತಂತೆ !
ಚರ್ಮಕ್ಕೆ ಒಳ್ಳೆಯದು ಅಡುಗೆ ಸೋಡಾ : ಚರ್ಮದಲ್ಲಿರುವ ಸತ್ತ ಜೀವಕೋಶವನ್ನು ಅಡುಗೆ ಸೋಡಾ ಕಡಿಮೆ ಮಾಡುತ್ತದೆ. ಅಡುಗೆ ಸೋಡಾದೊಂದಿಗೆ ರೋಸ್ ವಾಟರ್ ಮಿಕ್ಸ್ ಮಾಡಬೇಕು. ಅದನ್ನು ಚರ್ಮದ ಮೇಲೆ ಹಚ್ಚಬೇಕು. ಇದು ಸನ್ಬರ್ನ್ ಮತ್ತು ಟ್ಯಾನಿಂಗ್ ಅನ್ನು ತೊಡೆದುಹಾಕಲು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಚರ್ಮ ಕಪ್ಪಾಗಿದ್ದರೆ ಅಡುಗೆ ಸೋಡಾ ಬಳಸಿ ನೋಡಿ.
ಬಿಳಿ ಹಲ್ಲು ಬೇಕೆಂದ್ರೆ ಅಡುಗೆ ಸೋಡಾ ಬಳಕೆ ಮರೆಯದಿರಿ : ಅನೇಕರ ಹಲ್ಲು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಎಷ್ಟೇ ಬ್ರೆಶ್ ಮಾಡಿದ್ರೂ ಬಣ್ಣ ಬೆಳ್ಳಗಾಗುವುದಿಲ್ಲ. ಅಂಥವರು ಹಲ್ಲನ್ನು ವಾಶ್ ಮಾಡಲು ಹಣ ಸುರಿಯುತ್ತಾರೆ. ಅದರ ಬದಲು ಅಡುಗೆ ಸೋಡಾ ಬಳಕೆ ಮಾಡ್ಬಹುದು. ಪ್ರತಿದಿನ ಹಲ್ಲುಜ್ಜುವಾಗ, ಟೂತ್‌ಪೇಸ್ಟ್‌ಗೆ ಸ್ವಲ್ಪ ಅಡಿಗೆ ಸೋಡಾ ಸೇರಿಸಿ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿ. ಕೆಲವೇ ದಿನಗಳಲ್ಲಿ ಹಲ್ಲು ಬೆಳ್ಳಗಾಗುವುದನ್ನು ನೀವು ನೋಡ್ಬಹುದು.
Kitchen Hacks: ಫ್ರಿಜ್‌ನಲ್ಲಿ ಈ ರೀತಿಯಾದರೆ ತಕ್ಷಣವೇ ಬದಲಾಯಿಸಿ
ಚರ್ಮದ ಹೊಳಪು : ಹೊಳೆಯುವ ಮತ್ತು ಸುಂದರವಾದ ಚರ್ಮವನ್ನು ಪಡೆಯಲು ನೀವು ಅಡಿಗೆ ಸೋಡಾದ ಫೇಸ್ ಪ್ಯಾಕ್ ಸಹ ಬಳಸಬಹುದು., ಬೇಕಿಂಗ್ ಸೋಡಾ ಚರ್ಮವನ್ನು ಹೈಡ್ರೇಟ್ ಮಾಡುವ ಮೂಲಕ ಮತ್ತು ಚರ್ಮದ ಹೊಳಪನ್ನು ಕಾಪಾಡಿಕೊಳ್ಳುವ ಕೆಲಸ ಮಾಡುತ್ತದೆ. ಚರ್ಮದ ಹೊಳಪಿಗೆ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.
ಕೂದಲು ಆರೋಗ್ಯಕ್ಕೆ ಅಡುಗೆ ಸೋಡಾ : ತಲೆಹೊಟ್ಟಿನ ಸಮಸ್ಯೆ, ಜಿಡ್ಡಿನ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದ್ರೆ ಅಡಿಗೆ ಸೋಡಾ ತುಂಬಾ ಪರಿಣಾಮಕಾರಿಯಾಗಿದೆ. ಬೇಕಿಂಗ್ ಸೋಡಾದ ಹೇರ್ ಮಾಸ್ಕ್ ಅನ್ನು ಅನ್ವಯಿಸುವ ಮೂಲಕ, ನೆತ್ತಿಯ ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಬಹುದು. ಇದ್ರ ಜೊತೆಗೆ ತಲೆಹೊಟ್ಟು ಕೂಡ ಶೀಘ್ರದಲ್ಲೇ ಕಡಿಮೆಯಾಗುತ್ತದೆ.
ಹೊಳೆಯುವ ಉಗುರು : ಕೈ ಮತ್ತು ಕಾಲುಗಳ ಉಗುರುಗಳನ್ನು ಸ್ವಚ್ಛಗೊಳಿಸಲು ಮತ್ತು ಅವುಗಳ ಹಳದಿ ಬಣ್ಣವನ್ನು ತೆಗೆದುಹಾಕಲು ನೀವು ಅಡಿಗೆ ಸೋಡಾವನ್ನು ಬಳಸಬಹುದು. ಮನೆಯಲ್ಲಿಯೇ ಇದನ್ನು ಸುಲಭವಾಗಿ ಬಳಸಬಹುದು. ಪ್ರತಿದಿನ ಸ್ವಲ್ಪ ಸಮಯದವರೆಗೆ ಅಡುಗೆ ಸೋಡಾದ ದ್ರಾವಣದಲ್ಲಿ ಉಗುರುಗಳನ್ನು ಅದ್ದಿಡಬೇಕು. ಕೆಲವೇ ದಿನಗಳಲ್ಲಿ ನಿಮ್ಮ ಉಗುರು ಹೊಳೆಯಲು ಶುರುವಾಗುತ್ತದೆ.