
ಸಾಮಾನ್ಯವಾಗಿ ಪುರುಷರು ಕಂಡವರ ಹೆಣ್ಣು ಮಕ್ಕಳನ್ನು ನೋಡುವುದಕ್ಕೆ ಫೇಮಸ್. ಚೆಂದದ ಹುಡುಗಿಯೊಬ್ಬಳು ಬಂದರಂತು ಗಂಡಸರು ತಮ್ಮ ವಯಸ್ಸನ್ನೇ ಮರೆತು ಬಿಡುತ್ತಾರೆ. ಪುಟ್ಟ ಮಕ್ಕಳಿಂದ ಅಜ್ಜಂದಿರವರೆಗೂ ಅವರನ್ನು ನೋಡುವುದರಲ್ಲೇ ಬಾಕಿಯಾಗಿ ಬಿಡುತ್ತಾರೆ. ಬಸ್ ನಿಲ್ದಾಣಗಳು ರೈಲ್ವೆ ಸ್ಟೇಷನ್‌ಗಳು, ಹೀಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬಂಟಿ ಮಹಿಳೆ ನಿಂತಿದ್ದಾಳೆಂದರೆ ಸಾವಿರಾರು ಜನ ಆಕೆಯನ್ನು ತಿನ್ನುವಂತೆ ಗುರಾಯಿಸುವುದು ಕಾಮನ್.
ಆದರೆ ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ನೋಡುವುದರಲ್ಲೇ ತಮ್ಮ ಆಯಸ್ಸಿನ ಕೆಲ ಭಾಗವನ್ನು ಕಳೆದು ಬಿಡುತ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ ವಿಚಿತ್ರ ಎನಿಸಿದರು ಇದು ಸತ್ಯ. 2009ರಲ್ಲಿ ನಡೆದ ಒಂದು ಸರ್ವೇಯ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 43 ನಿಮಿಷಗಳನ್ನು ಹುಡುಗಿಯರನ್ನು ನೋಡುವುದರಲ್ಲೇ ವ್ಯಯ ಮಾಡ್ತಾರಂತೆ, ಹಾಗಂತ ಒಬ್ಬಳೇ ಹುಡುಗಿಯನ್ನೋ ಪ್ರೇಯಸಿಯನ್ನೋ ಹೆಂಡತಿಯನ್ನೋ ನೋಡುವುದರಲ್ಲಿ ಇವರು ದಿನ ಕಳೆಯುವುದಿಲ್ಲ, ದಿನದಲ್ಲಿ 10 ವಿಭಿನ್ನ ಹುಡುಗಿಯರನ್ನು ಅವರು ಹೀಗೆ ನೋಡುತ್ತಾರಂತೆ. ಹೀಗೆ ನೋಡುತ್ತಲೇ ಜೀವನದ ಒಂದು ವರ್ಷದಷ್ಟು ಸಮಯವನ್ನು ಅವರು ಇದರಲ್ಲೇ ಕಳೆಯುತ್ತಾರಂತೆ.
ಅಂದಹಾಗೆ ಈ ಸಮೀಕ್ಷೆ ನಡೆದಿರುವುದು ಬ್ರಿಟನ್‌ನಲ್ಲಿ. ಸುಮಾರು 3 ಸಾವಿರ ಮಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಈ ಸಮೀಕ್ಷೆಯು ಸೂಪರ್ ಮಾರ್ಕೆಟ್, ಬಾರ್‌ಗಳು, ನೈಟ್‌ಕ್ಲಬ್‌ಗಳು, ಕೆಲಸದ ಸ್ಥಳ ಮತ್ತು ಅಂಗಡಿಗಳಲ್ಲಿ ಕೆಲಸ ಮಾಡುವ ಪುರುಷರು ಮತ್ತು ಮಹಿಳೆಯರು ಪರಸ್ಪರ ನೋಡುವ ಸಾಮಾನ್ಯ ಸ್ಥಳಗಳೆಂದು ಗುರುತಿಸಲ್ಪಟ್ಟಿದೆ.
ನಾನೀಗ ನನ್ನ 20ನೇ ವಯಸ್ಸಿನಲ್ಲಿದ್ದೇನೆ. ಈ ಒಂದು ವರ್ಷವನ್ನು ನಾನು ಈಗಾಗಲೇ ಕಳೆದಿರುವಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಈಗಾಗಲೇ ಒಂದಲ್ಲ ಎರಡು ವರ್ಷವನ್ನು ಇದರಲ್ಲಿ ಕಳೆದಿದ್ದೇನೆ. ಸೌಂದರ್ಯವನ್ನು ಮೆಚ್ಚಲೇಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಹೌದೌದು ನಾನು 30 ವರ್ಷವನ್ನು ಹೀಗೆ ಕಳೆದಿದ್ದೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇಡೀ ಜೀವಮಾನವನ್ನೇ ಹೆಣ್ಮಕ್ಕಳನ್ನು ನೋಡುವುದರಲ್ಲಿ ಕಳೆದಿದ್ದಾನೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಇದರಲ್ಲೊಂದು ತಿದ್ದುಪಡಿ ಪುರುಷರು 'ಪ್ರತಿ ವರ್ಷ' ಸುಮಾರು 1 ವರ್ಷ ಕಳೆಯುತ್ತಾರೆ ಎಂದು ಒಬ್ಬರು ಹಾಸ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪುರುಷರೇ ಇದನ್ನು ಒಪ್ಪಿಕೊಳ್ಳುವ ಮೂಲಕ ಈ ಅಧ್ಯಯನ ವರದಿ ಸುಳ್ಳಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ಸಮೀಕ್ಷಾ ವರದಿ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.