Rare Pregnancy: ಗರ್ಭದಲ್ಲಲ್ಲ, ಮಹಿಳೆಯ ದೇಹದ ಮತ್ಯಾವುದೋ ಭಾಗದಲ್ಲಿ ಭ್ರೂಣ ಪತ್ತೆ..!

By Suvarna News  |  First Published Dec 18, 2021, 10:00 AM IST

ಸಾಮಾನ್ಯವಾಗಿ ಹೊಟ್ಟೆಯಲ್ಲಿ ಭ್ರೂಣ (Foetus) ಪತ್ತೆಯಾಗಿ, ಹಂತ ಹಂತವಾಗಿ ಬೆಳೆದು ಮಗುವಾಗುತ್ತದೆ. ಆದ್ರೆ ಇಲ್ಲೊಬ್ಬಳು ಮಹಿಳೆ ಪರೀಕ್ಷೆಯ ಬಳಿಕ ಗರ್ಭಿಣಿ (Pregnant) ಅನ್ನೋದು ತಿಳಿದುಬಂದಿದೆ. ಆದರೆ, ಮಗು ಬೆಳೀತಿರೋದು ಮಾತ್ರ ಹೊಟ್ಟೆಯ ಒಳಗಲ್ಲ, ದೇಹದ ಇನ್ಯಾವುದೋ ಭಾಗದಲ್ಲಿ..


ತಾಯ್ತನ ಅನ್ನೋದು ಪ್ರತಿ ಹೆಣ್ಣಿಗೂ ಅತ್ಯಂತ ಖುಷಿ ಕೊಡುವ ವಿಚಾರ. ತಾಯಿ ಅನ್ನೋ ಪದದಲ್ಲೇ ಹಿತವಿದೆ. ಮಮತೆ, ವಾತ್ಸಲ್ಯ, ಅಕ್ಕರೆಯ ಆಗರವಿದೆ. ತ್ಯಾಗಮಯಿ, ಸಹನಾಮಯಿ, ಕ್ಞಮಯಾಧರಿತ್ರಿ ತಾಯಿ. ಹಾಗೆಯೇ ತಾಯ್ತನ ಅನ್ನೋದು ಸಹ ಪದದಲ್ಲಿ ಬಣ್ಣಿಸಲಾಗದ ಅನುಭೂತಿ. ಹೆಣ್ಣೊಬ್ಬಳು ಮದುವೆಯಾಗಿ ಮಕ್ಕಳನ್ನು ಹಡೆದರೆ ಆಕೆಯೇ ಜೀವನ ಸಾರ್ಥಕ ಎಂದು ಹಿರಿಯರು ಹೇಳುತ್ತಾರೆ. ಹೆಣ್ಣು ಮದುವೆಯಾಗಿ ತನ್ನ ಮನೆಬಿಟ್ಟು ಗಂಡನ ಮನೆ ಸೇರುತ್ತಾಳೆ. ಅಲ್ಲಿ ಅದೆಷ್ಟು ಕಷ್ಟಗಳಿದ್ದರೂ ತಾಯಿಯಾಗುತ್ತಿದ್ದೇನೆ ಎನ್ನುವ ಖುಷಿ ಅವರ ಎಲ್ಲಾ ದುಃಖವನ್ನು ದೂರವಾಗಿಸುತ್ತದೆ. ಗರ್ಭಿಣಿ ಅನ್ನೋ ವಿಷಯವೇ ಆಕೆ ಹಿರಿಹಿರಿ ಹಿಗ್ಗುವಂತೆ ಮಾಡುತ್ತದೆ. ಹೊಟ್ಟೆಯನ್ನು ನೇವರಿಸಿ ಪುಟ್ಟ ಕಂದಮ್ಮನೊಂದಿಗಿನ ಒಡನಾಟವನ್ನು ಅವಳು ಆಸ್ವಾದಿಸುತ್ತಾಳೆ. ಆದರೆ ಇಲ್ಲೊಬ್ಬಳು ಪ್ರೆಗ್ನೆಂಟ್ ಎಂದು ತಿಳಿದು ಖುಷಿಪಡುವ ಬದಲು ಬೆಚ್ಚಿಬಿದ್ದಿದ್ದಾಳೆ. ತಾಯಿ ಅನ್ನೋದು ತಿಳಿದೂ ಖುಷಿಪಡುವ ಬದಲು, ಬೆಚ್ಚಿಬೀಳುವಂತದ್ದೇನಾಯ್ತು..

ಸಾಮಾನ್ಯವಾಗಿ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತದೆ. ಅಂಡಾಣು ಪ್ರೌಢವಾಗಿ ಮತ್ತು ಆವರ್ತನದ ಎರಡು ವಾರ ಅಥವಾ 14 ದಿನಗಳ ಬಳಿಕ ಗರ್ಭಕೋಶದೊಳಗೆ ಹೋಗಿ ಅಲ್ಲಿ ಪಕ್ವವಾಗುತ್ತದೆ. ಅಂಡೋತ್ಪತ್ತಿಯು ಆದ ಬಳಿಕ ಗರ್ಭ ಧರಿಸುವ ಸಂಗಾತಿ ವೀರ್ಯಾಣುವು ಹೋಗಿ ಗರ್ಭಕೋಶದಲ್ಲಿ ಪ್ರೌಢ ಅಂಡಾಣುವನ್ನು ಫಲವತ್ತನ್ನಾಗಿ ಮಾಡುವುದು. ಈ ಫಲವತ್ತಾದ ಅಂಡಾಣುಗಳು ಗರ್ಭಕೋಶಕ್ಕೆ ಹೋಗಿ ಅಲ್ಲಿ ನೆಲೆಯಾಗುವುದು. ಗರ್ಭಕೋಶದ ಪದರದ ನಡುವೆ ಭ್ರೂಣವು ನಿರ್ಮಾಣವಾಗುವುದು. ಗರ್ಭಿಣಿಯಾದ ನಾಲ್ಕನೇ ವಾರಕ್ಕೆ ತಲುಪಿದ ವೇಳೆ ಭ್ರೂಣವು ಗರ್ಭದೊಳಗೆ ಸರಿಯಾಗಿ ನೆಲೆ ನಿಂತಿರುವುದು ಮತ್ತು ಸಂಪೂರ್ಣವಾಗಿ ಬೆಳೆಯಲು ಆರಂಭಿಸುವುದು. ತಿಂಗಳಾಗುತ್ತಾ ಹೋದಂತೆಲ್ಲಾ ಹೆಣ್ಣಿನಚಲನವಲನದ ಅನುಭವವೂ ಹೆಣ್ಣಿಗೆ ಆಗುತ್ತದೆ.

Tap to resize

Latest Videos

Pregnancy Tips: ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್ ಯಾವಾಗ ಮಾಡಬೇಕು?

ಹೊಟ್ಟೆಯಲ್ಲಿ ಹೊಸ ಜೀವ ಬೆಳೆಯುತ್ತಿರುವುದು ತಿಳಿದೊಡನೆ ಗರ್ಭಿಣಿ ಖುಷಿಪಟ್ಟು ಉತ್ತಮ ಆಹಾರ, ಚಟುವಟಿಕೆಯನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾಳೆ. ಉದರದಲ್ಲಿರುವ ಮಗುವಿನ ಜತೆ ತನ್ನಷ್ಟಕ್ಕೇ ಸಂಭಾಷಣೆ ನಡೆಸುತ್ತಾಳೆ. ಹೊಟ್ಟೆಯನ್ನು ನೇವರಿಸಿ ಖುಷಿಪಡುತ್ತಾಳೆ. ಆದರೆ, ಇಲ್ಲಿ ಗರ್ಭಿಣಿ ಎಂದು ತಿಳಿದ ಹೆಣ್ಣು ಖುಷಿಪಡುವ ಬದಲು ಗಾಬರಿಗೊಂಡಿದ್ದಾಳೆ. ಯಾಕೆಂದರೆ ಮಗು ಬೆಳೆಯುತ್ತಿರುವುದು ಆಕೆಯ ಹೊಟ್ಟೆಯಲ್ಲಲ್ಲ. ಯಕೃತ್ ನಲ್ಲಿ.

Ectopic pregnancy in THE LIVER 🤯

Via https://t.co/BCTvNfvgH2pic.twitter.com/ics3lJLvey

— Avraham Z. Cooper, MD (@AvrahamCooperMD)

ಅಪರೂಪದ ಪ್ರಕರಣದಲ್ಲಿ, ಕೆನಡಾದಲ್ಲಿ 33 ವರ್ಷದ ಮಹಿಳೆಯೊಬ್ಬರ ಯಕೃತ್ತಿನೊಳಗೆ ಭ್ರೂಣವು ಬೆಳೆಯುತ್ತಿರುವುದು ಬಹಿರಂಗಗೊಂಡಿದೆ. ಗರ್ಭಿಣಿಯೋ ಅಲ್ಲವೋ ಎಂದು ಪರೀಕ್ಷೆ ನಡೆಸುವ ಸಂದರ್ಭ ಯಕೃತ್ತಿನೊಳಗೆ ಮಗು ಬೆಳೆಯುತ್ತಿರುವುದನ್ನು ಗಮನಿಸಿ ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಕೆನಡಾದ ಮ್ಯಾನಿಟೋಬಾದ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಮಕ್ಕಳ ವೈದ್ಯ ಮೈಕೆಲ್ ನಾರ್ವೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಬಳಿಕ 'ನಾನು ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ಮಹಿಳೆ ಪ್ರೆಗ್ನೆಂಟ್ ಟೆಸ್ಟ್ ಮಾಡಲು ಬಂದಿದ್ದಳು. ಪರೀಕ್ಷೆ ನಡೆಸಿದಾಗ ಮಹಿಳೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆದರೆ ಮಗು ಹೊಟ್ಟೆಯಲ್ಲಿ ಬೆಳೆಯುವ ಬದಲು ಯಕೃತ್ತಿನಲ್ಲಿ ಬೆಳೆಯುತ್ತಿದೆ. ಇದನ್ನು ಅಪಸ್ಥಾನೀಯ ಗರ್ಭಧಾರಣೆ ಎಂದು ಹೇಳುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

Pregnancy Food: ಗರ್ಭಾವಸ್ಥೆಯಲ್ಲಿ ಗಸಗಸೆ ಬೀಜ ತಿಂದರೆ ಏನಾಗುತ್ತದೆ?

ಅಪಸ್ಥಾನೀಯ ಗರ್ಭಧಾರಣೆ ಎಂಬುದು ಫಲವತ್ತಾದ ಮೊಟ್ಟೆ ಗರ್ಭಾಶಯದ ಕುಳಿಯಲ್ಲಿ ಅಳವಡಿಕೆಯಾಗುವ ಬದಲು ಬೇರೆಡೆ ಸಿಲುಕಿಕೊಳ್ಳುವ ಸ್ಥಿತಿಯಾಗಿದೆ. ವಿಶಿಷ್ಟವಾದ ಅಪಸ್ಥಾನೀಯ ಗರ್ಭಾವಸ್ಥೆಯಲ್ಲಿ, ಫಲವತ್ತಾದ ಮೊಟ್ಟೆಯು ಫಾಲೋಪಿಯನ್ ಟ್ಯೂಬ್‌ನಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ಅಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ, ಇದು ಅಂಡಾಶಯಗಳು ಅಥವಾ ಗರ್ಭಕಂಠದ ಅಥವಾ ಕಿಬ್ಬೊಟ್ಟೆಯ ಗೋಡೆಯ ಮೇಲೆ ಸಹ ಅಳವಡಿಕೆಯಾಗುತ್ತದೆ.

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿಯ ಪ್ರಕಾರ ಯಕೃತ್ತಿನಲ್ಲಿ ಅಪಸ್ಥಾನೀಯ ಗರ್ಭಧಾರಣೆಯು ಅತ್ಯಂತ ಅಪರೂಪ ಮತ್ತು ಅಸಾಧಾರಣವಾಗಿದೆ. 1964 ಮತ್ತು 1999ರ ನಡುವೆ,  ಜಗತ್ತಿನಲ್ಲಿ ಕೇವಲ 14 ಪ್ರಕರಣಗಳು ಯಕೃತ್ತಿನಲ್ಲಿ ಅಪಸ್ಥಾನೀಯ ಗರ್ಭಧಾರಣೆಯಾಗಿರುವ ಬಗ್ಗೆ ವರದಿಯಾಗಿದೆ..

ಡಾ.ನಾರ್ವೆ, ವೀಡಿಯೋದಲ್ಲಿ, ‘ಭ್ರೂಣವನ್ನು ನಾವು ಹೊಟ್ಟೆಯಲ್ಲಿ ನೋಡಿದ್ದೇವೆ. ಆದರೆ ಯಕೃತ್ತಿನಲ್ಲಿ ಎಂದಿಗೂ ನೋಡಿರಲ್ಲಿಲ್ಲ. ಮಹಿಳೆಯ ಪರೀಕ್ಷೆ ನಡೆಸಿದ ಬಳಿಕ ಅಚ್ಚರಿಯಾಯಿತು. ಶಸ್ತ್ರಚಿಕಿತ್ಸೆಯ ಮೂಲಕ ಭ್ರೂಣವನ್ನು ಹೊರತೆಗೆಯುವ ಮೂಲಕ ಶಸ್ತ್ರಚಿಕಿತ್ಸಕರು ಮಹಿಳೆಯ ಜೀವವನ್ನು ಉಳಿಸಿದ್ದಾರೆ. ಆದಾಗ್ಯೂ, ಭ್ರೂಣವನ್ನು ಉಳಿಸಲು ಸಾಧ್ಯವಾಗಲಿಲ್ಲ' ಎಂದು ತಿಳಿಸಿದ್ದಾರೆ.

click me!