ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ

By Suchethana D  |  First Published Dec 21, 2024, 5:48 PM IST

ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳಬಹುದಾಗಿದ್ದು, ಆ 9 ಲಕ್ಷಣಗಳಾವುವು? ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ...  
 


ಗರ್ಭಿಣಿ ಎಂದು ಮಹಿಳೆಯರಿಗೆ ತಿಳಿಯುವುದು ಮುಟ್ಟು ನಿಂತ ಸಂದರ್ಭದಲ್ಲಿ. ಪ್ರತಿ ತಿಂಗಳೂ ಸರಿಯಾದ ರೀತಿಯಲ್ಲಿ ಮುಟ್ಟಾಗುತ್ತಿದ್ದರೆ, ಒಂದೇ ತಿಂಗಳಿನಲ್ಲಿ ಗರ್ಭಿಣಿ ಇರಬಹುದಾ ಎನ್ನುವ ಅನುಮಾನ ಶುರುವಾಗುತ್ತದೆ. 2-3 ತಿಂಗಳು ಮುಟ್ಟು ನಿಂತರೆ ಅದು ಕನ್​ಫರ್ಮ್​ ಆಗುತ್ತದೆ. ಮತ್ತೆ ಕೆಲವು ಮಹಿಳೆಯರಿಗೆ ಪ್ರತಿ ತಿಂಗಳೂ ಮುಟ್ಟು ಸರಿಯಾದ ರೀತಿಯಲ್ಲಿ ಆಗುತ್ತಿರುವುದಿಲ್ಲ. ಅಂಥವರಿಗೂ ಸಾಮಾನ್ಯವಾಗಿ 2-3 ತಿಂಗಳಿನಲ್ಲಿಯೇ ತಿಳಿಯುತ್ತದೆ. ಆದರೆ ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿಯಾಗಿರಬಹುದಾ ಎನ್ನುವುದು ತಿಳಿದುಕೊಳ್ಳಲಾಗದೇ  ಕೆಲವರು ಪೇಚಿಗೆ ಸಿಲುಕುವ ಸಂದರ್ಭಗಳೂ ಬರುತ್ತವೆ.  ಕೆಲವರಿಗೆ ಬೇಗನೇ ಗರ್ಭ ಧರಿಸುವ ಇಚ್ಛೆ ಇರುವುದಿಲ್ಲ, ಮತ್ತೆ ಎರಡನೆಯ ಮಗುವಿನ ಸಮಯದಲ್ಲಿ ಗ್ಯಾಪ್​ ಇರಬೇಕು ಎನ್ನಿಸುತ್ತದೆ. ಮತ್ತೆ ಕೆಲವರು ಈ ತಿಂಗಳಾದರೂ ನಾನು ಪ್ರೆಗ್ನೆಂಟ್​ ಆಗಬಹುದಾ ಎನ್ನುವ ಆಸೆಯಲ್ಲಿ ಇರುತ್ತಾರೆ. ಇಂಥವರು ಅರ್ಲಿ ಪ್ರೆಗ್ನೆನ್ಸಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಮುಟ್ಟಾಗಿ ನಾಲ್ಕನೇ ದಿನವಾದ ಬಳಿಕ ಕನಿಷ್ಠ ಮೂರು ವಾರ ಆದ ಮೇಲೆ, ನೀವು ಗರ್ಭಿಣಿ ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಲು ದೇಹದಲ್ಲಿ 9 ರೀತಿಯ ಬದಲಾವಣೆಗಳು ಆಗುತ್ತವೆ ಎನ್ನುತ್ತಾರೆ ವೈದ್ಯರು. ಈ ಕುರಿತು ಡಾ,ಮಾನಸಾ ಮತ್ತು ಡಾ. ನೃತ್ಯಾ ಎನ್ನುವ ಯೂಟ್ಯೂಬ್​ ಚಾನೆಲ್​ನಲ್ಲಿ ಅರ್ಲಿ ಪ್ರೆಗ್ನೆನ್ಸಿ ಟೆಸ್ಟ್​ ಬಗ್ಗೆ ವಿವರಿಸಲಾಗಿದೆ. (Early pregnancy symptoms before missing the periods). ಇದರಲ್ಲಿ ವೈದ್ಯೆ ಏನು ಹೇಳಿದ್ದಾರೆ ಎನ್ನುವ ಡಿಟೇಲ್ಸ್ ಇಲ್ಲಿದೆ...

Tap to resize

Latest Videos

undefined

ಪನೀರ್​ ಎಂದು ಪ್ರಾಣಕ್ಕೆ ಕುತ್ತಾಗ್ತಿರೋ ವಿಷ ಸೇವಿಸ್ತಾ ಇದ್ದೀರಾ? ನಕಲಿ ಕಂಡುಹಿಡಿಯೋ ಸುಲಭದ ಉಪಾಯ ಹೀಗಿದೆ..

- ಮೊದಲನೆಯದ್ದಾಗಿ ಸ್ತನಗಳಲ್ಲಿ ಬದಲಾವಣೆ ಆಗುತ್ತದೆ. ಸ್ತನಗಳನ್ನು ಜಸ್ಟ್​ ಮುಟ್ಟಿದರೂ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಅದು ಭಾರವಾಗಿದ್ದಂತೆ ಕಾಣಿಸುತ್ತದೆ ಅಥವಾ ಸ್ವಲ್ಪ ಊದಿಕೊಂಡಿರುವ ರೀತಿಯಲ್ಲಿ ಭಾಸವಾಗುತ್ತದೆ. ನಿಪ್ಪಲ್​ ಸುತ್ತಲೂ ಚುಕ್ಕೆ ಅಥವಾ ಪಿಂಪಲ್​ ರೀತಿ ಕಾಣಿಸಿಕೊಳ್ಳುತ್ತದೆ. ಇದು ತಾಯಿ ಸ್ತನ್ಯಪಾನ್ಯ ಮಾಡಲು ರೆಡಿ ಆಗುವ ಲಕ್ಷಣ ಇದಾಗಿರುತ್ತದೆ.  ಬಾಯಿಯಲ್ಲಿ ಸಲೈವಾ ಅಂದರೆ ಜೊಲ್ಲು ಉತ್ಪಾದನೆ ಹೆಚ್ಚಾಗುತ್ತದೆ. ಕೆಲವೊಬ್ಬರಿಗೆ ಕಹಿ ಕಹಿ ಅನ್ನಿಸಲು ಶುರುವಾಗುತ್ತದೆ. ಕೆಲವರಿಗೆ ಯಾವುದಾದರೂ ಒಂದು ಟೇಸ್ಟ್​ ಅಗತ್ಯಕ್ಕಿಂತ ಹೆಚ್ಚಿಗೆ ಗಾಢ ಎನಿಸಬಹುದು. ಉದಾಹರಣೆಗೆ ಮಾವಿನಕಾಯಿ ಚಿತ್ರಾನ್ನ ಮಾಡಿದ್ದರೆ, ಬೇರೆಯವರಿಗೆ ಅದು ಅಷ್ಟು ಹುಳಿ ಅನ್ನಿಸಿರಲಾರದು, ಆದರೆ, ಪ್ರೆಗ್ನೆಂಟ್​ ಆದವರಿಗೆ ಅವರಿಗಿಂತಲೂ ಹೆಚ್ಚು ಹುಳಿ ಎನ್ನಿಸಬಹುದು. 

ಹೊಟ್ಟೆ ಉಬ್ಬಿದ ಹಾಗೆ, ಅಜೀರ್ಣ ಆದಂತೆ ಆಗಬಹುದು. ಮಲ ವಿಸರ್ಜನೆ 2-3 ದಿನಗಳಿಗೆ ಒಮ್ಮೆ ಆಗಬಹುದು ಇಲ್ಲವೇ ಗಟ್ಟಿಯಾದ ಮಲ ವಿಸರ್ಜನೆ ಆಗಬಹುದು. ಕೆಲವೊಬ್ಬರಿಗೆ ವಾಂತಿ ಬರಲು ಶುರುವಾಗುತ್ತದೆ. ಯಾವುದಾದರೂ ಸ್ಮೆಲ್​ ಕಂಡ ತಕ್ಷಣ ಮೊದಲಿಗೆ ಆಗದ ರೀತಿಯಲ್ಲಿ ವಾಕರಿಕೆ ಬರಬಹುದು. ಒಗ್ಗರಣೆ, ಪರ್ಫ್ಯೂಮ್​ ಇತ್ಯಾದಿ. ಹೆಚ್ಚು ಆಯಾಸವಾಗುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದು, ತಲೆ ಸುತ್ತುವ ಲಕ್ಷಣಗಳೂ ಕಾಣಬಹುದು. ಕೆಲವೊಮ್ಮೆ ಹಿಬ್ಬೊಟ್ಟೆ ನೋವು, ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಗರ್ಭ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಅದಕ್ಕೆ ಸಹಾಯ ಮಾಡಲು ಸೊಂಟ ಸ್ಟ್ರೆಚ್​ ಆಗುವ ಕಾರಣ ಹೀಗಾಗುತ್ತದೆ. ಕೆಲವೊಬ್ಬರಿಗೆ ಒಂದೆರಡು ದಿನ ಹನಿ ಹನಿ ಬ್ಲಡ್​ ಕಾಣಿಸಿಕೊಳ್ಳಬಹುದು. ಇದು ಪಿರಿಯಡ್ಸ್​ ಅಂತ ಕನ್​ಫ್ಯೂಸ್​ ಮಾಡಿಕೊಳ್ಳುತ್ತಾರೆ. ಆದರೆ ಇದು ಸ್ವಲ್ಪ ಸ್ವಲ್ಪ ಬರುತ್ತೆ ಅಷ್ಟೇ ಎಂದಿದ್ದಾರೆ.

ಅದೇ ವೇಳೆ, ವೈದ್ಯೆ ಕೊನೆಯಲ್ಲಿ ಒಂದು ಮಾತು ಹೇಳಿದ್ದಾರೆ. ಅದೇನೆಂದರೆ, ಇವೆಲ್ಲಾ ನೀವು ಪ್ರೆಗ್ನೆಂಟ್​ ಆಗಿರುವ ಸಾಧ್ಯತೆ ಇದೆ ಎಂದು ಹೇಳುತ್ತದೆಯಷ್ಟೇ. ಆದರೆ ನೀವು ನಿಜವಾಗಿಯೂ ಅದರ ಬಗ್ಗೆ ತಿಳಿದುಕೊಳ್ಳಬೇಕಾದರೆ ನಿಮ್ಮ ಪೀರಿಯಡ್ಸ್​ ಮಿಸ್​ ಆದ 5-7 ಆದ ಮೇಲೆ ಯೂರಿನ್​ ಪ್ರೆಗ್ನೆನ್ಸಿ ಟೆಸ್ಟ್​ ಮಾಡಿಸಬೇಕು. ಅವಶ್ಯಕತೆ ಬಿದ್ದರೆ ವೈದ್ಯರ ಬಳಿ ಹೋಗಬೇಕು ಎಂದಿದ್ದಾರೆ. 
 

ಸೈಬರ್​ ಕ್ರೈಂಗೆ ಬಲಿಯಾಗಬಾರ್ದಾ? ದುಡ್ಡು ಸೇಫ್​ ಆಗಿರ್ಬೇಕಾ? ಹಾಗಿದ್ರೆ ಕನ್ನಡದಲ್ಲಿ ಮಾತನಾಡಿ! ಪೊಲೀಸ್​ ಅಧಿಕಾರಿ ಮಾತು ಕೇಳಿ

 

click me!