ಚೀನಾದಲ್ಲಿ ಆರಂಭವಾಗಿದೆ 'ಫುಲ್ ಟೈಮ್ ಡಾಟರ್' ವೃತ್ತಿ, ಏನಿದರ ಅಸಲಿಯತ್ತು?

By Suvarna NewsFirst Published May 31, 2023, 10:43 AM IST
Highlights

ಹಣಕಾಸಿನ ಅನಿವಾರ್ಯತೆಯಿಂದ ಮಕ್ಕಳು ಬೇರೆಲ್ಲೋ ದುಡಿದು ಹೈರಾಣಾಗುವ ಬದಲು, ಪಾಲಕರೇ ಹಣ ನೀಡಿದರೆ ಮಕ್ಕಳು ಅವರೊಂದಿಗೂ ಇರುತ್ತಾರೆ, ಹೆಚ್ಚು ಖುಷಿಯಾಗಿಯೂ ಇರಲು ಸಾಧ್ಯ. ಇಂಥದ್ದೊಂದು ಕಲ್ಪನೆಯೇ 'ಫುಲ್ ಟೈಮ್ ಡಾಟರ್’ ವೃತ್ತಿ.
 

ಮನೆಯಲ್ಲೇ ಇದ್ದುಕೊಂಡು ಮನೆಕೆಲಸ, ಮಕ್ಕಳನ್ನು ನಿಭಾಯಿಸುವ ಪುರುಷರ ಪತಿಯಂದಿರ ಬಗ್ಗೆ ಕೇಳಿದ್ದೇವೆ. ಮನೆಯಲ್ಲಿ ಯಾರಾದರೂ ಒಬ್ಬರು ದುಡಿಯುವುದು ಅನಿವಾರ್ಯ. ಪತಿಯೋ, ಪತ್ನಿಯೋ ಯಾರೋ ಒಬ್ಬರು ದುಡಿಯುವಾಗ ಇನ್ನೊಬ್ಬರು ಮನೆಯನ್ನು ನಿಭಾಯಿಸುವ ಚಿಂತನೆಯಿದು. ನೀವೇನಾದರೂ “ಫುಲ್ ಟೈಮ್ ಡಾಟರ್’ ಕಾನ್ಸೆಪ್ಟ್ ಅನ್ನು ಕೇಳಿದ್ದೀರಾ? ಚೀನಾದಲ್ಲಿ ಇದೀಗ ಆರಂಭವಾಗುತ್ತಿರುವ ಟ್ರೆಂಡ್ ಇದು. ಇಂಥದ್ದೊಂದು ಪರಿಕಲ್ಪನೆ ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲೆಡೆಯೂ ಜನಪ್ರಿಯತೆ ಪಡೆದುಕೊಳ್ಳಬಹುದು. ಚೀನಾದಲ್ಲಿ ಮಹಿಳೆಯರೊಬ್ಬರು ತಮ್ಮ ಪಾಲಕರ ಜವಾಬ್ದಾರಿ ನಿಭಾಯಿಸುವುದಕ್ಕಾಗಿ ತಮ್ಮ ಕೆಲಸವನ್ನು ತೊರೆದಿದ್ದಾರೆ, ಇದರಲ್ಲೇನು ಅಚ್ಚರಿ ಏನ್ನಬೇಡಿ. ಇಲ್ಲೇ ಇರುವುದು ಖಾಸ್ ವಿಚಾರ. ಈಕೆ ಪುಕ್ಕಟೆಯಾಗಿ ಈ ಕೆಲಸ ಮಾಡುತ್ತಿಲ್ಲ. ಬದಲಿಗೆ, ತಿಂಗಳಿಗೆ ತನಗೆ ಬರುತ್ತಿದ್ದ ಸಂಬಳದಷ್ಟೇ ಹಣವನ್ನು ತಂದೆಯಿಂದ ಪಡೆಯುತ್ತಿದ್ದಾಳೆ. ವೃತ್ತಿಯನ್ನು ತೊರೆದು “ಫುಲ್ ಟೈಮ್ ಡಾಟರ್’ ವೃತ್ತಿ ನಿಭಾಯಿಸುತ್ತಿದ್ದಾಳೆ. ಪಾಲಕರನ್ನು ನೋಡಿಕೊಳ್ಳುವ ಕೆಲಸ ಸಂಬಳದಿಂದ ಕೂಡಿದೆ ಎನ್ನುವುದೇ ಹೊಸ ವಿಚಾರ. ಎಷ್ಟೋ ಜನರಿಗೆ ವಯಸ್ಸಾದ ಪಾಲಕರನ್ನು ನೋಡಿಕೊಳ್ಳಬೇಕು ಎನ್ನುವ ಹಂಬಲವಿದ್ದರೂ ಹಣಕಾಸಿನ ಅನಿವಾರ್ಯತೆಯಿಂದ ಸಾಧ್ಯವಾಗುವುದಿಲ್ಲ. ಪಾಲಕರು ಹಣವಂತರಾಗಿದ್ದರೆ ಈ ಕಾರ್ಯ ಸುಲಭವಾಗುತ್ತದೆ. ಬೇರೆ ಯಾರನ್ನೋ ಕೇರ್ ಟೇಕರ್ ಆಗಿಟ್ಟುಕೊಳ್ಳುವ ಬದಲು ಮಕ್ಕಳಿಗೇ ಈ ಕಾರ್ಯ ವಹಿಸುವುದು ಉತ್ತಮ.

ಪಾಲಕರಿಂದ (Parents) ಕೆಲಸದ ಆಫರ್ (Offer)
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಪ್ರಕಾರ, 40 ವರ್ಷದ ನಿಯಾಯನ್ (Nianan) ಎನ್ನುವ ಮಹಿಳೆ (Woman) ತಮ್ಮ ಕೆಲಸ ಬಿಟ್ಟಿದ್ದಾರೆ. ಅದು ತಮ್ಮ ಪಾಲಕರನ್ನು ನೋಡಿಕೊಳ್ಳುವುದಕ್ಕಾಗಿ ಹಾಗೂ ಆಕೆ ಈ ಕೆಲಸಕ್ಕೆ ಸಂಬಳ (Salary) ಪಡೆಯುತ್ತಾರೆ. ಆಕೆಗೆ ಮಾಸಿಕ 46 ಸಾವಿರ ರೂಪಾಯಿಯಷ್ಟು ಸಂಬಳ ನಿಗದಿಯಾಗಿದೆ. 2022ರಲ್ಲೇ ನಡೆದ ಘಟನೆ ಇದು. ನಿಯಾಯನ್ ಎಂಬಾಕೆ 15 ವರ್ಷಗಳಿಂದ ನ್ಯೂಸ್ ಏಜೆನ್ಸಿಯಲ್ಲಿ ಕೆಲಸಕ್ಕಿದ್ದಳು. ಅತ್ಯಧಿಕ ಕೆಲಸದ ಹೊರೆಯಿಂದ ಬೇಸತ್ತಿದ್ದರೂ ಜೀವನೋಪಾಯಕ್ಕಾಗಿ ಅನಿವಾರ್ಯವಾಗಿತ್ತು. ಹಣಕಾಸಿನ ಅಗತ್ಯ (Financial Needs) ಪೂರೈಸಿಕೊಳ್ಳಲು ಉದ್ಯೋಗ (Profession) ಬೇಕೇ ಬೇಕಾಗಿತ್ತು.

ಹೂಡಿಕೆಗೆ ಚೀನಾಕ್ಕಿಂತ ಭಾರತವೇ ಬೆಸ್ಟ್: ಜಾಗತಿಕ ಸಿಇಒ ಸಮೀಕ್ಷೆ ಅಭಿಪ್ರಾಯ

ಈ ಸನ್ನಿವೇಶದಲ್ಲಿ ಆಕೆಯ ತಂದೆ ಒಂದು ಆಫರ್ ನೀಡಿದರು. ವಯಸ್ಸಾದ ತಮ್ಮನ್ನು ನೋಡಿಕೊಂಡರೆ ಆಕೆಯ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುವುದಾಗಿ ಹೇಳಿದರು. ಆಗ ನಿಯಾಯನ್ ಮರುಯೋಚನೆ ಮಾಡಲಿಲ್ಲ. ಕೆಲಸ ತೊರೆದಳು. ಆಕೆಯ ಪಾಲಕರು ಆಕೆಗೆ ತಿಂಗಳಿಗೆ 4 ಸಾವಿರ ಯಾನ್ ಅಥವಾ 46 ಸಾವಿರ ರೂ.ಗಳಷ್ಟು ಸಂಬಳ ನೀಡುತ್ತಾರೆ. “ಈ ವೃತ್ತಿ ಪ್ರೀತಿಯಿಂದ (Love) ಕೂಡಿರುವ ಕೆಲಸವಾಗಿದೆ’ ಎನ್ನುತ್ತಾಳೆ ನಿಯಾನನ್.

ಫುಲ್ ಟೈಮ್ ಡಾಟರ್ (Full Time Daughter) ಹೇಗೆ?
ನಿಯಾಯನ್ ದಿನಚರಿ ಹೇಗಿರುತ್ತದೆ ಗೊತ್ತಾ? ಆಕೆ ಪಾಲಕರೊಂದಿಗೇ ಇರುತ್ತಾಳೆ. ದಿನವೂ ಬೆಳಗ್ಗೆ ಒಂದು ತಾಸುಗಳ ಕಾಲ ಆಕೆ ಪಾಲಕರೊಂದಿಗೆ ಸಮಯ ಕಳೆಯುತ್ತಾಳೆ. ನೃತ್ಯ (Dance) ಮಾಡುವುದು, ವ್ಯಾಯಾಮದಂತಹ ಚಟುವಟಿಕೆ ಮಾಡುತ್ತಾರೆ. ಬಳಿಕ, ಏನಾದರೂ ದಿನಸಿ ಖರೀದಿ ಮಾಡುತ್ತಾರೆ. ಬಳಿಕ, ಸಂಜೆ ಇಬ್ಬರಿಗೂ ಅಡುಗೆ (Cook) ಮಾಡುತ್ತಾಳೆ. ಆ ಸಮಯದಲ್ಲಿ ತಂದೆಯೂ ಸಹಕಾರ ನೀಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಲೆಕ್ಟ್ರಾನಿಕ್ಸ್ ಸಲಕರಣೆಗಳಿಗೆ ಸಂಬಂಧಿಸಿ ಆಕೆಯೇ ಎಲ್ಲ ಕೆಲಸ ನಿಭಾಯಿಸುತ್ತಾಳೆ. ಎಲ್ಲಾದರೂ ಅವರನ್ನು ಡ್ರೈವ್ (Drive) ಕರೆದುಕೊಂಡು ಹೋಗುತ್ತಾಳೆ. ತಿಂಗಳಿಗೆ ಒಂದೆರಡು ಫ್ಯಾಮಿಲಿ ಟ್ರಿಪ್ (Trip) ಆಯೋಜಿಸುತ್ತಾಳೆ. 

ಖುಷಿ ಕೊಡುವ ಕೆಲಸ
ನಿಯಾಯನ್ ಈ ಕೆಲಸವನ್ನು ಭಾರೀ ಎಂಜಾಯ್ (Enjoy) ಮಾಡುತ್ತಿದ್ದಾಳೆ. ಪಾಲಕರನ್ನು ನೋಡಿಕೊಳ್ಳುವ ಕೆಲಸ ಹಿತವಾಗಿದೆ, ಒತ್ತಡವಿಲ್ಲ. ಖುಷಿಯಾಗಿದ್ದಾಳೆ. ಆದರೆ, ಆಕೆಗೆ ಒಮ್ಮೊಮ್ಮೆ ಹೆಚ್ಚು ದುಡಿಯುವ ಬಯಕೆಯೂ ಉಂಟಾಗುತ್ತದೆ. ಇದಕ್ಕೂ ಸಹ ಆಕೆಯ ಪಾಲಕರು ತಡೆ ಹಾಕಿಲ್ಲ. “ನಿನಗೆ ಉತ್ತಮ ಕೆಲಸ ದೊರೆತರೆ ಮಾಡು. ಕೆಲಸ ಮಾಡಲು ಇಷ್ಟವಿಲ್ಲವಾದರೆ ನಮ್ಮೊಂದಿಗೇ ಇದ್ದುಬಿಡು. ನಮಗಾಗಿ ಸಮಯ (Time) ನೀಡು’ ಎನ್ನುತ್ತಾರೆ. 

ವಾವ್ಹ್‌..ಈ ಗ್ರಾಮದಲ್ಲಿ ಉಳ್ಕೊಂಡ್ರೆ ಬಂಗಲೆ ಮತ್ತು ಕಾರು ಫ್ರೀಯಾಗಿ ಸಿಗುತ್ತೆ!

ಅಸಲಿಗೆ ಚೀನಾದ ಉದ್ಯೋಗ ಮಾರುಕಟ್ಟೆ (Job Market) ಭಾರೀ ಕಳಪೆ ಸ್ಥಿತಿಯಲ್ಲಿದೆ. ವಯಸ್ಸಾದ ಪಾಲಕರು ಹೀಗೆ ಮಾಡುವ ಮೂಲಕ ಮಕ್ಕಳಿಗೆ ಮಾನಸಿಕ ಹಾಗೂ ಆರ್ಥಿಕ ನೆರವು ನೀಡಿದಂತಾಗುತ್ತದೆ ಎನ್ನುವ ಅಭಿಪ್ರಾಯ ಈಗ ದಟ್ಟವಾಗಿದೆ. ಚೀನಾದಲ್ಲಿ ವಾರದಲ್ಲಿ ಆರು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ದುಡಿಯಲೇಬೇಕು. ಇದು ಜನರನ್ನು ಸಾಕಷ್ಟು ಹೈರಾಣಾಗಿಸಿದೆ. 

click me!