ಐಟಿ ಉದ್ಯೋಗ ಬಿಟ್ಟು Rapido ಚಾಲನೆ​: ಡಬಲ್​ ಆದಾಯ ಗಳಿಸ್ತಿರೋ ಬೆಂಗಳೂರಿನ ಯುವತಿಯ ರೋಚಕ ಸ್ಟೋರಿ

Published : Sep 30, 2026, 10:19 PM IST
Rapido

ಸಾರಾಂಶ

ತಂದೆಯ ಮರಣದ ನಂತರ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ಯುವತಿಯೊಬ್ಬರು ತಮ್ಮ ಐಟಿ ಕೆಲಸವನ್ನು ತೊರೆದಿದ್ದಾರೆ. ರಾತ್ರಿ ಪಾಳಿಯ ಕಷ್ಟದಿಂದಾಗಿ ಕಾರ್ಪೊರೇಟ್ ಕೆಲಸ ಬಿಟ್ಟು ರ್ಯಾಪಿಡೊ ಆಟೋ ಚಾಲಕಿಯಾಗಿ ಅವರು ಹೊಸ ವೃತ್ತಿ ಆರಂಭಿಸಿದ್ದಾರೆ. ಈಗ ಅವರು ಐಟಿ ಉದ್ಯಮಕ್ಕಿಂತಲೂ ದುಪ್ಪಟ್ಟು ಆದಾಯ ಗಳಿಸುತ್ತಿರುವ ವಿಚಾರ ವೈರಲ್ ಆಗಿದೆ.

ಬೆಂಗಳೂರು: ಐಟಿ ವಲಯದಲ್ಲಿ ಕೆಲಸ ಮಾಡಬೇಕು ಎನ್ನುವುದು ಬಹಳ ಮಂದಿಯ ಕನಸಾಗಿರುತ್ತದೆ. ಅರ್ಹತೆಯ ಜೊತೆ ಅದೃಷ್ಟವೂ ಇದ್ದರೆ, ಆ ಕನಸು ನನಸು ಕೂಡ ಆಗುತ್ತದೆ. ಆದರೆ ಅಲ್ಲಿಗೆ ಹೋದ ಮೇಲೆ ಎಷ್ಟೋ ಜನರಿಗೆ ಇಂಥ ಹಗಲು, ರಾತ್ರಿ ಕೆಲಸಕ್ಕಾಗಿ, ಈ ಪರಿಯ ದುಡಿಮೆಗಾಗಿ ನಾನು ಇಲ್ಲಿಗೆ ಬರಬೇಕಿತ್ತಾ ಎಂದು ಎನ್ನಿಸುವುದು ಉಂಟು. ಅದರಲ್ಲಿಯೂ ಹಲವು ಹೆಣ್ಣುಮಕ್ಕಳಿಗೆ ಐಟಿ ಉದ್ಯಮ ಎನ್ನುವುದು ಮದುವೆಯಾದ ಮೇಲೆ, ಮಕ್ಕಳಾದ ಮೇಲೆ ತುಂಬಾ ಕಷ್ಟವಾಗುವುದು ಸಹಜವೇ. ಅದೇ ರೀತಿ, ಮನೆಯಲ್ಲಿ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದವರಿಗೆ ಈ ರಾತ್ರಿಯ ಪಾಳಿಯ ಕೆಲಸ ದೊಡ್ಡ ಸಮಸ್ಯೆಯಾಗುವುದು ಇದೆ. ಇದೇ ಕಾರಣಕ್ಕೆ ಕೆಲವರು ಈಗ ಐಟಿ ಉದ್ಯಮ ತೊರೆಯುತ್ತಿದ್ದಾರೆ.

ಅದೇ ರೀತಿ ತಂದೆಯ ಮರಣದ ನಂತರ ಸಂಸಾರದ ಜವಾಬ್ದಾರಿ ಹೊತ್ತ ಯುವತಿಯೊಬ್ಬರು ತಮ್ಮ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಲು ರಾತ್ರಿಯ ಪಾಳಿ ಕಷ್ಟವಾಗುವ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಕೆಲಸವನ್ನು ತೊರೆದು Rapido ಆಟೊ ಡ್ರೈವರ್​ ಆಗಿ ಕೆಲಸಕ್ಕಿಳಿದು, ಐಟಿ ಉದ್ಯಮಕ್ಕಿಂತಲೂ ಡಬಲ್​ ಆದಾಯ ಗಳಿಸ್ತಿರೋ ಸ್ಟೋರಿ ಈಗ ಆನ್​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಡಿಜಿಟಲ್ ವಿಷಯ ಸೃಷ್ಟಿಕರ್ತ ತನ್ವಿ ಅವರು ಈ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಾಲಕಿಯ ಇಂಗ್ಲಿಷ್​ಗೆ ಬೆರಗಾಗಿ ವಿಷಯ ಕೇಳಿದಾಗ, ಅವರು ಎಲ್ಲಾ ವಿಷಯ ಹೇಳಿದ್ದಾರೆ. ಅದನ್ನು ತನ್ವಿ ಅವರು ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಈ ವಿಷಯ ಬೆಳಕಿಗೆ ಬಂದಿದೆ.

ಮನೆಯ ಜವಾಬ್ದಾರಿ

ಈ ವಿಡಿಯೋದಲ್ಲಿ ಅವರ ಮುಖವನ್ನು ತೋರಿಸಲಾಗಿಲ್ಲ. ಬದಲಿಗೆ ಯುವತಿ, ತಮ್ಮ ತಂದೆಯ ಮರಣದ ನಂತರ ಕಾರ್ಪೊರೇಟ್ ಕೆಲಸವನ್ನು ತೊರೆದ ಬಗ್ಗೆ ತಿಳಿಸಿದ್ದಾರೆ. ತಮ್ಮ ತಾಯಿಯ ಜೊತೆಯಲ್ಲಿ ತಡರಾತ್ರಿ ಪಾಳಿಗಳನ್ನು ನಿರ್ವಹಿಸುವುದು ಹೆಚ್ಚು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ, ಅಂತಿಮವಾಗಿ ಐಟಿ ವಲಯವನ್ನು ತೊರೆದು ಆಟೋ ಡ್ರೈವಿಂಗ್ ಅನ್ನು ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇದು ಅವರ ಸಮಯದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಮತ್ತು ಮನೆಗೆ ಹತ್ತಿರದಲ್ಲಿರಲು ಅನುವು ಮಾಡಿಕೊಡುವ ವೃತ್ತಿಯಾಗಿದೆ ಎಂದಿದ್ದಾರೆ.

ಮನೆಯವರ ಮನವೊಲಿಸುವುದೇ ಕಷ್ಟವಾಯ್ತು

ನನ್ನ ಈ ನಿರ್ಧಾರ ಸುಲಭವಾಗಿರಲಿಲ್ಲ. ಐಟಿ ಉದ್ಯೋಗ ಬಿಟ್ಟು ಆಟೋ ಡ್ರೈವರ್​ ಆಗುವುದು ಎಂದರೆ ಅದನ್ನು ಎಷ್ಟೋ ಮನೆಯಲ್ಲಿ ಸಹಿಸಿಕೊಳ್ಳಲು ಆಗದ ಮಾತು. ಅದೇ ರೀತಿ, ನನ್ನ ಮನೆಯಲ್ಲಿಯೂ ವಿರೋಧ ಬಂತು. ಆದರೆ ಅವರಿಗೆ ತುಂಬಾ ಕಷ್ಟಪಟ್ಟು ಮನವೊಲಿಸಿದೆ. ನನ್ನ ರಾತ್ರಿ ಪಾಳಿಯಿಂದ ಮನೆಯ ಜವಾಬ್ದಾರಿ ಹೊರುವುದು ಕಷ್ಟವಾಗಿರುವ ಕಾರಣದಿಂದ, ಕುಟುಂಬಕ್ಕೂ ಆದ್ಯತೆ ನೀಡುತ್ತೇನೆ. ಇದರಿಂದ ಅವೆಲ್ಲವೂ ಸಾಧ್ಯ ಎಂದು ಕಷ್ಟಪಟ್ಟು ಮನವೊಲಿಸಿದ ನಂತರ ಎಲ್ಲರೂ ಒಪ್ಪಿಕೊಂಡರು ಎಂದು ಯುವತಿ ಹೇಳಿದ್ದಾರೆ.

ಆಟೋ ಚಾಲನೆ ಮಾಡುವುದು ಎಂದರೆ ಕಡಿಮೆ ವೃತ್ತಿಯಲ್ಲ. ಐಟಿಯಲ್ಲಿ ಕೆಲಸ ಮಾಡುವಾಗ ಅವರು ಗಳಿಸಿದ್ದಕ್ಕಿಂತ ಈಗ ನಾನು ಹೆಚ್ಚು ಗಳಿಸುತ್ತೇನೆ. ಜನರು ತಮ್ಮ ಹಿಂದಿನ ವೃತ್ತಿಜೀವನದ ಬಗ್ಗೆ ತಿಳಿದುಕೊಂಡಾಗ ಆಗಾಗ್ಗೆ ಆಶ್ಚರ್ಯ ಪಡುತ್ತಾರೆ, ಕೆಲವರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಯಾರಾದರೂ ಆಟೋ ಚಾಲನೆ ಮಾಡುವುದು ಹೇಗೆ ಎಂದು ಆಶ್ಚರ್ಯ ಪಡುತ್ತಾರೆ ಎಂದು ಅವರು ಹೇಳಿದ್ದಾರೆ. ತನ್ವಿ ಅವರು, ಯುವತಿ ತನ್ನದೇ ಆದ ಮಾರ್ಗವನ್ನು ಆರಿಸಿಕೊಂಡಿದ್ದಕ್ಕಾಗಿ ಹೊಗಳಿದ್ದಾರೆ. ಜನರು ಏನು ಹೇಳುತ್ತಾರೆ ಎಂದು ಜನರ ಬಗ್ಗೆ ಕಾಳಜಿ ಮಾಡುವ ಬದಲದು, ಮನೆಯ ಕಾಳಜಿ ಮಾಡಿದರು. ಸ್ವಾತಂತ್ರ್ಯವನ್ನು ಆರಿಸಿಕೊಂಡರು. ಇದು ಎಲ್ಲರಿಗೂ ಅಗತ್ಯವಿದೆ ಎಂದಿದ್ದಾರೆ ತನ್ವಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಚ್ಚು ಇಲ್ಲ, ಲಟ್ಟಿಸೋದು ಬೇಡ.. ಕಡುಬು ಬಿರುಕು ಬಿಡದೆ ಮೃದುವಾಗಿ ಬರಲು ಈ ಒಂದು ಪದಾರ್ಥ ಬೆರೆಸಿದ್ರೆ ಸಾಕು
ಗಡ್ಡ ಹೊಂದಿರುವ ಕಿರಿಯ ಮಹಿಳೆ: ಟೀಕೆ ಎದುರಿಸಿ ಗಿನ್ನೆಸ್‌ ದಾಖಲೆ ಬರೆದಾಕೆಯ ಸ್ಫೂರ್ತಿದಾಯದ ಸ್ಟೋರಿ ಇಲ್ಲಿದೆ