
ಮ್ಯಾರಿಡ್ ಮೆನ್ (Married Men) ಹಾಗೂ ಸಿಂಗಲ್ ವುಮೆನ್ (Single Women) ಯಾವಾಗ್ಲೂ ಖುಷಿಯಾಗಿರ್ತಾರೆ ಅಂತ ಕೆಲ ಸ್ಟಡಿ ಹೇಳಿದೆ. ಮದುವೆ ಆಗ್ತಿದ್ದಂತೆ ಸ್ವಾತಂತ್ರ್ಯ ಕಳೆದುಕೊಳ್ಳುವ ಮಹಿಳೆಯರು, ಕುಟುಂಬ, ಮಕ್ಕಳಿಗಾಗಿ ತಮ್ಮ ವೃತ್ತಿ ಜೀವನ ಸೇರಿದಂತೆ ಎಲ್ಲವನ್ನು ತ್ಯಾಗ ಮಾಡ್ತಾರೆ. ಅದೇ ಮದುವೆಯಾಗದ ಕೆಲ ಮಹಿಳೆಯರು ಸಾಧನೆಯ ಉತ್ತುಂಗಕ್ಕೆ ಏರಿದ ಅನೇಕ ಉದಾಹರಣೆ ಇದೆ. ಅದಕ್ಕೀಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಕೆಲ್ಸ ಮಾಡೋಕೆ, ಖುಷಿಯಾಗಿರೋಕೆ ವಯಸ್ಸು ಅಡ್ಡಿ ಬರೋದೇ ಇಲ್ಲ ಎಂಬುದನ್ನು ಅವರು ತೋರಿಸಿದ್ದಾರೆ. ವಯಸ್ಸಾಗ್ತಿದ್ದಂತೆ ಕೈಲಾಗೋದೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದು, ಇಡೀ ದಿನ ಮನೆಯಲ್ಲಿ ಕುಳಿತುಕೊಂಡು ರೋಗ ಆಹ್ವಾನಿಸಿಕೊಳ್ಳುವ ವೃದ್ಧರ ಮಧ್ಯೆ ಈ ಅಜ್ಜಿ ಸಾಧನೆ ಹುಬ್ಬೇರಿಸುವಂತಿದೆ.
ಸೋಶಿಯಲ್ ಮೀಡಿಯಾದಲ್ಲಿ 79 ವರ್ಷದ ಅವಿವಾಹಿತ ಅಜ್ಜಿ (Unmarried Grandmother)ಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಕಾಶಿಶ್ ಸೋನಿ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಅಜ್ಜಿಯ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಜ್ಜಿ ವಿವಿಧ ಭಕ್ಷ್ಯಗಳನ್ನು ತಯಾರಿಸ್ತಿದ್ದಾರೆ. ಖುಷಿ ಖುಷಿಯಾಗಿ ಗ್ರಾಹಕರಿಗೆ ಆಹಾರ ನೀಡ್ತಿದ್ದಾರೆ. ವಿಶೇಷವೆಂದರೆ ಈ ವೃದ್ಧೆ ಸೇನೆಯಲ್ಲಿ ಕೆಲ್ಸ ಮಾಡಿದ್ದರು.
ಇವರು ತುಂಬಾ ಬಲಶಾಲಿ. ಇಂದೋರ್ನ ಬೀದಿಗಳಲ್ಲಿ ರುಚಿಕರವಾದ, ಬಾಯಲ್ಲಿ ನೀರೂರಿಸುವ ಆಹಾರವನ್ನು ಬಡಿಸುತ್ತಿದ್ದಾರೆ. ವಿಳಾಸ - ಮಾಡರ್ನ್ ಗಿಫ್ಟ್ ಸ್ಟೋರ್ ಎದುರು, ಚಂದ್ರ ಲೋಕ್ ಕಾಲೋನಿ ಹತ್ತಿರ, ಖಜ್ರಾನಾ ರಸ್ತೆ, ಶ್ರೀ ನಗರ ವಿಸ್ತರಣೆ, ಇಂದೋರ್ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಅಜ್ಜಿ ಮಾತನಾಡ್ತಿರೋದನ್ನು ಕೇಳ್ಬಹುದು. ಭಾರತೀಯ ಆಡಳಿತ ಸೇವೆಯಲ್ಲಿ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ ಎಂದು ಅಜ್ಜಿ ಹೇಳಿದ್ದಾರೆ. ಸೇನಾ ನಿವೃತ್ತಿಯ ನಂತ್ರ ಅಡುಗೆ ಮೇಲಿನ ಪ್ರೀತಿಯಿಂದಾಗಿ ಅವರು ತಮ್ಮದೇ ಆಹಾರ ಮಳಿಗೆಯನ್ನು ಪ್ರಾರಂಭಿಸಿದ್ರು. ಮುಂಬೈನಿಂದ ಲಲಿತಕಲಾ ಪದವಿ ಪಡೆದಿರುವ ಅಜ್ಜಿ, ನಾನು ಜೀವನದಲ್ಲಿ ಹೆಚ್ಚು ಕಷ್ಟಗಳನ್ನು ನೋಡಿಲ್ಲ ಎಂದಿದ್ದಾರೆ.
ಏಕೆ ಮದುವೆ ಆಗಿಲ್ಲ? : ಅಜ್ಜಿ ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ಮದುವೆ ನನ್ನ ಹವ್ಯಾಸಕ್ಕೆ ಅಡ್ಡಿಯಾಗ್ತಿತ್ತು ಎಂಬ ಉತ್ತರವನ್ನು ನೀಡಿದ್ದಾರೆ. ಸಣ್ಣ, ಸ್ವತಂತ್ರ, ಆಹಾರ ಮಳಿಗೆ ಶುರು ಮಾಡೋದು ಅಜ್ಜಿಯ ಕನಸಾಗಿತ್ತು. ನಿವೃತ್ತಿ ನಂತ್ರ ಅದನ್ನು ಶುರು ಮಾಡಿ ಯಶಸ್ವಿಯಾಗಿದ್ದೇನೆ. ನನ್ನ ವರ್ತಮಾನಕಾಲ, ಭೂತಕಾಲದ ಬಗ್ಗೆ ನನಗೆ ತೃಪ್ತಿ ಇದೆ ಎಂದು ಅಜ್ಜಿ ಹೇಳಿದ್ದಾರೆ.
ವೈರಲ್ ವೀಡಿಯೊ ಸಾವಿರಾರು ಲೈಕ್ ಬಂದಿದೆ. 3.2 ಮಿಲಿಯನ್ಗಿಂತಲೂ ಹೆಚ್ಚು ಬಾರಿ ನೋಡಲಾಗಿದೆ. ಮಾಜಿ ಸೇನಾ ಸಿಬ್ಬಂದಿಯನ್ನು ಬಳಕೆದಾರರು ಹೊಗಳುತ್ತಿದ್ದಾರೆ. ಅಜ್ಜಿ ಬಹಳ ಸಂತೋಷಕರ ಹಾಗೂ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ. ಯಾವುದೇ ವಿಷಾದವಿಲ್ಲ. ಈಗ್ಲೂ ನಿಮ್ಮ ದಾರಿಯನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಲು ಅವಕಾಶವಿದೆ. ನಿಮಗೆ ಇಷ್ಟವಾಗಿದ್ದನ್ನು ಮಾಡಿ. ಹಿಂದಿನದಕ್ಕಾಗಿ ಎಂದಿಗೂ ವಿಷಾದಿಸಬೇಡಿ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಒಳ್ಳೆ ಕೆಲ್ಸ ಪಡೆಯೋದು, ಅಜ್ಜಿಯಂತೆ ಒಂಟಿ ಜೀವನ ನಡೆಸೋದು ನನ್ನ ಕನಸು. ಅಜ್ಜಿಗೆ ದೇವರು ಆಶೀರ್ವದಿಸಲಿ ಎಂದು ಇನ್ನೊಬ್ಬರು ಬರೆದಿದ್ದಾರೆ. ನಾನು ಅಜ್ಜಿಯನ್ನು ಭೇಟಿ ಮಾಡಿದ್ದೇನೆ. ಅವರು ತುಂಬಾ ಸ್ವಿಟ್ ಆಗಿದ್ದಾರೆ, ಅವರ ಕೈ ರುಚಿ ಅದ್ಭುತವಾಗಿದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಮಹಿಳೆಯರು ಒಂಟಿಯಾಗಿದ್ರೆ ಖುಷಿಯಾಗಿರ್ತಾರೆ ಅನ್ನೋದಕ್ಕೆ ಈ ಅಜ್ಜಿಯೇ ಉತ್ತಮ ಎಗ್ಸಾಂಪಲ್ ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.