Weekly Horoscope: ಕಟಕಕ್ಕಿದೆ ಪ್ರೇಮ ಜೀವನಕ್ಕೆ ಜಿಗಿವ ಅವಕಾಶ, ಮೀನಕ್ಕೆ ವೃತ್ತಿ ಯಶ

By Suvarna News  |  First Published Mar 13, 2022, 5:05 AM IST

ತಾರೀಖು 13ರಿಂದ 19 ಮಾರ್ಚ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
 


ಮೇಷ(Aries)
ವಿರೋಧಿಗಳೊಂದಿಗೆ ಸಮಸ್ಯೆ ಉಂಟಾಗಬಹುದು. ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ನಿಮ್ಮ ಸಂಗಾತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅಡೆತಡೆಗಳನ್ನು ಎದುರಿಸಬಹುದು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಈ ತಿಂಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ವ್ಯಾಪಾರ ಮಾಡುವವರು ಪಾಲುದಾರಿಕೆಯಿಂದ ಪ್ರಯೋಜನ ಪಡೆಯುತ್ತಾರೆ.

ವೃಷಭ(Taurus)
ಇತರರನ್ನು ನೋಡಿ ಅವರ ಉನ್ನತಿ ಕಂಡು ಕೊರಗದಿರಿ. ಬದಲು ನಿಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸ ಮಾಡಿ ಸ್ವಾವಲಂಬಿಯಾಗಿ. ನೀವು ವಿದೇಶದ ಸಂಪರ್ಕ ಹೊಂದಿದ್ದರೆ ಹಣಕಾಸಿನ ಪ್ರಯೋಜನಗಳನ್ನು ಪಡೆಯುವಿರಿ. ಹೊಸದನ್ನು ಕಲಿಯುವ ನಿಮ್ಮ ಮನಸ್ಥಿತಿಯಿಂದ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ತೆರೆಯುತ್ತದೆ. ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುತ್ತೀರಿ. ನಿಮ್ಮೆಲ್ಲ ಯೋಜನೆಗಳನ್ನು ಸಫಲಗೊಳಿಸುತ್ತೀರಿ.

Tap to resize

Latest Videos

undefined

ಮಿಥುನ(Gemini)
ವಿದ್ಯಾರ್ಥಿಗಳು ಧನಾತ್ಮಕ ಫಲಿತಾಂಶ ಪಡೆಯುತ್ತಾರೆ. ಈ ವಾರ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಹಳೆಯ ಸಾಲವನ್ನು ನೀವು ಮರುಪಾವತಿ ಮಾಡಬಹುದು,  ಕೌಶಲ್ಯಗಳನ್ನು ಉನ್ನತೀಕರಿಸಲು ಮತ್ತು ಯಾವುದೇ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಇದು ಸರಿಯಾದ ಸಮಯ. ಈ ತಿಂಗಳು ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಕೆಲಸಗಳಿಗೆ ಖರ್ಚು ಮಾಡುವಿರಿ. ಆಸ್ತಿ ಸಂಬಂಧಿತ ವಹಿವಾಟುಗಳಲ್ಲಿ ತೊಡಗಿಸುವಿರಿ.

ಕಟಕ(Cancer)
ಪ್ರೀತಿ, ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಈ ವಾರ ನಿಮ್ಮ ವಿರಹ ಹೆಚ್ಚಬಹುದು.  ಹಣ ನಷ್ಟವಾಗುವ ಸಂಭವವಿದೆ. ಯಾವುದೇ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮುನ್ನ ಸಾಕಷ್ಟು ಯೋಚಿಸಿ. ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನೀವು ಬಯಸಿದ ಕೆಲಸವನ್ನು ಮಾಡಲು ನಿಮಗೆ ಅವಕಾಶ ಸಿಗುತ್ತದೆ, ಅದು ತೃಪ್ತಿಯನ್ನು ನೀಡುತ್ತದೆ. ತಂದೆಯ ಬಗ್ಗೆ ಆದರ ಹೆಚ್ಚುವುದು.

Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ

ಸಿಂಹ(Leo)
 ಅತಿಯಾದ ಒಳ್ಳೆಯನಗಳೂ ಇತರರಿಗೆ ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ಇನ್ನೊಬ್ಬರ ವಿಚಾರದಲ್ಲಿ ಹೆಚ್ಚೆಚ್ಚು ಮೂಗುತೂರಿಸೋದು ಬೇಡ. ವಾರದ ಮಧ್ಯದಲ್ಲಿ ವಿರೋಧಿಗಳ ಮೇಲೆ ನೀವು ಪ್ರಾಬಲ್ಯ ಸಾಧಿಸುವಿರಿ. ಅನಗತ್ಯ ವಾದಗಳ ಸೂಚನೆಗಳು ಇರುವುದರಿಂದ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸ್ವಲ್ಪ ಅಹಿತಕರವಾಗಿರುತ್ತದೆ. ವ್ಯಾಪಾರಸ್ಥರು ಈ ತಿಂಗಳು ವ್ಯವಹಾರದಲ್ಲಿ ಧನಾತ್ಮಕ ಬೆಳವಣಿಗೆ ಕಾಣಬಹುದು.

ಕನ್ಯಾ(Virgo)
ನಿಮ್ಮ ಕೋಪ ಮತ್ತು ಹಠಮಾರಿತನದ ವರ್ತನೆಯು ಕೆಲಸಗಳಲ್ಲಿ ಅಡೆತಡೆಗಳನ್ನು ತರಬಹುದು. ಸಾಧ್ಯವಾದಷ್ಟು ಮನಸ್ಸನ್ನು ಹತೋಟಿಗೆ ತರಲು ಪ್ರಯತ್ನಿಸಿ. ಹೊಂದಾಣಿಕೆ ಇಲ್ಲದೇ ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಎದುರಾಳಿಗಳ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ ಅವರು ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು. ಯಾವುದೇ ಅನಗತ್ಯ ಪ್ರಯಾಣವು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು.

ಮನೆ ಹಿರಿಯರ ಆರೋಗ್ಯದಲ್ಲಿ ಸದಾ ಏರುಪೇರೇ? ಈ Vastu Tips ಅನುಸರಿಸಿ ನೋಡಿ

ತುಲಾ(Libra)
ನಿಮಗೆ ಈ ವಾರ ವಿದೇಶಿ ಮೂಲದಿಂದ ಅಥವಾ ಅನಿರೀಕ್ಷಿತವಾಗಿ ಲಾಭ ಬರುವ ಸಾಧ್ಯತೆ ಇದೆ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕೈಗೊಂಡ ಎಲ್ಲಾ ಪ್ರಯಾಣಗಳು ಯಶಸ್ವಿಯಾಗುತ್ತವೆ. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರುತ್ತದೆ. ಅದು ನಿಮ್ಮ ಬೆಳವಣಿಗೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ವೃಶ್ಚಿಕ(Scorpio)
ನಿಮ್ಮ ಸಾಮಾಜಿಕ ಚಿತ್ರಣವು ಸುಧಾರಿಸುತ್ತದೆ ಮತ್ತು ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ನೀವು ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ನಿಮ್ಮ ಸೃಜನಶೀಲ ವ್ಯಕ್ತಿತ್ವ ಮುನ್ನೆಲೆಗೆ ಬರುತ್ತದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ.
 
ಧನು(Sagittarius)
 ನಿಮ್ಮ ಮನಸ್ಸಿನ ಚಂಚಲತೆಯಿಂದಲೇ ಸಮಸ್ಯೆ ಉಂಟಾಗುವುದು. ವಾರದ ಕೊನೆಯಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಒಲವು ತೋರುತ್ತೀರಿ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ನಿಮ್ಮ ಹಿರಿಯ ಸಹೋದರರ ಬೆಂಬಲವನ್ನು ನೀವು ಪಡೆಯುತ್ತೀರಿ. ಮೇಲಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಸುಧಾರಿಸುತ್ತದೆ. ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆಯ ಸಾಧ್ಯತೆ ಇರುತ್ತದೆ.

Name and Astrology : ಈ ಅಕ್ಷರದಿಂದ ಹೆಸರು ಆರಂಭವಾಗುವ ಜನ ಕೈ ಇಟ್ಟದ್ದೆಲ್ಲಾ ಚಿನ್ನವಾಗುತ್ತೆ !

ಮಕರ(Capricorn)
ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಮಾನಸಿಕವಾಗಿ ಒತ್ತಡದಿಂದ ಮುಕ್ತರಾಗಿರುತ್ತೀರಿ ಮತ್ತು ನೀವು ವೈಯಕ್ತಿಕ ಜೀವನದಲ್ಲಿಯೂ ಸಂತೋಷವಾಗಿರುತ್ತೀರಿ. ಕುಟುಂಬದ ವಾತಾವರಣವು ಮಂಗಳಕರವಾಗಿರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಉಳಿಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ(Aquarius)
ಬ್ಯುಸಿನೆಸ್‌ನಲ್ಲಿ ನಿಮ್ಮ ಪಾಲುದಾರರೊಂದಿಗೆ ನಿಮ್ಮ ಸಂಬಂಧದಲ್ಲಿ ಒಡಕು ಉಂಟಾಗಬಹುದು. ಇದರಿಂದ ನಿಮ್ಮ ವ್ಯವಹಾರ ಮೇಲೇಳದಂತಾಗಬಹುದು. ನಕಾರಾತ್ಮಕ ಪರಿಣಾಮ ಬೀರುವಂತಹ ಪರಿಸ್ಥಿತಿಯನ್ನು ಎದುರಿಸದಿರಲು ಸಿದ್ಧರಾಗಿ. ಕಿರಿಯ ಸಹೋದರರ ಬೆಂಬಲವನ್ನು ಪಡೆಯುತ್ತೀರಿ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಜೀರ್ಣಕ್ರಿಯೆ ಸಮಸ್ಯೆಗಳು ಕಾಡಬಹುದು.

ಮೀನ(Pisces)
ಹಣದ ವಿಷಯದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಅಲ್ಪ ದೂರದ ಪ್ರಯಾಣ ಲಾಭದಾಯಕವಾಗಿರುತ್ತದೆ. ಪ್ರಯತ್ನಗಳನ್ನು ಮಾಡುವ ಮೂಲಕ, ನಿಮ್ಮ ವೃತ್ತಿ ಜೀವನದಲ್ಲಿಯೂ ನೀವು ಅದ್ಭುತ ಯಶಸ್ಸನ್ನು ಪಡೆಯುತ್ತೀರಿ. ನೀವು ನಿಮ್ಮ ಮಕ್ಕಳ ಕಡೆಗೆ ಭಾವನಾತ್ಮಕ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. 

click me!